Author: AIN Author

ಮೈಸೂರು;-ಮುಖ್ಯಮಂತ್ರಿ ಹುದ್ದೆ ಚರ್ಚೆ ಅಪ್ರಸ್ತುತ ಎಂದು ಕೆ ಎಚ್ ಮುನಿಯಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಬಜೆಟ್‌ಗಳನ್ನು ನೀಡಿರುವ ಸಿದ್ದರಾಮಯ್ಯ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಯಾವುದೇ ತಂಟೆ, ತರಕಾರು ಇಲ್ಲದೆಯೇ ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಹುದ್ದೆಯ ಚರ್ಚೆ ಸದ್ಯಕ್ಕೆ ಅಪ್ರಸ್ತುತ ಎಂದರು. ಪ್ರಜಾಪ್ರಭುತ್ವದಲ್ಲಿ ರಾಜ್ಯದ 224 ಶಾಸಕರೂ ಮಂತ್ರಿ ಆಗಬೇಕು, ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇರುವುದು ಸಹಜ. ಆಡಳಿತ ಪಕ್ಷದಲ್ಲಿ 136 ಶಾಸಕರಿದ್ದೇವೆ. ಹೀಗಾಗಿ ಸರ್ಕಾರದ ಸ್ಥಿರತೆಯನ್ನು ಪ್ರಶ್ನಿಸುವ ಅಗತ್ಯವಿಲ್ಲ. ಮುಖ್ಯಮಂತ್ರಿಗಳು ಬಂದೋಬಸ್ತ್‌ ಆಗಿ ಇರುತ್ತಾರೆ’ ಎಂದರು.

Read More

ಮೈಸೂರು;- ಮೈಸೂರು ನಗರಪಾಲಿಕೆ ಚುನಾವಣೆ ತಡ ಮಾಡುವುದಿಲ್ಲ ಎಂದು ಸಚಿವ ಬಿ.ಎಸ್. ಸುರೇಶ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಮೈಸೂರು ಮಹಾನಗರಪಾಲಿಕೆ ಚುನಾವಣೆಯನ್ನು ಸಕಾಲದಲ್ಲಿ ನಡೆಸಲಾಗುವುದು. ಈ ವಿಷಯದಲ್ಲಿ ತಡ ಮಾಡುವ ಪ್ರಶ್ನೆಯೇ ಇಲ್ಲ’ ಎಂದರು. ಚುನಾವಣೆ ಮುಂದೂಡುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಚುನಾವಣೆ ನಡೆಸಲು ಉತ್ಸುಕರಾಗಿದ್ದೇವೆ. ಮುಂಬರುವ ಲೋಕಸಭಾ ಚುನಾವಣೆಗೂ ಪಾಲಿಕೆ ಚುನಾವಣೆ ನಡೆಸುವುದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು. ‘ಪಾಲಿಕೆ ಚುನಾವಣೆ ಮೀಸಲಾತಿ ಬಗ್ಗೆಯೂ ಈಗಾಗಲೇ ಪ್ರಕ್ರಿಯೆ ಶುರುವಾಗಿದೆ. ನಮಗೆ ಚುನಾವಣೆ ಪ್ರಕ್ರಿಯೆ ನಡೆಸಲು 15 ದಿನ ಸಾಕು’ ಎಂದರು. ‘ಮೈಸೂರು-ಬೆಂಗಳೂರನ್ನು ಅವಳಿ ನಗರಗಳಾಗಿ ಪರಿಗಣಿಸಿ ಅಭಿವೃದ್ಧಿಪಡಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿಯೇ ಹಲವು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಬೆಂಗಳೂರಿನಿಂದಾಚೆಗಿನ ನಗರಗಳು ಬೆಳೆಯಬೇಕು ಎಂಬುದು ನಮ್ಮ ಆಶಯವಾಗಿದೆ’ ಎಂದರು.

