ನವದೆಹಲಿ: ವಿಶ್ವಕಪ್ 2023 ರ (World Cup 2023) ಟ್ರೋಫಿ ಮೇಲೆ ಕಾಲಿಟ್ಟು ಭಾರೀ ವಿವಾದಕ್ಕೀಡಾದ ಬಳಿಕ ಇದೀಗ ಆಸೀಸ್ ತಂಡದ ಆಲ್ ರೌಂಡರ್ ಮಿಚೆಲ್ ಮಾರ್ಷ್ (Mitchell Marsh) ಸ್ಪಷ್ಟನೆ ನೀಡಿದ್ದಾರೆ. ನಾನು ಯಾರಿಗೂ ಅಗೌರವ ತೋರಿಲ್ಲ. ನಾನು ಅದರ ಬಗ್ಗೆ ಹೆಚ್ಚು ಯೋಚಿಸಿಲ್ಲ. ಆ ಫೋಟೋ ಸಾಕಷ್ಟು ವೈರಲ್ ಆಗಿದೆ ಎಂದು ಹಲವರು ನನ್ನ ಗಮನಕ್ಕೆ ತಂದಿದ್ದರು. ಆದರೆ ನಾನು ಅದನ್ನು ನೊಡಲು ಹೋಗಿಲ್ಲ. ಟೀಕಿಸುವಂಥದ್ದು ಅದರಲ್ಲಿ ಏನೂ ಇಲ್ಲ ಎಂದು ಮಾರ್ಷ್ ತಿಳಿಸಿದ್ದಾರೆ. ನ.19 ರಂದು ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 6 ವಿಕೆಟ್‍ಗಳಿಂದ ಭಾರತ ತಂಡವನ್ನು ಮಣಿಸಿತ್ತು. ಈ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಸತತ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. https://ainlivenews.com/case-of-sale-of-cow-children-the-woman-who-was-selling-vegetables-is-a-billionaire/ ಗೆಲುವಿನ ನಂತರ ಸಂಭ್ರಮ ಆಚರಿಸಿಕೊಂಡಿದ್ದ…
Author: AIN Author
ಧಾರವಾಡ: ಧಾರವಾಡದ ಜಿ.ಪಂ. ಸಭಾಭನದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿಗಳು ಅಧಿಕಾರಿಗಳಿಗೆ ನೀತಿ ಪಾಠ ಹೇಳಿದರು. ಧಾರವಾಡ ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳಲ್ಲಿ ಥರ್ಡ ಪಾರ್ಟಿಗಳು ಕೆಲಸ ಮಾಡುತ್ತಿದ್ದಾರೆ. ಥರ್ಡ ಪಾರ್ಟಿ ವ್ಯಕ್ತಿಯನ್ನು ಬಳಸಿ ಜನರಿಂದ ಹಣ ವಸೂಲಿ ಮಾಡಿದ್ರೆ ನಾನು ಸುಮ್ಮನೆ ಬಿಡಲ್ಲ ಎಂದು ಜಿಲ್ಲೆಯ ತಹಶಿಲ್ದಾರ ಕಚೇರಿ, ಸಬ್ ರೆಜಿಸ್ಟರ್ ಕಚೇರಿಗಳು, ಎಡಿಎಲ್ ಆರ್ , ಡಿಡಿಎಲ್ಆರ್ ಅಧಿಕಾರಿಗಳಿಗೆ ಪುಲ್ ಕ್ಲಾಸ್ ತೆಗೆದುಕೊಂಡರು. ಏಜಂಟರುಗಳನ್ನ ಇಟ್ಟುಕ್ಕೊಂಡು ಹಣ ವಸೂಲಿ ಮಾಡುತ್ತಿರುವ ದೂರುಗಳನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ಎಲ್ಲ ಅಧಿಕಾರಿಗಳು ಪ್ರಮಾಣಿಕವಾಗಿ ಜನತೆಯ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು. ಥರ್ಡ್ ಪಾರ್ಟಿಗಳಿಂದ ದೂರ ಇರಬೇಕು, ಇದನ್ನು ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಹೇಳುತ್ತಿದ್ದೇನೆ ಎಂದು ಸಭೆಯಲ್ಲಿ ಜಿಲ್ಲೆಯ ಗ್ರಾಮ ಪಂಚಾಯತಿ, ಆರೋಗ್ಯ ಇಲಾಖೆ, ತಹಶಿಲ್ದಾರ, ಸಬ್ ರೆಜಿಸ್ಟರ್ , ಎಡಿಎಲ್ಆರ್, ಡಿಡಿಎಲ್ಆರ್, ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಹುಬ್ಬಳ್ಳಿ; ಕ್ಷತ್ರಿಯ ಮರಾಠಾ ಸಮಾಜ ಶಾಂಣ್ಣವ ಕುಳಿ ) ಚಾರಿಟೇಬಲ್ ಟ್ರಸ್ಟ್ ಆಂಜನೇಯದೇವಸ್ಥಾನದ ಹಿಂದೆ ಮರಾಠಾ ಗಲ್ಲಿ, ಹುಬ್ಬಳ್ಳಿ ವತಿಯಿಂದ ಮರಾಠಾ ಶ್ರೀ ಭಾರತಿಮಠ ಟ್ರಸ್ಟ್ ಇವರ ಆಶ್ರಯದಲ್ಲಿ ಹುಬ್ಬಳಿಯಲ್ಲಿ ಇದೇ ರವಿವಾರ 3 ಡಿಸೆಂಬರದಂದು ಕ್ಷತ್ರಿಯ ಮರಾಠಾ ಸಮಾಜದ ವಧು ವರರ ಸಮಾವೇಶವನ್ನು ಜೀಜಾಮಾತಾ ಮರಾಠಾ ಮಹಿಳಾ ಮಂಡಳ ಮರಾಠಾ ಗಲ್ಲಿ ಇವರ ಸಹಯೋಗದಲ್ಲಿ ವಿದ್ಯಾನಗರದ ಮರಾಠಾ ಭಾರತಿಮಠ ಕಲ್ಯಾಣ ಮಂಟಪ ದಲ್ಲಿ ಹಮ್ಮಿಕೊಳ್ಳಲಾಗಿದೆ. ರವಿವಾರ ದಿ 3 ಡಿಸೆಂಬರದಂದು ಬೆಳಿಗ್ಗೆ 10 ಘಂಟೆಗೆ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಇವರು ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ, ಶಾಸಕರಾದ ಶ್ರೀನಿವಾಸ ಮಾನೆ, ಪ್ರಸಾದ ಅಬ್ಬಯ್ಯ,ಅರವಿಂದ ಬೆಲ್ಲದ ಹಾಗೂ ಮಹೇಶ ಟೆಂಗಿನಕಾಯಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಪಾಲ್ಗೊಳ್ಳುವ ವಧು, ವರರ ನೋಂದಣಿಯು ರವಿವಾರದಂದು…
ಹುಬ್ಬಳ್ಳಿ : ಕರ್ನಾಟಕದಿಂದ ಆಯ್ಕೆಯಾದÀ ನಾಲ್ಕು ವಿದ್ಯಾರ್ಥಿನಿಯರು ಇದೇ ತಿಂಗಳ ೧೮ & ೧೯ರಂದು ದೆಹಲಿಯ ತಲಕಟೋರಾ ಇನ್‌ಡೋರ ಸ್ಟೇಡಿಯಂನಲ್ಲಿ ನಡೆದ ಸಬ್ ಜೂನಿಯರ್ ವರ್ಗದಲ್ಲಿ ೧.ತೃಷ್ಟಿ ಜಿಗ್ನೇಶ್ ಪಟೇಲ್ (೧೦ ವರ್ಷದ ಕಟ ವಿಬಾಗದಲ್ಲಿ ದ್ವಿತೀಯ ಸ್ಥಾನ) ೨. ಟ್ರಿಫೋಸಾ ಬಿಲ್ಲಾ (೮ ವರ್ಷದÀ ಕಟ ವಿಬಾಗದಲ್ಲಿ ತೃತೀಯಾ ಸ್ಥಾನ) ೩. ಅನನ್ಯ ಮಿಶ್ರಾ (೧೧ ವರ್ಷದ ಕಟ ವಿಬಾಗದಲ್ಲಿ ತೃತೀಯಾ ಸ್ಥಾನ) ೪. ಅಕ್ಷಯ ಸಿದ್ಲಾಪುರ (೭ ವರ್ಷದ ಕುಮಿತೆ ವಿಬಾಗದಲ್ಲಿ ತೃತೀಯ ಸ್ಥಾನ ) ಪಡೆದುಕೊಂಡು ಧಾರವಾಡ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಸೆನ್ಸೈ ಶರತ್, ಸೆನ್ಸೈ ಗಣೇಶ್, ಸೆನ್ಸೈ ಸಿದ್ದು, ಸೆನ್ಸೈ ವೆಂಕಟೇಶ್ & ಸೆನ್ಸೈ ಕುಶುಬೂ ಅಭಿನಂದಿಸಿದ್ದಾರೆ.
ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ನಂದಿವೇರಿ ಮಠದಿಂದ ಕಪ್ಪತಗುಡ್ಡ ಉತ್ಸವ-2023 ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಗದುಗಿನ ಪತ್ರಿಕಾಭವನದಲ್ಲಿ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿಗಳು ಸುದ್ದಿಗೋಷ್ಠಿ ನಡೆಸಿ ಹೇಳಿದರು. ಪರಿಸರ ವರ್ಧನೆ-ಸಂವರ್ಧನೆ, ಜಲ ರಕ್ಷಣೆ-ಸಂರಕ್ಷಣೆ, ಔಷಧೀಯ ಸಸ್ಯಗಳ ಪಾಲನೆ-ಪೋಷಣೆ ಹಾಗೂ ಗೋ ಆಧಾರಿತ ಕೃಷಿ, ಪಾರಂಪರಿಕ ನೈಸರ್ಗಿಕ ಕೃಷಿ ಕಪ್ಪತ್ತಗುಡ್ಡ ಉತ್ಸವದ ಮೂಲ ಗುರಿಯಾಗಿದೆ. 20 ಕೃಷಿ ವಸ್ತು ಮಳಿಗೆ ಆಯೋಜನೆ ಮಾಡಲಾಗಿದ್ದು, ಸುಮಾರು 3 ಸಾವಿರ ಜನಕ್ಕೆ ಮಹಾದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದರು.
ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂಚನಹಳ್ಳಿಯ ಗ್ರಾಮಠಾಣಾ ಜಾಗವನ್ನು ಮಾಜಿ ಅಧ್ಯಕ್ಷೆ ದೀಪಿಕಾ ಅವರ ಪತಿ ರುದ್ರಮೂರ್ತಿ ಎಂಬುವರು ಪಿಡಿಒ, ಕಾರ್ಯದರ್ಶಿ ಜೊತೆ ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಪರಾಭಾರೆ ಮಾಡಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಘಟನಾ ಸಂಚಾಲಕ ಬಸವರಾಜ್ ಆರೋಪಿಸಿದರು. ಸಕ್ಕರೆ ಗೊಲ್ಲಹಳ್ಳಿ ಗ್ರಾ.ಪಂ. ಕಚೇರಿ ಎದುರು ಧರಣಿ ಪ್ರತಿಭಟನೆ ನಡೆಸಿದ ಡಿಎಸ್ಎಸ್ ಕಾರ್ಯಕರ್ತರು ತಪ್ಪಿತಸ್ಥ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಪಂಚಾಯತಿ ವ್ಯಾಪ್ತಿಯ ಭೂಚನಹಳ್ಳಿ ಗ್ರಾಮದ ಸರ್ವೇ ನಂ.132/116ರ ಪೈಕಿ 2 ಎಕರೆ 20 ಗುಂಟೆ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿಕೊಂಡಿದ್ದಾರೆ. ಗ್ರಾಮಠಾಣಾ ಜಾಗಕ್ಕೆ ಇ-ಖಾತೆ ಮಾಡಿಕೊಟ್ಟು ಅಕ್ರಮ ಎಸಗಿದ್ದಾರೆ ಎಂದು ದೂರಿದರು. ಮುನಿರಾಜು ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಾಗೂ ಸ್ಥಳೀಯ ಗ್ರಾಮಸ್ಥರ ಸಹಯೋಗದೊಂದಿಗೆ ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಎದುರು ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.…
