Author: AIN Author

ಆನೇಕಲ್: -ಇತ್ತೀಚೆಗೆ ಖಾಸಗಿ ಶಾಲೆಗಳ ನಡುವೆ ಸರ್ಕಾರ ಶಾಲೆಗಳು ಮರೆಯಾಗುತ್ತಿವೆ,ಅತಿ ಹೆಚ್ಚಾಗಿ ಸರ್ಕಾರಿ ಶಾಲೆಗಳಿಗೆ ಬಡ ಕೂಲಿ ಕಾರ್ಮಿಕರ ಮಕ್ಕಳೆ ಹೆಚ್ಚಾಗಿ ಹೊಗುತ್ತಾರೆ,ಅದರಲ್ಲು ಬೆಂಗಳೂರಿನಂತ ನಗರ ಪ್ರದೇಶದಲ್ಲಿ ಬಡವರ ಮಕ್ಕಳು ಸರ್ಕಾರಿ ಶಾಲೆಗಳನ್ನೆ ನೆಚ್ಚಿಕೊಳ್ಳುತ್ತಾರೆ,ಮತ್ತು ಬೆಂಗಳೂರಿಗೆ ಕೆಲಸ ಹರಸಿ ಬಂದ ಕೂಲಿ ಕಾರ್ಮಿಕರ ಮಕ್ಕಳು ಸರ್ಕಾಕಿ ಶಾಲೆಗೆ ಹೋಗಬೇಕು ಅಂತಹ ಮಕ್ಕಳಿಗೆ ಉತ್ತೇಜನ ನೀಡಲು ಶಾಲಾಮಕ್ಕಳಿಗೆ ಸಹಾಯಧನ ನೀಡುವ ಮೂಲಕ ಅರ್ಥಪೂರ್ಣವಾದ ಕನ್ನಡ ರಾಜ್ಯೊತ್ಸವವನ್ನು ಆಚರಿಸಲಾಯಿತು. ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ 11 ನೇ ವರ್ಷದ ಕನ್ನಡ ರಾಜ್ಯೊತ್ಸವವನ್ನು ಸ್ಥಳಿಯ ಶಾಸಕ ಎಂ ಸತೀಶ್ ರೆಡ್ಡಿ ಧ್ವಜಾರೊಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,ಇನ್ನು ಕಾರ್ಯಕ್ರಮದಲ್ಲಿ ಆಶ್ರಿತ್ ಗ್ರೂಪ್ ನ ಮಾಲಿಕರು ಹಾಗು ಸಮಾಜ ಸೇವಕರಾದ. ಶ್ರೀನಿವಾಸ್ ರೆಡ್ಡಿ ರವರು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 10 ಮಕ್ಕಳಿಗೆ ತಲಾ 5000 ಸಾವಿರ ಸಹಾಧನ ನೀಡುವ ಮೂಲಕ ಮಕ್ಕಳಲ್ಲಿ ಉತ್ತೇಜನ ತುಂಬಿ ತಮ್ಮ ಹೃದಯವಂತಿಕೆ ಮೆರೆದರು.ಇನ್ನು ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರು ಶ್ರೀನಿವಾಸ್ ರೆಡ್ಡಿ ರವರ ಕಾರ್ಯಕ್ಕೆ ಮೆಚ್ಚುಗೆ…