Read More

ಇಂದು ದೆಹಲಿಯಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 279 ರನ್‌ಗಳಿಗೆ ಸರ್ವಪತನ ಕಂಡಿತು. ಮೊದಲಿಗೆ ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. 49.3 ಓವರ್‌ಗಳಲ್ಲಿ ಶ್ರೀಲಂಕಾ 279 ರನ್ ಗಳಿಸಿತು. ಬಾಂಗ್ಲಾದೇಶದ ಬೌಲರ್‌ಗಳು ಆರಂಭದಲ್ಲೇ ಎರಡು ಪ್ರಮುಖ ವಿಕೆಟ್ ಕಬಳಿಸಿ ಆತ್ಮವಿಶ್ವಾಸದಲ್ಲಿ ಆಡುತ್ತಿದ್ದಾರೆ. ದೆಹಲಿಯ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ. ಈ ಪಂದ್ಯವು ಬಾಂಗ್ಲಾಗಿಂತ ಶ್ರೀಲಂಕಾಕ್ಕೆ ಮುಖ್ಯವಾಗಿದೆ. ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಲಂಕಾ ತಂಡಕ್ಕೆ ಇನ್ನೆರಡು ಪಂದ್ಯಗಳು ಬಾಕಿಯಿವೆ. ಅವೆರೆಡರಲ್ಲೂ ಜಯ ಸಾಧಿಸಿದರೆ ನಾಲ್ಕರ ಘಟ್ಟಕ್ಕೆ ಪ್ರವೇಶಿಸುವ ಅಣ್ಣ ಅವಕಾಶ ಅದಕ್ಕಿದೆ. ಅದಾಗದಿದ್ದರೂ ಅಂತಿಮ ಏಳು ತಂಡಗಳಲ್ಲಿ ಸ್ಥಾನ ಉಳಿಸಿಕೊಂಡರೆ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ನೇರ ಅರ್ಹತೆ ಗಿಟ್ಟಿಸಬಹುದು ಎಂಬ ಲೆಕ್ಕಾಚಾರದಲ್ಲಿ ಕುಸಾಲ ಮೆಂಡಿಸ್ ಬಳಗ ಇದೆ.

Read More

ಬೆಂಗಳೂರು;- ಪ್ರತಿಪಕ್ಷ ನಾಯಕ, ರಾಜ್ಯಾಧ್ಯಕ್ಷರ ಆಯ್ಕೆ ವಿಳಂಬದಿಂದ ಪಕ್ಷಕ್ಕೆ ಹಿನ್ನಡೆ ಸಹಜ ಎಂದು ಎ ನಾರಾಯಣಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ವಿಳಂಬದಿಂದ ರಾಜ್ಯದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವುದು ಸಹಜ.‌ ಪಂಚರಾಜ್ಯಗಳ ಚುನಾವಣೆ ನಂತರ ಪಕ್ಷದ ವರಿಷ್ಠರು ಈ ವಿಚಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು. ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ಹೈಕಮಾಂಡ್ ಇರುತ್ತದೆ. ಪಕ್ಷದ ಒಳಿತು, ಜನಹಿತ ಸಾಧನೆಗೆ ಯೋಗ್ಯವಾದ ತೀರ್ಮಾನ ಕಾಲಕಾಲಕ್ಕೆ ತೆಗೆದುಕೊಳ್ಳುತ್ತಾರೆ. ಜೆಡಿಎಸ್ ಪಕ್ಷವನ್ನು ಎನ್​ಡಿಎಗೆ ಸೇರಿಸಿಕೊಂಡಿದ್ದು, ರಾಜ್ಯದಲ್ಲಿ ಮೈತ್ರಿ ಮಾಡಿಕೊಳ್ಳುವ ತೀರ್ಮಾನವೆಲ್ಲ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಂತದಲ್ಲೇ ಆಗಿದೆ ಎಂದು ಸ್ಪಷ್ಟಪಡಿಸಿದರು. ಜಾತಿ ರಾಜಕಾರಣ ಇಷ್ಟಪಡುವುದಿಲ್ಲ, ಆ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. 3-4 ರಾಜ್ಯಗಳು ಬಿಟ್ಟರೆ ಬೇರೆಲ್ಲೂ ದಲಿತರು ಮುಖ್ಯಮಂತ್ರಿಯಾದದ್ದಿಲ್ಲ. ಈಗಲೂ ದಲಿತರು ಹಾಗೂ ಹಿಂದುಳಿದವರು ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷಗಳ ನಾಯಕರ ಮನೆ ಬಾಗಿಲು ಕಾಯುವುದು ತಪ್ಪಿಲ್ಲ. ದಲಿತ ಸಿಎಂ ಚರ್ಚೆಗಿಂತ…

