ರಾಯಪುರ: ಛತ್ತಿಸ್ಗಢದಲ್ಲಿ ಸದ್ಯ ಬಿಜೆಪಿ-ಕಾಂಗ್ರೆಸ್ ನಡುವೆ ಹಾವು ಏಣಿ ಆಟ ಶುರುವಾಗಿದೆ. ಜಿದ್ದಾ ಜಿದ್ದಿ ಕಣದಲ್ಲಿ ಒಮ್ಮೆ ಬಿಜೆಪಿ, ಒಮ್ಮೆ ಕಾಂಗ್ರೆಸ್ ನಡುವೆ ಏರಿಳಿತ ಕಂಡುಬರುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಿದೆ. ಬೆಳಗ್ಗೆ 9:35ರ ವರೆಗೂ ಮುನ್ನಡೆ ಸಾಧಿಸಿದ್ದ ಆಡಳಿತ ಪಕ್ಷ ಕಾಂಗ್ರೆಸ್ನಲ್ಲಿ ಇದ್ದಕ್ಕಿದ್ದಂತೆ ಒಂದೊಂದೇ ಸ್ಥಾನ ಇಳಿಕೆಯಾಗುತ್ತಿರುವುದು ಕಂಡುಬರುತ್ತಿದೆ.
ಬೆಳಗ್ಗೆ 9:15ರ ವೇಳೆಗೆ ಛತ್ತಿಸ್ಗಢದಲ್ಲಿ ಬಿಜೆಪಿ 30, ಕಾಂಗೆಸ್ 49, ಇತರೇ 1 ಸ್ಥಾನಗಳಲ್ಲಿ, ಬೆಳಗ್ಗೆ 9:35ರ ವೇಳೆಗೆ ಬಿಜೆಪಿ 31, ಕಾಂಗೆಸ್ 59, ಇತರೇ 2 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತ್ತು. 10:05 ಗಂಟೆ ವೇಳೆಗೆ ಬಿಜೆಪಿ 42, ಕಾಂಗ್ರೆಸ್ 46 ಹಾಗೂ ಇತರೇ 2 ಸ್ಥಾನಕ್ಕೆ ಬಂದು ನಿಂತಿತ್ತು. ಆದ್ರೆ 10:06 ಗಂಟೆ ವೇಳೆಗೆ ಪುನಃ ಬಿಜೆಪಿ 45, ಕಾಂಗ್ರೆಸ್ 44, ಇತರೇ 1 ಸ್ಥಾನಕ್ಕೆ ಬಂದು ನಿಂತಿದೆ. ಸದ್ಯ ಛತ್ತಿಸ್ಗಡದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತದಲ್ಲಿದೆ. ಪ್ರತಿ 5 ನಿಮಿಷಕ್ಕೆ ಫಲಿತಾಂಶ ಏರಿಳಿತ ಕಂಡುಬರುತ್ತಿದೆ.
ಎಲ್ಲಿ ಎಷ್ಟು ಮ್ಯಾಜಿಕ್ ನಂಬರ್?
ಮಧ್ಯಪ್ರದೇಶ: ಒಟ್ಟು ಸ್ಥಾನ- 230, ಸರಳ ಬಹುಮತಕ್ಕೆ-116, ರಾಜಸ್ಥಾನ: ಒಟ್ಟು ಸ್ಥಾನ- 199, ಸರಳ ಬಹುಮತಕ್ಕೆ-100, ಛತ್ತಿಸ್ಗಢ: ಒಟ್ಟು ಸ್ಥಾನ- 90, ಸರಳ ಬಹುಮತಕ್ಕೆ-46, ತೆಲಂಗಾಣ- ಒಟ್ಟು ಸ್ಥಾನ-119, ಸರಳ ಬಹುಮತಕ್ಕೆ-60.