ವಿಜಯಪುರ:- ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಂತೆ ಕಳೆದ ಆಗಸ್ಟ್ನಲ್ಲೇ ಮಹಾನಗರ ಪಾಲಿಕೆ ಹಾಗೂ ಪುರಾತತ್ವ ಇಲಾಖೆ ಆಧಿಕಾರಿಗಳಿಗೆ ಮನವಿ ಕೊಟ್ಟಿದ್ದರೂ ಕ್ರಮ ತೆಗೆದುಕೊಳ್ಳದ ಕಾರಣ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ನಾಲ್ವರು ಪುಟ್ಟ ಮಕ್ಕಳಳನ್ನು ಕಚ್ಚಿದ್ದ ಬೀದಿ ಬದಿಯ ನಾಯಿಗಳು ಮಂಗಳವಾರ ಸಹ ತಮ್ಮ ಅಟ್ಟಹಾಸವನ್ನು ಮುಂದುವರೆಸಿವೆ. ಮಂಗಳವಾರ ಮೂವರು ಮಕ್ಕಳನ್ನು ಕಚ್ಚಿದ್ದು ಜನರು ಭಯಗೊಳ್ಳುವಂತಾಗಿದೆ. ನಗರದ ಬಡೀ ಕಮಾನ್, ಬಾಗಾಯತ್ ಗಲ್ಲಿ, ಬಾಂಗೀ ಆಸ್ಪತ್ರೆ ಬಳಿ, ದೌಲತ್ ಕೋಟೆ, ಹಕೀಂ ಚೌಕ್ ನ ಸುತ್ತಮುತ್ತ ಬೀದಿಬದಿಯ ನಾಯಿಗಳ ಕಾಟ ಜೋರಾಗಿದೆ. ಶಾಲೆಗೆ ಹೋಗುವ 8 ವರ್ಷದೊಳಗಿನ ಮಕ್ಕಳನ್ನೇ ಗುರಿಯಾಗಿಸೋ ಬೀದಿ ನಾಯಿಗಳು ಮಕ್ಕಳನ್ನು ಮನಬಂದಂತೆ ಕಚ್ಚಿ ಗಾಯಗೊಳಿಸಿವೆ. ಮನೆಯಾಚೆ ಅಂಗಡಿಗೆ ಹೋಗುವಾಗಲೂ ನಾಯಿಗಳು ಅಟ್ಯಾಕ್ ಮಾಡಿವೆ. ನಿನ್ನೆ ನಾಲ್ಕು ಪುಠಾಣಿಗಳ ಮೇಲೆ ಕ್ರೌರ್ಯ ಮಾಡಿದ್ದ ಬೀದಿನಾಯಿಗಳು ಇಂದು ಮತ್ತೇ ಮೂವರು ಮಕ್ಕಳನ್ನು ಕಚ್ಚಿವೆ. ಬೀದಿನಾಯಿಗಳ ದಾಳಿಗೆ ಈ ಭಾಗದ ಮಕ್ಕಳು ಶಾಲೆಗೆ…
Author: AIN Author
ಬೆಂಗಳೂರು:- ದೋಷಪೂರಿತ ನಂಬರ್ ಪ್ಲೆಟ್ ಬಳಸೋರ ವಿರುದ್ಧ ದಕ್ಷಿಣ ವಿಭಾಗದ ಸಂಚಾರಿ ಪೊಲೀಸರು ಕಾರ್ಯಾಚರಣೆ ಮಾಡಿದ್ದಾರೆ. ದೋಷಪೂರಿತ ನಂಬರ್ ಪ್ಲೇಟ್ ಹಾಕಿಕೊಂಡಿದ್ದ 60ಕ್ಕೂ ಹೆಚ್ಚು ಪ್ರಕರಣಗಳು ಪತ್ತೆ ಆಗಿದ್ದು, ದೋಷಪೂರಿತ ನಂಬರ್ ಪ್ಲೇಟ್ ಬಳಸಿದ ಸವಾರರ ವಿರುದ್ದ ಕೇಸ್ ದಾಖಲಾಗಿದೆ. ಹುಳಿಮಾವು, ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರಿಂದ ಕ್ರಮ ಕೈಗೊಳ್ಳಲಾಗಿದೆ. ಹುಳಿಮಾವು, ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ: ನೈಸ್ (NICE) ಸಂಸ್ಥೆಗೆ ಕೊಟ್ಟರುವ ಹೆಚ್ಚುವರಿ ಭೂಮಿಯನ್ನು ಸರ್ಕಾರ (Karnataka Government) ವಾಪಸ್ ಪಡೆಯಲಿದೆ ಎಂದು ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ತಿಳಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ತುಳಸಿ ಮುನಿರಾಜುಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 554 ಎಕರೆ ನೈಸ್ ಕೊಟ್ಟ ಜಾಗವನ್ನು ನಾವು ವಾಪಸ್ ಪಡೆಯುತ್ತೇವೆ. ಆದಷ್ಟು ಬೇಗ ಜಾಗ ಹಿಂಪಡೆದುಕೊಳ್ಳುತ್ತೇವೆ. 554 ಎಕರೆ ಜಾಗದ ಪರಿಶೀಲನೆ ಮಾಡಲು ಸೂಚನೆ ನೀಡಲಾಗಿದೆ. ಜಮೀನಿನ ಸರ್ವೆ ಕಾರ್ಯ ನಡೆಯುತ್ತಿದೆ. ಸರ್ವೆ ಕಾರ್ಯ ಮುಗಿದ ಕೂಡಲೇ ಜಮೀನು ವಶಪಡಿಸಿಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟರು. ಮುನಿರಾಜುಗೌಡ ಹೇಳಿದ್ದೇನು? ಕೆಐಎಡಿಬಿ (KIADB) ನೈಸ್ ಸಂಸ್ಥೆಗೆ ಕೊಟ್ಟಿರುವ ಹೆಚ್ಚುವರಿ 554 ಎಕರೆ ಜಮೀನು ಹಸ್ತಾಂತರ ಮಾಡಿದೆ. ಹೆಚ್ಚುವರಿ ಭೂಮಿ ಕೊಟ್ಟಿರುವ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ (Supreme Court) ನಲ್ಲಿ ಸರ್ಕಾರ ಪ್ರಮಾಣ ಪತ್ರ ನೀಡಿದೆ. ಕೂಡಲೇ ಸರ್ಕಾರ ನೈಸ್‌ಗೆ ಕೊಟ್ಟಿರಿವ 554 ಎಕರೆ ಜಮೀನು ವಾಪಸ್ ಪಡೆಯಬೇಕು. ಹೈಕೋರ್ಟ್ ಮತ್ತು…
