Author: AIN Author

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನ್ಯೂಮೋನಿಯಾ ಆತಂಕ ಹೆಚ್ಚಾಗಿದೆ. ಕಳೆದ ಎರಡು ವಾರದಿಂದ ನಗರದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ವೈರಲ್ ನ್ಯುಮೋನಿಯಾ ಹೆಚ್ಚಾಗಿದೆ. ಆಸ್ಪತ್ರೆಗಳಲ್ಲಿ ದಿನಕ್ಕೆ ಮೂರರಿಂದ ನಾಲ್ಕು ವೈರಲ್ ನ್ಯುಮೋನಿಯಾ ಕೇಸ್​ಗಳು ದಾಖಲಾಗುತ್ತಿವೆ. ರಾಜಧಾನಿಯಲ್ಲಿ ಸುಮಾರು 25 ರಿಂದ 30 ಮಕ್ಕಳಲ್ಲಿ ನ್ಯುಮೋನಿಯಾ ಪತ್ತೆಯಾಗುತ್ತಿದೆ. ಜೊತೆಗೆ 1-15 ವರ್ಷದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚಾಗಿವೆ. ಪ್ರತಿ ದಿನ ಚೀನಾ, ಅಮೇರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ 3ರಿಂದ14 ವರ್ಷ ವಯಸ್ಸಿನ ಮಕ್ಕಳಲ್ಲಿ ಏಕಾಏಕಿ ಭಾರೀ ಪ್ರಮಾಣದಲ್ಲಿ ನ್ಯುಮೋನಿಯಾ ಸೋಂಕು ಪತ್ತೆಯಾಗುತ್ತಿದೆ. ಚೀನಾದಲ್ಲೂ ಎಳೆಯ ವಯಸ್ಸಿನ ಮಕ್ಕಳಲ್ಲಿ ಇದೇ ರೀತಿಯಲ್ಲಿ ನ್ಯುಮೋನಿಯಾ ಮಾದರಿಯ ನಿಗೂಢ ಸೋಂಕು ಕಾಣಿಸಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ಮತ್ತೊಂದು ಸಾಂಕ್ರಾಮಿಕ ಏಳುವ ಭೀತಿ ಎದುರಾಗಿದ್ದು ಬೆಂಗಳೂರಿನ ಮಕ್ಕಳಲ್ಲೂ ಉಸಿರಾಟದ ಸಮಸ್ಯೆ ಕಂಡು ಬರುತ್ತಿದೆ. ಹೀಗಾಗಿ ಎಚ್ಚರಿಕೆಯಿಂದ ಇರಲು ಪೋಷಕರಿಗೆ ಸೂಚನೆ ನೀಡಲಾಗಿದೆ. ಜ್ವರ, ಕೆಮ್ಮು, ಸುಸ್ತು, ಉಸಿರಾಟದ ಸಮಸ್ಯೆ ಕಂಡು ಬಂದರೆ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ. ಸಿಲಿಕಾನ್ ಸಿಟಿಯ ಆಸ್ಪತ್ರೆಗಳ ಸ್ಥಿತಿ…

Read More

ಸಾಮಾನ್ಯವಾಗಿ ನೇರಳೆ ಹಣ್ಣು ಮಳೆಗಾಲದ ಆರಂಭದಲ್ಲಿ ದೊರೆಯುತ್ತವೆ. ಇದರಿಂದ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳು ದೊರೆಯುತ್ತದೆ. ನೇರಳೆ ಹಣ್ಣಿಗೆ ಕೆಲವೊಂದು ರೋಗಗಳನ್ನು ನಿಯಂತ್ರಿಸುವ ಶಕ್ತಿ ಇದೆ. ಮಧುಮೇಹಿಗಳಿಗೆ ಉಪಯುಕ್ತ ನೇರಳೆ ಹಣ್ಣಿನ ಜೊತೆಗೆ, ಅದರ ಬೀಜಗಳು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಮಧುಮೇಹಿಗಳು ನೇರಳೆ ಬೀಜಗಳನ್ನು ತಿನ್ನುವ ಮೂಲಕ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು. ನೇರಳೆ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಒಂದು ಟೀ ಚಮಚ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯಿರಿ. ರಕ್ತವನ್ನು ಶುದ್ಧೀಕರಿಸುತ್ತದೆ ನೇರಳೆ ಹಣ್ಣಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದು ರಕ್ತವನ್ನು ಶುದ್ಧೀಕರಿಸುವುದಲ್ಲದೆ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತವನ್ನು ಶುದ್ಧೀಕರಣದ ಜೊತೆಗೆ ಹಿಮೊಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ರಕ್ತದ ಒತ್ತಡವನ್ನೂ ಕಡಿಮೆ ಮಾಡುತ್ತದೆ. ನೇರಳೆ ಹಣ್ಣು ದೇಹದ ಉಷ್ಣತೆಯನ್ನು ಕಡಿಮೆ ಮಾಡುವಲ್ಲಿ ಕೂಡಾ ಸಹಾಯಕಾರಿಯಾಗಿದೆ. ನೇರಳೆ ಹಣ್ಣಿನೊಂದಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ಅತಿಸಾರ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು. ತೂಕವನ್ನು ನಿಯಂತ್ರಣದಲ್ಲಿಡುತ್ತದೆ…

