Author: AIN Author

ಬೆಂಗಳೂರು: ತಿರುಪತಿ ಲಡ್ಡು ಪ್ರಸಾದ ಅಂದ್ರೆ ಪ್ರತಿಯೊಬ್ಬ ಭಕ್ತರಿಗೂ ಅಚ್ಚುಮೆಚ್ಚು. ಕಷ್ಟಪಟ್ಟು ತಿರುಮಲ ಬೆಟ್ಟ ಹತ್ತೋ ಭಕ್ತರಂತೂ ಲಡ್ಡು ಪ್ರಸಾದವನ್ನು ಸ್ವೀಕರಿಸಿ ಪುನೀತರಾಗುತ್ತಾರೆ. ತಿಮ್ಮಪ್ಪನ ಲಡ್ಡು ಪ್ರಸಾದದ ಸ್ವಾದಿಷ್ಟ ರುಚಿಗೆ ನಂದಿನಿ ತುಪ್ಪವನ್ನೇ ಬಳಸಲಾಗುತ್ತಿತ್ತು. ಆದರೆ  ಇನ್ನುಮುಂದೆ ತಿರುಪತಿ ಲಡ್ಡು ಪ್ರಸಾದದಲ್ಲಿ ನಂದಿನಿ ತುಪ್ಪ ಇರಲ್ಲ. ಯಾಕಂದ್ರೆ ತಿರುಪತಿ ತಿಮ್ಮಪ್ಪ ಹಾಗೂ ನಂದಿನಿ ತುಪ್ಪದ ಸಂಬಂಧ ಟೆಂಡರ್ ಮೂಲಕ ಮತ್ತೆ  ಕಡಿತವಾಗಿದೆ. ತಿರುಪತಿ ತಿಮ್ಮಪ್ಪನ ವಿಷಯ ಬಂದ್ರೆ ಹಣ-ಭಕ್ತಿ ಜತೆಗೆ ಹೆಚ್ಚು ಪ್ರಸ್ತಾಪವಾಗೋದು ಅಲ್ಲಿ ಪ್ರಸಾದವಾಗಿ ನೀಡಲಾಗುವ ಲಾಡು. ರುಚಿಕರವಷ್ಟೇ ಅಲ್ಲ ಘಮಘಮಿಸುವ ಸುಗಂಧದಿಂದ ಎಲ್ಲರನ್ನು ಸೆಳೆಯುವ ಲಾಡುವಿನ ಶ್ರೇಯಸ್ಸಿಗೆ ಕರ್ನಾಟಕದ ನಂದಿನಿ ತುಪ್ಪದ ಕೊಡುಗೆ ಅಪಾರ ಇತ್ತು.ಆದ್ರೆ  ಕೆಲ ವರ್ಷದಿಂದಲೂ ಅದ್ಹೇಕೋ ತಿರುಪತಿ ಲಾಡುವಿನ ರುಚಿ-ಸುಗಂಧ ಬಹುತೇಕರಿಗೆ ಸಹ್ಯವಾಗುತ್ತಿಲ್ಲ ಎನ್ನೋ ಆಪಾದನೆ ಇದೆ..ಇದಕ್ಕೆ ಕಾರಣ ನಮ್ಮ ನಂದಿನಿ ತುಪ್ಪದ ಪೂರೈಕೆ ಸ್ಥಗಿತ.ದರ ಸಂಧಾನದಲ್ಲಿ ವ್ಯತ್ಯಾಸಗಳಾಗಿದ್ದರಿಂದ ಕಡಿಮೆ ದರಕ್ಕೆ ತುಪ್ಪ ಪೂರೈಸ್ಲಿಕ್ಕೆ ಆಗೊಲ್ಲ ಎಂದು ಕೆಎಂಎಫ್ ಹೇಳಿರೋದ್ರಿಂದ ನಿಮ್ಮ ತುಪ್ಪ ನಮಗೆ…

