ಕಲಬುರ್ಗಿ:- ಕಲಬುರಗಿಯನ್ನೇ ಬೆಚ್ಚಿ ಬೀಳಿಸಿದ್ದ ವಕೀಲ ಈರಣ್ಣ ಗೌಡ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಮೂವರು ಆರೋಪಿಗಳನ್ನ ಪೋಲೀಸರು ಬಂಧಿಸಿದ್ದಾರೆ.
ಮಲ್ಲಿನಾಥ್ ಭಾಗಣ್ಣ ಮತ್ತು ಅವ್ವಣ್ಣಪ್ಪ ಬಂಧಿತರು. ಮೂವರು ಆರೋಪಿಗಳಲ್ಲದೇ ತಲೆಮರೆಸಿಕೊಂಡಿರುವ ಇನ್ನೊರ್ವ ಪ್ರಮುಖ ಆರೋಪಿಗಾಗಿ ತಲಾಷ್ ಮುಂದುವರೆದಿದೆ.
ನಿನ್ನೆ ಹಾಡುಹಗಲೇ ಸಾಲಿನಿಂದ ಅಪಾರ್ಟ್ಮೆಂಟ್ ಬಳಿ ಈರಣ್ಣನ ಕೊಲೆಯಾಗಿತ್ತು. ಆರೋಪಿಗಳು ಮಾರಕಾಸ್ತ್ರ ಹಿಡಿದು ಬೆನ್ನಟ್ಟುವ ದೃಶ್ಯ CCTV ಯಲ್ಲಿ ರೆಕಾರ್ಡ್ ಆಗಿತ್ತು.ಪ್ರಕರಣ ದಾಖಲಿಸಿಕೊಂಡ ವಿವಿ ಠಾಣೆ ಪೋಲೀಸರು 24 ಗಂಟೆಯಲ್ಲಿ ಪಾತಕಿಗಳ ಹೆಡೆಮುರಿ ಕಟ್ಟಿದ್ದಾರೆ..