Read More

ಬೆಂಗಳೂರು: ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣವನ್ನು ಬೆಂಗಳೂರು ಪೊಲೀಸರು ಗಂಭೀರವಾಗಿ ತೆಗೆದುಕಜೊಂಡಿದ್ದಾರೆ.. ಬೆದರಿಕೆಯ ಇ ಮೇಲ್ ಪತ್ರ ಮೂಲ ಬೇದಿಸಲು ಪೊಲೀಸರು ಇದೀಗಾ ಕೇಂದ್ರ ತನಿಖಾ ಸಂಸ್ಥೆ ಮೊರೆ  ಹೋಗಿದ್ದಾರೆ. ಸದ್ಯಕ್ಕೆ ದುಷ್ಕರ್ಮಿಗಳು ನಕಲಿ  ಇ ಮೇಲ್ ಬಳಸಿ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದ್ದೆ. ಇ ಮೇಲ್ ಮೂಲಕ ಬಂದ ಬಾಂಬ್ ಬೆದರಿಕೆ ಸ್ಟೋರಿ ಹೇಳ್ತೀವಿ ನೋಡಿ. ಸಿಲಿಕಾನ್ ಸಿಟಿಯ ಶಾಲೆಗಳಿಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಪ್ರಕರಣವನ್ನು ಬೆಂಗಳೂರು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.. https://ainlivenews.com/the-founder-of-byjus-who-barricaded-his-own-house-to-give-salary-to-the-employees/  ಇದೀಗಾ ಪೊಲೀಸರು ತನಿಖೆ ವೇಳೆ ಮತ್ತೋಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ… ನಕಲಿ ಐಡಿ ಕ್ರಿಯೆಟ್ ಮಾಡಿ ಎಲ್ಲಾ ಖಾಸಗಿ ಶಾಲೆಗಳಿಗೆ ಇ ಮೇಲ್ ಮಾಡಿರುವುದು ಸೈಬರ್ ಕ್ರೈ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಆರೋಪಿಗಳು  ವಿದೇಶದಲ್ಲಿರುವ  ಶಾಲೆಗಳಿಗೂ ಇದೇ ರೀತಿಯ ಇ ಮೇಲ್ ಮೂಲಕ ಬೆದರಿಕೆ ಸಂದೇಶ ಕಳಿಸಿರುವುದು ಗೊತ್ತಾಗಿದೆ.. ಹಾಗಾಗಿ ಸಿಬಿಐ ಇಂಟರ್ ಪೋಲ್ ಮುಖಾಂತರ ಅಲ್ಲಿನ ತನಿಖೆ ಮಾಹಿತಿ…