Read More

ಬೆಳಗಾವಿ: ಸಮನ್ವಯತೆ ಕೊರತೆಯಿಂದ ನಿನ್ನೆ ಸದನದಲ್ಲಿ ಗೊಂದಲ ಆಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸ್ಪಷ್ಟನೆ ನೀಡಿದ್ದಾರೆ. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಧರಣಿ, ಸಭಾತ್ಯಾಗ ವಿಚಾರದಲ್ಲಿ ಬಿಜೆಪಿ ನಾಯಕರ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ನಡೆದ ಘಟನೆ ಬಗ್ಗೆ ಮಾಧ್ಯಮದಲ್ಲಿ ಗೊಂದಲ ಎಂದು ಸುದ್ದಿಯಾಗಿದೆ. ಎಲ್ಲ ನಾಯಕರ ಅಭಿಪ್ರಾಯ ಪಡೆದು ತೀರ್ಮಾನ ಮಾಡಿದ್ದೆವು. ಬಸನಗೌಡ ಪಾಟೀಲ್ ಯತ್ನಾಳ್ ಅವರು ಬುಧವಾರದಿಂದ ಉತ್ತರ ಕರ್ನಾಟಕ ವಿಚಾರ ಚರ್ಚೆಗೆ ಬರಬೇಕಿತ್ತು. ಆದರೆ ಧರಣಿಯಿಂದ ಅದಕ್ಕೆ ಅವಕಾಶ ಸಿಗುತ್ತಿಲ್ಲ.‌ ಮತ್ತೆ ನೀವು ಧರಣಿ ಮಾಡಿದರೆ ಅವಕಾಶ ಸಿಗಲ್ಲ. ಸಭಾತ್ಯಾಗ ಮಾಡಬೇಕು ಎಂದು ಅವರೇ ನನ್ನ ಬಳಿ ಬಂದು ಚರ್ಚೆ ಮಾಡಿದ್ದರು ಎಂದು ಸ್ಪಷ್ಟಪಡಿಸಿದರು. ನಿನ್ನೆ ಯತ್ನಾಳ ಅವರು ನನ್ನ ಹತ್ತಿರ ಬಂದು, ಪ್ರತಿದಿನ ಧರಣಿ ಮಾಡಿದರೆ ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚೆ ಆಗ್ತಿಲ್ಲ. ನೀವು ಸದನದ ಬಾವಿಗೆ ಇಳಿದರೂ ಚರ್ಚೆ ಆಗಲ್ಲ. ಇಲ್ಲಿಗೆ ಬಂದು ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಆಗಬೇಕು ಎಂದಿದ್ದರು. ಉತ್ತರ…

Read More

ಬೆಂಗಳೂರು:- ಸೋಷಿಯಲ್ ಮೀಡಿಯಾದಲ್ಲಿ ಹವಾ ಇಟ್ಟ ದಾಸ ಕಿಂಗ್ ಮೇಕರ್ ಅರೆಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮೀ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಯಲಹಂಕ ಠಾಣೆಯಲ್ಲಿ ಅಟ್ರಾಸಿಟಿ ಮತ್ತು ಹಲ್ಲೆ ಕೇಸ್ ದಾಖಲಾಗಿತ್ತು. ಜಾಗದ ವಿಚಾರಕ್ಕೆ SC ಕುಟುಂಬಕ್ಕೆ ಎದುರುಗಡೆಯವರು ಕಿರುಕುಳ ಕೊಟ್ಟ ಕೇಸ್ ಆಗಿತ್ತು. ಒಬ್ಬ ಲೇಡಿ ಕೆನ್ನೆಗೆ ಹೊಡೆದು ಕಿವಿಯಲ್ಲಿ ಗಾಯ ಆಗಿತ್ತು. ಜಾಗದ ವಿಚಾರಕ್ಕೆ ಎ1 ರಾಮಮೂರ್ತಿ ಎಂಬಾತ ರೌಡಿ ಆಕ್ಟಿವಿಟಿಯಲ್ಲಿರೋ ದಾಸನ ಸಹಾಯ ಪಡೆದಿದ್ದ. SC ಕುಟುಂಬಕ್ಕೆ ಬೆದರಿಕೆ ಹಾಕಲು ದಾಸನ ಹುಡುಗರನ್ನ ಕರೆಸಿಕೊಂಡಿದ್ದ. ಸಧ್ಯ ದಾಸ ಎಂಬಾತನನ್ನು ಅರೆಸ್ಟ್ ಮಾಡಿದ್ದೇವೆ. ಆತನ ವಿರುದ್ದ ರೌಡಿಶೀಟರ್ ಹಾಕುವ ಪ್ರಕ್ರಿಯೆ ನಡಿತಿದೆ ಎಂದು ಹೇಳಿದ್ದಾರೆ.

Read More

ಬೆಂಗಳೂರು:- ಹೊಸ ವರ್ಷಕ್ಕೆ ಈ ಬಾರಿ ಯಾವುದೇ ಕಂಡೀಷನ್ ಇಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಬಾರಿ ಹೊಸ ವರ್ಷಕ್ಕೆ ಯಾವದೇ ಕಂಡೀಷನ್ ಇಲ್ಲ. ಕಳೆದ ಬಾರಿಯೂ ಯಾವದೇ ಕಂಡೀಷನ್ ಇರಲಿಲ್ಲ. ಈ ಬಾರಿಯೂ ಯಾವದೇ ನಿರ್ಬಂಧ ಇರೋದಿಲ್ಲ. 2022 ರಲ್ಲಿ ಕೋವಿಡ್ ಕಾರಣದಿಂದ ನಿರ್ಬಂಧ ಹಾಕಲಾಗಿತ್ತು. ಈ ಬಾರಿಯೂ ಎಲ್ಲಾ ನಿರ್ಬಂಧಗಳು ಸಡಿಲಿಕೆ ಮಾಡುತ್ತೇವೆ. ಸುರಕ್ಷತೆಗೆ ಬಗ್ಗೆ ಪೊಲೀಸ್ ಅಧಿಕಾರಿಗಳು ಗಮನ ಹರಿಸುತ್ತಾರೆ. ಹೊಸ ವರ್ಷ ಸಂಭ್ರಮಾಚರಣೆ ನಿರ್ಬಂಧಗಳನ್ನ ಪೊಲೀಸ್ ಕಮಿಷನರ್ ತಿಳಿಸುತ್ತಾರೆ. ಹೊಸ ವರ್ಷಕ್ಕೆ ಬಿಬಿಎಂಪಿ ಯಿಂದ ಕಂಡೀಷನ್ ಇಲ್ಲ ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದಾರೆ.

Read More

ತುಮಕೂರು:-ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸ್ ಠಾಣೆಯ ಪೇದೆ ನಾಪತ್ತೆ ಆಗಿರುವ ಘಟನೆ ಜರುಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬಿದರಕೆರೆ ಬಳಿ ಪೇದೆ ಬಟ್ಟೆ,ಮೊಬೈಲ್, ಬೈಕ್ ಪತ್ತೆಯಾಗಿದೆ. ವೀರೇಶ 24 ನಾಪತ್ತೆಯಾದ ಪೇದೆ ಎನ್ನಲಾಗಿದೆ. ಕೊಪ್ಪಳ ಮೂಲದ ಪೊಲೀಸ್ ಪೇದೆಯಾದ ಇವರು, ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಕಾಣೆಯಾಗಿದ್ದು, ಕೆರೆ ಹಾಗೂ ಬಾವಿ ಬಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಗ್ನಿ ಶಾಮಕದಳ ಜೊತೆಗೆ ಪೊಲೀಸರಿಂದ ಹುಡುಕಾಟ ಕಾರ್ಯ ನಡೆದಿದೆ. ಇವರಿಗೆ ಡಿಸೆಂಬರ್ 22 ರಂದು ಮದುವೆ ಕೂಡ ನಿಶ್ಚಯವಾಗಿತ್ತು.. ಮದುವೆಗೆಂದು ರಜೆ ಪಡೆದ ಪೊಲೀಸ್ ಪೇದೆ ಇದಕ್ಕಿದ್ದಂತೆ ನಾಪತ್ತೆ ಆಗಿದ್ದಾರೆ. ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ!

Read More

ಧಾರವಾಡ:- ಶಾಸಕ‌ ಬಸನಗೌಡಪಾಟೀಲ್ ಯತ್ನಾಳ ವಿರುದ್ಧ ಕಾಂಗ್ರೆಸ್ ಮುಖಂಡ‌ ತಮ್ಮಾಟಗಾರ ಕಿಡಿಕಾರಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಶಾಸಕ ಯತ್ನಾಳರಿಗೆ ಬಿಜೆಪಿಯ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಯತ್ನಾಳವರು ಹುಚ್ಚರಂತೆ ಮಾತಾಡುತ್ತಿದ್ದಾರೆ. ಅವರಿಗೆ ಮೆಂಟಲ್ ಆಸ್ಪತ್ರೆಯ ಚಿಕಿತ್ಸೆ ಅವಶ್ಯಕತೆ ಇದೆ. ಮುಸ್ಲಿಂ ಧರ್ಮಗುರುಗಳ ಬಗ್ಗೆ ಬೇಕಾಬಿಟ್ಟಿಯಾಗಿ ಮಾತಾಡುತ್ತಿದ್ದಾರೆ ಮುಸ್ಲಿಂ‌ ಗುರುಗಳಾದ ತನ್ವೀರ್ ಹಾಸ್ಮಿ ಪೀರಾ ಅವರ ಬಗ್ಗೆ ಸೊಸಿಯಲ್ ಮೀಡಿಯಾ, ಮಾಧ್ಯಮ ಮುಂದೆ ಸುಖಾಸುಮ್ಮನೆ‌ ಮಾಡುತ್ತಿದ್ದಾರೆ. ಅವರ ಪಕ್ಷದ ಕೇಂದ್ರ ಸಚಿವರಾದ ಗಡ್ಕರಿಗೂ ಗುರುಗಳಾದ ತನ್ವೀರ ಅವರು ಭೇಟಿಯಾಗಿದ್ದಾರೆ. ಅದರ ಪೋಟೋ ಕೂಡಾ ನಾವು ನೀಡುತ್ತೇವೆ. ಯತ್ನಾಳ ಅವರು ನೀಡಿರುವ ಪೋಟೋ ಅಲ್ ಹಾಸ್ಮಿ ಡಾಟ್ ವರ್ಜ್ ವೆಬಸೈಟ್ನಲ್ಲಿದ್ದು, ವೇಬ್ ಸೈಟಲ್ಲಿ 12 ವರ್ಷ ಹಿಂದಿನ ಪೀರಾ ಗುರುಗಳು ಹಾಕಿರುವ ಪೋಟೊ ಅವು. ದೇಶದಲ್ಲಿನ ಫೇಮಸ್ ದರ್ಗಾದ್ ಹಾಗೇ ಇರಾಕನ ಬಗ್ದಾದ್ ಒಳಗಿನ ಮೆಹಬೂಬ್ ಸುಬಾನಿ ಫೇಮಸ್ ದರ್ಗಾ ಆಗಿದೆ. ದೇಶ ವಿದೇಶಗಳಿಂದ…

Read More

ಆನೇಕಲ್:- ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಘಟಕದ ಮೇಲೆ ಆನೇಕಲ್ ತಹಶಿಲ್ದಾರ್ ಶಿವಪ್ಪ ಲಮಾಣಿ ನೇತೃತ್ವದಲ್ಲಿ ದಾಳಿ ನಡೆದಿದೆ. ಕಂದಾಯ, ಆಹಾರ ಇಲಾಖೆ, ಪೊಲೀಸರ ಸಹಯೋಗದಲ್ಲಿ ಜಿಗಣಿ ಸಮೀಪದ ಮಾದಪಟ್ಟಣ ಗ್ರಾಮದಲ್ಲಿ ರುವ ಘಟಕದ ಮೇಲೆ ದಾಳಿ ನಡೆದಿದೆ. ದಾಳಿ ವೇಳೆ ಐದು ಕೆಜಿ, ಒಂಬತ್ತು ಕೆಜಿ, ಹನ್ನೆರಡು ಕೆಜಿ ಮತ್ತು ಹತ್ತೊಂಬತ್ತು ಕೆಜಿ ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ. ಸುಮಾರು ಐವತ್ತಕ್ಕೂ ಅಧಿಕ ವಿವಿಧ ಮಾದರಿಯ ಗ್ಯಾಸ್ ಸಿಲಿಂಡರ್ ಜಫ್ತಿ ಮಾಡಲಾಗಿದ್ದು, ಸೇಟಿರಾವ್ ಎಂಬುವವರಿಗೆ ಸೇರಿದ ಗೋದಾಮು ಇದು ಎನ್ನಲಾಗಿದೆ. ಅಕ್ರಮವಾಗಿ ಪೈಪ್ ಮೂಲಕ ಗ್ಯಾಸ್ ರೀಫಿಲ್ಲಿಂಗ್ ಮಾಡಲಾಗುತ್ತಿತ್ತು. ರೀಫಿಲ್ಲಿಂಗ್ ನಡೆಸುತ್ತಿದ್ದ ಆರೋಪಿ ದಿನೇಶ್ ವಶಕ್ಕೆ ಪಡೆಯಲಾಗಿದೆ.

Read More

ಪೀಣ್ಯ ದಾಸರಹಳ್ಳಿ‌:- ಬೆಂಗಳೂರು ಹೊರಹೊಲಯದ ದಾಸರಹಳ್ಳಿ‌ ಸಮಿಪದ ಸೋಲದೇವನಹಳ್ಳಿ ಬೆಸ್ಕಾಂ N9 ವತಿಯಿಂದ ಸುರಕ್ಷತಾ ಕಾರ್ಯಗಾರ ಜಾಥವನ್ನು ಅಯೋಜಿಸಲಾಗಿತ್ತು ಬೆಸ್ಕಾಂ ಸೋಲದೇವನಹಳ್ಳಿ N9 ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ವಿದ್ಯುತ್ ಸುರಕ್ಷತಾ ಕಾರ್ಯಾಗಾರ ಜಾಥ ಕಾರ್ಯಕ್ರಮಕ್ಕೆ ಜೀತೆಂದ್ರ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಾಥ ಕಾರ್ಯಕ್ರಮವನ್ನು ಬಾಗಲಗುಂಟೆ ಸೋಲದೇವನಹಳ್ಳಿ ಚಿಕ್ಕಬಾಣಾವಾರ ಅಚಾರ್ಯ ಕಾಲೇಜ್ ರಸ್ತೆ ಇನ್ನೂ ಮುಂತಾದ ಕಡೆ ಜಾಥ ಮಾಡಿದ್ದರು. “ನಿಮ್ಮ ಸುರಕ್ಷತೆ, ನಿಮ್ಮ ಜೀವ, ನಿಮ್ಮ ಕೈಯಲ್ಲಿದೆ. ಇದನ್ನು ಅರಿತು ಬೆಸ್ಕಾಂ ನೌಕರರು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು” ಸುರಕ್ಷತೆಯ ನಮ್ಮ ಆದ್ಯತೆ ಸುರಕ್ಷತೆಯ ನಮ್ಮ ದ್ಯೆಯ ದೋರಣೆ ಸುರಕ್ಷಿತವಾಗಿ ಸಾರ್ವಜನಿಕರು ಮತ್ತು ನಮ್ಮ ಎಲ್ಲ ಸಿಬ್ಬಂದಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ವಜನಿಕರನ್ನು ಸುರಕ್ಷಿತವಾಗಿ ಇಡಲು ಸುರಕ್ಷತಾ ಕಾರ್ಯಗಾರವನ್ನ ಹಮ್ಮಿಕೊಂಡಿದ್ದೇವೆ, ಉನ್ನತ ಅಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರನ್ನು ಒಗ್ಗೂಡಿಸಿ ಸಾರ್ವಜನಿಕರಿಗೆ ಕೆಲವು ವಿಷಯಗಳನ್ನ ತಲುಪಿಸಲು ಅವರಿಗೆ ಅರಿವು ಮೂಡಿಸುವ ಮತ್ತು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವ ಕೆಲವೊಂದು ವಿಚಾರಗಳನ್ನ…