ವಿಜಯಪುರ: ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಮತ್ತು ಆಶಾ ಅವರ ಜ್ಯೇಷ್ಠ ಪುತ್ರ ಬಸನ್ ಮತ್ತು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗಳು ಅಖಿಲಾ ಅವರ ಆರತಕ್ಷತೆ ನಗರದ ಬಿ ಎಲ್ ಡಿ ಇ ನೂತನ ಕ್ಯಾಂಪಸ್ ಆವರಣದಲ್ಲಿ ಆಯೋಜನೆ ಮಾಡಲಾಗಿತ್ತು. ನಾಡಿನ ವಿವಿಧ ಮಠಗಳ 198 ಮಠಾಧೀಶರ ಸಮ್ಮುಖ ಮಂತ್ರಾಕ್ಷತೆ, ವಚನಗಳ ಪಠಣ ಮೂಲಕ ನವ ದಂಪತಿಗಳು ಹಾರ ಬದಲಾಯಿಸಿದರು. ನವ ವಿವಾಹಿತರಿಗೆ ಆಶೀರ್ವಧಿಸಿದ ಮಠಾಧೀಶರುಗಳು. ಅದಲ್ಲದೆ ಗಣ್ಯರು ಮುಖಂಡರಿಂದ ನವ ದಂಪತಿಗೆ ಅಭಿನಂದನೆ ಸಲ್ಲಿಸಿಲಾಯಿತು.
ಬೆಂಗಳೂರು: ಶಾಲೆಗಳಿಗೆ ಅನಾಮಧೇಯ ವ್ಯಕ್ತಿಗಳು ಬಾಂಬ್ ಬೆದರಿಕೆ ಒಡ್ಡಿರುವುದು ಕಳವಳಕಾರಿ. ಮಕ್ಕಳು, ಪೋಷಕರು ತೀವ್ರವಾಗಿ ಕಳವಳಗೊಂಡಿದ್ದು, ಅವರಲ್ಲಿ ಭೀತಿ ಸೃಷ್ಟಿಸಿ, ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ದುರುದ್ದೇಶದಿಂದಲೇ ದುಷ್ಟಶಕ್ತಿಗಳು ಇಂತಹ ಹುನ್ನಾರ ನಡೆಸಿರಬಹುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. https://x.com/hd_kumaraswamy/status/1730479836244902282?t=AJyUO_FK9AAXUR6xY0LY0w&s=08 ರಾಜ್ಯ ಸರಕಾರವು ಯಾವುದೇ ಕಾರಣಕ್ಕೂ ಈ ಘಟನೆಯನ್ನು ಲಘುವಾಗಿ ಪರಿಗಣಿಸಬಾರದು. ಪೋಷಕರು ಮಕ್ಕಳನ್ನು ಧೈರ್ಯವಾಗಿ ಶಾಲೆಗಳಿಗೆ ಕಳಿಸುವಂತಹ ಸುರಕ್ಷತೆ, ಭದ್ರತೆಯ ಖಾತರಿಯನ್ನು ನೀಡಬೇಕು. ಈ ಬೆದರಿಕೆಗಳ ಬಗ್ಗೆ ಅಮೂಲಾಗ್ರ ತನಿಖೆ ನಡೆಸಿ, ಇದರ ಹಿಂದೆ ಯಾರಿದ್ದಾರೆ? ಮೂಲ ಯಾವುದು ಎನ್ನುವುದನ್ನು ಪತ್ತೆ ಹಚ್ಚಿ ದುಷ್ಟರ ಹೆಡೆಮುರಿ ಕಟ್ಟಬೇಕು. ಈ ಬಗ್ಗೆ ಕೇಂದ್ರ ಸರಕಾರದ ನೆರವು ಪಡೆಯುವ ಬಗ್ಗೆ ರಾಜ್ಯ ಸರಕಾರ ಮೀನಾಮೇಷ ಎಣಿಸಬಾರದು.