Read More

ಬೆಂಗಳೂರು:- ಮನೆ ಖರೀದಿಯಲ್ಲಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಚುನಾವಣಾ ಅಫಿಡೇವಿಟ್​​ನಲ್ಲಿ ತಪ್ಪು ಮಾಹಿತಿ ನೀಡಿ ವಂಚಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಸಿ.ಎಸ್​​.ಸಿದ್ದರಾಜು ಎನ್ನುವರು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ದೂರು ನೀಡಿದ್ದಾರೆ. ಕುಮಾರಸ್ವಾಮಿಯವರು 2004ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಕೇತಗಾನಹಳ್ಳಿ ಗ್ರಾಮದಲ್ಲಿ 24 ಎಕರೆ ಜಮೀನು ಇದೆ ಎಂದು ಹೇಳಿಕೊಂಡಿದ್ದಾರೆ. ಅವರು ಈಗ್ಗೆ ಕೆಲವು ದಿನಗಳ ಹಿಂದೆ ಮಾಧ್ಯಮದಲ್ಲಿ ಮಾತನಾಡುತ್ತಾ, ವಿವಿಧ ಸರ್ವೆ ನಂ.ಗಳಲ್ಲಿ 1,2,3,4 ಎಕರೆ ಯಂತೆ ವಿವಿಧ ಮೊತ್ತಕ್ಕೆ ಜಮೀನು ಖರೀದಿ ಮಾಡಿದ್ದೇವೆ. ತನ್ನ ತಾಯಿಯ ಸಹೋದರಿ ಶ್ರೀಮತಿ ಸಾವಿತ್ರಮ್ಮರವರಿಂದ ಪಡೆದಿರುವುದಾಗಿಯೂ ಹೇಳಿಕೊಂಡಿದ್ದಾರೆ. 2008 ಹಾಗೂ 2018ರ ಚುನಾವಣೆಯ ಅಫಿಡವಿಟ್ ನಲ್ಲಿ ಬೆಂಗಳೂರಿನ ಜೆಪಿ ನಗರದ ಮನೆಯನ್ನ ಖರೀದಿ ಮಾಡಿದ್ದಾಗಿ ಉಲ್ಲೇಖಿಸಿದ್ದಾರೆ. 2023ರ ಚುನಾವಣೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಅದೇ ಮನೆಯನ್ನ 1995ರಲ್ಲಿ ಖರೀದಿಸಿರುವ ಬಗ್ಗೆ ಮಾಹಿತಿ ಇದೆ. ಅನಿತಾ ಕುಮಾರಸ್ವಾಮಿಯವರು ಕುಪೇಂದ್ರ ರೆಡ್ಡಿಯವರಿಂದ…

Read More

ರಾಯ್ಪುರ: ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲರು ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡ ಪರಿಣಾಮ ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿ ಮತ್ತು ಒಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ. ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (PLGA) ಸಪ್ತಾಹದ ನಡುವೆ ಜಿಲ್ಲೆಯ ಬಲಸೂರ್ ಪಲ್ಲಿ ಮಾರ್ಗ್ ಪ್ರದೇಶದಲ್ಲಿ ನಕ್ಸಲರು ಹಾಕಿದ್ದ ಪೋಸ್ಟರ್‌ಗಳನ್ನು ಭದ್ರತಾ ಸಿಬ್ಬಂದಿ ತೆಗೆದುಹಾಕುತ್ತಿದ್ದಾಗ ಈ ಘಟನೆ ಸಂಭವಿಸಿದೆ.  ಕಳೆದ ವರ್ಷ ಹಲವಾರು ಕಾರಣಗಳಿಂದ ಪ್ರಾಣ ಕಳೆದುಕೊಂಡ 54 ನಕ್ಸಲರ (Naxalites) ಸ್ಮರಣಾರ್ಥ ಭಯೋತ್ಪಾದಕರು ಪಿಎಲ್‌ಜಿಎ ಸಪ್ತಾಹವನ್ನು ಆಚರಿಸುತ್ತಿದ್ದಾರೆ. ಘಟನೆಯ ನಂತರ ಗಾಯಗೊಂಡ ಸಿಬ್ಬಂದಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ. https://ainlivenews.com/dialysis-problem-not-caused-by-our-government-dinesh-gundurao/  ಇದಕ್ಕೂ ಮುನ್ನ, ಛತ್ತೀಸ್‌ಗಢದಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ರಾಜ್ಯದ ಬಿಂದ್ರನವಗಢ ಪ್ರದೇಶದಲ್ಲಿ ಮತಗಟ್ಟೆಯನ್ನು ಗುರಿಯಾಗಿಸಿಕೊಂಡು ನಕ್ಸಲರು ಸುಧಾರಿತ ಸ್ಫೋಟಕ ಸಾಧನವನ್ನು ಸ್ಫೋಟಿಸಿದ ಪರಿಣಾಮ ಒಬ್ಬ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಯೋಧ ಸಾವನ್ನಪ್ಪಿದ್ದರು.

