ನವದೆಹಲಿ: ವಿಶ್ವಕಪ್ 2023 ರ (World Cup 2023) ಟ್ರೋಫಿ ಮೇಲೆ ಕಾಲಿಟ್ಟು ಭಾರೀ ವಿವಾದಕ್ಕೀಡಾದ ಬಳಿಕ ಇದೀಗ ಆಸೀಸ್ ತಂಡದ ಆಲ್ ರೌಂಡರ್ ಮಿಚೆಲ್ ಮಾರ್ಷ್ (Mitchell Marsh) ಸ್ಪಷ್ಟನೆ ನೀಡಿದ್ದಾರೆ. ನಾನು ಯಾರಿಗೂ ಅಗೌರವ ತೋರಿಲ್ಲ. ನಾನು ಅದರ ಬಗ್ಗೆ ಹೆಚ್ಚು ಯೋಚಿಸಿಲ್ಲ. ಆ ಫೋಟೋ ಸಾಕಷ್ಟು ವೈರಲ್ ಆಗಿದೆ ಎಂದು ಹಲವರು ನನ್ನ ಗಮನಕ್ಕೆ ತಂದಿದ್ದರು. ಆದರೆ ನಾನು ಅದನ್ನು ನೊಡಲು ಹೋಗಿಲ್ಲ. ಟೀಕಿಸುವಂಥದ್ದು ಅದರಲ್ಲಿ ಏನೂ ಇಲ್ಲ ಎಂದು ಮಾರ್ಷ್ ತಿಳಿಸಿದ್ದಾರೆ.
ನ.19 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 6 ವಿಕೆಟ್ಗಳಿಂದ ಭಾರತ ತಂಡವನ್ನು ಮಣಿಸಿತ್ತು. ಈ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಸತತ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು.
ಹಸುಗೂಸು ಮಕ್ಕಳ ಮಾರಾಟ ಕೇಸ್: ತರಕಾರಿ ಮಾರುತ್ತಿದ್ದವಳು ಕೋಟ್ಯಾಧಿಪತಿಯಾಗಿದ್ದೇ ರೋಚಕ!
ಗೆಲುವಿನ ನಂತರ ಸಂಭ್ರಮ ಆಚರಿಸಿಕೊಂಡಿದ್ದ ಆಸೀಸ್ ಪಡೆ, ಚಿತ್ರಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಂಡಿತ್ತು. ಚಿತ್ರವೊಂದರಲ್ಲಿ ಮಿಚೆಲ್ ಮಾರ್ಷ್ ಟ್ರೋಫಿಯ ಮೇಲೆ ಕಾಲಿಟ್ಟು ಪೋಸ್ ಕೊಟ್ಟಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. ಕೆಲವರು ಮಿಚೆಲ್ ಪರವಾಗಿಯೂ ವಾದಿಸಿದ್ದರು.