ಬೆಂಗಳೂರು: ಹೆಚ್ಚು ಲೋಕಸಭಾ ಸ್ಥಾನ ಗೆದ್ದರೆ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಡಾ.ಯತೀಂದ್ರ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಐದು ವರ್ಷ ಬಲಿಷ್ಠವಾಗಿ ಇರುತ್ತೆ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ, ನಾನು ಕೆಪಿಸಿಸಿ ಅಧ್ಯಕ್ಷ ಆಗಿದ್ದೇನೆ ಆಸೆ ಪಡುವುದು, ಜನರ ಬಳಿ ಮನವಿ ಮಾಡುವುದು ಇರುತ್ತೆ ಇದನ್ನು ಟ್ವಿಸ್ಟ್ ಮಾಡುವುದು ಬೇಡ ಎಂದರು.
ಯತೀಂದ್ರ ಬಹಳ ಸೂಕ್ಷ್ಮವಾಗಿ ಬೆಳೆಯುತ್ತಿರುವ ನಾಯಕ ನಾನು ಕೂಡಾ ನಮ್ಮ ಭಾಗದಲ್ಲಿ ಹೋದಾಗ ಜನರ ಭಾವನೆಗಳಿಗೆ ತಕ್ಕ ಹಾಗೆ ಮಾತಾಡ್ತೀನಿ ಅದನ್ನು ಮಾಧ್ಯಮಗಳಲ್ಲಿ ಬೇರೆ ಅರ್ಥ ಬರುವ ರೀತಿ ಬಿಂಬಿಸುವುದು ಬೇಡ ಎಂದು ಹೇಳಿದರು.