Read More

ಬೆಳಗಾವಿ :- PM ಮೋದಿ ಇದ್ದರೆ ಮಾತ್ರ ದೇಶ ಸುಭದ್ರವಾಗಿರಲಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ಜೊತೆ ಹೋದರೆ ದೇಶ, ಧರ್ಮ ಸುಭದ್ರವಾಗಿರುತ್ತದೆ. ನಾವೆಲ್ಲಾ ಅಭಿವೃದ್ಧಿ ಪಥದಲ್ಲಿ ಸಾಗುತ್ತೇವೆ. ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಕಾಂಗ್ರೆಸ್ ಸೋತಿದೆ ಎಂದು ದೆಹಲಿ ಕೈ ನಾಯಕರೇ ಹೇಳುತ್ತಿದ್ದಾರೆ. ಇಲ್ಲಿ ಮಾತ್ರ ಸಿದ್ದರಾಮಯ್ಯನವರು ಟಿಪ್ಪು ಜಯಂತಿ ಮಾಡಿ ವಿಜೃಂಭಿಸುತ್ತಿದ್ದಾರೆ ಎಂದರು. ಮೂರು ರಾಜ್ಯದಲ್ಲಿ ಸೋತಿರುವ ಬಗ್ಗೆ ಕಾಂಗ್ರೆಸ್‌ನವರು ಮಾತನಾಡುತ್ತಿಲ್ಲ. ತೆಲಂಗಾಣದಲ್ಲಿ ಗೆದ್ದಿದ್ದೇವೆ ಎಂದು ಮಾತ್ರ ಹೇಳುತ್ತಿದ್ದಾರೆ. ತೆಲಂಗಾಣದಲ್ಲಿ ಬಿಆರ್‌ಎಸ್ ಪಾರ್ಟಿ ವಿರುದ್ಧ ಇದ್ದು ರೆಸಾರ್ಟ್​ನಲ್ಲಿ ರಾಜಕಾರಣ ಮಾಡ್ತಿದ್ದರು.‌ ಹೀಗಾಗಿ, ಕಾಂಗ್ರೆಸ್ ಅಲ್ಲಿ ಗೆದ್ದಿದೆ” ಎಂದರು. “ಈ ದೇಶಕ್ಕೆ ಮೋದಿ ಅನಿವಾರ್ಯ ಎಂದು ಜನರಿಗೆ ಗೊತ್ತಾಗಿದೆ. ಮೋದಿ ಇದ್ದರೆ ಮಾತ್ರ ದೇಶ ವಿಕಾಸ ಆಗುತ್ತದೆ.‌ ಈ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಶೋಕದಲ್ಲಿದೆ. ಇನ್ನೇನಿದ್ದರೂ ಮೋದಿ ಕಾಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು, ಮೋದಿ…

Read More

ಹೈದರಾಬಾದ್: ಕುಡಿಯುವ ನೀರಿಗಾಗಿ ಆಂಧ್ರಪ್ರದೇಶ (Andhra Pradesh) ಮತ್ತು ತೆಲಂಗಾಣ (Telangana) ರಾಜ್ಯಗಳ ನಡುವೆ ಉದ್ವಿಗ್ನತೆ ಉಂಟಾಗಿದೆ. ಆಂಧ್ರಪ್ರದೇಶವು ನಾಗಾರ್ಜುನ ಸಾಗರ ಅಣೆಕಟ್ಟಿನ ಉಸ್ತುವಾರಿ ವಹಿಸಿಕೊಂಡು ನೀರು ಬಿಡುಗಡೆ ಮಾಡಿದೆ. ಇದು ಎರಡು ರಾಜ್ಯಗಳ ಸಂಘರ್ಷಕ್ಕೆ ಕಾರಣವಾಗಿದೆ. ಬೆಳಗಿನ ಜಾವ ತೆಲಂಗಾಣದ ಬಹುತೇಕ ಅಧಿಕಾರಿಗಳು ಮತದಾನದಲ್ಲಿ ನಿರತರಾಗಿದ್ದಾಗ ಸುಮಾರು 700 ಆಂಧ್ರ ಪೊಲೀಸರು ಬಲ ಕಾಲುವೆ ತೆರೆದು ಗಂಟೆಗೆ 500 ಕ್ಯೂಸೆಕ್ ಕೃಷ್ಣಾ ನೀರನ್ನು ಬಿಡುಗಡೆ ಮಾಡಿದ್ದಾರೆ.  ನಾವು ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೃಷ್ಣಾ ನದಿಯ ನಾಗಾರ್ಜುನಸಾಗರ ಬಲ ಕಾಲುವೆಯಿಂದ ನೀರು ಬಿಡುತ್ತಿದ್ದೇವೆ ಎಂದು ಆಂಧ್ರಪ್ರದೇಶ ರಾಜ್ಯದ ನೀರಾವರಿ ಸಚಿವ ಅಂಬಟಿ ರಾಮಬಾಬು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವಿನ ಒಪ್ಪಂದದ ಪ್ರಕಾರ ರಾಜ್ಯಕ್ಕೆ ಸೇರಿದ ನೀರನ್ನು ಮಾತ್ರ ತೆಗೆದುಕೊಂಡಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ನಾವು ಯಾವುದೇ ಒಪ್ಪಂದವನ್ನು ಉಲ್ಲಂಘಿಸಿಲ್ಲ. https://ainlivenews.com/dialysis-problem-not-caused-by-our-government-dinesh-gundurao/ ಕೃಷ್ಣಾ ನೀರಿನಲ್ಲಿ 66% ಆಂಧ್ರಪ್ರದೇಶಕ್ಕೆ ಮತ್ತು 34% ಪಾಲು ತೆಲಂಗಾಣಕ್ಕೆ ಸೇರಿದೆ. ನಮಗೆ ಸೇರದ ಒಂದು…

Read More

ಬೆಳಗಾವಿ :-ಜಿಲ್ಲೆಯ ರಾಯಬಾಗ್ ತಾಲೂಕಿನ ಭಾವನ ಸೌದತ್ತಿ ಗ್ರಾಮದ ಯೋಧ ಭೀಮು ಅಶೋಕ್ ಭಾಪ್ಕರ್ 35 ವರ್ಷದ ಅವರು, ಭಾರತಿ ಸೇನೆಯಲ್ಲಿ 67 ಎಂ ಇ ಇ ರೇಜಮೆಂಟ್ನಲ್ಲಿ 15 ವರ್ಷಗಳಿಂದ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದು ಚಂಡಿಗಡದಲ್ಲಿ ಮೃತಪಟ್ಟಿದ್ದಾರೆ. ಸೇನೆಯಿಂದ ಆಯೋಜಿಸಿದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವೇಳೆ ಗಾಯಗೊಂಡಿದ್ದರು ಚಿಕಿತ್ಸೆ ಫಲಕರಿಯಾಗದೆ ಸಾವನಪ್ಪಿದ್ದಾರೆ. ತಂದೆ ತಾಯಿ ಪತ್ನಿ ಪುತ್ರ ಪುತ್ರಿ ಸಹೋದರ ಇದ್ದಾರೆ ಶನಿವಾರ ಸ್ವಗ್ರಾಮದ ಭಾವನ ಸೌದತ್ತಿ ಪ್ರಾರ್ಥಿವ ಶರೀರ ತರಲಾಗಿದೆ ವೀರ ಯೋಧನ ಅಂತಿಮ ದರ್ಶನ ಪಡೆಯಲು ಗ್ರಾಮದ ಜನರು ಹಾಗೂ ರಾಯಬಾಗ್ ಶಾಸಕ ಡಿ ಎಂ ಐಹೊಳೆ ಅವರು ಕೂಡ ಯೋಧನ ಅಂತಿಮ ದರ್ಶನ ಪಡೆದುಕೊಂಡು ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು ನಂತರ ಮೃತ ಯೋಧನ ಸ್ವಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತಕ್ರಿಯೆ ನೆರವರಿಸಿದ್ದರು.