Read More

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಎಸ್ ಸಿ ಘಟಕದ ವತಿಯಿಂದ ವಿಶ್ವ ರತ್ನ ವಿಶ್ವಮಾನವ ಭಾರತ ರತ್ನ ಬಾಬಾ ಸಾಹೇಬ್ ಡಾಕ್ಟರ್ ಬಿ, ಆರ್, ಅಂಬೇಡ್ಕರ್ ರವರ 67ನೇ ಪರಿನಿರ್ವಾಣ ದಿನದಂದು ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜಿಲ್ಲಾ ಎಸ್ ಸಿ ಘಟಕದ ವತಿಯಿಂದ ಗೌರವಪೂರ್ವಕ ನಮನಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ, ಬಸವರಾಜ ಬೆಣಕಲ್, ಬಮ್ಮಾಪುರ ಬ್ಲಾಕ್ ಅಧ್ಯಕ್ಷರಾದ ಪಕ್ಕಣ್ಣ ದೊಡ್ಡಮನಿ, ಇಂದ್ರಾನಗರ ಬ್ಲಾಕ್ ಅಧ್ಯಕ್ಷರಾದ, ಮಹೇಶ್ ಅಂಜಿಗಿ, ವಿದ್ಯಾನಗರ ಬ್ಲಾಕ್, ಉಣಕಲ್ ಬ್ಲಾಕ್ ಅಧ್ಯಕ್ಷರುಗಳು ಸೋಮಣ್ಣ ಅಂಜಿಗಿ ಹಾಗೂ ಪಕ್ಷದ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Read More

ಕನ್ನಡ ರಾಜ್ಯೋತ್ಸವ ಹಾಗೂ ಡಾ ಪುನೀತ್ ರಾಜ್‍ಕುಮಾರ್ ರವರ ಸವಿ ನೆನಪಿನಲ್ಲಿ ಕೆಆರ್ ಪುರ ಕ್ಷೇತ್ರದ್ಯಾಂತ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್ ಬಾಬು ಅವರು ತಿಳಿಸಿದರು. ಕ್ಷೇತ್ರದ ಹೊರಮಾವು ವಾಡ್೯ನ ಶಾಲೆಯಲ್ಲಿ ಲಯನ್ಸ್ ಕ್ಲಬ್ ಹಾಗೂ ಸರ್.ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆಯ ಸಹಕಾರದಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ , ಕಿವಿ, ಮೂಗು ಹಾಗೂ ನೇತ್ರ ತಪಾಸಣಾ ಶಿಭಿರ ನಡೆಸಿ ಔಷಧಿ ಹಾಗೂ ಕನ್ನಡಕಗಳನ್ನು ವಿತರಿಸಿ ಮಾತನಾಡಿದರು. ಪುನೀತ್ ರಾಜ್‌ಕುಮಾರ್ ಅವರ ಸವಿ ನೆನಪಿನಲ್ಲಿ ಕಳೆದ ಎರಡು ವರ್ಷದಿಂದ ಈ ಶಿಬಿರ ಆಯೋಜನೆ ಮಾಡುತ್ತಿದ್ದು, ಕ್ಷೇತ್ರದ 11 ವಾರ್ಡ್ನಲ್ಲಿ 11 ಜಾಗದಲ್ಲಿ ಪ್ರತೀ ವಾರ ಈ ಶಿಬಿರ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಪಣತೊಟ್ಟಿದ್ದು,ರಾಜ್ಯ ಸರ್ಕಾರದ ಹಲವು ಮಹತ್ತರ ಯೋಜನೆಗಳಿಂದ ಜನತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ ಎಂದು ಹೇಳಿದರು. ಕೆ.ಆರ್.ಪುರ ಕ್ಷೇತ್ರದಲ್ಲಿ ಮುಂದಿನ ಬಾರಿ ಕಾಂಗ್ರೆಸ್…

Read More

ಹುಬ್ಬಳ್ಳಿ : ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್, ಹೊಚ್ಚ ಹೊಸದಾದ ಇಂಟ್ರಾ ವಿ ೭೦ ಇಂಟ್ರಾವಿ ೨೦ ಗೋಲ್ಡ್ ಏಸ್ HT+ ವಾಣಿಜ್ಯ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಮೂಲಕ ಮೊದಲ ಮತ್ತು ಕಟ್ಟ ಕಡೆಯ ಮೈಲಿನ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಈ ಹೊಸ ವಾಹನಗಳು ಹೆಚ್ಚಿನ ಪೇಲೋಡ್ ಗಳನ್ನು ದೂರದವರೆಗೆ ಕೊಂಡೊಯ್ಯಲು ಸಹಕಾರಿಯಾಗಿವೆ. ಇದರೊಂದಿಗೆ ಅತ್ಯುತ್ತಮ ಆರ್ಥಿಕ ಲಾಭವನ್ನು ತಂದು ಕೊಡುತ್ತವೆ. ಅತ್ಯುತ್ಕೃಷ್ಟವಾದ ದರ್ಜೆಯ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ವಾಹನಗಳು ವಿವಿಧ ಬಗೆಯ ಸರಕು ಸಾಗಣೆಗೆ ಬಳಸಬಹುದಾಗಿದೆ. ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ವಾಹನಗಳ ಬಿಡುಗಡೆ ಬಗ್ಗೆ ಮಾತನಾಡಿದ ಟಾಟಾ ಮೋಟರ್ಸ್ ನ ಕಾರ್ಯಕಾರಿ ನಿರ್ದೇಶಕ ಗಿರೀಶ್ ವಾಘ್ ಅವರು, “ವಿವಿಧ ರೀತಿಯ ಅಪ್ಲಿಕೇಶನ್ ಗಳಿಗೆ ಗರಿಷ್ಠ ಮಟ್ಟದ ಪರಿಹಾರಗಳನ್ನು ನೀಡುವುದರ ಜೊತೆಗೆ ನಮ್ಮ ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕಪ್ ಗಳು ನಮ್ಮ…

