ಬೆಂಗಳೂರು:- ಕ್ಯಾನ್ಸರ್ ರೋಗಿಗಳಿಗೆ ಉಚಿತ ವಸತಿ ಸೌಲಭ್ಯ ಒದಗಿಸುವುದು ಆತಿಥ್ಯ ಸೇವೆಯಲ್ಲ ಎಂದು ಬೆಂಗಳೂರು ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಅರ್ಜಿ ಸಲ್ಲಿಸಿರುವ ಸಂಸ್ಥೆ ವಸತಿ ಪ್ರದೇಶದಲ್ಲಿರುವ ಕಟ್ಟಡವನ್ನು ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳು ಮತ್ತು ಅವರ ಪೋಷಕರಿಗೆ ವಸತಿ ಸೌಕರ್ಯಕ್ಕಾಗಿ ಬಳಸುತ್ತಿದೆ. ಅಲ್ಲಿ ಯಾವುದೇ ಯಂತ್ರಗಳನ್ನು ಅಥವಾ ಸಾಧನಗಳನ್ನು ಬಳಕೆ ಮಾಡುತ್ತಿಲ್ಲ ಅಥವಾ ಮಕ್ಕಳಿಗೆ ಚಿಕಿತ್ಸೆ ನೀಡಲು ಇತರೆ ಸೌಕರ್ಯಗಳನ್ನು ಬಳಸುತ್ತಿಲ್ಲ. ಯಾವುದೇ ಬಗೆಯ ಚಿಕಿತ್ಸೆಯನ್ನೂ ನೀಡುತ್ತಿಲ್ಲ. ಹಾಗಾಗಿ, ಆಸ್ಪತ್ರೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ನೀಡಿರುವ ನೋಟಿಸ್ ಊರ್ಜಿತವಲ್ಲ ಎಂದು ಪೀಠ ಹೇಳಿದೆ. ಅರ್ಜಿಗೆ ಸಂಬಂಧಿಸಿದಂತೆ ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಕಟ್ಟಡವನ್ನು ಪರಿಶೀಲಿಸಿ ವಸ್ತು ಸ್ಥಿತಿಯ ವರದಿಯನ್ನು ಸಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಬಿಬಿಎಂಪಿ ಸಲ್ಲಿಸಿದ್ದ ವರದಿ ಮತ್ತು ಛಾಯಾಚಿತ್ರಗಳನ್ನು ಪರಿಶೀಲಿಸಿದ ಪೀಠ, ಆ ಕಟ್ಟಡವನ್ನು ಕೇವಲ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುವ ಮಕ್ಕಳು ಹಾಗೂ ಅವರ ಪೋಷಕರ…
Author: AIN Author
ಬೆಂಗಳೂರು:- ಕಾಂತರಾಜು ವರದಿ ಸ್ವೀಕರಿಸಲು ಸರ್ಕಾರ ಸಿದ್ಧ ಇದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜು ವರದಿಯನ್ನು ಸರ್ಕಾರ ಸ್ವೀಕಾರ ಮಾಡಲಿದ್ದು, ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವರದಿ ಸ್ವೀಕಾರ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ವರದಿ ಸಲ್ಲಿಕೆಯಾಗಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆದು, ಆ ಬಳಿಕ ನಿರ್ಧಾರ ಮಾಡಲಾಗುವುದು. ವರದಿಯಲ್ಲೇನಿದೆ ಎಂದು ಯಾರಿಗೂ ಗೊತ್ತಿಲ್ಲ. ವರದಿ ಬಗ್ಗೆ ಮೊದಲೇ ಕಲ್ಪನೆ ಮಾಡಿಕೊಳ್ಳುವುದು ಬೇಡ ಎಂದರು. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿಸಿ ಸಮೀಕ್ಷೆ ಮಾಡಿಸಿರುವ ವರದಿಯನ್ನು ಸ್ವೀಕಾರ ಮಾಡಲ್ಲ ಎನ್ನಲು ಸಾಧ್ಯವೇ?, ಸರ್ಕಾರದಲ್ಲಿ ಸ್ವೀಕಾರ ಮಾಡಲಾಗಿರುವ ಇತರೆ ಹತ್ತಾರು ವರದಿಗಳಿವೆ. ಯಾವುದೇ ವರದಿಯನ್ನು ಸರ್ಕಾರ ಸ್ವೀಕಾರ ಮಾಡಲಿದೆ. ಆ ಬಗ್ಗೆ ಚರ್ಚೆ ನಡೆದು ನಿರ್ಧಾರ ಆಗಲಿದೆ. ವರದಿ ಸ್ವೀಕಾರವಾಗದೆ ಕಾಂತರಾಜು ವರದಿ ಬಗ್ಗೆ ವಿರೋಧ ವ್ಯಕ್ತಪಡಿಸುವುದು ಸೂಕ್ತವಲ್ಲ ಎಂದು ತಿಳಿಸಿದರು.