ಬೆಳಗಾವಿ: ಸುಮಾರು 5000 ಹೆಚ್ಚು ಪೋಲಿಸ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಸುವರ್ಣಸೌಧ, ಮಚ್ಚೆ ಕೆ.ಎಸ್.ಆರ್‌ಪಿ ತರಬೇತಿ ಕೇಂದ್ರ, ಕಂಗ್ರಾಳಿ ಪೋಲಿಸ್ ತರಬೇತಿ ಕೇಂದ್ರ, ಸಾಂಬ್ರಾ ವಿಮಾನ ನಿಲ್ದಾಣ ಬಳಿ, ಭೂತರಾಮನಟ್ಟಿ, ವಿರಭಧ್ರೇಶ್ವರ ದೇವಸ್ಥಾನ, ಶಹಾಪುರದಲ್ಲಿರುವ ದೇವಸ್ಥಾನ, ಖಾನಾಪೂರ ಹೀಗೆ ಹಲವು ಕಡೆ ವ್ಯವಸ್ಥೆ ಮಾಡಲಾಗಿದೆ. ಸುವರ್ಣ ಸೌಧದ ಅಲಾರವಾಡ ಬಳಿ ಸುಮಾರು ಎರೆಡು ಕೋಟಿ ರೂಪಾಯಿ ವೆಚ್ಚದಲ್ಲಿ ಟೌನ್ ಶಿಪ್ ನಿರ್ಮಾಣಮಾಡಲಾಗಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ನಾವಲಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ನಡೆದ ಎನ್ ಎಸ್ ಎಸ್ ಶಿಬಿರದ ಸಮಾರೋಪ ಸಮಾರಂಭದ ಕಾಡಸಿದ್ದೇಶ್ವರ ಸಮುದಾಯ ಭವನದಲ್ಲಿ ಜರುಗಿತು. ಗ್ರಾಪಂ ಸದಸ್ಯ ದಾನಪ್ಪ ಆಸಂಗಿ ಮಾತನಾಡಿ ಶಿಸ್ತು ಸ್ವಚ್ಚತೆ ಏಕತೆ ಹಾಗೂ ಸಮಯ ಪಾಲನೆಯು ಎನ್ ಎಸ್ ಎಸ್ ಮೂಲ ಉದ್ದೇಶವಾಗಿದೆ ಆದ್ದರಿಂದ ಪ್ರತಿಯೊಬ್ಬ ಶಿಬಿರಾರ್ಥಿಗಳು ತಮ್ಮ, ಜೀವನದಲ್ಲಿ ಇವುಗಳನ್ನು ಪಾಲನೆ ಮಾಡಿಕೊಳ್ಳುವ ಮೂಲಕ ಉತ್ತಮ ಪ್ರಜೆಗಳಾಗಿ ಬಾಳಬೇಕೆಂದರು ಹಾಗೂ ವಿದ್ಯಾರ್ಥಿ ಜೀವನ ಬಂಗಾರದ ಜೀವನ ಆದ್ಳರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯ ಹಾಗೂ ಪಠ್ಯೇತರ ಬಗ್ಗೆ ಗಮನ ಹರಿಸುವ ಮೂಲಕ ನಮ್ಮ ಗ್ರಾಮದ ಕೀರ್ತಿಯನ್ನು ಹೆಚ್ಚಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪ್ರಾಚಾರ್ಯರಾದ ಚಂದ್ರಪ್ರಭಾ ಬಾಗಲಕೋಟ ಮಾತನಾಡಿ ಮಹಿಳೆಯು ಅಬಲೆಯಲ್ಲ ಸಬಲೆ ಎಂಬ ವಿಷಯದ ಕುರಿತು ಮಾತನಾಡಿ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡು ದೇಶದ ಕೀರ್ತಿ ಹೆಚ್ಚಿಸುತ್ತಿದ್ದಾರೆ.ಇಂದಿನ ದಿನಮಾನದಲ್ಲಿ ಪುರುಷರಂತ್ತೆ ಮಹಿಳೆಯೂ ಕೂಡಾ ಸಮಾನಳಾಗಿದ್ದಾಳೆ ಎಂಬುದು…