ನವದೆಹಲಿ: ಭಾರತೀಯ ನೌಕಾಪಡೆಗೆ (Indian Navy) ಇದೇ ಮೊದಲ ಬಾರಿಗೆ ಮಹಿಳಾ ಕಮಾಂಡಿಂಗ್ ಅಧಿಕಾರಿಯನ್ನು (Women Commanding Officer) ನೇಮಿಸಲಾಗಿದೆ. ಎಲ್ಲಾ ಶ್ರೇಣಿಯ ಹುದ್ದೆಗಳಲ್ಲಿಯೂ ಮಹಿಳೆಯರನ್ನು ನೇಮಕ ಮಾಡುವ ಗುರಿಯಲ್ಲಿ ಭಾರತೀಯ ನೌಕಾಪಡೆಯು ಮೊದಲ ಮಹಿಳಾ ಕಮಾಂಡಿಂಗ್ ಅಧಿಕಾರಿಯನ್ನು ನೇಮಕ ಮಾಡಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ತಿಳಿಸಿದ್ದಾರೆ. ನೌಕಾಪಡೆ ದಿನಕ್ಕೂ ಮೊದಲು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಡ್ಮಿರಲ್ ಕುಮಾರ್, ಕಳೆದ 1 ವರ್ಷದಲ್ಲಿ ಭಾರತೀಯ ನೌಕಾಪಡೆಯ ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ವಿಮಾನಗಳು ಆಯಕಟ್ಟಿನ ನೀರಿನಲ್ಲಿ ಹೆಚ್ಚಿನ ಕಾರ್ಯಾಚರಣೆಯನ್ನು ಮಾಡಿದೆ ಎಂದು ಹೇಳಿದರು. https://ainlivenews.com/natural-star-in-bangalore-nani-is-busy-with-hi-nanna-promotion/ ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಆಕ್ರಮಣಗಳ ಕುರಿತು ಮಾತನಾಡಿದ ಅವರು, ಭಾರತೀಯ ನೌಕಾಪಡೆಯು ಈ ಪ್ರದೇಶದಲ್ಲಿನ ಎಲ್ಲಾ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದರು. ನಮ್ಮ ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ವಿಮಾನಗಳು ಹೆಚ್ಚಿನ ಕಾರ್ಯಾಚರಣೆಯ ವೇಗವನ್ನು ಹೊಂದಿವೆ. ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಉತ್ತೇಜಿಸಲು ನಮ್ಮ ಘಟಕಗಳನ್ನು ಹಿಂದೂ ಮಹಾಸಾಗರದ…
ಬೆಂಗಳೂರು:- ಡಿಸೆಂಬರ್ 10ರಿಂದ 3 ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರದಲ್ಲಿ ಆಗಾಗ ಸಾಧಾರಣ ಮಳೆಯಾಗಲಿದೆ. ಎಚ್ಎಎಲ್ನಲ್ಲಿ 23.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೆಂಗಳೂರು ನಗರ 23.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 23.