ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸುಪ್ರಸಿದ್ಧ ಘಾಟಿ ಸುಬ್ರಹ್ಮಣ್ಯದಲ್ಲಿ ಮಂಗಳವಾರ ನಡೆದ ಬ್ರಹ್ಮರಥೋತ್ಸವದ ವೇಳೆ ಭಾರೀ ಅನಾಹುತವೊಂದು ತಪ್ಪಿದೆ. ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವದ ಸಂದರ್ಭದಲ್ಲಿ ರಥ ಎಳೆಯುವಾಗ ಚಕ್ರದಡಿಗೆ ಸಿಲುಕಿದ್ದ ಏಳು ಮಂದಿ ಭಕ್ತರನ್ನು ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಪಿ.ರವಿ ಹಾಗೂ ಪತ್ರಕರ್ತ ಶಿವರಾಜ್ ನೇಸರ ಅವರು ಪ್ರಾಣಾಪಾಯದಿಂದ ಪಾರು ಮಾಡಿ ಸಮಯಪ್ರಜ್ಞೆ ಮೆರೆದಿದ್ದಾರೆ. ರಥ ಎಳೆಯುವ ಉತ್ಸಾಹದಲ್ಲಿ ಭಕ್ತರು ಕೆಳಕ್ಕೆ ಬಿದ್ದರು. ಅಲ್ಲಿಯೇ ಜನರನ್ನು ನಿಯಂತ್ರಿಸುತ್ತಿದ್ದ ಡಿವೈಎಸ್ಪಿ ರವಿ ಅವರು ರಥ ನಿಲ್ಲಿಸುವಂತೆ ಕೂಗಿಕೊಂಡರು. ಆದರೆ, ಯಾರೂ ಕಿವಿಗೊಡಲಿಲ್ಲ. ಆಗ ಪತ್ರಕರ್ತ ಶಿವರಾಜ ನೇಸರ ಅವರು ಮಹಿಳೆ ಸೇರಿದಂತೆ ಏಳೂ ಜನರನ್ನು ಚಕ್ರ ಸಾಗುವ ಹಾದಿಯಿಂದ ಹೊರದೂಡಿ ಅಪಾಯದಿಂದ ಪಾರು ಮಾಡಿದರು. ಆ ಬಳಿಕ ಚಕ್ರ ಮುಂದಕ್ಕೆ ಸಾಗಿತು. ಒಟ್ಟಾರೆ ಅಧಿಕಾರಿ ಹಾಗೂ ಪತ್ರಕರ್ತರ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಅವಘಡವೊಂದು ತಪ್ಪಿತು. ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸರ್ಪ ದೋಷ ಪರಿಹಾರ…
Author: AIN Author
ಕೊಹಿಮಾ:- ಜನವರಿ 22 ರಂದು ನಡೆಯುವ ರಾಜಕೀಯ ಕಾರ್ಯಕ್ರಮಕ್ಕೆ ಹೋಗಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಆರ್‌ಎಸ್‌ಎಸ್ ಮತ್ತು ಬಿಜೆಪಿ (BJP) ಜನವರಿ 22 ರ ಕಾರ್ಯವನ್ನು ಸಂಪೂರ್ಣವಾಗಿ ನರೇಂದ್ರ ಮೋದಿ ರಾಜಕೀಯ ಕಾರ್ಯಕ್ರಮವನ್ನಾಗಿ ಮಾಡಿದೆ. ಇದು ಆರ್‌ಎಸ್‌ಎಸ್ ಬಿಜೆಪಿ ಕಾರ್ಯಕ್ರಮವಾಗಿದ್ದು, ಕಾಂಗ್ರೆಸ್ ಅಧ್ಯಕ್ಷರು ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿದರು. ನಾವು ಎಲ್ಲಾ ಧರ್ಮಗಳು, ಎಲ್ಲಾ ಆಚರಣೆಗಳಿಗೆ ಮುಕ್ತರಾಗಿದ್ದೇವೆ ಎಂದು ನಾಗಾಲ್ಯಾಂಡ್‌ನ ರಾಜಧಾನಿ ಕೊಹಿಮಾದಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ವೇಳೆ ರಾಹುಲ್ ಹೇಳಿದ್ದಾರೆ. ಹಿಂದೂ ಧರ್ಮದ ವರಿಷ್ಠರು, ಹಿಂದೂ ಧರ್ಮದ ಮಠಾಧಿಪತಿಗಳು ಸಹ ಜನವರಿ 22 ರ ಸಮಾರಂಭ ರಾಜಕೀಯ ಕಾರ್ಯ ಎಂದು ತಮ್ಮ ಅಭಿಪ್ರಾಯವನ್ನು ಎಂದು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಭಾರತದ ಪ್ರಧಾನ ಮಂತ್ರಿಯ ಸುತ್ತ ವಿನ್ಯಾಸಗೊಳಿಸಲಾದ ಮತ್ತು ಆರೆಸ್ಸೆಸ್ ಸುತ್ತ ವಿನ್ಯಾಸಗೊಳಿಸಲಾದ ರಾಜಕೀಯ ಕಾರ್ಯಕ್ರಮಕ್ಕೆ ಹೋಗುವುದು ನಮಗೆ ಸರಿಯನಿಸುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಂಗಳವಾರ…
ನೀವು ಆರೋಗ್ಯಕರವಾದ ಬಿಸಿಯಾದ ಪಾಲಕ್ ಸೊಪ್ಪುವಿನ ದೋಸೆ ಸವಿದು ನೋಡಿ, ಮತ್ತೊಮ್ಮೆ ತಿನ್ನಬೇಕು ಅನಿಸುತ್ತದೆ. ಬೇಕಾಗುವ ಸಾಮಾಗ್ರಿಗಳು * ಪಾಲಕ್ ಸೊಪ್ಪು- 1 ಕಟ್ಟು * ರುಬ್ಬಿದ ದೋಸೆ ಹಿಟ್ಟು – 2ಕಪ್ * ಅಡುಗೆ ಎಣ್ಣೆ- ಅರ್ಧ ಕಪ್ * ರುಚಿಗೆ ತಕ್ಕಷ್ಟು ಉಪ್ಪು * ಈರುಳ್ಳಿ-1 * ಜೀರಿಗೆ- ಸ್ವಲ್ಪ * ಬೆಳ್ಳುಳ್ಳಿ- 1 * ಕೊತ್ತಂಬರಿ ಸೊಪ್ಪು- ಸ್ವಲ್ಪ * ಹಸಿಮೆಣಸಿನಕಾಯಿ-4 * ಮೆಣಸಿನಪುಡಿ- ಸ್ವಲ್ಪ ಮಾಡುವ ವಿಧಾನ ಒಂದು ಬಾಣಲೆಗೆ ಅಡುಗೆ ಎಣ್ಣೆಯನ್ನು ಹಾಕಿ ಜೊತೆಗೆ ತೊಳೆದ ಪಾಲಕ್ ಸೊಪ್ಪು ಹಾಕಿ ಬಾಡುವ ತನಕ ಹುರಿಯಿರಿ. ನಂತರ ಒಂದು ಮಿಕ್ಸಿಯಲ್ಲಿ ಸೊಪ್ಪು ಮತ್ತು ಉಪ್ಪನ್ನು ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಒಂದು ಚಿಕ್ಕ ಪಾತ್ರೆ ಅಥವಾ ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಇದಕ್ಕೆ ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ, ಮೆಣಸಿನ ಪುಡಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ಹುರಿದುಕೊಳ್ಳಿ. ಅದನ್ನು ಆರಲು ಬಿಡಿ.…
