Author: AIN Author

ಬೆಂಗಳೂರು: ಕೊರೊನಾ ಮೇಲಿಂದ ಮೇಲೆ ಒಕ್ಕರಿಸಿದ ಕಾರಣ  ಜನ ಕೆಲ ವರ್ಷದಿಂದ ಜನ ಪಟಾಕಿ ಸಹವಾಸಕ್ಕೆ ಹೋಗಿರ್ಲಿಲ್ಲ. ಸರ್ಕಾರ ಸಹ ಹಾನಿಕಾರಕ ಪಟಾಕಿಯನ್ನ ಬ್ಯಾನ್ ಮಾಡಿ ಆದೇಶಿಸಿತ್ತು. ಆದ್ರೀ ಬಾರಿ ಮುಕ್ತ ದೀಪಾವಳಿಗೆ ಅವಕಾಶ ಸಿಕ್ಕಿತ್ತು. ಇದ್ರಿಂದ ಜನ ಕಳೆದ ಎರಡು ವರ್ಷದ ಪಟಾಕಿಯನ್ನೂ ಸೇರಿಸಿ ಸಿಡಿಸಿದ್ದಾರೆ. ಇದ್ರಿಂದ ನಗರದ ಮಾಲಿನ್ಯ ದುಪ್ಪಟ್ಟು ಆಗಿ ಏರಿಕೆಯಾಗಿದೆ..ಇದರಿಂದ ದೀಪಾವಳಿ ಹಬ್ಬದ ಪಟಾಕಿ ಸಂಭ್ರಮ ಮಹಾನಗರಕ್ಕೆ ಮಾರಕವಾಗಿದೆ. ಹಾಗಾದ್ರೆ ನಗರದಲ್ಲಿ ಪಟಾಕಿಯಿಂದ ಆದ ಮಾಲಿನ್ಯವೆಷ್ಟು. ತೋರಿಸ್ತೀವಿ ನೋಡಿ https://ainlivenews.com/joint_pain_suprem_ray_treatment_reiki/ ಸಿಲಿಕಾನ್ ಸಿಟಿ ಬೆಂಗಳೂರಿಗೆ ಗಾರ್ಬೇಜ್ ಸಿಟಿ, ಗುಂಡಿ ಸಿಟಿ, ಜೊತೆಗೆ ಮಾಲಿನ್ಯಕಾರಕ ಸಿಟಿ ಅನ್ನೊ ಅಪಖ್ಯಾತಿಯೂ ಇದೆ..ನಗರದಲ್ಲಿ ಹೆಚ್ಚಾಗ್ತಿರೋ ಮಾಲಿನ್ಯ ನಿಯಂತ್ರಣ ಮಾಡೋಕೆ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡ್ತಿದೆ. ದೆಹಲಿಯಂತೆ ಬೆಂಗಳೂರು ಮಾಲಿನ್ಯ ನಗರ ಆಗಬಾರದು ಅಂತ ನಾನಾ ಪ್ರಯತ್ನ ಮಾಡಲಾಗ್ತಿದೆ..ಆದ್ರೆ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ವರ್ಷಪೂರ್ತಿ ನಿಯಂತ್ರಣ ಮಾಡಿದ್ದು ದೀಪಾವಳಿ ವೇಳೆ ನೀರಲ್ಲಿ ಹೋಮ ಮಾಡಿದಂತಾಗಿದೆ. ..ದೀಪಾವಳಿ ವೇಳೆ ನಗರದ…

