ಹೈದರಾಬಾದ್: ಗ್ಯಾರಂಟಿಗಳು ನಮ್ಮ ಕೈ ಹಿಡಿಯುತ್ತವೆ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೇಳಿದ್ದಾರೆ. ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರ ಬೀಳಲಿದ್ದು, ಈ ಹಿನ್ನೆಲೆಯಲ್ಲಿ ಶಾಸಕರು ಮಾತನಾಡಿದರು. ನಮ್ಮ ಕರ್ನಾಟಕದ ಗ್ಯಾರಂಟಿ ಸಕ್ಸಸ್ ಆಗಿದೆ ಇಲ್ಲಿ ಇನ್ಸ್ ಪೇರಷನ್ ಆಗಿ ತಗೊಂಡಿದ್ದಾರೆ. ಗ್ಯಾರಂಟಿಗಳು ನಮ್ಮ ಕೈ ಹಿಡಿಯುತ್ತವೆ. ಗ್ಯಾರಂಟಿಗಳನ್ನ ಟೀಕೆ ಮಾಡ್ತಾ ಇರೋದು ಕೆಸಿಆರ್ ಮತ್ತೆ ಅವರ ಬಂಧು,
ಪ್ರಭಾಕರ್ ರೆಡ್ಡಿ (Prabhakar Reddy) ಅಷ್ಟೇ ಬೇರೆ ಯಾರು ಮಾಡ್ತಿಲ್ಲ ಎಂದು ಶಾಸಕರು ವಾಗ್ದಾಳಿ ನಡೆಸಿದರು. 10 ವರ್ಷದಲ್ಲಿ ಬಿಆರ್ಎಸ್ ಪಕ್ಷದ ದುರಾಡಳಿತವನ್ನ ಜನ ನೋಡಿದ್ದಾರೆ. 70ಕ್ಕೂ ಹೆಚ್ಚು ಕಾಂಗ್ರೆಸ್ (Congress) ಸೀಟ್ ತೆಲಂಗಾಣದಲ್ಲಿ ಗೆಲ್ಲುತ್ತವೆ. ಈ ಹಿಂದೆ ವೈಎಸ್ ರಾಜ್ ಶೇಖರ್ ರೆಡ್ಡಿ ಅವರು ಒಳ್ಳೆ ಕೆಲಸ ಮಾಡಿದ್ದಾರೆ. ಅದು ನಮ್ಮ ಕೈ ಹಿಡಿಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.