ಇಲಿಗಳಿಂದ ಹರಡುವ ರೋಗಗಳು ಮನುಷ್ಯರಿಗೂ ಹರಡುತ್ತವೆ. ಇವು ಕೆಲವೊಮ್ಮೆ ಮಾರಕವಾಗಬಹುದು. ಇಲಿಗಳಿಂದ ಹರಡುವ ಕೆಲವು ರೋಗಗಳು ಶೀತ, ಕೆಮ್ಮು ಮತ್ತು ಕಾಮಾಲೆಯಂತಹ ಆರಂಭಿಕ ಲಕ್ಷಣಗಳನ್ನು ತೋರಿಸುತ್ತವೆ. ಆದ್ದರಿಂದ, ಈ ಕಾಯಿಲೆಗಳನ್ನು ಸಾಮಾನ್ಯವಾಗಿ ಶೀತ ಅಥವಾ ಜ್ವರ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಆದಾಗ್ಯೂ, ಈ ರೋಗಗಳನ್ನು ನಿರ್ಲಕ್ಷಿಸುವುದು ಮಾರಕವಾಗಬಹುದು. ಕೆಲವು ಸಂದರ್ಭಗಳಲ್ಲಿ ಇದು ಸಾವಿಗೆ ಕಾರಣವಾಗಬಹುದು. ಇಲಿಗಳಿಂದ ಲೆಪ್ಟೊಸ್ಪಿರೋಸಿಸ್: ಲೆಪ್ಟೊಸ್ಪಿರೋಸಿಸ್ ಬ್ಯಾಕ್ಟೀರಿಯಾದ ಸೋಂಕು. ಇದು ಇಲಿ ಮೂತ್ರದ ಸಂಪರ್ಕದ ಮೂಲಕ ಹರಡುತ್ತದೆ. ಈ ಸೋಂಕು ಜ್ವರ, ತಲೆನೋವು, ಸ್ನಾಯು ನೋವು, ಆಯಾಸ, ವಾಂತಿ ಮುಂತಾದ ಲಕ್ಷಣಗಳನ್ನು ಉಂಟುಮಾಡುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ ಇದು ಮೂತ್ರಪಿಂಡ ವೈಫಲ್ಯ ಅಥವಾ ಸಾವಿಗೆ ಕಾರಣವಾಗಬಹುದು. ಇಲಿಗಳಿಂದ ಪ್ಲೇಗ್: ಪ್ಲೇಗ್ ಎಂಬುದು ಇಲಿ ಕಡಿತದಿಂದ ಹರಡುವ ಬ್ಯಾಕ್ಟೀರಿಯಾದ ಸೋಂಕು. ಈ ಸೋಂಕು ಜ್ವರ, ಆಯಾಸ, ದದ್ದುಗಳಂತಹ ಲಕ್ಷಣಗಳನ್ನು ಉಂಟುಮಾಡುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ ಇದು ಸಾವಿಗೆ ಸಹ ಕಾರಣವಾಗಬಹುದು. ಇಲಿಗಳಿಂದ ಕ್ಷಯರೋಗ: ಕ್ಷಯವು ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಸಾಂಕ್ರಾಮಿಕ ರೋಗವಾಗಿದೆ.…
ರಾಯಚೂರು:- ಒಂದು ವಾರದಲ್ಲಿ ರೈತರಿಗೆ ಬರ ಪರಿಹಾರದ ಮೊದಲ ಕಂತಿನ ಹಣ ಪಾವತಿ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಒಂದು ವಾರದಲ್ಲಿ ರೈತರಿಗೆ ಬರ ಪರಿಹಾರದ ಮೊದಲ ಕಂತಿನ ಹಣ ಪಾವತಿಯಾಗುತ್ತದೆ. ಈ ಹಿಂದೆ ಬರ ಪರಿಹಾರ, ಅತೀವೃಷ್ಟಿ ಪರಿಹಾರ ನೀಡುವಲ್ಲಿ ಸಾಕಷ್ಟು ನ್ಯೂನ್ಯತೆಗಳಿದ್ದವು. ಎಷ್ಟೋ ಜನ ಬೆಳೆಯನ್ನೇ ಇಡದಿದ್ದರೂ ಅವರಿಗೂ ಪರಿಹಾರ ಸಿಗುತ್ತಿತ್ತು. ಬೆಳೆ ಹಾನಿಯಾದವರಿಗೆ ಪರಿಹಾರ ಸಿಗುತ್ತಿರಲಿಲ್ಲ ಎಂದರು. ಹಿಂದಿನ ಸರ್ಕಾರ ಇದ್ದಾಗ, ನಾನು ಕೃಷಿ ಸಚಿವನಿದ್ದಾಗಲೂ ನೋಡಿದ್ದೇನೆ. ಯಾರದ್ದೋ ಜಮೀನು ಮತ್ತೊಬ್ಬರಿಗೆ ಹಣ ಪಾವತಿಯಾಗಿತ್ತಿತ್ತು. ರೈತರ ಬೆಳೆಯೇ ಬೇರೆ ಪರಿಹಾರ ಬರುವುದೇ ಬೇರೆ ಬೆಳೆಗೆ. ಅಧಿಕಾರಿಗಳು ಮಾಹಿತಿ ಸೇರಿಸುವಾಗ ತಪ್ಪುಗಳಾಗುತ್ತಿದ್ದವು. ಇದೆಲ್ಲಾ ಸರಿಮಾಡಿ ಬೆಳೆಸಮೀಕ್ಷೆ ಆಧಾರದಲ್ಲಿ ಹಣ ಪಾವತಿಯಾಗುತ್ತದೆ ಎಂದರು. ವ್ಯವಸ್ಥೆ ಸರಿಪಡಿಸಲು ಎರಡು ತಿಂಗಳು ತಡವಾಗಿದೆ. ಒಂದು ವಾರದಲ್ಲಿ ಮೊದಲ ಕಂತಿನ ಹಣ ಬರುತ್ತದೆ. 12 ಲಕ್ಷ ಜನರಿಗೆ ಆರ್‌ಬಿಐಗೆ ಪೇಮೆಂಟ್ ಆರ್ಡರ್ ಕಳುಹಿಸಿದ್ದೇವೆ. ಇನ್ನೂ 20…
ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಆಹ್ವಾನಿಸಲಾಗಿದೆ. ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಅವರನ್ನು ಆಹ್ವಾನಿಸಿರುವ ಫೋಟೋಗಳನ್ನು ಕೊಹ್ಲಿ ಅವರ ಅಭಿಮಾನಿಗಳು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಇದೇ ಜನವರಿ 22ರಂದು ನಡೆಯಲಿರುವ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ (ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭ) ವಿಶ್ವದಾದ್ಯಂತ ಗಣ್ಯರು ಭಾಗವಹಿಸಲಿದ್ದಾರೆ. ದಕ್ಷಿಣ ಭಾರತದ ಕೆಲವು ಕ್ರೀಡಾಪಟುಗಳಿಗೆ ಮಾತ್ರ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಕ್ರಿಕೆಟ್ ದಿಗ್ಗಜರ ಸಮಾಗಮ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೂ ಈಗಾಗಲೇ ಐತಿಹಾಸಿಕ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಕಿಂಗ್ ಕೊಹ್ಲಿ ಸಹ ರಾಮಮಂದಿರದ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದು, ಈ ಸಮಾರಂಭ ಕ್ರಿಕೆಟ್ ದಿಗ್ಗಜರು ಸಮಾಗಮಕ್ಕೆ ಸಾಕ್ಷಿಯಾಗಲಿದೆ.
ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವ್ಯವಸ್ಥಿತವಾಗಿ ಜಾರಿಗೆ ತಂದು ಕಠಿಣಗೊಳಿಸಬೇಕಂತ ರಾಜ್ಯ ಸರ್ಕಾರ ಮುಂದಾಗಿದೆ.. ಸರ್ಕಾರ ಬಂದು 8 ತಿಂಗಳ ಬಳಿಕ ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ವಾರ್ಷಿಕ ಸಮಾವೇಶ ಸಭೆ ನಡೆಸಿದ್ರು.. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಠಿಣ ಕ್ರಮ ಜಾರಿಗೊಳಿಸೋದರ ಜೊತೆಗೆ ಪೊಲೀಸರಿಗೆ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿ ಖಡಕ್ ಸೂಚನೆಯನ್ನ ರವಾನಿಸಿದ್ರು ಸಿಎಂ.. ಹಾಗಾದ್ರೆ ಇವತ್ತಿನ ಪೊಲಿಸ್ ಹಿರಿಯ ಅಧಿಕಾರಿಗಳೊಂದಿಗೆ ಯಾವೆಲ್ಲಾ ವಿಚಾರಗಳನ್ನ ಚರ್ಚೆ ಮಾಡಲಾಯ್ತು .. ಅಧಿಕಾರಿಗಳಿಗೆ ಕೊಟ್ಟ ಖಡಕ್ ಸೂಚನೆ ಏನು ಅಂತೀರಾ ಈ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್ ಎಸ್… ರಾಜ್ಯದಲ್ಲಿ ಇತ್ತೀಚಿಗೆ ನಡೆದ ಘಟನೆಗಳು ಸೇರಿದಂತೆ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಸ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿಚ ಪರಮೇಶ್ವರ್ ನೇತೃತ್ವದಲ್ಲಿ ಇಂದು ಸಭೆ ನಡೆಸಲಾಯ್ತು..ನೃಪತುಂಗ ರಸ್ತೆ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಿಜಿಪಿ, ಎಡಿಜಿಪಿಗಳು, ಐಜಿಗಳು, ಡಿಐಜಿಗಳು,…
ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಮುಂಡೂರು ಎಂಬಲ್ಲಿ ರಾಮಮಂದಿರ ಮಂತ್ರಾಕ್ಷತೆ ವಿತರಣಾ ಸಂಚಾಲಕನ ಮೇಲೆ ಹಲ್ಲೆ ನಡೆದಿದೆ ಸಂತೋಷ್ ಮೇಲೆ ಸ್ಥಳೀಯ ನಿವಾಸಿ ಧನಂಜಯ್ ಮತ್ತು ಆತನ ಸಹಚರರು ಹಲ್ಲೆ ಮಾಡಿದ್ದಾರೆ ಆರೋಪಿಸಲಾಗಿದೆ. ಗಲಾಟೆ ತಡೆಯಲು ಬಂದ ಸಂತೋಷ್ ತಾಯಿ ಮೇಲೂ ಸಹ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸಂತೋಷ್ ಅವರು ಮನೆ ಮನೆಗೆ ಅಕ್ಷತೆ ಹಂಚುವುದಕ್ಕೆ ಒಂದು ಗುಂಪು ವಿರೋಧವ್ಯಕ್ತಪಡಿಸಿತ್ತು. ಇದೇ ದ್ವೇಷದಿಂದ ಸಂತೋಷ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಧಾರವಾಡ- ಅಯೋಧ್ಯ ಪ್ರಭ ಶ್ರೀರಾಮನ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾನಕ್ಕೆ ದಿನಗಳು ಸಮೀಪಿಸುತ್ತಿದ್ದು, ರಾಮ ಭಕ್ತರು