ಬಿಗ್ ಬಾಸ್ ಮನೆಯಲ್ಲಿರುವ ವರ್ತೂರು ಸಂತೋಷ್ ಅವರು, ಮದುವೆ ಕುರಿತ ಮಾವನ ಆರೋಪವನ್ನ ವರ್ತೂರ್ ತಳ್ಳಿ ಹಾಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಮನಬಿಚ್ಚಿ ಎಲ್ಲರ ಮುಂದೆ ಮಾತನಾಡಿದ ಸಂತೋಷ್, ‘ಮದುವೆ ವಿಚಾರ ಬಂದಾಗ ದೊಡ್ಡಪ್ಪನ ಬಳಿ ಹೇಳಿದ್ದೆ, ನೀವು ಯಾವ ಹುಡ್ಗೀನ ತೋರಿಸಿದ್ರೂ ಅವ್ಳಿಗೆ ತಾಳಿ ಕಟ್ತೇನೆ. ಮಾತು ಕೊಟ್ಟು ಒಪ್ಪಿಕೊಂಡೆ, ಹೀಗೆ ಸಾಗ್ತಾ ಇತ್ತು. ಕಡೆಗೆ ನಮ್ಮಮ್ಮನ ಇಗ್ನೋರ್ ಮಾಡೋಕೆ ಶುರು ಮಾಡಿದ್ಳು, ನಾನು ಸಂಪಾದನೆ ಮಾಡಿರೋ ಜನರನ್ನು ಬಿಟ್ಟು ಇವ್ರ ಹಿಂದೆ ಹೋಗ್ಬೇಕು ಅಂದ್ರೆ ಆಗಲ್ಲ. ನಾನು ಅವ್ರ ಮನೆ ತನಕ ಹೋಗ್ತೀನಿ, ನನ್ನ ಮಾತಿನ ಪ್ರಕಾರ ಬಂದ್ರೆ ಇವತ್ತಿಗೂ ನೀನ್ ರಾಣಿನೇ… ಬಾ ಅಂತ ಕರಿತೀನಿ.. ಆದ್ರೆ ಫಸ್ಟ್ ಆ ಗೇಟಿಂದ ಹೊರಗಡೆ ಹೋಗು ಅಂತಾಳೆ, ಅವತ್ತು ಮಾತ್ ಕೊಟ್ಟು ಬಂದಿದ್ದೀನಿ. ಆ ಮಾತಿಗೆ ಇವತ್ತು ನಿಂತಿದ್ದೀನಿ’ ಎಂದು ಹೇಳಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿರುವ ವರ್ತೂರ್ ಸಂತೋಷ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಿನಲ್ಲಿ ವೈರಲ್ ಆಗುತ್ತಿದೆ.