ಬೆಂಗಳೂರು: ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣವನ್ನು ಬೆಂಗಳೂರು ಪೊಲೀಸರು ಗಂಭೀರವಾಗಿ ತೆಗೆದುಕಜೊಂಡಿದ್ದಾರೆ.. ಬೆದರಿಕೆಯ ಇ ಮೇಲ್ ಪತ್ರ ಮೂಲ ಬೇದಿಸಲು ಪೊಲೀಸರು ಇದೀಗಾ ಕೇಂದ್ರ ತನಿಖಾ ಸಂಸ್ಥೆ ಮೊರೆ ಹೋಗಿದ್ದಾರೆ. ಸದ್ಯಕ್ಕೆ ದುಷ್ಕರ್ಮಿಗಳು ನಕಲಿ ಇ ಮೇಲ್ ಬಳಸಿ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದ್ದೆ. ಇ ಮೇಲ್ ಮೂಲಕ ಬಂದ ಬಾಂಬ್ ಬೆದರಿಕೆ ಸ್ಟೋರಿ ಹೇಳ್ತೀವಿ ನೋಡಿ. ಸಿಲಿಕಾನ್ ಸಿಟಿಯ ಶಾಲೆಗಳಿಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಪ್ರಕರಣವನ್ನು ಬೆಂಗಳೂರು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ..
ಬೆಂಗಳೂರಿನಲ್ಲಿ ನ್ಯಾಚುರಲ್ ಸ್ಟಾರ್… ‘ಹಾಯ್ ನಾನ್ನ’ ಪ್ರಮೋಷನ್ ನಲ್ಲಿ ನಾನಿ ಬ್ಯುಸಿ
ಇದೀಗಾ ಪೊಲೀಸರು ತನಿಖೆ ವೇಳೆ ಮತ್ತೋಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ… ನಕಲಿ ಐಡಿ ಕ್ರಿಯೆಟ್ ಮಾಡಿ ಎಲ್ಲಾ ಖಾಸಗಿ ಶಾಲೆಗಳಿಗೆ ಇ ಮೇಲ್ ಮಾಡಿರುವುದು ಸೈಬರ್ ಕ್ರೈ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಆರೋಪಿಗಳು ವಿದೇಶದಲ್ಲಿರುವ ಶಾಲೆಗಳಿಗೂ ಇದೇ ರೀತಿಯ ಇ ಮೇಲ್ ಮೂಲಕ ಬೆದರಿಕೆ ಸಂದೇಶ ಕಳಿಸಿರುವುದು ಗೊತ್ತಾಗಿದೆ.. ಹಾಗಾಗಿ ಸಿಬಿಐ ಇಂಟರ್ ಪೋಲ್ ಮುಖಾಂತರ ಅಲ್ಲಿನ ತನಿಖೆ ಮಾಹಿತಿ ಪಡೆಯಲು ನಿರ್ಧಾರ ಮಾಡಲಾಗಿದೆ.
ಸದ್ಯ ನಗರದಲ್ಲಿರುವ ಶಾಲೆಗಳಿಗೆ ಬಂದಿರುವ 27 ಪ್ರಕರಣಗಳು ದಾಖಲಾಗಿದ್ದು ಕಳೆದ ವರ್ಷ ಇದೇ ರೀತಿ 6 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಎರಡು ಪ್ರಕರಣಗಳಲ್ಲಿ ಶಾಲೆ ವಿದ್ಯಾರ್ಥಿಗಳ ಕೈವಾಡ ಇರುವುದು ಗೊತ್ತಾಗಿದೆ. ಬಾಕಿ ಪ್ರಕರಣ ಹಾಗೂ ಈಗಿನ ಪ್ರಕರಣಗಳನ್ನು ಒಂದುಗೊಂಡಿಸಿ ಒಂದೇ ತನಿಖಾ ತಂಡ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಈ ಸಂಬಂಧ ಪೊಲೀಸರ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿ ಈ ಹಿಂದೆ ಬಂದ ಬೆದರಿಕೆ ಸಂದೇಶ ಹಾಗೂ ಈಗಿನ ಸಂದೇಶ ಗಳು ಬೇರೆ ಬೇರೆ ಇರುವುದು ಗೊತ್ತಾಗಿದೆ. ಸದ್ಯ ಪ್ರಾಕ್ಸಿ ಐಡಿ ಭೇದಿಸಲು ಕೇಂದ್ರದ ಸಿಬಿಐ ಗೆ ಪತ್ರ ಬರೆದು ಮಾಹಿತಿ ಪಡೆಯಲು ಮುಂದಾಗಿದ್ದಾರೆ. ಯಾವ ಲೋಕೇಷನ್ ನಿಂದ ಇಮೇಲ್ ಬಂದಿದೆ, ಲೋಕೇಷನ್ ಸುತ್ತಮುತ್ತಲಿನ ಅಕ್ಟಿವ್ ಪೋನ್ ನಂಬರ್ ಸಿಗುತ್ತಾ ಎಂದು ತನಿಖೆ ಮುಂದುವರೆಸಿದ್ದು ಶತಾಯಗತಾಯ ಬೆದರಿಕೆ ಇಮೇಲ್ ಕಳಿಸಿದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.