Read More

ಬೆಂಗಳೂರು;- 2028ರಲ್ಲಿ ಸಿಎಂ ಸ್ಥಾನಕ್ಕಾಗಿ ಕ್ಲೈಮ್ ಮಾಡುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಈಗ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ನಾನು 2028ಕ್ಕೆ ಸಿಎಂ ಸ್ಥಾನಕ್ಕಾಗಿ ಕ್ಲೈಮ್​ ಮಾಡುತ್ತೇನೆ ಎಂದರು. ಬೇರೆಯವರು ಕೇಳುವುದು, ಬಿಡುವುದು ಅವರವರ ಇಷ್ಟಕ್ಕೆ ಬಿಟ್ಟದ್ದು. ನಾವು 28ಕ್ಕೆ ಕ್ಲೈಂ ಮಾಡ್ತೇವೆ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಅಂತ ಹೇಳಿದ್ದಾರೆ, ಬೇರೆಯವರು ಹೇಳುವ ಅಗತ್ಯವಿಲ್ಲ ಎಂದರು. ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಪಕ್ಷದ ತೀರ್ಮಾನವೇ ನನ್ನ ತೀರ್ಮಾನ. ಈಗ ಅಂತಹ ಪರಿಸ್ಥಿತಿ ಉದ್ಭವಿಸಿಲ್ಲ ಎಂದರು. ಸಚಿವ ಸತೀಶ್​ ಜಾರಕಿಹೊಳಿ ಅವರಿಗೆ ನಾಡಿನ ದೊರೆಯಾಗುವ ಶಕ್ತಿ ಇದೆ. ಬರುವ ದಿನಗಳಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ. ರಾಜ್ಯ ರಾಜಕೀಯದಲ್ಲಿ ಏನಾದರೂ ಬೆಳವಣಿಗೆಗಳು ನಡೆದರೆ ದಲಿತರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂಬ ಸಂದೇಶ ಕಳುಹಿಸೋಣ” ಎಂಬ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅವರು ಸಮುದಾಯದ ಪರವಾಗಿ ಹೇಳಿದ್ದಾರೆ.…

Read More

ಬೆಂಗಳೂರು;- 2028ರಲ್ಲಿ ಸಿಎಂ ಸ್ಥಾನಕ್ಕಾಗಿ ಕ್ಲೈಮ್ ಮಾಡುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಈಗ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ನಾನು 2028ಕ್ಕೆ ಸಿಎಂ ಸ್ಥಾನಕ್ಕಾಗಿ ಕ್ಲೈಮ್​ ಮಾಡುತ್ತೇನೆ ಎಂದರು. ಬೇರೆಯವರು ಕೇಳುವುದು, ಬಿಡುವುದು ಅವರವರ ಇಷ್ಟಕ್ಕೆ ಬಿಟ್ಟದ್ದು. ನಾವು 28ಕ್ಕೆ ಕ್ಲೈಂ ಮಾಡ್ತೇವೆ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಅಂತ ಹೇಳಿದ್ದಾರೆ, ಬೇರೆಯವರು ಹೇಳುವ ಅಗತ್ಯವಿಲ್ಲ ಎಂದರು. ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಪಕ್ಷದ ತೀರ್ಮಾನವೇ ನನ್ನ ತೀರ್ಮಾನ. ಈಗ ಅಂತಹ ಪರಿಸ್ಥಿತಿ ಉದ್ಭವಿಸಿಲ್ಲ ಎಂದರು. ಸಚಿವ ಸತೀಶ್​ ಜಾರಕಿಹೊಳಿ ಅವರಿಗೆ ನಾಡಿನ ದೊರೆಯಾಗುವ ಶಕ್ತಿ ಇದೆ. ಬರುವ ದಿನಗಳಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ. ರಾಜ್ಯ ರಾಜಕೀಯದಲ್ಲಿ ಏನಾದರೂ ಬೆಳವಣಿಗೆಗಳು ನಡೆದರೆ ದಲಿತರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂಬ ಸಂದೇಶ ಕಳುಹಿಸೋಣ” ಎಂಬ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅವರು ಸಮುದಾಯದ ಪರವಾಗಿ ಹೇಳಿದ್ದಾರೆ.…

