“ಡೆಡ್ಲಿ ಸೋಮ” ಖ್ಯಾತಿಯ ಆದಿತ್ಯ ನಾಯಕರಾಗಿ ನಟಿಸಿರುವ ಹಾಗೂ ಕಿಶೋರ್ ಮೇಗಳಮನೆ ನಿರ್ದೇಶನದ “ಕಾಂಗರೂ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಚಿಕ್ಕಮಗಳೂರು, ಹೊರನಾಡು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಸದ್ಯ ಮಾತಿನ ಜೋಡಣೆ(ಡಬ್ಬಿಂಗ್) ನಡೆಯುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಆದಿತ್ಯ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ರಂಜನಿ ರಾಘವನ್ ಅಭಿನಯಿಸಿದ್ದು, ಸೈಕಿಯಾಟ್ರಿಸ್ಟ್ ಡಾಕ್ಟರ್ ಪಾತ್ರ ನಿರ್ವಹಿಸಿದ್ದಾರೆ. ಶಿವಮಣಿ, ಕರಿಸುಬ್ಬು, ನಾಗೇಂದ್ರ ಅರಸ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಸಾಕಷ್ಟು ಬಂದಿದೆ. ಆದರೆ ನಮ್ಮ ಚಿತ್ರ ಸ್ವಲ್ಪ ವಿಭಿನ್ನ. ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್ ಗಾಗಿ ಮಾಡಿರುವ ಕಥೆವಿದು. ಇನ್ನು “ಕಾಂಗರೂ” ಶೀರ್ಷಿಕೆ ಕುರಿತು ಹೇಳುವುದಾದರೆ, “ಕಾಂಗರೂ” ಒಂದು ಮುಗ್ಧ ಪ್ರಾಣಿ. ಅದು ಯಾರಿಗೂ ಏನು ಮಾಡುವುದಿಲ್ಲ. ಮತ್ತು ಈ ಕಾಂಗರೂ ತನ್ನ ಮರಿಗೆ ಜನ್ಮ ನೀಡಿದ ನಂತರ ಅದರ ಹೊಟ್ಟೆಯ ಮೇಲ್ಬಾಗದಲ್ಲಿ ಇರುವ ಚೀಲದಲ್ಲಿ ಆ ಮರಿಯನ್ನು ಇಟ್ಟು ಕಾಪಾಡುತ್ತದೆ, ಅಂತ ಸಮಯದಲ್ಲಿ ತನ್ನ ಮರಿಯ ತಂಟೆಗೆ…
Author: AIN Author
ಹೈದರಾಬಾದ್: ಗ್ಯಾರಂಟಿಗಳು ನಮ್ಮ ಕೈ ಹಿಡಿಯುತ್ತವೆ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೇಳಿದ್ದಾರೆ. ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರ ಬೀಳಲಿದ್ದು, ಈ ಹಿನ್ನೆಲೆಯಲ್ಲಿ ಶಾಸಕರು ಮಾತನಾಡಿದರು. ನಮ್ಮ ಕರ್ನಾಟಕದ ಗ್ಯಾರಂಟಿ ಸಕ್ಸಸ್ ಆಗಿದೆ ಇಲ್ಲಿ ಇನ್ಸ್ ಪೇರಷನ್ ಆಗಿ ತಗೊಂಡಿದ್ದಾರೆ. ಗ್ಯಾರಂಟಿಗಳು ನಮ್ಮ ಕೈ ಹಿಡಿಯುತ್ತವೆ. ಗ್ಯಾರಂಟಿಗಳನ್ನ ಟೀಕೆ ಮಾಡ್ತಾ ಇರೋದು ಕೆಸಿಆರ್ ಮತ್ತೆ ಅವರ ಬಂಧು, https://ainlivenews.com/nia-raid-accused-making-fake-notes-arrested/ ಪ್ರಭಾಕರ್ ರೆಡ್ಡಿ (Prabhakar Reddy) ಅಷ್ಟೇ ಬೇರೆ ಯಾರು ಮಾಡ್ತಿಲ್ಲ ಎಂದು ಶಾಸಕರು ವಾಗ್ದಾಳಿ ನಡೆಸಿದರು. 10 ವರ್ಷದಲ್ಲಿ ಬಿಆರ್‍ಎಸ್ ಪಕ್ಷದ ದುರಾಡಳಿತವನ್ನ ಜನ ನೋಡಿದ್ದಾರೆ. 70ಕ್ಕೂ ಹೆಚ್ಚು ಕಾಂಗ್ರೆಸ್ (Congress) ಸೀಟ್ ತೆಲಂಗಾಣದಲ್ಲಿ ಗೆಲ್ಲುತ್ತವೆ. ಈ ಹಿಂದೆ ವೈಎಸ್ ರಾಜ್ ಶೇಖರ್ ರೆಡ್ಡಿ ಅವರು ಒಳ್ಳೆ ಕೆಲಸ ಮಾಡಿದ್ದಾರೆ. ಅದು ನಮ್ಮ ಕೈ ಹಿಡಿಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನ ಕೆಆರ್ ಪುರ ಸಮೀಪದ ಚಿಕ್ಕಬಸವನಪುರದಲ್ಲಿ 5 ಎಕರೆ ಸರ್ಕಾರಿ ಭೂಮಿಯನ್ನು ಖಾಸಗೀ ವ್ಯಕ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಪೂರ್ವ ತಾಲ್ಲೂಕು ವಿಶೇಷ ತಹಶೀಲ್ದಾರ್ ಎಸ್ , ಆರ್ ಮಹೇಶ್ ಅವರಿಗೆ ದೂರು ನೀಡಿ ಒತ್ತುವರಿ ಜಾಗವನ್ನ ತೆರವುಗೊಳ್ಳಿಸುವಂತೆ ಗ್ರಾಮಸ್ಥರು ಮನವಿ ಪತ್ರಸಲ್ಲಿಸಿದ್ದಾರೆ . ಈ ವೇಳೆ ಮಾಧ್ಯಮಗಳ ಜೊತೆ ದೂರುದಾರ ಪ್ರತಾಪ್ ಕುಮಾರ್ ಮಾತನಾಡಿ ಚಿಕ್ಕಬಸವನಪುರದ ಸರ್ವೆ ನಂ. 1. ರಲ್ಲಿ 16 ಎಕರೆ, 18 ಗುಂಟೆ ಸರ್ಕಾರಿ ಜಮೀನಿದ್ದು, ಇದರ ಪೈಕಿ 4 ಎಕರೆ 28 ಗುಂಟೆ ಖರಾಬು ಜಾಗವಾಗಿದ್ದು, ಉಳಿದ 8 ಎಕರೆ 10 ಗುಂಟೆ ಜಾಗದಲ್ಲಿ 3 ಎಕರೆ 10 ಗುಂಟೆ ಭೂಮಿ ಡಿ ರಾಮಯ್ಯರೆಡ್ಡಿ ಎಂಬುವವರಿಗೆ ಮಂಜೂರಾಗಿದೆ . ಉಳಿದ 5 ಎಕರೆ ಸರ್ಕಾರಿ ಭೂಮಿ ಕಬಳಿಸಲು ಅವರ ಅಣ್ಣತಮ್ಮದಿರು ಸರ್ಕಾರಿ ಜಾಗ ನಮ್ಮ ಸ್ವತ್ತು ಎಂದು ನ್ಯಾಯಲಯದ ಮೊರೆ ಹೋಗಿದ್ದು , ನ್ಯಾಯಲಯ ಇದು ಸರ್ಕಾರಿ ಭೂಮಿ…
ಹುಬ್ಬಳ್ಳಿ: ಕನಕದಾಸ ಜಯಂತಿ ಅಂಗವಾಗಿ ಹುಬ್ಬಳ್ಳಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಟೌನ್ ಹಾಲ್ ವರೆಗೆ ಮೆರವಣಿಗೆ ನಡೆಸಲಾಯಿತು. ಕನಕದಾಸರ ಬೃಹತ್ ಭಾವಚಿತ್ರದೊಂದಿಗೆ ಸಾಗಿದ ಮೆರವಣಿಗೆ ಆಗಿದ್ದು, ಹಿಳೆಯರಿಂದ ಕುಂಭ ಮೇಳ, ಪುರುಷರ ಡೊಳ್ಳು ಕುಣಿತ ಗಮನ ಸೆಲೆಯಿತು. ಕನಕದಾಸ ನೈರುತ್ಯ ರೈಲ್ವೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕನಕದಾಸ ಜಯಂತೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಟೌನ್ ಹಾಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮವಾಗಿದ್ದು, ನೂರಾರು ಕುರುಬ ಸಮಾಜದವರು ಮೆರವಣಿಗೆಯಲ್ಲಿ ಭಾಗಿಯಾದರು.