Read More

ಬೆಂಗಳೂರು: ಕೆಲಸದಿಂದ ತೆಗೆದಿದ್ದಕ್ಕೆ ಯುವತಿ  ಬೆಂಗಳೂರಿನ  ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಟಿ.ಸಿ.ಎಸ್​ ಕಂಪನಿಗೆ  ಬಾಂಬ್ ಬೆದರಿಕೆ ಕರೆ ಮಾಡಿದ್ದಾಳೆ. ಕರೆ ಬರುತ್ತಿದ್ದಂತೆ ಉದ್ಯೋಗಿಗಳು ಕಂಪನಿಯಿಂದ ಹೊರಬಂದಿದ್ದು, ಕೂಡಲೇ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಕಂಪನಿಯ ಬಿ ಬ್ಲಾಕ್​ನಲ್ಲಿ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿತ್ತು, ಆಗ ಇದೊಂದು ಹುಸಿ ಬಾಂಬ್​ ಕರೆ ಎಂದು ಖಚಿತವಾಗಿದೆ. https://ainlivenews.com/joint_pain_suprem_ray_treatment_reiki/ ಬೆಳಗಾವಿ ಮೂಲದ ಯುವತಿ ಟಿ.ಸಿ.ಎಸ್​ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದು, ಇತ್ತೀಚಿಗೆ ಕೆಲಸದಿಂದ ತೆಗೆಯಲಾಗಿತ್ತು. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಯುವತಿ ಕ್ಯಾಬ್ ಚಾಲಕನನ್ನು ಪರಿಚಯ ಮಾಡಿಕೊಂಡಿದ್ದಳು. ಪರಿಚಿತ ಕ್ಯಾಬ್ ಚಾಲಕನಿಗೆ ಕುಡಿದ ಮತ್ತಿನಲ್ಲಿ ಯುವತಿ ಕರೆ ಮಾಡಿ ಕಂಪನಿಯ ಬಿ ಬ್ಲಾಕ್​ನಲ್ಲಿ ಬಾಂಬ್ ಇದೆ ಎಂದು ಹೇಳಿದ್ದಳು.ಪೊಲೀಸರು ತಪಾಸಣೆ ವೇಳೆ ಯುವತಿ ಕರೆ ಮಾಡಿರುವುದು ಕನ್ಫರ್ಮ್ ಆಗಿದೆ.  ಬೆಳಗಾವಿಯಲ್ಲಿ ಯುವತಿಯನ್ನು ವಶಕ್ಕೆ ಪಡೆಯಲು ಪೊಲೀಸರು ಸಿದ್ದತೆ ನಡೆಸಿದೆ.

Read More

ಬೆಂಗಳೂರು: ಜಗಳ ಬಿಡಿಸಲು ಹೋದ ಟ್ರಾಫಿಕ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆದಿರುವ ಘಟನೆ ನಗರದ ಚಿಕ್ಕಪೇಟೆ ಸಂಚಾರಿ ಠಾಣೆ ಬಳಿ ನಡೆದಿದೆ. ಅಬ್ದುಲ್ ಸುಬಾನ್ ಎಂಬಾತನಿಂದ ಟ್ರಾಫಿಕ್ ಕಾನ್ಸ್ ಟೇಬಲ್ ಮಂಜು.ಆರ್ ಮೇಲೆ ಹಲ್ಲೆ ನಡೆಸಲಾಗಿದೆ.ಮೈಸೂರು ರಸ್ತೆಯ ಬಿಬಿ ಜಂಕ್ಷನ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ಸ್ ಟೇಬಲ್ ಮಂಜು https://ainlivenews.com/gas-cylinder-stolen-bangalore/ ಆಟೋ ಹಿಂದಿಕ್ಕುವ ವಿಚಾರಕ್ಕೆ ಆಟೋ ಚಾಲಕ ಮತ್ತು ಬೈಕ್ ಚಾಲಕನ ನಡೆಯುವ ಗಲಾಟೆ ನಡೆಯುತ್ತಿದ್ದು  ಈ ವೇಳೆ ಜಗಳ ಬಿಡಿಸಲು ಪ್ರಯತ್ನಿಸಿದ ಮಂಜುಗೆ ಅವಾಚ್ಯವಾಗಿ ನಿಂದಿಸಿದ ಆರೋಪಿ  ಮತ್ತೆ ಟ್ರಾಫಿಕ್ ಸಿಗ್ನಲ್ ಬಾಕ್ಸ್ ನಲ್ಲಿ ಕೂತಿರುವಾಗ ಬಂದು ಮಂಜು ಜೊತೆ ಜಗಳ ಮಾಡಿ ಅವಾಚ್ಯವಾಗಿ ಬೈದು ಮಂಜು ಕೆನ್ನೆಗೆ ಹೊಡೆದು ಎಸ್ಕೇಪ್ ಆಗ್ತಿದ್ದ ಅಸಾಮಿ ಈ ವೇಳೆ ಸ್ಥಳೀಯರ ನೆರವಿನೊಂದಿಗೆ ಆರೋಪಿ ಅಬ್ದುಲ್ ನನ್ನ ಹಿಡಿದ ಕಾನ್ಸ್ ಟೇಬಲ್ ಬಳಿಕ ಚಾಮರಾಜಪೇಟೆ ಠಾಣೆಗೆ ಕರೆದೊಯ್ದ ಪ್ರಕರಣ ದಾಖಲಿಸಿರುವ ಕಾನ್ಸ್ ಟೇಬಲ್ ಮಂಜು ಜೆಜೆ ನಗರ ಪೊಲೀಸ್ ಠಾಣೆಯ ರೌಡಿ…