Read More

ಹುಬ್ಬಳ್ಳಿ: 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಘಟಕದ ಅಂದಿನ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರಾದ ಬಿ.ಆರ್.ರವಿಕಾಂತೇಗೌಡ ರವರು ದೂರು ಕೊಟ್ಟಿದ್ದರಲ್ಲಿ 09-12-2002 ರಂದು ಆರೋಪಿತರ ವಶದಿಂದ ಮತ್ತು ಮನೆಯಲ್ಲಿಂದ ಒಟ್ಟು 11 ಕ್ವಿಂಟಲ್ ತೂಕದ, ಗಾಂಜಾ ತುಂಬಿದ ಒಟ್ಟು 36 ಚೀಲಗಳನ್ನು ಮತ್ತು ಸಾಗಾಟ ಮಾಡಲು ಬಳಸಿದ ಒಂದು ಸ್ಕೂಟಿ, ಒಂದು ಬುಲೆಟ್ ಮತ್ತು ಒಂದು ಲಾರಿ ಸೇರಿ ಒಟ್ಟು 24 ಲಕ್ಷ 90 ಸಾವಿರ ರೂ. ಮೌಲ್ಯದ ಗಾಂಜಾ ಮತ್ತು ವಾಹನಗಳನ್ನು ಜಪ್ತಿ ಮಾಡಿದ್ದು, ಈ ಬಗ್ಗೆ ಹುಬ್ಬಳ್ಳಿ ವಿದ್ಯಾನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಕುಮಾರ ಸೂರಪ್ಪ ಶೆಟ್ಟಿ ಎನ್ನುವವನು ಪರಾರಿಯಾಗಿದ್ದನು. ಆರೋಪಿತನು ಪದೇ ಪದೇ ವಿಳಾಸವನ್ನು ಬದಲಾಯಿಸುತ್ತ ತಲೆಮರೆಸಿಕೊಂಡಿದ್ದರಿಂದ ಈ ಪ್ರಕರಣವು ನ್ಯಾಯಾಲಯದಲ್ಲಿ ಎಲ್.ಪಿ.ಸಿ. ಪ್ರಕರಣವಾಗಿತ್ತು. https://ainlivenews.com/the-founder-of-byjus-who-barricaded-his-own-house-to-give-salary-to-the-employees/ ಆರೋಪಿತನ ಪೂರ್ಣ ಹೆಸರು. ವಿಳಾಸ ಮತ್ತು ಭಾವಚಿತ್ರ…