ಬಿಗ್ ಬಾಸ್ ಮನೆಯಲ್ಲಿರುವ ವರ್ತೂರು ಸಂತೋಷ್ ಅವರು, ಮದುವೆ ಕುರಿತ ಮಾವನ ಆರೋಪವನ್ನ ವರ್ತೂರ್ ತಳ್ಳಿ ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮನಬಿಚ್ಚಿ ಎಲ್ಲರ ಮುಂದೆ ಮಾತನಾಡಿದ ಸಂತೋಷ್, ‘ಮದುವೆ ವಿಚಾರ ಬಂದಾಗ ದೊಡ್ಡಪ್ಪನ ಬಳಿ ಹೇಳಿದ್ದೆ, ನೀವು ಯಾವ ಹುಡ್ಗೀನ ತೋರಿಸಿದ್ರೂ ಅವ್ಳಿಗೆ ತಾಳಿ ಕಟ್ತೇನೆ. ಮಾತು ಕೊಟ್ಟು ಒಪ್ಪಿಕೊಂಡೆ, ಹೀಗೆ ಸಾಗ್ತಾ ಇತ್ತು. ಕಡೆಗೆ ನಮ್ಮಮ್ಮನ ಇಗ್ನೋರ್ ಮಾಡೋಕೆ ಶುರು ಮಾಡಿದ್ಳು, ನಾನು ಸಂಪಾದನೆ ಮಾಡಿರೋ ಜನರನ್ನು ಬಿಟ್ಟು ಇವ್ರ ಹಿಂದೆ ಹೋಗ್ಬೇಕು ಅಂದ್ರೆ ಆಗಲ್ಲ. ನಾನು ಅವ್ರ ಮನೆ ತನಕ ಹೋಗ್ತೀನಿ, ನನ್ನ ಮಾತಿನ ಪ್ರಕಾರ ಬಂದ್ರೆ ಇವತ್ತಿಗೂ ನೀನ್ ರಾಣಿನೇ… ಬಾ ಅಂತ ಕರಿತೀನಿ.. ಆದ್ರೆ ಫಸ್ಟ್ ಆ ಗೇಟಿಂದ ಹೊರಗಡೆ ಹೋಗು ಅಂತಾಳೆ, ಅವತ್ತು ಮಾತ್ ಕೊಟ್ಟು ಬಂದಿದ್ದೀನಿ. ಆ ಮಾತಿಗೆ ಇವತ್ತು ನಿಂತಿದ್ದೀನಿ’ ಎಂದು ಹೇಳಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿರುವ ವರ್ತೂರ್ ಸಂತೋಷ್ ಅವರ ವಿಡಿಯೋ ಸಾಮಾಜಿಕ…
ಈ ವಾರದ ಕಳಪೆ ಪಟ್ಟವನ್ನು ಡ್ರೋನ್ ಪ್ರತಾಪ್ ಧರಿಸಿದ್ದಾರೆ. ಈ ವಾರದ ನಾಯಕತ್ವದ ಪರಿಣಾಮವಾಗಿ ಜೈಲುಡುಗೆ ತೊಟ್ಟ ಪ್ರತಾಪ್ ಚಿತ್ರ JioCinema ಬಿಡುಗಡೆ ಮಾಡಿರುವ ಬೆಳಗಿನ ಫ್ರೊಮೊದಲ್ಲಿ ಜಾಹೀರುಗೊಂಡಿದೆ. ವಾರದ ಕೊನೆಗೆ ಕಳಪೆ ಯಾರು ಉತ್ತಮ ಯಾರು ಎಂಬುದನ್ನು ಆರಿಸುವ ಸಂದರ್ಭದಲ್ಲಿ ಎರಡೂ ತಂಡದ ಬಹುತೇಕ ಸದಸ್ಯರು ಪ್ರತಾಪ್ ಹೆಸರನ್ನು ಸೂಚಿಸಿದ್ದಾರೆ. ‘ನನ್ನನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದು ಬೇಜಾರಾಯ್ತು’ ಎಂದು ನಮ್ರತಾ ಕಾರಣ ಕೊಟ್ಟಿದ್ದರೆ, ‘ಕಾರ್ತಿಕ್ ಅವರಂಥ ಆಟಗಾರನನ್ನು ಹೊರಗಿಟ್ಟಿದ್ದರಿಂದ ತಂಡ ವಾರದ ಎಲ್ಲ ಟಾಸ್ಕ್‌ಗಳಲ್ಲಿಯೂ ಸೋಲುವಂತಾಯ್ತು’ ಎಂದು ವಿನಯ್ ಕಾರಣ ನೀಡಿದ್ದಾರೆ. ‘ಎಲ್ಲೋ ಒಂದು ಕಡೆ ಕೋಪದಿಂದ ಮಾತಾಡ್ತಾರೆ ಎಂದು ಈ ವಾರನೂ ಅಗ್ರೆಶನ್‌ನಲ್ಲಿಯೇ ಆಡ್ತಾರೆ ಅಂದುಕೊಳ್ಳುವುದು ಸರಿಯಲ್ಲ’ ಎಂದು ತನಿಷಾ ಹೇಳಿದ್ದಾರೆ. ವರ್ತೂರು, ಸ್ನೇಹಿತ್ ಕೂಡ ಪ್ರತಾಪ್ ಹೆಸರನ್ನೇ ಹೇಳಿದ್ದಾರೆ. ಮನೆಯವರ ನಿರ್ಧಾರಕ್ಕೆ ಬದ್ಧನಾಗಿ ಪ್ರತಾಪ್ ಜೈಲುಡುಗೆಯೇನೋ ತೊಟ್ಟಿದ್ದಾರೆ. ಆದರೆ ಅವರ ನಿರ್ಧಾರ ನನಗೆ ಸಮ್ಮತ ಅನಿಸಿಲ್ಲ ಎಂದೂ ಗಟ್ಟಿಯಾಗಿಯೇ ಹೇಳಿದ್ದಾರೆ. ‘ನನ್ನ ಪ್ರಕಾರ ನಾನು ತೆಗೆದುಕೊಂಡ ನಿರ್ಧಾರಗಳು…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಬಸವೇಶ್ವರ ನಗರದ ಖಾಸಗಿ ಶಾಲೆಗಳಿಗೆ ಹಾಗೂ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಗೂ ಕಿಡಿಗೇಡಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ. ಹಾಗಾದ್ರೆ ಯಾವ ವಯಲದಲ್ಲಿ ಎಷ್ಟು ಶಾಲೆಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.. ಯಾವ ವಯಲದಲ್ಲಿ ಎಷ್ಟು ಶಾಲೆಗಳಿಗೆ ಬೆದರಿಕೆ? ಬೆಂಗಳೂರಿನ ಉತ್ತರ ವಲಯ -1ರಲ್ಲಿ 4 ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿದೆ ಬೆಂಗಳೂರಿನ ಉತ್ತರ ವಲಯ – 2ರಲ್ಲಿ 2 ಶಾಲೆಗಳಿಗೆ ಬೆಂಗಳೂರಿನ ಉತ್ತರ ವಲಯ -4: 01 ಶಾಲೆ ಬೆಂಗಳೂರಿನ ದಕ್ಷಿಣ ವಲಯ – 1: 15 ಶಾಲೆಗಳಿಗೆ ಬೆದರಿಕೆ ಇಮೇಲ್ ಬೆಂಗಳೂರಿನ ದಕ್ಷಿಣ ವಲಯ – 2: 03 ಶಾಲೆಗಳು ಬೆಂಗಳೂರಿನ ದಕ್ಷಿಣ ವಲಯ – 3: 10 ಶಾಲೆಗಳು ಬೆಂಗಳೂರಿನ ದಕ್ಷಿಣ ವಲಯ 4: 04 ಶಾಲೆಗಳು ಬನ್ನೇರುಘಟ್ಟದ 7 ಶಾಲೆಗಳಿಗೆ ಬಾಂಬ್ ಬೆದರಿಕೆ ಗ್ರೀನ್ ಹುಡ್…
