ಶುಭಮನ್ ಗಿಲ್ ಟೆಸ್ಟ್ ಸ್ವರೂಪದಲ್ಲಿ 3ನೇ ಕ್ರಮಾಂಕದಲ್ಲಿ ಆಡುವ ಬಗ್ಗೆ ರೋಹಿತ್ ಶರ್ಮಾ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಏಕದಿನ ಹಾಗೂ ಟ್ವೆಂಟಿ-20 ಸ್ವರೂಪದಲ್ಲಿ ಈಗಲೂ ಆರಂಭಿಕ ಆಟಗಾರನಾಗಿರುವ ಗಿಲ್, ಐಪಿಎಲ್ ತಾರೆ ಯಶಸ್ವಿ ಜೈಸ್ವಾಲ್ ಆಗಮನದ ನಂತರ ಟೆಸ್ಟ್ ಮಾದರಿಯಲ್ಲಿ 3ನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ, ಶುಭಮನ್ ಗಿಲ್ ತಮಗೆ ಒಪ್ಪದ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಕ್ರಮಾಂಕದಲ್ಲಿ 9 ಇನಿಂಗ್ಸ್ ನಲ್ಲಿ ಆಡಿರುವ ಶುಭಮನ್ ಗಿಲ್, ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು ಒಂದೇ ಒಂದು ಅರ್ಧಶತಕ ಗಳಿಸಲು ವಿಫಲರಾಗಿದ್ದಾರೆ. ಅಲ್ಲದೆ ಕಳೆದ 5 ಇನಿಂಗ್ಸ್ ನಲ್ಲಿ18.25 ಸರಾಸರಿಯಲ್ಲಿ 73 ರನ್ ಬಾರಿಸಿದ್ದು ಮಾಜಿ ಕ್ರಿಕೆಟಿಗರ ಟೀಕೆಗೆ ಗುರಿಯಾಗಿದ್ದಾರೆ. ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯಕ್ಕೂ ಮುನ್ನ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರು ಶುಭಮನ್ ಗಿಲ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾತನಾಡಿದ್ದಾರೆ. ಸೆಂಚೂರಿಯನ್…
Author: AIN Author
ಬೆಂಗಳೂರು:- ರಾಜ್ಯದ ಐದೂ ಎಸ್ಕಾಂಗಳು ಪ್ರತಿ ಯುನಿಟ್‌ಗೆ 50ರಿಂದ 60 ಪೈಸೆಯಷ್ಟು ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಯುನಿಟ್‌ಗೆ 49 ಪೈಸೆ ಏರಿಕೆ ಮಾಡುವಂತೆ ಡಿಸೆಂಬರ್ ಕೊನೆಯ ವಾರದಲ್ಲಿ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದ್ದು ಕೆಇಆರ್‌ಸಿಯು ಪರಿಶೀಲನೆ ನಡೆಸಿ ಬೆಸ್ಕಾಂ ಹಾಗೂ ಗ್ರಾಹಕರು ಇಬ್ಬರಿಗೂ ಹೊರೆಯಾಗದ ರೀತಿಯಲ್ಲಿ ಸದ್ಯದಲ್ಲೇ ದರ ಪರಿಷ್ಕರಣೆ ಮಾಡಲಿದೆ. ಪರಿಷ್ಕೃತ ದರವು 2024ರ ಏ.1ರಿಂದ ಅನ್ವಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ), ಕಲಬುರಗಿ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (ಸೆಸ್ಕ್-ಮೈಸೂರು) ಸಹ ವಿದ್ಯುತ್ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಿವೆ.
