ಭೋಪಾಲ್: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು, ಭಾರೀ ಕುತೂಹಲ ಹುಟ್ಟಿಸಿದೆ. ಮಧ್ಯಪ್ರದೇಶದಲ್ಲಿ (Madhyapradesh Election Result) ಸದ್ಯ ಬಿಜೆಪಿ (BJP) ಸರ್ಕಾರವಿದ್ದು, ಬಹುತೇಕ ಸಮೀಕ್ಷೆಗಳು ನೆಕ್ ಟು ನೆಕ್ ಫೈಟ್ ಇದೆ ಎಂದಿವೆ. ಕೆಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುಂದಿದ್ದರೆ, ಇನ್ನು ಕೆಲವು ಸಮೀಕ್ಷೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ನವೆಂಬರ್ 17ರಂದು ನಡೆದ ಚುನಾವಣೆಯಲ್ಲಿ ಮಧ್ಯಪ್ರದೇಶ ಚುನಾವಣಾ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದಲ್ಲಿ ಮತದಾನ ಅಂದ್ರೆ 77.1%ರಷ್ಟು ವೋಟಿಂಗ್ ನಮೂದಾಗಿತ್ತು. ಕಳೆದ ಬಾರಿ ಇಲ್ಲಿ ಗರಿಷ್ಠ ಸೀಟ್ ಗೆದ್ದು ಬಿಎಸ್ಪಿ ಶಾಸಕರ ನೆರವಿನಿಂದ ಇಲ್ಲಿ ಕಮಲ್ನಾಥ್ (Kamalnath) ಸರ್ಕಾರ ಮಾಡಿದ್ರು. ಆದರೆ ಬಿಜೆಪಿ ಆಪರೇಷನ್ ಕಮಲ ನಡೆಸಿದ ಕಾರಣ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಮತ್ತೆ ಸಿಎಂ ಆದ್ರು.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ಇಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ (Congress-BJP) ನಡ್ವೆ ಟಫ್ ಫೈಟ್ ನಡೆದಿದೆ ಅಧಿಕಾರ ಉಳಿಸಿಕೊಳ್ಳೋ ಸಲುವಾಗಿ ಬಿಜೆಪಿ ಸೀಟ್ ಹಂಚಿಕೆಯಲ್ಲಿ ಹೊಸ ತಂತ್ರ ಅನುಸರಿಸಿತ್ತು. ಕೇಂದ್ರ ಸಚಿವರು ಸೇರಿ ಏಳು ಮಂದಿಗೆ ಟಿಕೆಟ್ ಹಂಚಿತ್ತು. ಸಿಎಂ ಶಿವರಾಜ್ಸಿಂಗ್ ಚೌಹಾಣ್ರನ್ನು ಹೈಕಮಾಂಡ್ ಒಂದರ್ಥದಲ್ಲಿ ಹೆಚ್ಚು ಕಡಿಮೆ ಕಡೆಗಣಿಸಿತ್ತು. ಆದರೆ ಕಾಂಗ್ರೆಸ್ ಮಾತ್ರ ಮತ್ತೆ ಕಮಲ್ನಾಥ್ ನಾಯಕತ್ವದಲ್ಲೇ ಚುನಾವಣೆ ಎದುರಿಸಿತ್ತು.