Read More

ಅಥಣಿ : ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾ ಸ್ವಾಮೀಜಿಯವರು ಅಥಣಿ, ತಾಲ್ಲೂಕು ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ 2024 ಪೂರ್ವಭಾವಿ ಸಭೆ ಹಾಗೂ ತಾಲ್ಲೂಕು ಮಟ್ಟದ ಜನಜಾಗೃತಿ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಜಾತ್ರೆ ಜಾಗೃತಿಗಾಗಿ, ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆಯ ಮೂಲಕ ಸಮುದಾಯವನ್ನು ಸದಾ ಜಾಗೃತಗೊಳಿಸಬೇಕು ಹಾಗೂ ಮಹಷಿ೯ ವಾಲ್ಮೀಕಿಯವರ ಮಾನವೀಯ ಮೌಲ್ಯಗಳನ್ನು, ಚಿಂತನೆಗಳನ್ನು ನಾಡಿನ ಜನತೆಗೆ ತಿಳಿಸುವುದರ ಜೊತೆಗೆ ಸಮುದಾಯವನ್ನು ಜಾತ್ರೆಯ ಮೂಲಕ ಜನ ಜಾಗೃತಿಗೊಳಿಸುವ ಜಾತ್ರೆ. ಕೇಂದ್ರ ಸರ್ಕಾರದ ಗೆಜೆಟ್ ನೋಟಿಫಿಕೇಷನ್ ನಂತೆ ಕ್ರಮ ಸಂಖ್ಯೆ 38 ರಲ್ಲಿ ಬರುವ ನಾಯಕ ತಳವಾರ ನಾಯಕ ಪರಿವಾರ ಜಾತಿಗೆ ಪ.ಪಂ ಜಾತಿ ಪ್ರಮಾಣ ಪತ್ರ ನೀಡಬೇಕೆಂಬ ಸ್ಪಷ್ಟ ಉಲ್ಲೇಖವಿದ್ದರೂ, ನಾಯಕ ಜಾತಿಯಲ್ಲದ ಇತರೆ ಜಾತಿಗಳು ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಈ ಬಗ್ಗೆ ಸಮುದಾಯ ಜಾಗೃತವಾಗಬೇಕು, ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಹಂತದಲ್ಲಿ ಹೋರಾಟ ನಡೆಯುತ್ತದೆ. ನಿಮ್ಮ ನಿಮ್ಮ ಗ್ರಾಮ ಮಟ್ಟದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ…

Read More

ಬೆಳಗಾವಿ: ವಿಧಾನಮಂಡಲದ ಚಳಿಗಾಲ ಅಧಿವೇಶನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನಗರಕ್ಕೆ ಆಗಮಿಸಿದರು. ಸಾಂಬ್ರಾ ವಿಮಾನ ನಿಲ್ದಾಣದ ಹೊರಗಡೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು. ಗ್ಯಾರಂಟಿ ಗಳನ್ನು ಘೋಷಿಸಿದಕ್ಕಾಗೇ ಕಾಂಗ್ರೆಸ್ ತೆಲಂಗಾಣದಲ್ಲಿ ಗೆಲ್ಲುವುದು ಸಾಧ್ಯವಾಯಿತು ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ತಮ್ಮ ರಾಜ್ಯದಲ್ಲಿ ಗ್ಯಾರಂಟಿಗಳನ್ನು ಘೋಷಿಸಿ ಚುನಾವಣೆ ಗೆದ್ದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. https://ainlivenews.com/dialysis-problem-not-caused-by-our-government-dinesh-gundurao/ ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಿಸಿದ್ದು ಚುನಾವಣೆಯಲ್ಲಿ ಗೆಲ್ಲುವುದಕ್ಕಲ್ಲ, ಅವು ಎಲ್ಲಾ ವರ್ಗಗಳ ಬಡವರಿಗೆ ನೆರವಾಗಲು ರೂಪಿಸಿರುವ ಕಾರ್ಯಕ್ರಮಗಳು ಎಂದು ಹೇಳಿದ ಸಿದ್ದರಾಮಯ್ಯ, ಒಬ್ಬ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು 6 ತಿಂಗಳು ಸಮಯ ತೆಗೆದುಕೊಂಡ ಬಿಜೆಪಿಗೆ ತಮ್ಮ ಸರ್ಕಾರಕ್ಕೆ ಸಲಹೆ ನೀಡುವ ನೈತಿಕ ಹಕ್ಕಿಲ್ಲ ಎಂದು ಹೇಳಿದರು.

