ನವದೆಹಲಿ: ಭಾರತೀಯ ನೌಕಾಪಡೆಗೆ (Indian Navy) ಇದೇ ಮೊದಲ ಬಾರಿಗೆ ಮಹಿಳಾ ಕಮಾಂಡಿಂಗ್ ಅಧಿಕಾರಿಯನ್ನು (Women Commanding Officer) ನೇಮಿಸಲಾಗಿದೆ. ಎಲ್ಲಾ ಶ್ರೇಣಿಯ ಹುದ್ದೆಗಳಲ್ಲಿಯೂ ಮಹಿಳೆಯರನ್ನು ನೇಮಕ ಮಾಡುವ ಗುರಿಯಲ್ಲಿ ಭಾರತೀಯ ನೌಕಾಪಡೆಯು ಮೊದಲ ಮಹಿಳಾ ಕಮಾಂಡಿಂಗ್ ಅಧಿಕಾರಿಯನ್ನು ನೇಮಕ ಮಾಡಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ತಿಳಿಸಿದ್ದಾರೆ.
ನೌಕಾಪಡೆ ದಿನಕ್ಕೂ ಮೊದಲು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಡ್ಮಿರಲ್ ಕುಮಾರ್, ಕಳೆದ 1 ವರ್ಷದಲ್ಲಿ ಭಾರತೀಯ ನೌಕಾಪಡೆಯ ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ವಿಮಾನಗಳು ಆಯಕಟ್ಟಿನ ನೀರಿನಲ್ಲಿ ಹೆಚ್ಚಿನ ಕಾರ್ಯಾಚರಣೆಯನ್ನು ಮಾಡಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ನ್ಯಾಚುರಲ್ ಸ್ಟಾರ್… ‘ಹಾಯ್ ನಾನ್ನ’ ಪ್ರಮೋಷನ್ ನಲ್ಲಿ ನಾನಿ ಬ್ಯುಸಿ
ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಆಕ್ರಮಣಗಳ ಕುರಿತು ಮಾತನಾಡಿದ ಅವರು, ಭಾರತೀಯ ನೌಕಾಪಡೆಯು ಈ ಪ್ರದೇಶದಲ್ಲಿನ ಎಲ್ಲಾ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದರು. ನಮ್ಮ ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ವಿಮಾನಗಳು ಹೆಚ್ಚಿನ ಕಾರ್ಯಾಚರಣೆಯ ವೇಗವನ್ನು ಹೊಂದಿವೆ. ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಉತ್ತೇಜಿಸಲು ನಮ್ಮ ಘಟಕಗಳನ್ನು ಹಿಂದೂ ಮಹಾಸಾಗರದ ಪ್ರದೇಶ ಮತ್ತು ಅದರಾಚೆಗೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.