Read More

ಧಾರವಾಡ: ಕಳೆದ ದಿನ ತಡ ರಾತ್ರಿ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಇಸ್ಪೀಟ್ ದಾಳೆಯ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನ ಆರೋಪಿಗಳನ್ನು ಬಂಧನ‌ ಮಾಡಲಾಗಿದೆ. ಉಳಿದ ಆರೋಪಿಗಳಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ಹೇಳಿದರು. ನಗರದ ಎಸ್ಪಿ ಕಚೇರಿ ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನರೇಂದ್ರ ಗ್ರಾಮದ ಸರ್ಕಾರಿ ಶಾಲೆಯ ಕಾಂಪೌಂಡ್ ಒಳಗೆ ಇಸ್ಪೀಟ್ ಆಡುತ್ತಿರುವ ಕುರಿತು, ನಮ್ಮ ಗ್ರಾಮೀಣ ಠಾಣೆಗೆ ಮಾಹಿತಿ ಬಂದಿದೆ. ಅದನ್ನು ಆಧರಿಸಿ ಠಾಣೆಯ ಪಿಎಸ್‌ಐ, ಹಾಗೂ ಇಬ್ಬರು ಸಿಬ್ಬಂದಿಗಳು ತೆರಳಿ ಪರಿಶೀಲನೆ ಕೈಗೊಂಡಿದ್ದಾರೆ. ಈ ವೇಳೆ ಜೂಜುಕೋರರು ಪೊಲೀಸರ ಮೇಲೆ ಹಲ್ಲೆ ಮಾಡಿದರು. ಅದರ ಕುರಿತು ಈಗ ಠಾಣೆಯಲ್ಲಿ ದೂರು ದಾಖಲು ಮಾಡಿಕೊಂಡು ಕ್ರಮ ಕೈಗೊಳ್ಳಲಾಗಿದೆ‌ ಎಂದರು.‌ ಕಳೆದ ಮೂರ್ನಾಲ್ಕು ದಿನಗಳಲ್ಲಿ ಧಾರವಾಡ ಜಿಲ್ಲಾ ವ್ಯಾಪ್ತಿಯ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.‌ ಒಟ್ಟು 27 ಪ್ರಕರಣದಲ್ಲಿ 236…

Read More

ಕೋಲಾರ: ಲೋಕಸಭಾ ಚುನಾವಣೆಯಲ್ಲಿ ಜಯಬೇರಿ ಬಿಜೆಪಿ ಭಾರಿಸಬೇಕು. ರಾಜ್ಯದಲ್ಲೂ ಬಿಜೆಪಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಬೇಕು. ಮೂರನೇ ಬಾರಿಗೆ ಪ್ರಧಾನಿ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು. ಪಕ್ಷದಲ್ಲಿ ಹಿರಿಯರಿದ್ದರೂ ಸಹ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ. ಬಿವೈ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿರುವುದು ನಮ್ಮ ರಾಷ್ಟ್ರೀಯ ನಾಯಕರ ತೀರ್ಮಾನ. ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಎಲ್ಲಾ ಶಾಸಕರುಗಳು ಭಾಗವಹಿಸುತ್ತಾರೆ. ಶಾಸಕಾಂಗ ಪಕ್ಷದ ಸಭೆಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬರಲಿದ್ದಾರೆ ಎಂದು ಬಿವೈ ವಿಜಯೇಂದ್ರ ಹೇಳಿದರು.

Read More

ಧಾರವಾಡ: ದೀಪಾವಳಿ ಹಬ್ಬದ ಅಂಗವಾಗಿ ಅಂದರ್ ಬಾಹರ್ ಆಡುತ್ತಿದ್ದ ಕಾಂಗ್ರೆಸ್ ಯುವ ಮುಖಂಡ ಸೇರಿದಂತೆ 12 ಜನರನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ವಶಕ್ಲೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡದ ನಗರದ ಲಕ್ಷ್ಮೀ ಚಿತ್ರಮಂದಿರದ ಬಳಿ ಇರುವ ಫೈನಾನ್ಸ್ ಕಚೇರಿಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಅಂದರ್ ಬಾಹರ್ ಆಡಲಾಗುತ್ತಿತ್ತು. ಈ ವೇಳೆ ಖಚಿತ ಮಾಹಿತಿ‌ ಮೇರೆಗೆ ದಾಳಿ ನಡೆಸಿದ ವಿದ್ಯಾಗಿರಿ ಠಾಣೆ ಪೊಲೀಸರು ಕಾಂಗ್ರೆಸ್ ಯುವ ಮುಖಂಡ ರಾಹುಲ್ ಅಷ್ಟಗಿ ಸೇರಿದಂತೆ 12 ಜನರನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ. ದಾಳಿ ವೇಳೆ ಸುಮಾರು 1 ಲಕ್ಷಕ್ಕಿಂತಲೂ ಅಧಿಕ ಹಣ ಹಾಗೂ ಇತ್ಯಾದಿ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಬಾರಿ ರಮ್ಯ ರೆಸಿಡೆನ್ಸಿಯಲ್ಲಿ ನಡೆದ ಇಸ್ಪೀಟ್ ದಾಳಿ ವೇಳೆ ಈಗಿನ ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿ ಕೂಡ ಸಿಕ್ಕಿಹಾಕಿಕೊಂಡಿದ್ದರು. ಈಗ ಅವರ ಸಹೋದರನ ಮಗ ರಾಹುಲ್ ಅಷ್ಟಗಿ ಕೂಡ ಇಸ್ಪೀಟ್ ರೇಡ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸಮಾಜಕ್ಕೆ ಬುದ್ದಿ ಹೇಳುವವರ ಮಕ್ಕಳೇ ಇಂತಹ‌ ಅಪರಾಧದಲ್ಲಿ ತೊಡಗಿಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ…