ಧಾರವಾಡ: ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಎನ್ನುವುದರ ಜೊತೆಗೆ ಬಾಂಬ್ ಬೆದರಿಕೆ ಹಾಕಿ, ಬೆಂಗಳೂರಿನ ವಿವಿಧ ಶಾಲೆಗಳಿಗೆ ಈ-ಮೇಲ್ ಬಂದಿರುವುದಿರುವುದು ಬಹು ದೊಡ್ಡ ಆತಂಕದ ಸಂಗತಿಯಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು. ಧಾರವಾಡದಲ್ಲಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈಗಿನ ಮಾಹಿತಿ ಪ್ರಕಾರ ಬೆಂಗಳೂರಿನ 17 ಶಾಲೆಗಳಿಗೆ ಈ-ಮೇಲ್ ಮೂಲಕಬಸಂಬ್ ಬೆದರಿಕೆ ಹಾಕಲಾಗಿದೆ. ಇಸ್ಲಾಂಗೆ ಮತಾಂತರವಾಗಿ ಇಲ್ಲವೇ, ಸಾಯಲು ಸಿದ್ಧವಾಗಿ ಎಂಬ ಸಂದೇಶ ಕಳುಹಿಸಲಾಗಿದೆ. ಇಡಿ ಹಿಂದೂಗಳಿಗೆ ಇವರು ಈ ರೀತಿಯ ಆಹ್ವಾನ ನೀಡಿದ್ದಾರೆ. ಈ ದೇಶವನ್ನು ಇಸ್ಲಾಂ ಮಾಡುತ್ತೇವೆ, ಖಡ್ಗದ ಆಧಾರದ ಮೇಲೆ ಮತಾಂತರ ಮಾಡುತ್ತೇವೆ ಎಂದಿದ್ದಾರೆ. ಮುಜಾಹಿದ್ದೀನ್ ಎಂಬ ಹಿಂದೂ ವಿರೋಧಿಯಿಂದ ಈ ರೀತಿಯ ಮೇಲ್ ಬಂದಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ. ಕಾಂಗ್ರೆಸ್‌ನ ತುಷ್ಟಿಕರಣ ಪರಿಣಾಮದಿಂದ ಮುಸ್ಲಿಂರು ನಮ್ಮದೇ ರಾಜ್ಯ ಎನ್ನುವ ಭ್ರಮೆಯಲ್ಲಿದ್ದಾರೆ. ಶಾಲಾ, ಕಾಲೇಜುಗಳಿಗೆ ಬೆದರಿಕೆ ಬರುತ್ತಿರುವುದು ಗಂಭೀರ ವಿಚಾರ. ಜನರು ತಮ್ಮ ಸುರಕ್ಷತೆ ಬಗ್ಗೆ ವಿಚಾರ ಮಾಡಬೇಕು. ಈ ಮೇಲ್…
ನವದೆಹಲಿ: ವಿಶ್ವಕಪ್ 2023 ರ (World Cup 2023) ಟ್ರೋಫಿ ಮೇಲೆ ಕಾಲಿಟ್ಟು ಭಾರೀ ವಿವಾದಕ್ಕೀಡಾದ ಬಳಿಕ ಇದೀಗ ಆಸೀಸ್ ತಂಡದ ಆಲ್ ರೌಂಡರ್ ಮಿಚೆಲ್ ಮಾರ್ಷ್ (Mitchell Marsh) ಸ್ಪಷ್ಟನೆ ನೀಡಿದ್ದಾರೆ. ನಾನು ಯಾರಿಗೂ ಅಗೌರವ ತೋರಿಲ್ಲ. ನಾನು ಅದರ ಬಗ್ಗೆ ಹೆಚ್ಚು ಯೋಚಿಸಿಲ್ಲ. ಆ ಫೋಟೋ ಸಾಕಷ್ಟು ವೈರಲ್ ಆಗಿದೆ ಎಂದು ಹಲವರು ನನ್ನ ಗಮನಕ್ಕೆ ತಂದಿದ್ದರು. ಆದರೆ ನಾನು ಅದನ್ನು ನೊಡಲು ಹೋಗಿಲ್ಲ. ಟೀಕಿಸುವಂಥದ್ದು ಅದರಲ್ಲಿ ಏನೂ ಇಲ್ಲ ಎಂದು ಮಾರ್ಷ್ ತಿಳಿಸಿದ್ದಾರೆ. ನ.19 ರಂದು ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 6 