ರಾಯ್ಪುರ: ಛತ್ತೀಸ್ಗಢದ ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲರು ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡ ಪರಿಣಾಮ ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿ ಮತ್ತು ಒಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ. ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (PLGA) ಸಪ್ತಾಹದ ನಡುವೆ ಜಿಲ್ಲೆಯ ಬಲಸೂರ್ ಪಲ್ಲಿ ಮಾರ್ಗ್ ಪ್ರದೇಶದಲ್ಲಿ ನಕ್ಸಲರು ಹಾಕಿದ್ದ ಪೋಸ್ಟರ್ಗಳನ್ನು ಭದ್ರತಾ ಸಿಬ್ಬಂದಿ ತೆಗೆದುಹಾಕುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಕಳೆದ ವರ್ಷ ಹಲವಾರು ಕಾರಣಗಳಿಂದ ಪ್ರಾಣ ಕಳೆದುಕೊಂಡ 54 ನಕ್ಸಲರ (Naxalites) ಸ್ಮರಣಾರ್ಥ ಭಯೋತ್ಪಾದಕರು ಪಿಎಲ್ಜಿಎ ಸಪ್ತಾಹವನ್ನು ಆಚರಿಸುತ್ತಿದ್ದಾರೆ. ಘಟನೆಯ ನಂತರ ಗಾಯಗೊಂಡ ಸಿಬ್ಬಂದಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ಇದಕ್ಕೂ ಮುನ್ನ, ಛತ್ತೀಸ್ಗಢದಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ರಾಜ್ಯದ ಬಿಂದ್ರನವಗಢ ಪ್ರದೇಶದಲ್ಲಿ ಮತಗಟ್ಟೆಯನ್ನು ಗುರಿಯಾಗಿಸಿಕೊಂಡು ನಕ್ಸಲರು ಸುಧಾರಿತ ಸ್ಫೋಟಕ ಸಾಧನವನ್ನು ಸ್ಫೋಟಿಸಿದ ಪರಿಣಾಮ ಒಬ್ಬ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಯೋಧ ಸಾವನ್ನಪ್ಪಿದ್ದರು.