ಆನೇಕಲ್:– ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಘಟಕದ ಮೇಲೆ ಆನೇಕಲ್ ತಹಶಿಲ್ದಾರ್ ಶಿವಪ್ಪ ಲಮಾಣಿ ನೇತೃತ್ವದಲ್ಲಿ ದಾಳಿ ನಡೆದಿದೆ.
ಕಂದಾಯ, ಆಹಾರ ಇಲಾಖೆ, ಪೊಲೀಸರ ಸಹಯೋಗದಲ್ಲಿ ಜಿಗಣಿ ಸಮೀಪದ ಮಾದಪಟ್ಟಣ ಗ್ರಾಮದಲ್ಲಿ ರುವ ಘಟಕದ ಮೇಲೆ ದಾಳಿ ನಡೆದಿದೆ. ದಾಳಿ ವೇಳೆ ಐದು ಕೆಜಿ, ಒಂಬತ್ತು ಕೆಜಿ, ಹನ್ನೆರಡು ಕೆಜಿ ಮತ್ತು ಹತ್ತೊಂಬತ್ತು ಕೆಜಿ ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ.
ಸುಮಾರು ಐವತ್ತಕ್ಕೂ ಅಧಿಕ ವಿವಿಧ ಮಾದರಿಯ ಗ್ಯಾಸ್ ಸಿಲಿಂಡರ್ ಜಫ್ತಿ ಮಾಡಲಾಗಿದ್ದು, ಸೇಟಿರಾವ್ ಎಂಬುವವರಿಗೆ ಸೇರಿದ ಗೋದಾಮು ಇದು ಎನ್ನಲಾಗಿದೆ. ಅಕ್ರಮವಾಗಿ ಪೈಪ್ ಮೂಲಕ ಗ್ಯಾಸ್ ರೀಫಿಲ್ಲಿಂಗ್ ಮಾಡಲಾಗುತ್ತಿತ್ತು. ರೀಫಿಲ್ಲಿಂಗ್ ನಡೆಸುತ್ತಿದ್ದ ಆರೋಪಿ ದಿನೇಶ್ ವಶಕ್ಕೆ ಪಡೆಯಲಾಗಿದೆ.