ಹೈದಾರಾಬಾದ್: ತೆಲಂಗಾಣದಲ್ಲಿ (Telangana) ಕಾಂಗ್ರೆಸ್‌ಗೆ (Congress) ಭಾರೀ ಮುನ್ನಡೆ ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ. ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ (Revanth Reddy) ನಿವಾಸದಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಕಾರ್ಯಕರ್ತರು ಸಿಹಿ ಹಂಚುತ್ತಿದ್ದಾರೆ. ಬೆಳಗ್ಗೆ 10:15ರ ಟ್ರೆಂಡ್ ಪ್ರಕಾರ ಬಿಆರ್‌ಎಸ್ 50, https://ainlivenews.com/nia-raid-accused-making-fake-notes-arrested/ ಕಾಂಗ್ರೆಸ್ 60, ಬಿಜೆಪಿ 3, ಎಐಎಂಐಎಂ 5 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದಾರೆ. ತೆಲಂಗಾಣದಲ್ಲಿ ಒಟ್ಟು 119 ಸ್ಥಾನಗಳಿದ್ದು ಬಹುಮತಕ್ಕೆ 60 ಸ್ಥಾನಗಳ ಅಗತ್ಯವಿದೆ. ತೆಲಂಗಾಣದಲ್ಲಿ 2018 ರ ಚುನಾವಣೆಯಲ್ಲಿ ಬಿಆರ್‌ಎಸ್ 88 ಸೀಟ್‌ಗಳನ್ನು ಗೆದ್ದಿತ್ತು. ಕಾಂಗ್ರೆಸ್ 19, ಎಐಎಂಐಎಂ 7, ಟಿಡಿಪಿ 2 ಸ್ಥಾನಗಳನ್ನು ಗೆದ್ದಿದ್ದವು. ಬಿಜೆಪಿ ಒಂದು ಕ್ಷೇತ್ರದಲ್ಲಿ ಮಾತ್ರ ಜಯ ಸಾಧಿಸಿತ್ತು.
ಕಲಬುರಗಿ: ಲೋಕಸಭೆ ಚುನಾವಣೆಗೆ ಪಂಚ ರಾಜ್ಯಗಳ ಫಲಿತಾಂಶ ದಿಕ್ಸೂಚಿ ಅಂತಾ ಹೇಳಕ್ಕಾಗಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಪ್ರಿಯಾಂಕ್ ನಮಗೆ ಯಾವ ರೀತಿಯಲ್ಲೂ ಆಪರೇಷನ್ ಕಮಲ ಭಯ ನಮಗಿಲ್ಲ, ಆದ್ರೆ ನಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಬೇಕಿದೆ. ಬಿಜೆಪಿ ಅವರು ತೋಳ್ಬಲ, ಹಣ ಬಲ, ಸಿಬಿಐ, ಇಡಿ ಬಳಕೆ ಮಾಡ್ತಾರೆ, ಹೀಗಾಗಿ ನಮ್ಮ ಶಾಸಕರನ್ನ ನಾವು ಸೇಫ್ ಆಗಿ ಇಟ್ಟುಕೊಳ್ಳಬೇಕಿದೆ ಅಷ್ಟೆ.ನಾನಂತೂ ತೆಲಂಗಾಣದಲ್ಲಿ ಅಧಿಕಾರಕ್ಕೆ ಬರುವವರಿದ್ದೇವೆ ಅಂದ್ರು.