Read More

ಹುಬ್ಬಳ್ಳಿ: ಕೀಲಿ ಮುರಿದು ಮನೆಯಲ್ಲಿದ್ದ 3.54 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾದ ಘಟನೆ ಇಲ್ಲಿನ ಗೋಕುಲ ರಸ್ತೆಯ ಮಂಜುನಾಥ ನಗರದಲ್ಲಿ ನಡೆದಿದೆ. ವೀರಪ್ಪ ಮಂಗಳೂರು ಎಂಬುವರ ಮನೆಯಲ್ಲಿದ್ದ 3.17 ಲಕ್ಷ ರೂ. ಮೌಲ್ಯದ 55 ಗ್ರಾಂ ಚಿನ್ನಾಭರಣ, 550 ಗ್ರಾಂ ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಲಾಗಿದೆ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಳೆ ಬಂದರೇ ಸಾಕು ರಸ್ತೆಯಲ್ಲ ಕೆರೆಯಂತಾಗುತ್ತವೆ. ಬಹುತೇಕ ಮನೆಗಳು ಜಲಾವೃತ ಗೊಂಡು ಜನರು ಪರದಾಡುವಂತಾಗುತ್ತದೆ. ಹೌದು.. ಹುಬ್ಬಳ್ಳಿಯ ಗಣೇಶನಗರದ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಶಾಲಾ‌ ಮಕ್ಕಳು, ಸಾರ್ವಜನಿಕರು ನೀರಿನಲ್ಲಿಯೇ ಓಡುಡುವ ಮೂಲಕ ಸ್ಥಳೀಯ ಆಡಳಿತದ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಅಲ್ಲದೇ ಪ್ರತಿ ಬಾರಿ ಮಳೆ ಬಂದಾಗಲೂ ಇಂತಹ ಅವ್ಯವಸ್ಥೆ ಸರ್ವೇಸಾಮಾನ್ಯವಾಗಿದೆ. ಇನ್ನೂ ಹುಬ್ಬಳ್ಳಿಯ ಚನ್ನಪೇಟೆಯಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು, ಜನರು ಮಳೆಯ ನೀರನ್ನು ಹೊರ ಹಾಕಲು ಹರಸಾಹಸ ಮಾಡುವಂತಾಗಿದೆ. ಯುಜಿಡಿ ಸಮಸ್ಯೆಯಿಂದ ಇಲ್ಲಿನ ಜನರ ಭವಣೆ ಹೇಳತೀರದಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪಾಲಿಕೆಯು ಸೂಕ್ತ ಕ್ರಮಗಳನ್ನು ಜರುಗಿಸಿ ಜನರ ಕಷ್ಟವನ್ನು ದೂರ ಮಾಡಬೇಕಿದೆ. ಶಾಲಾ ಮಕ್ಕಳ ಪರದಾಟ ಹಳೆ ಹುಬ್ಬಳ್ಳಿಯ ಇಂಡಿಪಂಪ ಹತ್ತಿರ ಪವನ ಸ್ಕೂಲ್ ಮಳೆಗೆ ಶಾಲಾ ಮಕ್ಕಳು ಪರದಾಟ ಮಳೆಗೆ ರಸ್ತೆ ಸಂಪರ್ಕ ಬಂದ್ ಸತತವಾಗಿ 3 ಘಂಟೆಗಳ ಕಾಲ ಮಳೆ ಬಾರಿ ಅವಾಂತರ ಆದ ಮಳೆಗೆ ಹಳೆ ಹುಬ್ಬಳ್ಳಿಯ ಇಂಡಿಪಂಪ…