ಜನರು ಬ್ಯುಸಿನೆಸ್ ಗೆ ಕೈ ಹಾಕ್ತಾರೆ. ಅದ್ರಲ್ಲಿ ಯಶಸ್ವಿಯಾಗುವ ಕನಸು ಕಂಡು ಅದಕ್ಕೆ ಹಣ ಸುರಿಯುತ್ತಾರೆ. ಆದ್ರೆ ದಿನ ಕಳೆದಂತೆ ಹಣಕಾಸಿನ ಸಮಸ್ಯೆ ಹಾಗೂ ಸರಿಯಾದ ಪ್ಲಾನಿಂಗ್ ಇಲ್ಲದೆ ಮಾಡುವ ಕೆಲಸ ವ್ಯವಹಾರದಲ್ಲಿ ಹಿನ್ನಡೆಯಾಗಲು ಕಾರಣವಾಗುತ್ತದೆ. ಈಗಿನ ದಿನಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ಟ್ ಅಪ್ ಕಂಪನಿಗಳಿಗೆ ಹಣ ಇಲ್ಲದಂತಾಗಿದೆ. ಇದೇ ಕಾರಣಕ್ಕೆ ಅವು ತಮ್ಮ ಉದ್ಯೋಗಿ ಗಳನ್ನು ಕೆಲಸದಿಂದ ತೆಗೆಯುತ್ತಿವೆ. ಐಬಿಎಂನ ಇತ್ತೀಚಿನ ವರದಿಯಲ್ಲಿ ಈ ಬಗ್ಗೆ ಹೇಳಲಾಗಿದೆ. ವರದಿಯ ಪ್ರಕಾರ, 91 ಪ್ರತಿಶತದಷ್ಟು ಸ್ಟಾರ್ಟ್‌ಅಪ್‌ಗಳು ಪ್ರಾರಂಭವಾದ ಐದು ವರ್ಷಗಳಲ್ಲಿ ಮುಚ್ಚುತ್ತವೆ. ನೀವು ಈಗಾಗಲೇ ಸ್ಟಾರ್ಟ್ ಅಪ್ ಹೊಂದಿದ್ದರೆ ಅಥವಾ ಸ್ಟಾರ್ಟ್ ಅಪ್ ಶುರು ಮಾಡುವ ಆಲೋಚನೆಯಲ್ಲಿದ್ದರೆ ಮೊದಲು ಅದ್ರ ಪ್ಲಾನಿಂಗ್ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಕೊನೆಯಲ್ಲಿ ಕೈಸುಟ್ಟುಕೊಳ್ಳುವ ಬದಲು ಆರಂಭದಿಂದಲೇ ಪ್ಲಾನ್ ರೀತಿಯಲ್ಲಿ ಕೆಲಸ ಮಾಡಿದ್ರೆ ಯಶಸ್ಸು ಸಾಧ್ಯ. ಮೊದಲು ಈ ಕೆಲಸಗಳನ್ನು ಮಾಡಬೇಕು;- *ಉತ್ತಮ ಉದ್ಯೋಗಿಗಳು *ಗ್ರಾಹಕರನ್ನು ಹಿಡಿದಿಡಿ *ಪ್ರಚಾರಕ್ಕೆ ಗಮನ ನೀಡಿ *ಆಫರ್ ಮತ್ತು ಡಿಸ್ಕೌಂಟ್ ಗೆ…
ಬಾಲಿವುಡ್ ನಟಿ ಅದಿತಿ ರಾವ್ ಹೈದರಿ(Aditi Rao Hydari), ಕಾಲಿವುಡ್ ನಟ ಸಿದ್ಧಾರ್ಥ್ (Siddarth) ಜೋಡಿ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೆ ಸಿದ್ಧಾರ್ಥ್ ಜೊತೆಗಿನ ಖಾಸಗಿ ಫೋಟೋ ಹಂಚಿಕೊಂಡು ಹೊಸ ವರ್ಷದಂದು ಮದುವೆ (Wedding) ಬಗ್ಗೆ ಸುಳಿವು ನೀಡಿದ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡುತ್ತಿದೆ. ನ್ಯೂ ಇಯರ್ ಸಂಭ್ರಮವನ್ನು ನಟಿ ಅದಿತಿ- ಸಿದ್ಧಾರ್ಥ್ ಜೋಡಿ ವಿದೇಶದಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ಈ ಕುರಿತ ಇಬ್ಬರೂ ಕೂಡ ಚೆಂದದ ಫೋಟೋ ಶೇರ್ ಮಾಡಿ ಅಭಿಮಾನಿಗಳಿಗೆ ಶುಭಕೋರಿದ್ದಾರೆ. ಈ ಮೂಲಕ ಎಂಗೇಜ್ ಆಗಿರೋದು ಖಚಿತವಾಗಿದೆ. ಫೋಟೋ ಶೇರ್ ಮಾಡ್ತಿದ್ದಂತೆ ಮದುವೆ ಯಾವಾಗ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ 2021ರಲ್ಲಿ ‘ಮಹಾ ಸಮುದ್ರಂ’ ಸಿನಿಮಾ ವೇಳೆ, ಅದಿತಿ- ಸಿದ್ಧಾರ್ಥ್ ಪರಿಚಿತರಾದರು. ಅಲ್ಲಿಂದ ಶುರುವಾದ ಸ್ನೇಹ ಪ್ರೀತಿಗೆ ತಿರುಗಿತ್ತು. ಸಾಕಷ್ಟು ಪಾರ್ಟಿ ಮತ್ತು ಸೆಲೆಬ್ರಿಟಿ ಮದುವೆ ಸಮಾರಂಭಗಳಲ್ಲಿ ಇಬ್ಬರೂ ಜೊತೆಯಾಗಿಯೇ ಹೋಗುವ ಮೂಲಕ ಹೈಲೆಟ್ ಆದರು. ಇಬ್ಬರೂ ಪ್ರೀತಿ…
2023-24ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಗೆ ರೈತ ಭಾಂದವರು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಜಿಯ ನಮೂನೆಗಳು ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುತ್ತವೆ. ರೈತರು ಕನಿಷ್ಟ 1 ಎಕರೆ ಜಮೀನನ್ನು ಹೊಂದಿರಬೇಕು. ಸದರಿ ಯೋಜನೆಯು ಒಣ ವಲಯ ಕ್ಷೇತ್ರದ ರೈತರಿಗೆ ಮಾತ್ರ ಸಂಬಂಧಪಟ್ಟಿರುತ್ತದೆ. ಗುರಿಗಿಂತ ಹೆಚ್ಚು ಅರ್ಜಿಗಳು ಸ್ವೀಕೃತವಾದರೆ ಲಾಟರಿ ಎತ್ತುವ ಮೂಲಕ ಫಲಾನುಭವಿಗಳನ್ನು ಗುರಿಗಳನ್ವಯ ಆಯ್ಕೆಮಾಡಲಾಗುವುದು. ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಮಳೆ ನೀರನ್ನು ಸಂಗ್ರಹಿಸಿ ಬೆಳೆಗಳ ಸಂದಿಗ್ದ ಹಂತದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಕೃಷಿ ಭಾಗ್ಯ ಯೋಜನೆಯ ಉದ್ದೇಶವಾಗಿದ್ದು ಎಂದು ಅವರು ತಿಳಿಸಿದ್ದಾರೆ https://ainlivenews.com/k-set-exam-on-january-13-notice-to-download-to-get-admit-card/ ಕೇತ್ರ ಬದು ನಿರ್ಮಾಣಕ್ಕೆ ಸಾಮಾನ್ಯ ವರ್ಗಕ್ಕೆ ಸೇರಿರುವ ರೈತರಿಗೆ ಶೇಕಡಾ 80% ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರಿಗೆ ಶೇಕಡಾ 90 ರಷ್ಟು ಸಹಾಯಧನ ದೊರೆಯುತ್ತೆ. ಕೃಷಿಹೊಂಡ…
ಹುಬ್ಬಳ್ಳಿ : ತಾಲೂಕು ಕಿರೇಸೂರ ಗ್ರಾಮದಲ್ಲಿ ಅಯೋಧ್ಯೆ ಮಂದಿರದಿಂದ ಬಂದ ಮಂತ್ರಾಕ್ಷತ ಮತ್ತು ಆಮಂತ್ರಣ ಪತ್ರಿಕೆಗಳನ್ನು ಕಿರೇಸೂರಿಗೆ ಬರಮಾಡಿ ಕೊಂಡರು. ನಂತರ ರಾಮನ ಫೋಟೋ ಇಟ್ಟು ಊರನ ತುಂಬಾ ಮೆರವಣಿಗೆ ಮಾಡಿದರು. ಗ್ರಾಮಸ್ಥರು ,ಹಿರಿಯರು, ಮಹಿಳೆಯರು ಯುವಕರು ಭಾಗವಹಿಸಿದ್ದರು.