ಅಹಮದಾಬಾದ್: ಇಲ್ಲಿನ ಟ್ರಾನ್ಸ್‌ಸ್ಟೇಡಿಯಾ ಅರೆನಾ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ (Kabaddi) ಲೀಗ್‍ನ 10ನೇ ಸೀಸನ್‍ನ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ (Telugu Titans) ವಿರುದ್ಧ ಗುಜರಾತ್ ಜೈಂಟ್ಸ್ (Gujarat Giants) ಭರ್ಜರಿ ಗೆಲುವು ಸಾಧಿಸಿತು. ಗುಜರಾತ್ ತಂಡದ ರೈಡರ್ ಸೋನು ಜಗ್ಲಾನ್ ಉತ್ತಮ ಪ್ರದರ್ಶನ ನೀಡಿದ್ದು, ಒಟ್ಟು 11 ಬಾರಿ ದಾಳಿ ಮಾಡಿ 11 ಪಾಯಿಂಟ್ಸ್ ತಂದುಕೊಟ್ಟು ಯಶಸ್ವಿಯಾದರು. https://ainlivenews.com/nia-raid-accused-making-fake-notes-arrested/ ರಾಕೇಶ್ ಸುಂಗ್ರೋಯಾ 5 ರೈಡ್‍ಗಳಲ್ಲಿ 5 ಅಂಕಗಳಿಸಿದರು. ಈ ಮೂಲಕ ಆತಿಥೇಯ ಗುಜರಾತ್ ಜೈಂಟ್ಸ್ ತಂಡವು ತೆಲುಗು ಟೈಟಾನ್ಸ್ ವಿರುದ್ಧ 38-32 ಅಂಕಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು. ತೆಲುಗು ಟೈಟಾನ್ಸ್ ತಂಡದ ಸ್ಟಾರ್ ರೈಡರ್ ಪವನ್ ಸೆಹ್ರಾವತ್ ಈ ಪಂದ್ಯದಲ್ಲಿ ಸೂಪರ್ 10 ಪಡೆದರು. ಪಂದ್ಯದ ನಿರ್ಣಾಯಕ ಘಟ್ಟಗಳಲ್ಲಿ ತೆಲುಗು ಟೈಟಾನ್ಸ್ ಎಡವಿದ ಕಾರಣ ಗೆಲುವಿಗೆ ಆ ಅಂಕಗಳು ಸಾಕಾಗಲಿಲ್ಲ.
ರಾಯಪುರ: ಛತ್ತಿಸ್‌ಗಢದಲ್ಲಿ ಸದ್ಯ ಬಿಜೆಪಿ-ಕಾಂಗ್ರೆಸ್ ನಡುವೆ ಹಾವು ಏಣಿ ಆಟ ಶುರುವಾಗಿದೆ. ಜಿದ್ದಾ ಜಿದ್ದಿ ಕಣದಲ್ಲಿ ಒಮ್ಮೆ ಬಿಜೆಪಿ, ಒಮ್ಮೆ ಕಾಂಗ್ರೆಸ್ ನಡುವೆ ಏರಿಳಿತ ಕಂಡುಬರುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಿದೆ. ಬೆಳಗ್ಗೆ 9:35ರ ವರೆಗೂ ಮುನ್ನಡೆ ಸಾಧಿಸಿದ್ದ ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ಇದ್ದಕ್ಕಿದ್ದಂತೆ ಒಂದೊಂದೇ ಸ್ಥಾನ ಇಳಿಕೆಯಾಗುತ್ತಿರುವುದು ಕಂಡುಬರುತ್ತಿದೆ. https://ainlivenews.com/nia-raid-accused-making-fake-notes-arrested/ ಬೆಳಗ್ಗೆ 9:15ರ ವೇಳೆಗೆ ಛತ್ತಿಸ್‌ಗಢದಲ್ಲಿ ಬಿಜೆಪಿ 30, ಕಾಂಗೆಸ್ 49, ಇತರೇ 1 ಸ್ಥಾನಗಳಲ್ಲಿ, ಬೆಳಗ್ಗೆ 9:35ರ ವೇಳೆಗೆ ಬಿಜೆಪಿ 31, ಕಾಂಗೆಸ್ 59, ಇತರೇ 2 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತ್ತು. 10:05 ಗಂಟೆ ವೇಳೆಗೆ ಬಿಜೆಪಿ 42, ಕಾಂಗ್ರೆಸ್ 46 ಹಾಗೂ ಇತರೇ 2 ಸ್ಥಾನಕ್ಕೆ ಬಂದು ನಿಂತಿತ್ತು. ಆದ್ರೆ 10:06 ಗಂಟೆ ವೇಳೆಗೆ ಪುನಃ ಬಿಜೆಪಿ 45, ಕಾಂಗ್ರೆಸ್ 44, ಇತರೇ 1 ಸ್ಥಾನಕ್ಕೆ ಬಂದು ನಿಂತಿದೆ. ಸದ್ಯ ಛತ್ತಿಸ್‌ಗಡದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತದಲ್ಲಿದೆ. ಪ್ರತಿ 5 ನಿಮಿಷಕ್ಕೆ ಫಲಿತಾಂಶ…
