ಬೆಂಗಳೂರು:– ಸೋಷಿಯಲ್ ಮೀಡಿಯಾದಲ್ಲಿ ಹವಾ ಇಟ್ಟ ದಾಸ ಕಿಂಗ್ ಮೇಕರ್ ಅರೆಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮೀ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಯಲಹಂಕ ಠಾಣೆಯಲ್ಲಿ ಅಟ್ರಾಸಿಟಿ ಮತ್ತು ಹಲ್ಲೆ ಕೇಸ್ ದಾಖಲಾಗಿತ್ತು. ಜಾಗದ ವಿಚಾರಕ್ಕೆ SC ಕುಟುಂಬಕ್ಕೆ ಎದುರುಗಡೆಯವರು ಕಿರುಕುಳ ಕೊಟ್ಟ ಕೇಸ್ ಆಗಿತ್ತು. ಒಬ್ಬ ಲೇಡಿ ಕೆನ್ನೆಗೆ ಹೊಡೆದು ಕಿವಿಯಲ್ಲಿ ಗಾಯ ಆಗಿತ್ತು. ಜಾಗದ ವಿಚಾರಕ್ಕೆ ಎ1 ರಾಮಮೂರ್ತಿ ಎಂಬಾತ ರೌಡಿ ಆಕ್ಟಿವಿಟಿಯಲ್ಲಿರೋ ದಾಸನ ಸಹಾಯ ಪಡೆದಿದ್ದ. SC ಕುಟುಂಬಕ್ಕೆ ಬೆದರಿಕೆ ಹಾಕಲು ದಾಸನ ಹುಡುಗರನ್ನ ಕರೆಸಿಕೊಂಡಿದ್ದ. ಸಧ್ಯ ದಾಸ ಎಂಬಾತನನ್ನು ಅರೆಸ್ಟ್ ಮಾಡಿದ್ದೇವೆ. ಆತನ ವಿರುದ್ದ ರೌಡಿಶೀಟರ್ ಹಾಕುವ ಪ್ರಕ್ರಿಯೆ ನಡಿತಿದೆ ಎಂದು ಹೇಳಿದ್ದಾರೆ.