ವಿಕೆಟ್‍ಗಳಿಂದ ಭಾರತ ತಂಡವನ್ನು ಮಣಿಸಿತ್ತು. ಈ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಸತತ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. https://ainlivenews.com/case-of-sale-of-cow-children-the-woman-who-was-selling-vegetables-is-a-billionaire/ ಗೆಲುವಿನ ನಂತರ ಸಂಭ್ರಮ ಆಚರಿಸಿಕೊಂಡಿದ್ದ…
ಧಾರವಾಡ: ಧಾರವಾಡದ ಜಿ.ಪಂ. ಸಭಾಭನದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿಗಳು ಅಧಿಕಾರಿಗಳಿಗೆ ನೀತಿ ಪಾಠ ಹೇಳಿದರು. ಧಾರವಾಡ ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳಲ್ಲಿ ಥರ್ಡ ಪಾರ್ಟಿಗಳು ಕೆಲಸ ಮಾಡುತ್ತಿದ್ದಾರೆ. ಥರ್ಡ ಪಾರ್ಟಿ ವ್ಯಕ್ತಿಯನ್ನು ಬಳಸಿ ಜನರಿಂದ ಹಣ ವಸೂಲಿ ಮಾಡಿದ್ರೆ ನಾನು ಸುಮ್ಮನೆ ಬಿಡಲ್ಲ ಎಂದು ಜಿಲ್ಲೆಯ ತಹಶಿಲ್ದಾರ ಕಚೇರಿ, ಸಬ್ ರೆಜಿಸ್ಟರ್ ಕಚೇರಿಗಳು, ಎಡಿಎಲ್ ಆರ್ , ಡಿಡಿಎಲ್ಆರ್ ಅಧಿಕಾರಿಗಳಿಗೆ ಪುಲ್ ಕ್ಲಾಸ್ ತೆಗೆದುಕೊಂಡರು. ಏಜಂಟರುಗಳನ್ನ ಇಟ್ಟುಕ್ಕೊಂಡು ಹಣ ವಸೂಲಿ ಮಾಡುತ್ತಿರುವ ದೂರುಗಳನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ಎಲ್ಲ ಅಧಿಕಾರಿಗಳು ಪ್ರಮಾಣಿಕವಾಗಿ ಜನತೆಯ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು. ಥರ್ಡ್ ಪಾರ್ಟಿಗಳಿಂದ ದೂರ ಇರಬೇಕು, ಇದನ್ನು ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಹೇಳುತ್ತಿದ್ದೇನೆ ಎಂದು ಸಭೆಯಲ್ಲಿ ಜಿಲ್ಲೆಯ ಗ್ರಾಮ ಪಂಚಾಯತಿ, ಆರೋಗ್ಯ ಇಲಾಖೆ, ತಹಶಿಲ್ದಾರ, ಸಬ್ ರೆಜಿಸ್ಟರ್ , ಎಡಿಎಲ್ಆರ್, ಡಿಡಿಎಲ್ಆರ್, ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಹುಬ್ಬಳ್ಳಿ; ಕ್ಷತ್ರಿಯ ಮರಾಠಾ ಸಮಾಜ ಶಾಂಣ್ಣವ ಕುಳಿ ) ಚಾರಿಟೇಬಲ್ ಟ್ರಸ್ಟ್ ಆಂಜನೇಯದೇವಸ್ಥಾನದ ಹಿಂದೆ ಮರಾಠಾ ಗಲ್ಲಿ, ಹುಬ್ಬಳ್ಳಿ ವತಿಯಿಂದ ಮರಾಠಾ ಶ್ರೀ ಭಾರತಿಮಠ ಟ್ರಸ್ಟ್ ಇವರ ಆಶ್ರಯದಲ್ಲಿ ಹುಬ್ಬಳಿಯಲ್ಲಿ ಇದೇ ರವಿವಾರ 3 ಡಿಸೆಂಬರದಂದು ಕ್ಷತ್ರಿಯ ಮರಾಠಾ ಸಮಾಜದ ವಧು ವರರ ಸಮಾವೇಶವನ್ನು ಜೀಜಾಮಾತಾ ಮರಾಠಾ ಮಹಿಳಾ ಮಂಡಳ ಮರಾಠಾ ಗಲ್ಲಿ ಇವರ ಸಹಯೋಗದಲ್ಲಿ ವಿದ್ಯಾನಗರದ ಮರಾಠಾ ಭಾರತಿಮಠ ಕಲ್ಯಾಣ ಮಂಟಪ ದಲ್ಲಿ ಹಮ್ಮಿಕೊಳ್ಳಲಾಗಿದೆ. ರವಿವಾರ ದಿ 3 ಡಿಸೆಂಬರದಂದು ಬೆಳಿಗ್ಗೆ 10 ಘಂಟೆಗೆ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಇವರು ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ, ಶಾಸಕರಾದ ಶ್ರೀನಿವಾಸ ಮಾನೆ, ಪ್ರಸಾದ ಅಬ್ಬಯ್ಯ,ಅರವಿಂದ ಬೆಲ್ಲದ ಹಾಗೂ ಮಹೇಶ ಟೆಂಗಿನಕಾಯಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಪಾಲ್ಗೊಳ್ಳುವ ವಧು, ವರರ ನೋಂದಣಿಯು ರವಿವಾರದಂದು…
ಹುಬ್ಬಳ್ಳಿ : ಕರ್ನಾಟಕದಿಂದ ಆಯ್ಕೆಯಾದÀ ನಾಲ್ಕು ವಿದ್ಯಾರ್ಥಿನಿಯರು ಇದೇ ತಿಂಗಳ ೧೮ & ೧೯ರಂದು ದೆಹಲಿಯ ತಲಕಟೋರಾ ಇನ್‌ಡೋರ ಸ್ಟೇಡಿಯಂನಲ್ಲಿ ನಡೆದ ಸಬ್ ಜೂನಿಯರ್ ವರ್ಗದಲ್ಲಿ ೧.ತೃಷ್ಟಿ ಜಿಗ್ನೇಶ್ ಪಟೇಲ್ (೧೦ ವರ್ಷದ ಕಟ ವಿಬಾಗದಲ್ಲಿ ದ್ವಿತೀಯ ಸ್ಥಾನ) ೨. ಟ್ರಿಫೋಸಾ ಬಿಲ್ಲಾ (೮ ವರ್ಷದÀ ಕಟ ವಿಬಾಗದಲ್ಲಿ ತೃತೀಯಾ ಸ್ಥಾನ) ೩. ಅನನ್ಯ ಮಿಶ್ರಾ (೧೧ ವರ್ಷದ ಕಟ ವಿಬಾಗದಲ್ಲಿ ತೃತೀಯಾ ಸ್ಥಾನ) ೪. ಅಕ್ಷಯ ಸಿದ್ಲಾಪುರ (೭ ವರ್ಷದ ಕುಮಿತೆ ವಿಬಾಗದಲ್ಲಿ ತೃತೀಯ ಸ್ಥಾನ ) ಪಡೆದುಕೊಂಡು ಧಾರವಾಡ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಸೆನ್ಸೈ ಶರತ್, ಸೆನ್ಸೈ ಗಣೇಶ್, ಸೆನ್ಸೈ ಸಿದ್ದು, ಸೆನ್ಸೈ ವೆಂಕಟೇಶ್ & ಸೆನ್ಸೈ ಕುಶುಬೂ ಅಭಿನಂದಿಸಿದ್ದಾರೆ.