Read More

ಹುಬ್ಬಳ್ಳಿ: ಸರ್ಕಾರ ಬಿಳಿಸುವ ಪ್ರವೃತ್ತಿ ಇರೋರು ಬಿಜೆಪಿ ಅವರು ಎಂದು ಹುಬ್ಬಳ್ಳಿಯಲ್ಲಿ ಸಂತೋಷ್ ಲಾಡ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 6 ಭಾಗದಲ್ಲಿ ಬರಗಾಲ ಹಾಗೂ ನರೇಗಾ ವೀಕ್ಷಣೆ ಇಟ್ಕೊಂಡಿದ್ವಿ, ಕಳೆದ 40 ನಿಮಿಷದಿಂದ ಜೋರಾಗಿ ಮಳೆ ಬರ್ತಾ ಇದೆ. ನಾವು ತೆರಳಬೇಕಾದ ಸ್ಥಳದಲ್ಲೂ ಮಳೆ ಬರ್ತಾ ಇದೆ. ಇನ್ನು ಎರಡುಮೂರು ದಿನ ಹೀಗೆ ಮಳೆ ಮುಂದುವರಿಯಲಿ. ಇವತ್ತು ಸಂಜೆ ಸಂಪೂರ್ಣ ಬರದ ಬಗ್ಗೆ ನಿಮಗೆ ಮಾಹಿತಿ ಕೊಡಬೇಕು ಅಂದುಕೊಂಡಿದ್ದೆ. ಆಕಸ್ಮಿಕವಾಗಿ ಮಳೆ ಬಂದಿದೆ ಹೀಗಾಗಿ ಬರ ವೀಕ್ಷಣೆ ಮುಂದುವರೆಸಲು ಆಗೋದಿಲ್ಲ. ಇಲ್ಲಿ ಬಂದ ಸಾರ್ವಜನಿಕರೊಂದಿಗೆ ಚರ್ಚೆ ಮಾಡ್ತೇವೆ. ಮಳೆ ಬಂದಿದ್ದು ಅತ್ಯಂತ ಖುಷಿ ತಂದಿದೆ ಎಂದು ಹೇಳಿದರು. ಸರ್ಕಾರದ ಬಗ್ಗೆ ಹೊರ ರಾಜ್ಯದಲ್ಲಿ ಮೋದಿ ಹೇಳಿಕೆ ವಿಚಾರ ಇನ್ನೂ ಮೋದಿ ಸಾಹೇಬರು ಮಾಡಿರುವ ಭಾಷಣ ಎಲ್ಲರಿಗೂ ಗೊತ್ತಿದೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಎಷ್ಟು ಹಣ ಕೊಟ್ಟಿದೆ?. ಇವತ್ತು ಮಧ್ಯ ಪ್ರದೇಶಕ್ಕೆ ಹೋಗಿ ಕರ್ನಾಟಕದ ಬಗ್ಗೆ ಮಾತನಾಡ್ತಾರೆ. ರಾಜ್ಯ ಸರ್ಕಾರ ಏನು…

Read More

ಮಂಡ್ಯ: ಹಾಡು ಹಗಲೇ ಕಾರಿನ ಗ್ಲಾಸ್ ಒಡೆದು ಕಳ್ಳತನ ಮಾಡಿ 4.5 ಲಕ್ಷ ಹಣ ಎಗರಿಸಿ ಪರಾರಿಯಾಗಿರುವ ಘಟನೆ ಮಂಡ್ಯದ ನಗರಸಭೆ ಆವರಣದಲ್ಲಿ ನಡೆದಿದೆ. ಚಿನಕುರಳಿ ಗ್ರಾಮದ ಪರಮೇಶ್ ಹಣ ಕಳೆದುಕೊಂಡ ನತದೃಷ್ಟನಾಗಿದ್ದು, ನಗರಸಭೆ ಆವರಣದಲ್ಲಿ ಕಾರು ನಿಲ್ಲಿಸಿ SBI ಬ್ಯಾಂಕ್ ಗೆ ಕೆಲಸದ ನಿಮಿತ್ತ ಹೋಗಿದ್ದರು. ಕಾರಿನಲ್ಲಿ ಹಣವಿಟ್ಟಿದ್ದನ್ನ ಗಮನಿಸಿದ ಖತರ್ನಾಕ್ ಕಳ್ಳರು ಬ್ರೀಜಾ ಕಾರಿನಲ್ಲಿದ್ದ ಹಣವನ್ನ ಎಗರಿಸಿದ್ದಾರೆ. ಜಮೀನು ರಿಜಿಸ್ಟರ್ ಮಾಡಿಸಿ ರಿಜಿಸ್ಟರ್ ಕಚೇರಿ ಬಳಿಯಿಂದ ಹಣ ಪಡೆದು ನಗರಸಭೆ ಬಳಿ ಬಂದಿದ್ದರು. ಬೇರೆಯವರಿಗೆ ನೀಡಬೇಕಿದ್ದ ಹಣ ಕಳೆದುಕೊಂಡ ಪರಮೇಶ್ ಗೋಳಾಡುತ್ತಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More