ಧಾರವಾಡ: ಬೆಳಗಾವಿ ಸುವರ್ಣಸೌಧದ ಪಕ್ಕ ಶಾಸಕರ ಭವನ ಕಟ್ಟಿಸುವ ಬದಲಿಗೆ ತಾಜ್ನಂತಹ ಹೋಟೆಲ್ಗೆ ಒಪ್ಪಂದದ ಮೇರೆಗೆ ಅನುಮತಿ ನೀಡಿದರೆ ಸೂಕ್ತವಾಗುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಸುವರ್ಣಸೌಧದ ಪಕ್ಕ 20 ಎಕರೆ ಜಮೀನು ಇದೆ. ಶಾಸಕರ ಭವನವನ್ನು ಅಲ್ಲಿಯೇ ಮಾಡಬೇಕು ಎಂಬ ಚರ್ಚೆ ನಡೆದಿದೆ.
ಅಲ್ಲಿ ಶಾಸಕರ ಭವನ ಮಾಡಿದರೆ ಅಧಿವೇಶನ ಸಮಯ ಹೊರುತುಪಡಿಸಿ ಉಳಿದ ಸಮಯದಲ್ಲಿ ಅದು ಖಾಲಿ ಉಳಿಯುತ್ತದೆ. ಅದಕ್ಕಾಗಿ ತಾಜ್ನಂತಹ ದೊಡ್ಡ ಹೋಟೆಲ್ವರನ್ನು ಮಾತನಾಡಿಸಿ ಒಪ್ಪಂದದ ಮೇಲೆ ಅವರಿಗೆ ಕೊಡಬಹುದು. ಶಾಸಕರಿಗಾಗಿ ಅಲ್ಲಿ 10 ರೂಮ್ಗಳನ್ನು ಕಾಯಂ ಆಗಿ ಇಡಬೇಕು. ಉಳಿದ ರೂಮ್ ಅವರು ಉಪಯೋಗಿಸಬಹುದು.
Bengaluru: ನಿವಾಸಿಗಳೇ, ಬೆಂಗಳೂರಿನಲ್ಲಿ ಆಸ್ತಿ ಹೊಂದಿದ್ದೀರಾ!? – ಇಲ್ಲಿದೆ ಗುಡ್ ನ್ಯೂಸ್
ಅಧಿವೇಶನದ ವೇಳೆ ಮಾತ್ರ ಎಲ್ಲ ರೂಮ್ಗಳನ್ನು ಶಾಸಕರಿಗೆ ನೀಡುವ ಚರ್ಚೆ ಮಾಡಬೇಕು ಎಂದರು. ಸರ್ಕಾರದ ಮುಂದೆ ಈ ಪ್ರಸ್ತಾವನೆ ಇಟ್ಟಿದ್ದೇವೆ. ಸರ್ಕಾರ ಆ ಬಗ್ಗೆ ಕ್ರಮ ಕೈಗೊಳ್ಳಲಿ. ಅದನ್ನು ಮಾಡಿದರೆ ಒಳ್ಳೆಯದಾಗುತ್ತದೆ. ಅಧಿವೇಶನದ ಸಮಯದಲ್ಲಿ ವಸತಿಗಾಗಿಯೇ 4 ಕೋಟಿ ಖರ್ಚಾಗುತ್ತಿದೆ. ತಾಜ್ ನಂತಹ ಹೋಟೆಲ್ ಕಟ್ಟಿಸಿದರೆ ಒಳ್ಳೆಯದಾಗುತ್ತದೆ ಎಂದರು.