ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ನಂದಿವೇರಿ ಮಠದಿಂದ ಕಪ್ಪತಗುಡ್ಡ ಉತ್ಸವ-2023 ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಗದುಗಿನ ಪತ್ರಿಕಾಭವನದಲ್ಲಿ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿಗಳು ಸುದ್ದಿಗೋಷ್ಠಿ ನಡೆಸಿ ಹೇಳಿದರು. ಪರಿಸರ ವರ್ಧನೆ-ಸಂವರ್ಧನೆ, ಜಲ ರಕ್ಷಣೆ-ಸಂರಕ್ಷಣೆ,
ಔಷಧೀಯ ಸಸ್ಯಗಳ ಪಾಲನೆ-ಪೋಷಣೆ ಹಾಗೂ ಗೋ ಆಧಾರಿತ ಕೃಷಿ, ಪಾರಂಪರಿಕ ನೈಸರ್ಗಿಕ ಕೃಷಿ ಕಪ್ಪತ್ತಗುಡ್ಡ ಉತ್ಸವದ ಮೂಲ ಗುರಿಯಾಗಿದೆ. 20 ಕೃಷಿ ವಸ್ತು ಮಳಿಗೆ ಆಯೋಜನೆ ಮಾಡಲಾಗಿದ್ದು, ಸುಮಾರು 3 ಸಾವಿರ ಜನಕ್ಕೆ ಮಹಾದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದರು.