ಆನೇಕಲ್: -ಇತ್ತೀಚೆಗೆ ಖಾಸಗಿ ಶಾಲೆಗಳ ನಡುವೆ ಸರ್ಕಾರ ಶಾಲೆಗಳು ಮರೆಯಾಗುತ್ತಿವೆ,ಅತಿ ಹೆಚ್ಚಾಗಿ ಸರ್ಕಾರಿ ಶಾಲೆಗಳಿಗೆ ಬಡ ಕೂಲಿ ಕಾರ್ಮಿಕರ ಮಕ್ಕಳೆ ಹೆಚ್ಚಾಗಿ ಹೊಗುತ್ತಾರೆ,ಅದರಲ್ಲು ಬೆಂಗಳೂರಿನಂತ ನಗರ ಪ್ರದೇಶದಲ್ಲಿ ಬಡವರ ಮಕ್ಕಳು ಸರ್ಕಾರಿ ಶಾಲೆಗಳನ್ನೆ ನೆಚ್ಚಿಕೊಳ್ಳುತ್ತಾರೆ,ಮತ್ತು ಬೆಂಗಳೂರಿಗೆ ಕೆಲಸ ಹರಸಿ ಬಂದ ಕೂಲಿ ಕಾರ್ಮಿಕರ ಮಕ್ಕಳು ಸರ್ಕಾಕಿ ಶಾಲೆಗೆ ಹೋಗಬೇಕು ಅಂತಹ ಮಕ್ಕಳಿಗೆ ಉತ್ತೇಜನ ನೀಡಲು ಶಾಲಾಮಕ್ಕಳಿಗೆ ಸಹಾಯಧನ ನೀಡುವ ಮೂಲಕ ಅರ್ಥಪೂರ್ಣವಾದ ಕನ್ನಡ ರಾಜ್ಯೊತ್ಸವವನ್ನು ಆಚರಿಸಲಾಯಿತು.
ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ 11 ನೇ ವರ್ಷದ ಕನ್ನಡ ರಾಜ್ಯೊತ್ಸವವನ್ನು ಸ್ಥಳಿಯ ಶಾಸಕ ಎಂ ಸತೀಶ್ ರೆಡ್ಡಿ ಧ್ವಜಾರೊಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,ಇನ್ನು ಕಾರ್ಯಕ್ರಮದಲ್ಲಿ ಆಶ್ರಿತ್ ಗ್ರೂಪ್ ನ ಮಾಲಿಕರು ಹಾಗು ಸಮಾಜ ಸೇವಕರಾದ. ಶ್ರೀನಿವಾಸ್ ರೆಡ್ಡಿ ರವರು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 10 ಮಕ್ಕಳಿಗೆ ತಲಾ 5000 ಸಾವಿರ ಸಹಾಧನ ನೀಡುವ ಮೂಲಕ ಮಕ್ಕಳಲ್ಲಿ ಉತ್ತೇಜನ ತುಂಬಿ ತಮ್ಮ ಹೃದಯವಂತಿಕೆ ಮೆರೆದರು.ಇನ್ನು ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರು ಶ್ರೀನಿವಾಸ್ ರೆಡ್ಡಿ ರವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.