Read More

ಕಲಬುರ್ಗಿ:- ಕಲಬುರಗಿಯನ್ನೇ ಬೆಚ್ಚಿ ಬೀಳಿಸಿದ್ದ ವಕೀಲ ಈರಣ್ಣ ಗೌಡ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಮೂವರು ಆರೋಪಿಗಳನ್ನ ಪೋಲೀಸರು ಬಂಧಿಸಿದ್ದಾರೆ. ಮಲ್ಲಿನಾಥ್ ಭಾಗಣ್ಣ ಮತ್ತು ಅವ್ವಣ್ಣಪ್ಪ ಬಂಧಿತರು. ಮೂವರು ಆರೋಪಿಗಳಲ್ಲದೇ ತಲೆಮರೆಸಿಕೊಂಡಿರುವ ಇನ್ನೊರ್ವ ಪ್ರಮುಖ ಆರೋಪಿಗಾಗಿ ತಲಾಷ್ ಮುಂದುವರೆದಿದೆ. ನಿನ್ನೆ ಹಾಡುಹಗಲೇ ಸಾಲಿನಿಂದ ಅಪಾರ್ಟ್‌ಮೆಂಟ್ ಬಳಿ ಈರಣ್ಣನ ಕೊಲೆಯಾಗಿತ್ತು. ಆರೋಪಿಗಳು ಮಾರಕಾಸ್ತ್ರ ಹಿಡಿದು ಬೆನ್ನಟ್ಟುವ ದೃಶ್ಯ CCTV ಯಲ್ಲಿ ರೆಕಾರ್ಡ್ ಆಗಿತ್ತು.ಪ್ರಕರಣ ದಾಖಲಿಸಿಕೊಂಡ ವಿವಿ ಠಾಣೆ ಪೋಲೀಸರು 24 ಗಂಟೆಯಲ್ಲಿ ಪಾತಕಿಗಳ ಹೆಡೆಮುರಿ ಕಟ್ಟಿದ್ದಾರೆ..

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸುಗ್ಗಿ ಸಂಕ್ರಾಂತಿ ವೇಳೆಗೆ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ ಭಾಗ್ಯ ಸಿಗಲಿದೆ. ಆರಂಭದಿಂದಲೂ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ, ಚಪ್ಪಾತಿ ನೀಡುವುದಕ್ಕೆ ಬೇಡಿಕೆ ಕೇಳಿ ಬರುತ್ತಿತ್ತು. ಇದೀಗ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಮಾಡುವವರಿಗೆ ಮುದ್ದೆ ಭಾಗ್ಯ ನೀಡುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಲಾಗುತ್ತಿದೆ. ಸಂಕ್ರಾಂತಿ ವೇಳೆಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಮುದ್ದೆ ದೊರೆಯುವ ಸಾಧ್ಯತೆ ಇದೆ. ಈವರೆಗೆ ಮಧ್ಯಾಹ್ನ ಮತ್ತು ರಾತ್ರಿ ಕೇವಲ ರೈಸ್‌ ಬಾತ್‌ ಅಥವಾ ಅನ್ನ, ಸಾಂಬರ್‌, ಮೊಸರನ್ನ ಮಾತ್ರ ವಿತರಣೆ ಮಾಡಲಾಗುತ್ತಿತ್ತು. ಹಿರಿಯ ನಾಗರಿಕರು, ಸಕ್ಕರೆ ಕಾಯಿಲೆ ಇರುವವರು ಸೇರಿದಂತೆ ಮೊದಲಾದವರು ಕೇವಲ ರೈಸ್‌ ಪದಾರ್ಥದ ಊಟ ಬೇಡ, ಮುದ್ದೆ, ಚಪ್ಪಾತಿ ನೀಡುವಂತೆ ಕೇಳುತ್ತಿದ್ದರು. ಈ ವಿಚಾರ ಸರ್ಕಾರ ಮತ್ತು ಬಿಬಿಎಂಪಿ ಗಮನಕ್ಕೆ ಬಂದಿತ್ತು. ಹಾಗಾಗಿ, ಹೊಸ ವರ್ಷದಿಂದ ಇಂದಿರಾ ಕ್ಯಾಂಟೀನ್‌ ನಲ್ಲಿ ಕಡ್ಡಾಯವಾಗಿ ಮುದ್ದೆ ಪೂರೈಕೆಗೆ ತೀರ್ಮಾನಿಸಲಾಗಿದೆ. ಇಂದಿರಾ ಕ್ಯಾಂಟೀನ್‌ ಗ್ರಾಹಕರ ಸಂಖ್ಯೆಯಲ್ಲಿ ಗೋಲ್‌ ಮಾಲ್‌…

Read More