ಧಾರವಾಡ- ಅಯೋಧ್ಯ ಪ್ರಭ ಶ್ರೀರಾಮನ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾನಕ್ಕೆ ದಿನಗಳು ಸಮೀಪಿಸುತ್ತಿದ್ದು, ರಾಮ ಭಕ್ತರು ವಿವಿಧ ಕಡೆಗಳಿಂದ ತೆರಳುತ್ತಿದ್ದು, ಅದೇ ರೀತಿ ಧಾರವಾಡ ಹುಬ್ಬಳ್ಳಿಯ ಯುವಕರು ಈಗ ಬೈಕ್ ಮೂಲಕ ಅಯೋಧ್ಯಗೆ ಇಂದು ತೆರಳಿದರು.
ಇದೇ ಜನವರಿ 22 ರಂದು ನಡೆಯಲಿರೋ ಅಯೋಧ್ಯ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಉದ್ದೇಶದಿಂದ ಧಾರವಾಡ ಹುಬ್ಬಳ್ಳಿಯ ನಾಲ್ವರು ಯುವಕರು ಬೈಕ ಮೂಲಕ ಪ್ರಾಯಣ ಬೆಳಿಸಿದರು.
ಒಂದು ರಾಯಲ್ಡ ಎನಿಪೀಲ್ಡ್, ಮತ್ತೊಂದು ಬೆನಾಲಿ ಬೈಕ್ ಮೂಲಕ ದರ್ಶನ್ ಪವಾರ, ದರ್ಶನ್ ಭಾವೆ, ಬಾಲರಾಜ ದೊಡಮನಿ, ಲಕ್ಷ್ಮಣ ಹಂಚಿನಮನಿ ಯುವಕರು ತೆರಳುತ್ತಿದ್ದು, 2000 ಸಾವಿರ ಕಿಲೋಮೀಟರ್ ಬೈಕ್ ಪ್ರಯಾಣಕ್ಕೆ ಸಾರ್ವಜನಿಕರು ಜೈ ಶ್ರೀರಾಮಘೋಷಣೆ ಕೂಗುವ ಮೂಲಕ ಬೀಳ್ಕೊಟ್ಟರು.
ಇನ್ನೂ ನಾಲ್ವರು ಯುವಕರು ನಾಲ್ಕು ದಿನದಲ್ಲಿ ಅಯೋಧ್ಯ ತಲುಪುವ ಯೋಜನೆ ಹೊಂದಿದ್ದು, ಇಂದು ಧಾರವಾಡದಿಂದ ತಮ್ಮ ಪ್ರಯಾಣ ಆರಂಭಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಸೇರಿದಂತೆ ಸ್ನೇಹಿತರು ಯುವಕರಿಗೆ ಆಲ್ದ ಬೇಸ್ಟ್ ಹೇಳಿ ಶುಭ ಹಾರೈಸಿದರು.