ಬೆಂಗಳೂರು: ದಶಕಕ್ಕೂ ಹೆಚ್ಚು ಕಾಲದ ಟೆಸ್ಟ್ ಕ್ರಿಕೆಟ್ ನಲ್ಲಿ ತಮಗೆ ಸವಾಲಾಗಿದ್ದ ಕ್ರಿಕೆಟಿಗರನ್ನು ಆಸ್ಟ್ರೇಲಿಯಾದ ಖ್ಯಾತ ಆಫ್ ಸ್ಪಿನ್ನರ್ ನಾಥನ್ ಲಯಾನ್ ಹೆಸರಿಸಿದ್ದಾರೆ. ಸಿಡ್ನಿಯಲ್ಲಿ ನಡೆಯಲಿರುವ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ತಮ್ಮ ದಶಕಕ್ಕೂ ಹೆಚ್ಚಿನ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ತಮಗೆ ಸವಾಲಾಗಿದ್ದ ಕ್ರಿಕೆಟಿಗರ ರೂಪದಲ್ಲಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಎಬಿಡಿ ವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿಯ ಹೆಸರನ್ನು ಸೂಚಿಸಿದ್ದು, ಅವರ ವಿಕೆಟ್ ಪಡೆಯಲು ರಣತಂತ್ರಗಳನ್ನು ರೂಪಿಸುತ್ತಿದ್ದೆ ಎಂದು ಹೇಳಿದ್ದಾರೆ. ನನ್ನ ಟೆಸ್ಟ್ ಜೀವನದಲ್ಲಿ ನನಗೆ ಸವಾಲಾಗಿದ್ದ ಬ್ಯಾಟರ್ಸ್ ಬಗ್ಗೆ ಕೇಳುವುದು ನಿಜಕ್ಕೂ ಅದು ತುಂಬಾ ಕಠಿಣ ಪ್ರಶ್ನೆ ಆಗಿದೆ. ನನ್ನ ಕ್ರಿಕೆಟ್ ಜೀವನದಲ್ಲಿ ನಾನು ಹಲವರು ಕ್ರಿಕೆಟ್ ದಿಗ್ಗಜರ ಎದುರು ಆಡಿದ್ದೇನೆ. ನಾನು ನಿಮಗೆ ಮೂವರ ಹೆಸರನ್ನು ನೀಡುತ್ತೇನೆ. ಸಚಿನ್ ತೆಂಡೂಲ್ಕರ್, ಎಬಿಡಿ ವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ಅವರೇ ನನಗೆ ಸವಾಲು ನೀಡಿದ ಆಟಗಾರರು,” ಎಂದು ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ಹೇಳಿದ್ದಾರೆ.…
ಬೆಂಗಳೂರು:- ರಾಜ್ಯದಲ್ಲಿ ನಿನ್ನೆ 298 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಕೊರೋನಾ ಅಬ್ಬರ ಮುಂದುವರೆದಿದೆ. ಅಲ್ಲದೆ ನಾಲ್ಕು ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಜ.1ರಂದು 296 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಅಲೆಯ ದಾಖಲೆ. ಇದೀಗ ಗುರುವಾರ 298 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನು ಬರೋಬ್ಬರಿ ನಾಲ್ಕು ಮಂದಿ ಸಾವನ್ನಪ್ಪುವ ಮೂಲಕ ಪ್ರಸಕ್ತ ಅಲೆಯ ಸಾವು 19ಕ್ಕೆ ಏರಿಕೆಯಾಗಿದೆ. ಮೈಸೂರಿನ 60 ವರ್ಷದ ಮಹಿಳೆ ಡಿ.28ರಂದು ಜ್ವರ ಹಾಗೂ ಕೆಮ್ಮು ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಜ.3ರಂದು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ 82 ವರ್ಷದ ವ್ಯಕ್ತಿ ಐಎಲ್‌ಐ, ಜ್ವರ, ಕೆಮ್ಮು ಸಮಸ್ಯೆಯಿಂದ ಡಿ.28ರಂದು ದಾಖಲಾಗಿದ್ದು, ಡಿ.30ರಂದು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಬೆಂಗಳೂರು ನಿವಾಸಿ 64 ವರ್ಷದ ವ್ಯಕ್ತಿ ಸಾರಿ ಸಮಸ್ಯೆಯಿಂದ ಡಿ.29ರಂದು ದಾಖಲಾಗಿ ಜ.1ರಂದು ಸಾವನ್ನಪ್ಪಿದ್ದು, ಧಾರವಾಡದಲ್ಲಿ 63 ವರ್ಷದ ವ್ಯಕ್ತಿ ಐಎಲ್‌ಐ ಲಕ್ಷಣಗಳೊಂದಿಗೆ ಡಿ.30ರಂದು ದಾಖಲಾಗಿ ಜ.2ರಂದು ಸಾವನ್ನಪ್ಪಿದ್ದಾರೆ. ಗುರುವಾರದ ವೇಳೆಗೆ ಕಳೆದ 24 ಗಂಟೆಗಳಲ್ಲಿ 7,791 ಮಂದಿಗೆ ಸೋಂಕು ಪರೀಕ್ಷೆ…
ನವದೆಹಲಿ: ಗುರುಗ್ರಾಮ್‌ನ (Gurugram) ಹೋಟೆಲ್‌ವೊಂದರಲ್ಲಿ (Hotel) 27 ವರ್ಷದ ಮಾಜಿ ಮಾಡೆಲ್ (Ex Model) ಒಬ್ಬಳನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಯಾದಾಕೆಯನ್ನು ದಿವ್ಯಾ ಪಹುಜಾ (Divya Pahuja) ಎಂದು ಗುರುತಿಸಲಾಗಿದ್ದು, ಕೊಲೆ ನಡೆದ ಹೋಟೆಲ್‌ನ ಮಾಲೀಕ ಅಭಿಜಿತ್ ಸಿಂಗ್ ಎಂಬಾತ ಆಕೆಯನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಶಂಕಿತ ಆರೋಪಿ ಅಭಿಜಿತ್ ಸೇರಿದಂತೆ ಪ್ರಕಾಶ್ ಮತ್ತು ಇಂದ್ರಜ್ ಎಂಬವರನ್ನು ಗುರುಗ್ರಾಮ್ ಕ್ರೈಂ ಬ್ರಾಂಚ್ ಬಂಧಿಸಿದೆ. ಪ್ರಕಾಶ್ ಮತ್ತು ಇಂದ್ರಜ್ ಇಬ್ಬರೂ ಅಭಿಜಿತ್‌ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಗಳು ತಿಳಿಸಿವೆ. ಹೋಟೆಲ್ ಮಾಲೀಕ ಅಭಿಜಿತ್ ತನ್ನ ಸಹಚರರೊಂದಿಗೆ ಸೇರಿ ದಿವ್ಯಾಳನ್ನು ಕೊಲೆ ಮಾಡಿ ನಂತರ ಆಕೆಯ ಶವವನ್ನು ವಿಲೇವಾರಿ ಮಾಡಲು ತನ್ನ ಸಹಚರರಿಗೆ 10 ಲಕ್ಷ ರೂ. ನೀಡಿದ್ದಾನೆ ಎನ್ನಲಾಗಿದೆ. ಘಟನೆ ಕುರಿತಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಭಿಜಿತ್ ಸೇರಿದಂತೆ ಕೊಲೆ ಆರೋಪಿಗಳು ನೀಲಿ ಬಣ್ಣದ ಬಿಎಂಡಬ್ಲ್ಯು ಕಾರಿನಲ್ಲಿ ದಿವ್ಯಾಳ ಶವವನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. https://ainlivenews.com/bharjari-samag-release-of-nuru-rupee-mix-bheema/…
ಹಾಸಿಗೆಯಲ್ಲಿ ಲೈಂಗಿಕ ಪರಾಕಾಷ್ಠೆಯ ನಂತರವೂ, ನಿಮ್ಮ ನಿಕಟ ಸಂಬಂಧವು ಆರೋಗ್ಯಕರವಾಗಿರಲು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿದಿದೆಯೇ? ಹೌದು, ಲೈಂಗಿಕ ಕ್ರಿಯೆ ನಡೆಸಿದ ನಂತರ ಕೆಲವೊಂದು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಇದರಿಂದ ಗುಪ್ತಾಂಗಗಳು ಆರೋಗ್ಯಕರ ಮತ್ತು ಸ್ವಚ್ಛವಾಗಿರುತ್ತದೆ ಮತ್ತು ಯಾವುದೇ ಸೋಂಕು ಇರುವುದಿಲ್ಲ. ಕೈಗಳನ್ನು ತೊಳೆಯಿರಿ: ಲೈಂಗಿಕ ಕ್ರಿಯೆಯ ಸಮಯದಲ್ಲಿ ಸೂಕ್ಷ್ಮ ಭಾಗಗಳನ್ನು ಸಹ ಕೈಯಲ್ಲಿ ಮುಟ್ಟಿರುವ ಸಾಧ್ಯತೆ ಇದೆ. ಆದ್ದರಿಂದ, ಬ್ಯಾಕ್ಟೀರಿಯಾ ಹರಡುವುದನ್ನು ತಡೆಯಲು ಕೈಗಳನ್ನು ಸ್ವಚ್ಛಗೊಳಿಸುವುದು ಮುಖ್ಯ. ಹಾಗೆ ಮಾಡದಿರುವುದು ಅನೇಕ ಬ್ಯಾಕ್ಟೀರಿಯಾದ ಸೋಂಕುಗಳಿಗೆ ಕಾರಣವಾಗಬಹುದು. ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇದೆ. ಮೂತ್ರ ವಿಸರ್ಜನೆ ಮಾಡದೇ ಇರೋದು : ಲೈಂಗಿಕ ಕ್ರಿಯೆ ನಡೆಸಿದ ನಂತರ ಮೂತ್ರ ವಿಸರ್ಜನೆಯನ್ನು ನಿಲ್ಲಿಸುವ ತಪ್ಪು ಮಾಡಬೇಡಿ. ಸಂಬಂಧ ಹೊಂದಿದ್ದ ನಂತರ, ನೀವು ವಿಶೇಷವಾಗಿ ಮೂತ್ರ ವಿಸರ್ಜನೆಗೆ ಹೋಗಬೇಕು. ಇದು ಮೂತ್ರದ ಮೂಲಕ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳನ್ನು ಹೊರಹಾಕುತ್ತದೆ ಮತ್ತು ಯುಟಿಐ ಅಪಾಯವನ್ನು ಉಂಟುಮಾಡುವುದಿಲ್ಲ.…