Read More

ಬೆಳಗಾವಿ : ಬೆಳಗಾವಿ ಚಳಿಗಾಲದ ಅಧಿವೇಶನದ ಮೂರನೇ ದಿನವು ಪ್ರತಿಭಟನೆ ಕಾವು ತಟ್ಟಲಿದ್ದು, ಶಕ್ತಿಸೌಧದ ಹೊರಗೆ ಮೂರನೇ ದಿನವು ಸಾಲು ಸಾಲು ಪ್ರತಿಭಟನೆಗಳು ನಡೆಯಲಿದೆ. ಬೆಳಗಾವಿ ಚಳಿಗಾಲದ ಅಧಿವೇಶನ ಮೂರನೇ ದಿನವಾದ ಇಂದು ಬರೊಬ್ಬರಿ 6 ಸಂಘಟನೆಗಳಿಂದ ಪ್ರತಿಭಟನೆ, 2 ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ. ಅಖಿಲ ಕರ್ನಾಟಕ ರೈತ ಸಂಘದಿಂದ ಹೋರಾಟಕ್ಕೆ ಮುಂದಾಗಿದ್ದು, https://ainlivenews.com/the-founder-of-byjus-who-barricaded-his-own-house-to-give-salary-to-the-employees/ ರಾಜ್ಯದ ರೈತರ ಸಾಲ ಮನ್ನಾ ಮಾಡಬೇಕು. ಕರೆಗಳ ಒತ್ತುವರಿ ತೆರುವು ಮಾಡಬೇಕು. ಖಾನಾಪುರ ತಾಲೂಕಿನ ರೈತರಿಗೆ ಮಲಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ ಕಲ್ಪಿಸಲು ಒತ್ತಾಯಿಸಲಾಗುತ್ತದೆ. ಕರ್ನಾಟಕ ರಾಜ್ಯ ನೇಕಾರರ ಸಂಘದಿಂದ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ 46 ನೇಕಾರ ಕುಟುಂಬಗಳಿಗೆ 10 ಲಕ್ಷ ಪರಿಹಾರ ಕೊಡಬೇಕು, ನೇಕಾರರಿಗೂ ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಕಾರ್ಮಿಕ ಸೌಲಭ್ಯ ಒದಗಿಸಲು ಪ್ರತಿಭಟನೆಗೆ ಮುಂದಾಗಿದ್ದಾರೆ.

Read More

 ‘ಬಿಗ್ ಬಾಸ್‌ ಕನ್ನಡ 10’ ಕಾರ್ಯಕ್ರಮದಲ್ಲಿ ಈ ವಾರ ಕ್ಯಾಪ್ಟನ್‌ ಆಗಿರುವ ಸ್ನೇಹಿತ್‌ಗೆ ವಿಶೇಷ ಅಧಿಕಾರಗಳಿವೆ. ಇದರ ಅನುಸಾರ ಎರಡು ತಂಡಗಳಲ್ಲಿ ಯಾರ್ಯಾರು ಇರಬೇಕು ಅನ್ನೋದನ್ನ ಸ್ನೇಹಿತ್ ಅವರೇ ನಿರ್ಧಾರ ಮಾಡಬೇಕಿತ್ತು. ‘ಸ್ಪರ್ಧಿಗಳ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಎರಡೂ ತಂಡಗಳಲ್ಲಿ ಸಮನಾಗಿ ಇರುವಂತೆ ಎರಡು ತಂಡಗಳ ರಚನೆ ಆಗಬೇಕು’ ಎಂದು ‘ಬಿಗ್ ಬಾಸ್‌’ ಸ್ಪಷ್ಟವಾಗಿ ತಿಳಿಸಿದ್ದರು. ಆದರೆ ಅದನ್ನ ಸ್ನೇಹಿತ್‌ ಗಂಭೀರವಾಗಿ ಪರಿಗಣಿಸಲೇ ಇಲ್ಲ! ವಿನಯ್‌, ನಮ್ರತಾ ಹೇಳಿದ್ದನ್ನ ಮಾತ್ರ ಕಿವಿಗೆ ಹಾಕಿಕೊಂಡ ಸ್ನೇಹಿತ್‌.. ಸ್ಪಷ್ಟವಾಗಿ ಅವರಿಬ್ಬರು ಬಯಸಿದ ವರ್ತೂರು ಸಂತೋಷ್ ಅವರ ತಂಡಕ್ಕೆ ಫೇವರ್ ಆಗಿ ತಂಡವನ್ನ ರಚಿಸಿದರು. ‘’ಮೈಕಲ್‌ ನಮ್ಮ ತಂಡಕ್ಕೆ ಬೇಕು’’ ಎಂದು ಸಂಗೀತಾ ಬಾಯ್ಬಿಟ್ಟು ಕೇಳಿದರೂ, ಅದಕ್ಕೆ ಸ್ನೇಹಿತ್ ಒಪ್ಪಲಿಲ್ಲ. ‘’ಇದು ಕ್ಲಿಯರ್‌ ಆಗಿ ಅನ್‌ಫೇರ್‌ ಡಿಸಿಷನ್‌’’ ಎಂದಿದ್ದಾರೆ ಸಂಗೀತಾ. ಕ್ಯಾಪ್ಟನ್ ಆದ್ಮೇಲೆ ಪಕ್ಷಪಾತ ಮಾಡುತ್ತಿರುವ ಸ್ನೇಹಿತ್ ಬಗ್ಗೆ ‘’ಈ ವಾರಾಂತ್ಯದಲ್ಲಿ ಕ್ಲಾಸ್‌ ಪಕ್ಕಾ. ಎಷ್ಟು ಉಗಿಸಿಕೊಂಡರೂ ಬುದ್ಧಿ ಬಂದಿಲ್ಲ’’ ಎಂದು ಮಾತನಾಡಿಕೊಂಡಿದ್ದಾರೆ ಕಾರ್ತಿಕ್,…