Read More

ಬೆಳಗಾವಿ:- ಡಿ.4ರಂದು ಸುವರ್ಣಸೌಧಕ್ಕೆ ರೈತರಿಂದ ಮುತ್ತಿಗೆ ಹಾಕಲಾಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೃಷಿ ತಿದ್ದುಪಡಿ ಕಾಯ್ದೆ ವಾಪಸ್‌ ಪಡೆಯುವುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಡಿ.4ರ ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ಸಾವಿರಾರು ರೈತರು ಪಾದಯಾತ್ರೆ ಮೂಲಕ ತೆರಳಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು. ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಜಾರಿಗೊಳಿಸಿ ಬಳಿಕ ಅದನ್ನು ವಾಪಸ್ ಪಡೆದಿದೆ. ಆದರೆ, ಹಿಂದಿನ ಬಿಜೆಪಿ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿತ್ತು. ಈ ವೇಳೆ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್‌ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೇ ಕೃಷಿ ತಿದ್ದುಪಡಿ ಕಾಯ್ದೆ ವಾಪಸ್‌ ಪಡೆಯುತ್ತೇವೆ ಎಂದು ಹೇಳಿದ್ದರು. ಆದರೆ, ಈಗ ಕೃಷಿ ಕಾಯ್ದೆಯನ್ನು ವಾಪಸ್‌ ಪಡೆದಿಲ್ಲ. ರೈತರ ದಿಕ್ಕು ತಪ್ಪಿಸುವ ಹುನ್ನಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ರೈತರ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬೆಂಬಲಿಸಿದ್ದರು. ಕಳೆದ ಅಧಿವೇಶನದಲ್ಲಿ ಸಚಿವ ಶಿವಾನಂದ ಪಾಟೀಲ್ ಕೃಷಿ ಕಾಯ್ದೆ…

Read More

ಬಾಳೆಹಣ್ಣಿನ ಬೋಂಡಾ ತುಂಬಾನೇ ರುಚಿಯಾಗಿರುತ್ತದೆ, ಅಲ್ಲದೆ ಸುಲಭವಾಗಿ ಮಾಡಬಹುದು. ಇನ್ನು ತುಂಬಾ ಹಣ್ಣಾದ ಬಾಳೆಹಣ್ಣಿದ್ದರೆ ಅದನ್ನು ಬಳಸಿಯೂ ಈ ಬೋಂಡಾ ಮಾಡಬಹುದು. ನಾವಿಲ್ಲಿ ಬಾಳೆಹಣ್ಣಿನ ಬೋಂಡಾದ ಸಿಂಪಲ್ ರೆಸಿಪಿ ನಿಡಿದ್ದೇವೆ ನೋಡಿ. ಬೇಕಾಗುವ ಸಾಮಗ್ರಿ 6 ಚಿಕ್ಕ ಬಾಳೆಹಣ್ಣು 1ಕಪ್‌ ಮೈದಾ 1/2 ಕಪ್‌ ಸಕ್ಕರೆ 1/4ಚಮಚ ಅಡುಗೆ ಸೋಡಾ 1/2ಚಮಚ ಏಲಕ್ಕಿ ಮಾಡುವ ವಿಧಾನ * 6 ಚಿಕ್ಕ ಬಾಳೆಹಣ್ಣಿನ ಸಿಪ್ಪೆ ಸುಲಿಯಿರಿ * ನಂತರ ಅದನ್ನು ಚಿಕ್ಕದಾಗಿ ಕತ್ತರಿಸಿ 1/2 ಕಪ್ ಸಕ್ಕರೆ ಹಾಕಿ ರುಬ್ಬಿ * ನಂತರ ಮಿಕ್ಸಿಂಗ್‌ ಬೌಲ್‌ನಲ್ಲಿ ಬಾಳೆಹಣ್ಣಿನ ಪೇಸ್ಟ್‌, 1 ಕಪ್‌ ಮೈದಾ, 1/4 ಚಮಚ ಅಡುಗೆ ಸೋಡಾ, 1/2 ಚಮಚ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ. * ಮಿಕ್ಸ್ ಮಾಡುವಾಗ ಗಂಟು ಕಟ್ಟಬಾರದು, ಚೆನ್ನಾಗಿ ಮಿಕ್ಸ್ ಮಾಡಿ. * ನಂತರ ಬಾಣಲೆಗೆ ಎಣ್ಣೆ ಹಾಕಿ ಕುದಿಸಿ * ನಂತರ ಎಣ್ಣೆ ಕಾಯುವಾಗ ಕೈಯಿಂದ ಸ್ವಲ್ಪ ಹಿಟ್ಟು ತೆಗೆದು ಎಣ್ಣೆಯಲ್ಲಿ ಹಾಕಿ,…

Read More