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ರಾಕಿಭಾಯ್ ಯಶ್ ನಟನೆಯ ಹೊಸ ಸಿನಿಮಾದ ಮತ್ತೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಈ ಚಿತ್ರಕ್ಕೆ ನಾಯಕಿಯಾಗಿ ಸಾಯಿ ಪಲ್ಲವಿ (Sai Pallavi) ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದ ಮೂಲಕ ಸಾಯಿ ಪಲ್ಲವಿ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವುದು ತಾಜಾ ಸುದ್ದಿ. ಆದರೆ, ಇದು ಅಧಿಕೃತವಾದ ಮಾಹಿತಿ ಅಲ್ಲ. ಚಿತ್ರರಂಗದಲ್ಲಿ ನಡೆದಿರುವ ಗುಸುಗುಸು ಮಾತು. ಇಷ್ಟು ದಿನ ತೆರೆಮೆರೆಯಲ್ಲಿ ತಮ್ಮ ಹೊಸ ಸಿನಿಮಾದ ಕೆಲಸ ಮಾಡುತ್ತಿದ್ದ ಯಶ್, ಅಭಿಮಾನಿಗಳಿಗೆ ದಿನಕ್ಕೊಂದು ಹೊಸ ಸುದ್ದಿ ನೀಡುತ್ತಿದ್ದಾರೆ. ಲೋಡಿಂಗ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದವರು, ಇಂದು ತಮ್ಮ ಹೊಸ ಸಿನಿಮಾದ ಟೈಟಲ್ (Title) ಘೋಷಣೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 8ರಂದು ಮುಂಜಾನೆ 9.55ಕ್ಕೆ ಹೊಸ ಸಿನಿಮಾದ ಶೀರ್ಷಿಕೆ ಅನಾವರಣ ಮಾಡುವುದಾ ತಿಳಿಸಿದ್ದಾರೆ. https://ainlivenews.com/natural-star-in-bangalore-nani-is-busy-with-hi-nanna-promotion/ ಯಶ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗೆದ್ದು ಬೀಗಿದ್ದು ಆಗಿದೆ. ಇನ್ನೂ ಏನೇ ಇದ್ರೂ ಮುಂದಿನ ಚಿತ್ರದ ಬಗ್ಗೆ ಅನೌನ್ಸ್ ಮಾಡೊದೊಂದೇ ಬಾಕಿ.…
ಬೆಂಗಳೂರು/ಬೆಳಗಾವಿ:- ದೇಶದ ಸಂಪತ್ತು ಮುಸ್ಲಿಮರಿಗೆ ಹಂಚುತ್ತೇನೆಂಬ ಸಿಎಂ ಹೇಳಿಕೆಗೆ ಹೆಚ್ ಡಿಕೆ ಟಾಂಗ್ ಕೊಟ್ಟಿದ್ದಾರೆ ಇದು ಓಲೈಕೆ ಅಲ್ಲದೇ ಬೇರೇನು ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಪ್ರಶ್ನಿಸಿದ್ದು, ನಾಡಿನ ಸಿಎಂ ಆಗಿ ರಾಜ್ಯದ ಸರ್ವತೋಮುಖ ಜನರ ಅಭಿವೃದ್ಧಿ ಮಾಡಬೇಕು. ಒಂದು ಸಮಾಜವನ್ನು ಓಲೈಕೆ ಮಾಡೋದಲ್ಲ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಎಂಗೆ ತಿರುಗೇಟು ನೀಡಿದ್ದಾರೆ. ‘ರಾಜ್ಯದ ಎಲ್ಲ ಜನರ ಬದುಕು ಕಟ್ಟಲು ಈ ಸರ್ಕಾರ ಇರಬೇಕು. ಕಳೆದ ಬಜೆಟ್ನಲ್ಲಿ ಇವರೆಷ್ಟು ಹಣ ಇಟ್ಟಿದ್ದರು ಅದನ್ನು ಮೊದಲು ಕೊಡಲಿ. ಬಳಿಕ ಮುಂದಿನ ವರ್ಷ 10 ಸಾವಿರ ಕೋಟಿ ಕೊಡಲಿ ಎಂದರು. ಇನ್ನೂ ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ, ನಿಮ್ಮನ್ನು ನಾನು ರಕ್ಷಣೆ ಮಾಡುತ್ತೇನೆ ಎಂದಿದ್ದರು. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಬೆಂಗಳೂರು/ಬೆಳಗಾವಿ;- ಕಲಾಪದಲ್ಲಿ ಬ್ರ್ಯಾಂಡ್ ಬೆಂಗಳೂರು ಕಲಹ, ಬ್ರ್ಯಾಂಡ್ ಸಿಟಿ ಈಗ ಬಾಂಬ್ ಸಿಟಿ ಆಗಿದೆ ಎಂದು ಬಿಜೆಪಿ ಸದಸ್ಯರು ಹೇಳಿದ್ದಾರೆ. ವಿಧಾನಸಭಾ ಅಧಿವೇಶನದ ಎರಡನೇ ದಿನ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಬಿಸಿಬಿಸಿ ಚರ್ಚೆಯಾಗಿದೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಬಗ್ಗೆ ಶಾಂತಿನಗರ ಶಾಸಕ ಹ್ಯಾರಿಸ್ ಪ್ರಸ್ತಾಪ ಮಾಡಿದ್ರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಬ್ರ್ಯಾಂಡ್ ಸಿಟಿ ಈಗ ಬಾಂಬ್ ಸಿಟಿ ಆಗಿದೆ ಎಂದು ಕಿಚಾಯಿಸಿದ್ದಾರೆ. ಈ ಹೇಳಿಕೆಯಿಂದ ಸದನದಲ್ಲಿ ಆಡಳಿತ, ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಇತ್ತ ಪ್ರಶ್ನೋತ್ತರ ವೇಳೆಯಲ್ಲಿ ಬ್ರಾಂಡ್ ಬೆಂಗಳೂರು ಕುರಿತ ಪ್ರಶ್ನೆ ಸಂದರ್ಭ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಡಿಸಿಎಂ ಡಿ.ಕೆ. ಶಿವಕುಮಾರ್ ಪರವಾಗಿ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡುತ್ತಿದ್ದ ವೇಳೆಯೂ ಗದ್ದಲ ಉಂಟಾಯ್ತು. ಇದಕ್ಕೂ ಮುನ್ನ ಸದನದಲ್ಲಿ ಸಚಿವರ ಗೈರು ಹಾಜರಿಗೆ ವಿಪಕ್ಷ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್, ಏನೂ…
ಬ್ಯಾಂಕಾಕ್: ಥಾಯ್ಲೆಂಡ್’ನಲ್ಲಿ (Thailand) ಬಸ್ (Bus) ಒಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ. ದುರ್ಘಟನೆಯಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ದೇಶದ ಪಶ್ಚಿಮ ಪ್ರಾಂತ್ಯದ ಪ್ರಚುವಾಪ್ ಖಿರಿ ಖಾನ್‌ನಲ್ಲಿ ಮಧ್ಯರಾತ್ರಿ ವೇಳೆ ಭೀಕರ ಅಪಘಾತ (Accident) ಸಂಭವಿಸಿದೆ. https://ainlivenews.com/natural-star-in-bangalore-nani-is-busy-with-hi-nanna-promotion/ ಅಪಘಾತದ ಭೀಕರತೆಗೆ ಬಸ್ ಅರ್ಧಭಾಗದಷ್ಟು ನಜ್ಜುಗುಜ್ಜಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರಕ್ಷಣಾ ಸಿಬ್ಬಂದಿ ಪ್ರಯಾಣಿಕರನ್ನು ಅವಶೇಷಗಳಿಂದ ಹೊರತೆಗೆಯುತ್ತಿರುವುದು ವೀಡಿಯೋಗಳಲ್ಲಿ ಕಂಡುಬಂದಿದೆ. ಗಾಯಗೊಂಡ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಕಾರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಬೆಂಗಳೂರು:- ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ವೇಳೆ ಅಶ್ಲೀಲ ಚಿತ್ರ ಪ್ರದರ್ಶನ ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ FIR ದಾಖಲಾಗಿದೆ. ಕಲಾಪದ ಲಿಂಕ್ ಮೂಲಕ ಭಾಗವಹಿಸಿದ ಅಪರಿಚಿತರಿಂದ ಕೃತ್ಯವೆಸಗಲಾಗಿದೆ. ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಕಚೇರಿಯ ಎನ್. ಸುರೇಶ್ ಎಂಬುವವರಿಂದ ದೂರು ನೀಡಿದ್ದು, ನ್ಯಾಯಾಲಯದ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಐ.ಟಿ. ಕಾಯ್ದೆ ಸೆ. 67, 67(A) ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಅಶ್ಲೀಲ ಚಿತ್ರ ಪ್ರದರ್ಶಿಸಿ ಅನುಚಿತ ವರ್ತನೆ ತೋರಿದ್ದಾರೆ. ಹೈಕೋರ್ಟ್ನ ಸೈಬರ್ ಭದ್ರತೆಗೆ ಆತಂಕ ಎದುರಾದ ಹಿನ್ನೆಲೆ ತಾತ್ಕಾಲಿಕವಾಗಿ ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ಕಲಾಪ ಅಮಾನತು ಮಾಡಲಾಗಿದೆ.