ವಿವಿಧ ಕಡೆಗಳಿಂದ ತೆರಳುತ್ತಿದ್ದು, ಅದೇ ರೀತಿ ಧಾರವಾಡ ಹುಬ್ಬಳ್ಳಿಯ ಯುವಕರು ಈಗ ಬೈಕ್ ಮೂಲಕ ಅಯೋಧ್ಯಗೆ ಇಂದು ತೆರಳಿದರು. ಇದೇ ಜನವರಿ 22 ರಂದು ನಡೆಯಲಿರೋ ಅಯೋಧ್ಯ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಉದ್ದೇಶದಿಂದ ಧಾರವಾಡ ಹುಬ್ಬಳ್ಳಿಯ ನಾಲ್ವರು ಯುವಕರು ಬೈಕ ಮೂಲಕ ಪ್ರಾಯಣ ಬೆಳಿಸಿದರು. ಒಂದು ರಾಯಲ್ಡ ಎನಿಪೀಲ್ಡ್, ಮತ್ತೊಂದು ಬೆನಾಲಿ ಬೈಕ್ ಮೂಲಕ ದರ್ಶನ್ ಪವಾರ, ದರ್ಶನ್ ಭಾವೆ, ಬಾಲರಾಜ ದೊಡಮನಿ, ಲಕ್ಷ್ಮಣ ಹಂಚಿನಮನಿ ಯುವಕರು ತೆರಳುತ್ತಿದ್ದು, 2000 ಸಾವಿರ ಕಿಲೋಮೀಟರ್ ಬೈಕ್ ಪ್ರಯಾಣಕ್ಕೆ ಸಾರ್ವಜನಿಕರು ಜೈ ಶ್ರೀರಾಮಘೋಷಣೆ ಕೂಗುವ ಮೂಲಕ ಬೀಳ್ಕೊಟ್ಟರು. ಇನ್ನೂ ನಾಲ್ವರು ಯುವಕರು ನಾಲ್ಕು ದಿನದಲ್ಲಿ ಅಯೋಧ್ಯ ತಲುಪುವ ಯೋಜನೆ ಹೊಂದಿದ್ದು, ಇಂದು ಧಾರವಾಡದಿಂದ ತಮ್ಮ ಪ್ರಯಾಣ ಆರಂಭಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಸೇರಿದಂತೆ ಸ್ನೇಹಿತರು ಯುವಕರಿಗೆ ಆಲ್ದ ಬೇಸ್ಟ್ ಹೇಳಿ ಶುಭ ಹಾರೈಸಿದರು.
ಗದಗ: ಲೋಕಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಟಿಕೇಟ್ ಆಕಾಂಕ್ಷಿಗಳು ಸಹ ಇದೀಗ ಫುಲ್ ಆ್ಯಕ್ಟಿವ್ ಆಗಿದ್ದು ತಮಗೇ ಟಿಕೆಟ್ ನೀಡುವಂತೆ ವರಿಷ್ಠರ ಗಮನ ಸೆಳೀತಿದ್ದಾರೆ. ಗದಗ ನಗರದ ಪತ್ರಿಕಾ ಭವನದಲ್ಲಿ ಹಾವೇರಿ-ಗದಗ ಲೋಕಸಭಾ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಆರ್ ಎಂ ಕುಬೇರಪ್ಪ ಸುದ್ದಿಗೋಷ್ಠಿ ನಡೆಸಿ ನಾನು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಭಲ ಆಕಾಂಕ್ಷಿಯಾಗಿದ್ದೇನೆ. ಎರಡು ತಿಂಗಳಿನಿಂದ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ನಾಯಕರಿಗೆ ಭೇಟಿ ಮಾಡಿ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದ್ದೇನೆ. 8ತಾಲೂಕಿನ ಶಾಸಕರಿಗೆ ವಯಕ್ತಿಕವಾಗಿ ಭೇಟಿ ಮಾಡಿ ಬೆಂಬಲಿಸುವಂತೆ ಮನವಿ ಮಾಡಿದ್ದೇನೆ. ಜಿ. ಪಂ, ತಾ. ಪಂ, ಗ್ರಾಂ. ಪಂ, ಬ್ಲಾಕ್ ಕಾಂಗ್ರೆಸ್ ಸದಸ್ಯರಿಗೆ ಸುಮಾರು 10ಸಾವಿರ ಪತ್ರಗಳನ್ನು ಬರೆದಿದ್ದೇನೆ. ಜೊತೆಗೆ ಎಐಸಿಸಿ ಮುಖಂಡರಿಗೂ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದ್ದೇನೆ ಅಂದ್ರು.