ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಜನತಾ ದರ್ಶನವನ್ನು ಜನಸ್ಪಂದನಾ ಎಂದಿದ್ದಾರೆ. ಸಿಎಂ ಅವರ ಜನ ಸ್ಪಂದನವನ್ನು ಅಭಿನಂದಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ಬರಲು ಹೇಳಿ ನಾಡಿನ ಜನತೆಯ ಸಮಸ್ಯೆ ಆಲಿಸಿದ್ದಾರೆ. ಈಗಲಾದರೂ ಇವರಿಗೆ ರಾಜ್ಯದ ಜನತೆಯ ಗ್ರೌಂಡ್ ರಿಯಾಲಿಟಿ ಅರ್ಥವಾಗಿದೆ ಎಂದುಕೊಂಡಿದ್ದೇನೆ. ವಿವಿಧ ಸಮಸ್ಯೆಗಳು ಜನಸ್ಪಂದನದಲ್ಲಿ ಅರ್ಥವಾಗಿರಬಹುದು.
Bengaluru: ನಿವಾಸಿಗಳೇ, ಬೆಂಗಳೂರಿನಲ್ಲಿ ಆಸ್ತಿ ಹೊಂದಿದ್ದೀರಾ!? – ಇಲ್ಲಿದೆ ಗುಡ್ ನ್ಯೂಸ್
ಒಬ್ಬ ಸಿಎಂ ಜನಸ್ಪಂದನೆ ಮಾಡುವುದನ್ನು ನಾನು ಅಭಿನಂದಿಸುತ್ತೇನೆ. ಈ ವಿಷಯದಲ್ಲಿ ನಾನು ಎಲ್ಲವನ್ನು ಟೀಕಿಸುವುದಿಲ್ಲ ಎಂದಿದ್ದಾರೆ. ಮುಂದಿನ 3 ತಿಂಗಳಲ್ಲಿ ಮತ್ತೆ ಜನಸ್ಪಂದನಾ ಮಾಡುತ್ತೇನೆ ಎಂದಿದ್ದಾರೆ. ಅಧಿಕಾರಿಗಳಿಗೆ 3 ತಿಂಗಳ ಗಡುವು ನೀಡಿದ್ದಾರೆ. ಈಗ ಅವರಿಗೆ ಅರ್ಥ ಆಗಿರಬಹುದು. ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು. ನಾನು ಜನತಾ ದರ್ಶನ ಮಾಡಿದಾಗ ಬೆಳಗ್ಗೆ 9 ರಿಂದ ರಾತ್ರಿ 1 ಗಂಟೆವರೆಗೆ ಮಾಡಿದ್ದೆ. ಅಂದು ಇದ್ದ ಸಮಸ್ಯೆಗಳು ಈಗಲೂ ಮುಂದುವರಿದಿವೆ ಎಂದು ತಿಳಿಸಿದರು.