Read More

ವಿಜಯಪುರ: ವಿಜಯೇಂದ್ರರವರ ನೇಮಕ ನಾವಂತೂ ಮಾಡಿಲ್ಲ. ಪಕ್ಷದ ಹಿರಿಯರು ಯಾವ ಯಾವುದೋ ಕಾರಣಕ್ಕೆ ಮಾಡಿದ್ದಾರೆ. ಬಹಳ ಯೋಚನೆ ಮಾಡಿ, ಯಡಿಯೂರಪ್ಪ ಮಗನೇ ಆಗಬೇಕು ಅಂತಾ ಮಾಡಿದ್ದಾರೆ. ಅದರ ಪ್ರಕಾರ ವಿಜಯೇಂದ್ರ ಅಧ್ಯಕ್ಷ ಆಗಿದ್ದಾನೆ. ಅವರು ಆಗಿರೋದ್ರಿಂದ ನಮಗೇನೂ ಹೊಟ್ಟೆ ಉರಿ ಏನೂ ಇಲ್ಲ ಎಂದು ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯೆ ನೀಡಿದ್ದಾರೆ. https://ainlivenews.com/do-you-know-what-happens-when-you-keep-notes-in-the-mobile-cover/

Read More

ಸಲ್ಲದ ಕಾರಣಗಳಿಂದಾಗಿ ಇತ್ತೀಚೆಗೆ ನಟಿಯರು ಸುದ್ದಿ ಆಗುತ್ತಿದ್ದಾರೆ. ಜೊತೆಗೆ ಜೈಲು ಸೇರುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಒರಿಯಾ ನಟಿ ಮೌಶುಮಿ ನಾಯಕ್ (Moushumi Naik). ಲೇಖಕಿಯೊಬ್ಬರಿಗೆ ಬ್ಲ್ಯಾಕ್ ಮೇಲ್ (Black mail) ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆ ತಂದಿದ್ದನ್ನು ಸ್ವತಃ ನಟಿ ಒಪ್ಪಿಕೊಂಡಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಒರಿಯಾ ಸಿನಿಮಾ ರಂಗದಲ್ಲಿ ಅತ್ಯಂತ ಜನಪ್ರಿಯ ನಟಿ ಮೌಶುಮಿ ನಾಯಕ್, ದುಡ್ಡಿನ ವಿಚಾರದಲ್ಲಿ ಲೇಖಕಿ ಬನಸ್ಮಿತಾ (Banasmita) ಅವರ ಮಾನಹಾನಿ ಮಾಡಿದ್ದರಂತೆ. ಜೊತೆಗೆ ಲೇಖಕಿ ಪತಿಯ ವಿರುದ್ಧ ಚಂದಕಾ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ಕೂಡ ನೀಡಿದ್ದರಂತೆ. ಆನಂತರ ಲೇಖಕಿ ಹಾಗೂ ನಟಿ ರಾಜಿ ಮಾಡಿಕೊಂಡಿದ್ದಾರೆ. ಇದಾದ ನಂತರವೂ ನಿರಂತರವಾಗಿ ನಟಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಲೇಖಕಿ ದೂರು ನೀಡಿದ್ದರು. ಲೇಖಕಿ ನೀಡಿದ ದೂರಿನ ಆಧಾರದಲ್ಲಿ ಭುವನೇಶ್ವರದ ಇನ್ಫೋಸಿಟಿ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ. ಸೆಕ್ಸನ್ 385, 294, 506 ಹಾಗೂ 507ರ ಅಡಿಯಲ್ಲಿ ನಟಿಯ…