Read More

ಚೆನ್ನೈನಲ್ಲಿ ಮಿಚಾಂಗ್ ಚಂಡಮಾರುತದಿಂದ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಎಡಬಿಡದೆ ಸುರಿದ ಭಾರೀ ಮಳೆಯಿಂದಾಗಿ ಕಾಲಿವುಡ್ ಹೀರೋ ವಿಷ್ಣು ವಿಶಾಲ್ ಮನೆಯಿರುವ ಪ್ರದೇಶ ಜಲಾವೃತ್ತಗೊಂಡಿದೆ. ಈ ಪರಿಣಾಮ, ಮನೆಯಿಂದ ಯಾರೂ ಹೊರಬರಲಾರದ ಸ್ಥಿತಿಯಲ್ಲಿದ್ದಾರೆ. ಇದೇ ವೇಳೆ, ಬಾಲಿವುಡ್ ನಟ ಆಮೀರ್ ಖಾನ್ ಅವರು ನಟ ವಿಷ್ಣು (Vishnu Vishal) ಮನೆಯಲ್ಲೇ ಲಾಕ್ ಆಗಿದ್ದಾರೆ. ಚೆನ್ನೈನ ಕರಪಾಕ್ಕಂ ಪ್ರದೇಶದಲ್ಲಿರುವ ತಮಿಳು ನಟ ವಿಷ್ಣು ವಿಶಾಲ್ ಮನೆಗೆ ಆಮೀರ್ ಖಾನ್ ಭೇಟಿ ನೀಡಿದ್ದರು. ಪ್ರವಾಹ ಪರಿಸ್ಥಿತಿಯಿಂದಾಗಿ ವಿಷ್ಣು ವಿಶಾಲ್ ಅವರ ನಿವಾಸದಲ್ಲೇ ಆಮೀರ್ ಖಾನ್ ಸಿಲುಕಿದ್ದರು. ಈ ಸಂದರ್ಭದಲ್ಲಿ ನೀರಿನ ಮಟ್ಟ ತೀವ್ರವಾಗಿ ಏರುತ್ತಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನೆಟ್‌ವರ್ಕ್, ವೈಫೈ ಯಾವುದೂ ಇಲ್ಲವಾಗಿದೆ. ಇದೇ ಸಮಯದಲ್ಲಿ ವಿಷ್ಣು ವಿಶಾಲ್ ಮನೆಯೊಳಗೆ ನೀರು ನುಗ್ಗಿದ್ರಿಂದ ಸಹಾಯಕ್ಕಾಗಿ ನಟ ವಿಷ್ಣು ವಿಶಾಲ್ ಅವರು ಸೋಷಿಯಲ್ ಮೀಡಿಯಾದಲ್ಲಿ ಮೂಲಕ ಮನವಿ ಮಾಡಿದ್ದರು. https://twitter.com/TheVishnuVishal/status/1731984247936696675?ref_src=twsrc%5Etfw%7Ctwcamp%5Etweetembed%7Ctwterm%5E1731984247936696675%7Ctwgr%5Ef2cbb5225e100110b54ce6a1452909ed405da08b%7Ctwcon%5Es1_&ref_url=https%3A%2F%2Fpublictv.in%2Factor-aamir-khan-stuck-in-chennai-flood-vishnu-vishal-shares-pictures%2F ಕೂಡಲೆ ಅಗ್ನಿಶಾಮಕ ದಳ ನಟ ವಿಷ್ಣು ವಿಶಾಲ್ ಮತ್ತು ಆಮೀರ್ ಖಾನ್ (Aamir…

Read More