ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ನಾವಲಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ನಡೆದ ಎನ್ ಎಸ್ ಎಸ್ ಶಿಬಿರದ ಸಮಾರೋಪ ಸಮಾರಂಭದ ಕಾಡಸಿದ್ದೇಶ್ವರ ಸಮುದಾಯ ಭವನದಲ್ಲಿ ಜರುಗಿತು. ಗ್ರಾಪಂ ಸದಸ್ಯ ದಾನಪ್ಪ ಆಸಂಗಿ ಮಾತನಾಡಿ ಶಿಸ್ತು ಸ್ವಚ್ಚತೆ ಏಕತೆ ಹಾಗೂ ಸಮಯ ಪಾಲನೆಯು ಎನ್ ಎಸ್ ಎಸ್ ಮೂಲ ಉದ್ದೇಶವಾಗಿದೆ ಆದ್ದರಿಂದ ಪ್ರತಿಯೊಬ್ಬ ಶಿಬಿರಾರ್ಥಿಗಳು ತಮ್ಮ,
ಜೀವನದಲ್ಲಿ ಇವುಗಳನ್ನು ಪಾಲನೆ ಮಾಡಿಕೊಳ್ಳುವ ಮೂಲಕ ಉತ್ತಮ ಪ್ರಜೆಗಳಾಗಿ ಬಾಳಬೇಕೆಂದರು ಹಾಗೂ ವಿದ್ಯಾರ್ಥಿ ಜೀವನ ಬಂಗಾರದ ಜೀವನ ಆದ್ಳರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯ ಹಾಗೂ ಪಠ್ಯೇತರ ಬಗ್ಗೆ ಗಮನ ಹರಿಸುವ ಮೂಲಕ ನಮ್ಮ ಗ್ರಾಮದ ಕೀರ್ತಿಯನ್ನು ಹೆಚ್ಚಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪ್ರಾಚಾರ್ಯರಾದ ಚಂದ್ರಪ್ರಭಾ ಬಾಗಲಕೋಟ ಮಾತನಾಡಿ ಮಹಿಳೆಯು ಅಬಲೆಯಲ್ಲ ಸಬಲೆ ಎಂಬ ವಿಷಯದ ಕುರಿತು ಮಾತನಾಡಿ.
ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡು ದೇಶದ ಕೀರ್ತಿ ಹೆಚ್ಚಿಸುತ್ತಿದ್ದಾರೆ.ಇಂದಿನ ದಿನಮಾನದಲ್ಲಿ ಪುರುಷರಂತ್ತೆ ಮಹಿಳೆಯೂ ಕೂಡಾ ಸಮಾನಳಾಗಿದ್ದಾಳೆ ಎಂಬುದು ಪ್ರತಿಯೊಬ್ಬ ಮಹಿಳೆಯರಿಗೆ ತಿಳಿದಿರಲಿ.ಹಾಗೂ ರಾಜ್ಯ ಕೇಂದ್ರ ಸರ್ಕಾರಗಳು ಇಂದು ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಹಿಳೆಯರನ್ನು ಸದೃಡವನ್ನಾಗಿ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಆನಂದ ಕಂಪು ಮಾತನಾಡಿ, ನಾವಲಗಿ ಗ್ರಾಮ ಆಧ್ಯಾತ್ಮಿಕವಾಗಿ.ಸಾಂಸ್ಕೃತಿಕವಾಗಿ.ಹಾಗೂ ಸಮಾಜಿಕವಾಗಿ ಮುಂಚೂಣಿಯ ಸ್ಥಾನದಲ್ಲಿದೆ ಇದೇ ರೀತಿ ಶೈಕ್ಷಣಿಕವಾಗಿಯೂ ನಮ್ಮ ಗ್ರಾಮ ಇನ್ನು ಹೆಚ್ಚು ಹೆಚ್ಚು ಹೆಸರು ಪಡೆಯಲಿ ಎಂಬುದು ನಮ್ಮೇಲ್ಲರ ಆಶಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯ ಎಸ್.ಎ.ಜಂಬಗಿ. ಗ್ರಾಪಂ ಅಧ್ಯಕ್ಷೆ ಯಮನವ್ವ ಕಂಚು. ಬಸವರಾಜ ಪಾಟೀಲ.ಮುತ್ತಪ್ಫ ಅಂಗಡಿ.ಕೆಪಿಎಸ್ ಶಾಲೆಯ ಉಪಾಧ್ಯಕ್ಷ ಗಂಗಪ್ಪ ಅಮ್ಮಲಜೇರಿ..ಸದಸ್ಯರಾದ ಬಸವರಾಜ ಗಣಿ. ಕಾಡೇಶ ಕಂಪು.ಹನುಮಂತ ಕಟಗೇರಿ.ಸಿದ್ದು ಕಂಚು.ಹಣಮಂತ ನಾವಿ.ಮಲ್ಲಪ್ಪ ಕಂಚು.ಮಹಾದೇವ ಸಿದ್ದಾಪೂರ.ರಾಜು ಕದಂ. ಶ್ರೀಶೈಲ ಗಣಿ..ಉಪನ್ಯಾಸಕರಾದ ಎಂ ಸಿ ನರೇಗಲ್ಲ.ಆಯ್ ಪಿ ಬಾವಲತ್ತಿ.ಬಿ ಬಿ ಕುಂಬಾರ.ಕುಮಾರಿ ಬಿ ಜಿ ಮೇಟಗುಡ್ಡ .ಎಸ್ ಎಸ್ ಹಾರೂಗೇರಿ.ಜಿ ಎಸ್ ಮಾಳಗಿ.ಶಂಕ್ರಯ್ಯ ವಸ್ತ್ರದ ಶ್ರೀಮತಿ .ಆರ್ ಪತ್ತಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