Read More

ಬೆಂಗಳೂರು: ಇದೇ ನವೆಂಬರ್‌ 1 ರಿಂದ ರಾಜ್ಯಾದ್ಯಂತ ಹೈ ಸೆಕ್ಯೂರಿಟಿ ರಿಜಿಸ್ಪ್ರೇಷನ್‌ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ಕಡ್ಡಾಯಮಾಡಿದ್ದು. ಅದರಂತೆ 2019ಕ್ಕೂ ಮೊದಲು ನೋಂದಣಿಯಾಗಿರುವ ಎಲ್ಲಾ ವಾಹನಗಳ ಮಾಲೀಕರು ತಮ್ಮ ವಾಹನಗಳಿಗೆ ಅತ್ಯಾಧುನಿಕ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸುವುದು ಕಡ್ಡಾಯವಾಗಿತ್ತು ಇಲ್ಲದಿದ್ದರೆ ಫೈನ್ ಹಾಕುವ ಯೋಜನೆ ಮಾಡಲಾಗಿತ್ತು ನವೆಂಬರ್‌ 1ಕ್ಕೂ ಮುನ್ನ ಎಲ್ಲ ವಾಹನಗಳಲ್ಲೂ ಈ ಪ್ಲೇಟ್‌ ಇರಬೇಕು. ಇಲ್ಲದಿದ್ದರೆ 500 ರೂ. ದಂಡ ವಿಧಿಸಲಾಗುತ್ತದೆ. ಹೊಸ ನಂಬರ್‌ ಪ್ಲೇಟ್‌ ಹಾಕಿಸುವ ಅಂತಿಮ ದಿನಾಂಕವನ್ನು ಸರ್ಕಾರ ವಿಸ್ತರಿಸುವ ಸಾಧ್ಯತೆ ಹೆಚ್ಚಾಗಿದೆ. https://ainlivenews.com/joint_pain_suprem_ray_treatment_reiki/ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಕೆ ಗಡುವು ವಿಸ್ತರಣೆ ಫಿಕ್ಸ್ ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಆಳವಡಿಕೆ ಕಡ್ಡಾಯ ಎಂದಿರೋ ಸಾರಿಗೆ ಇಲಾಖೆ 2019- ಏ.1 ಕ್ಕಿಂತ ಮುಂಚೆ ನೋಂದಾಣಿಯಾಗಿರುವ ಎಲ್ಲಾ ವಾಹನಗಳಿಗೆ ನವೆಂಬರ್ 17 ರೊಳಗೆ ಎಸ್ಎಸ್ಆರ್ಪಿ ಕಡ್ಡಾಯ ಎಂದಿದ್ದ ಸಾರಿಗೆ ಇಲಾಖೆ ಆದ್ರೆ ವಾಹನಗಳಿಗೆ ಎಚ್ಎಸ್ಆರ್ಪಿ ಆಳವಡಿಕೆ ಮಾಡಿಕೊಳ್ಳಲು ಜನ  ಹಿಂದೇಟು ಹೀಗಾಗಿ ಪುನಃ ಗಡುವು…

Read More

ತುಮಕೂರು: ಕೇಂದ್ರ ನಾಯಕರಿಗೆ ಜ್ಞಾನೋದಯ ಆಗಿ ಅಧ್ಯಕ್ಷ ಸ್ಥಾನ ತುಂಬಿದ್ದಾರೆ ಎಂದು ತುಮಕೂರಿನಲ್ಲಿ ಸಹಕಾರ ಇಲಾಖೆ ಸಚಿವ ಕೆ.ಎನ್.ರಾಜಣ್ಣ ವಾಗ್ದಾಳಿ ಮಾಡಿದ್ದಾರೆ. ವಿಜಯೇಂದ್ರರನ್ನು ನೇಮಕ ಮಾಡಿದ್ದಕ್ಕೆ ಅಸಮಾಧಾನ ಹೊರಬರ್ತಿದೆ. ಯಾವುದೇ ನಾಲ್ಕು ಉಪ ಚುನಾವಣೆಗಳನ್ನು ಗೆಲ್ಲಿಸಿದ ಮಾತ್ರಕ್ಕೆ ಸಂಘಟನಾ ಚತುರ ಅಂತಾ ಸರ್ಟಿಫಿಕೇಟ್ ಕೊಡುವುದಕ್ಕೆ ಆಗಲ್ಲ ಎಂದಿದ್ದಾರೆ. https://ainlivenews.com/do-you-know-what-happens-when-you-keep-notes-in-the-mobile-cover/

Read More