ಭೋಪಾಲ್: ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ನಾವು ಮತ್ತೆ ರಾಜ್ಯದಲ್ಲಿ ಅಧಿಕಾರ ನಡೆಸುತ್ತೇವೆ ಎಂದು ಸಚಿವ, ಬಿಜೆಪಿ ನಾಯಕ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಚುನಾವಣಾ ಫಲಿತಾಂಶಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗ್ಗೆ 8 ಗಂಟೆಯಿಂದ ಮತಣಿಕೆ ನಡೆಯಲಿದೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ನಾವು 125 ರಿಂದ 150 ಮತಗಳೊಂದಿಗೆ ಭರ್ಜರಿ ಜಯಗಳಿಸುತ್ತೇವೆ. https://ainlivenews.com/nia-raid-accused-making-fake-notes-arrested/ ಈ ಮೂಲಕ ರಾಜ್ಯದಲ್ಲಿ ನಾವು ಮತ್ತೆ ಆಡಳಿತ ನಡೆಸುತ್ತೇವೆ ಎಂದು ಸಚಿವರು ಹೇಳಿದರು. ಒಟ್ಟಿನಲ್ಲಿ ಸದ್ಯ ಬಿಜೆಪಿ ಸರ್ಕಾರವಿರುವ ಮಧ್ಯಪ್ರದೇದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ನೆಕ್ ಟು ನೆಕ್ ಫೈಟ್ ಇರಲಿದೆ ಎಂಬುದಾಗಿ ಬಹುತೇಕ ಸಮೀಕ್ಷೆಗಳು ತಿಳಿಸಿದ್ದು, ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎಂಬುದನ್ನು ಕಾದುನೋಡಬೇಕು. ಕೆಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುಂದಿದ್ದರೆ, ಇನ್ನು ಕೆಲವು ಸಮೀಕ್ಷೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಭೋಪಾಲ್: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು, ಭಾರೀ ಕುತೂಹಲ ಹುಟ್ಟಿಸಿದೆ. ಮಧ್ಯಪ್ರದೇಶದಲ್ಲಿ (Madhyapradesh Election Result) ಸದ್ಯ ಬಿಜೆಪಿ (BJP) ಸರ್ಕಾರವಿದ್ದು, ಬಹುತೇಕ ಸಮೀಕ್ಷೆಗಳು ನೆಕ್ ಟು ನೆಕ್ ಫೈಟ್ ಇದೆ ಎಂದಿವೆ. ಕೆಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುಂದಿದ್ದರೆ, ಇನ್ನು ಕೆಲವು ಸಮೀಕ್ಷೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ನವೆಂಬರ್ 17ರಂದು ನಡೆದ ಚುನಾವಣೆಯಲ್ಲಿ ಮಧ್ಯಪ್ರದೇಶ ಚುನಾವಣಾ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದಲ್ಲಿ ಮತದಾನ ಅಂದ್ರೆ 77.1%ರಷ್ಟು ವೋಟಿಂಗ್ ನಮೂದಾಗಿತ್ತು. ಕಳೆದ ಬಾರಿ ಇಲ್ಲಿ ಗರಿಷ್ಠ ಸೀಟ್ ಗೆದ್ದು ಬಿಎಸ್‍ಪಿ ಶಾಸಕರ ನೆರವಿನಿಂದ ಇಲ್ಲಿ ಕಮಲ್‍ನಾಥ್ (Kamalnath) ಸರ್ಕಾರ ಮಾಡಿದ್ರು. ಆದರೆ ಬಿಜೆಪಿ ಆಪರೇಷನ್ ಕಮಲ ನಡೆಸಿದ ಕಾರಣ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಮತ್ತೆ ಸಿಎಂ ಆದ್ರು. https://ainlivenews.com/five-hostages-died-in-gaza-while-there-was-a-ceasefire/ ಇಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ (Congress-BJP) ನಡ್ವೆ ಟಫ್ ಫೈಟ್ ನಡೆದಿದೆ ಅಧಿಕಾರ ಉಳಿಸಿಕೊಳ್ಳೋ ಸಲುವಾಗಿ ಬಿಜೆಪಿ ಸೀಟ್ ಹಂಚಿಕೆಯಲ್ಲಿ ಹೊಸ ತಂತ್ರ ಅನುಸರಿಸಿತ್ತು. ಕೇಂದ್ರ ಸಚಿವರು ಸೇರಿ ಏಳು…