Author: AIN Author

ಮಂಡ್ಯ: ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ದಿಢೀರ್ ಭೇಟಿ ನೀಡಿದ್ದಾರೆ. ಮೈಸೂರಿಗೆ ತೆರಳುತ್ತಿದ್ದ ವೇಳೆ ಮಂಡ್ಯದ ಮದ್ದೂರು ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ್ದಾರೆ. ಕಂದಾಯ ಸಚಿವರ ದಿಢೀರ್​ ಭೇಟಿ ಕಂಡು ಅಧಿಕಾರಿಗಳು ಕಕ್ಕಾಬಿಕ್ಕಿ ಆಗಿದ್ದಾರೆ. ಇದೇ ವೇಳೆ ಸಾರ್ವಜನಿಕರು ಸಾಲು ಸಾಲು ಸಮಸ್ಯೆ ಹೇಳಿಕೊಂಡಿದ್ದಾರೆ. ರೈತರೊಬ್ಬರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ದೂರು ನೀಡಲಾಗಿದೆ. ಇನ್ನು ಸಚಿವ ಕೃಷ್ಣಭೈರೇಗೌಡ ಜನರ ಎದುರೇ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ. ಸರ್ಕಾರಿ ಜಾಗ ಸರ್ವೇ ಮಾಡಿಕೊಡಲು ಎಷ್ಟು ದಿನ ಬೇಕು? ನೆಪ ಹೇಳಿಕೊಂಡು ಕಾಲ ಕಳೆಯಲು ಬಂದಿದ್ದೀರಾ ಇಲ್ಲಿ. ಒಂದೊಂದು ಕೆಲಸ ಮಾಡಿಸಲು ನಾನೇ ಬರಬೇಕು? ಎಂದು ಅಧಿಕಾರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

Read More

ಕಲಬುರಗಿ: ಮಹಾರಾಷ್ಟ್ರದ ಸೊಲ್ಲಾಪುರದಲ್ಲಿನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಡಿದ್ದು ಜನವರಿ 19 ರಂದು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಳಿಗ್ಗೆ 9.35 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಬೆಳಿಗ್ಗೆ 9.40 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಮಹಾರಾಷ್ಟ್ರದ ಸೋಲಾಪುರಕ್ಕೆ, ತೆರಳಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮರಳಿ ಮಧ್ಯಾಹ್ನ 1 ಗಂಟೆಗೆ ವಾಪಾಸ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.. ಹೀಗಾಗಿ SPG ತಂಡ ಕಲಬುರಗಿಗೆ ಆಗಮಿಸಿದ್ದು ಬಂದೋಬಸ್ತ್ ಕುರಿತಂತೆ ಜಿಲ್ಲಾಡಳಿತದ ಜೊತೆ ಇವತ್ತು ಚರ್ಚೆ ನಡೆಸಿದ್ರು..

Read More

ಕೋಲ್ಕತ್ತಾ: ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಅನ್ನೋದು ನಾಯಕರ ಕೆಲಸವಲ್ಲ. ಧಾರ್ಮಿಕ ಮುಖಂಡರ ಕೆಲಸ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಟಿಎಂಸಿ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamta Banerjee) ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಣಪ್ರತಿಷ್ಠೆ ಮಾಡುವುದು ನಮ್ಮ ಕೆಲಸವಲ್ಲ, ಧಾರ್ಮಿಕ ಮುಖಂಡರ ಕೆಲಸ. ಮೂಲ ಸೌಕರ್ಯ ಕಲ್ಪಿಸುವುದ ಅಷ್ಟೇ ನಮ್ಮ ಕೆಲಸ ಎಂದು ಕಿಡಿಕಾರಿದರು ಅಯೋಧ್ಯೆಯಲ್ಲಿ (Ayodhya) ರಾಮಲಲ್ಲಾ ಪ್ರಾಣಪ್ರತಿಷ್ಠೆ (Pran Prathistha Ceremony) ಸಿದ್ಧತೆಗಳ ನಡುವೆ ಮಮತಾ ಬ್ಯಾನರ್ಜಿ ಅವರು ದೊಡ್ಡ ಘೋಷಣೆ ಮಾಡಿದ್ದಾರೆ. ಜನವರಿ 22 ರಂದು ತಮ್ಮ ಪಕ್ಷದ ಟಿಎಂಸಿ ಸರ್ವ ಧರ್ಮ ರ್ಯಾಲಿ ಅಂದರೆ ಸದ್ಭಾವನಾ ರ್ಯಾಲಿಯನ್ನು ನಡೆಸಲಿದೆ. ಈ ರ್ಯಾಲಿ ಎಲ್ಲ ಧರ್ಮದವರಿಗಾಗಿ ಇರುತ್ತದೆ. ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳು ಮತ್ತು ಗುರುದ್ವಾರಗಳಿಗೆ ಹೋಗುವ ಜನರಂತೆ ರ್ಯಾಲಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನಕ್ಕೂ ಭೇಟಿ ನೀಡುವುದಾಗಿ ಮಮತಾ ಹೇಳಿದ್ದಾರೆ. https://ainlivenews.com/there-is-a-job-vacancy-in-nimhans-salary-%e2%82%b9-90000-per-month-last-date-today/ ಮೊದಲು ಕಾಳಿಘಾಟ್ ದೇವಸ್ಥಾನದಲ್ಲಿ…

Read More

ಬೆಂಗಳೂರು : ರಾಮಲಲ್ಲಾನ ಮೂರ್ತಿಯನ್ನು ಟೆಂಟ್ ಗೊಂಬೆಗೆ ಹೋಲಿಸಿ ರಾಮಮಂದಿರ ಕುರಿತು ಲಘುವಾಗಿ ಹೇಳಿಕೆ ನೀಡಿದ್ದ ಸಹಕಾರಿ ಸಚಿವ ಕೆ.ಎನ್. ರಾಜಣ್ಣರಿಗೆ ವಿಪಕ್ಷ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, ರಾಮದ್ವೇಷಿ, ಹಿಂದೂ ವಿರೋಧಿ ಕಾಂಗ್ರೆಸ್​ ನಾಯಕರು ರಾಮಮಂದಿರದ ಬಗ್ಗೆ ತಮ್ಮ ಅಸಮಾಧಾನ, ಹೊಟ್ಟೆ ಉರಿಯನ್ನು ಪದೇ ಪದೆ ಹೊರಹಾಕುತ್ತಲೇ ಇದ್ದಾರೆ ಎಂದು ಕಿಡಿಕಾರಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ, ಮೂರು ಡಿಸಿಎಂ ಪ್ರತಿಪಾದಕ, ‘ಸಿದ್ದ’ರಾಮ ಭಕ್ತ, ಸಚಿವ ಕೆ.ಎನ್. ರಾಜಣ್ಣ ಅವರ ಬಾಯಿ ಮುಚ್ಚಿಸಲು ತಾವೇ ಸರಿ. ತಮ್ಮ ಪಕ್ಷದ ರಾಮದ್ವೇಷಿ ನಾಯಕರಿಗೆ ಸ್ವಲ್ಪ ಬುದ್ಧಿ ಹೇಳಿ, ಅವರ ಆಚಾರವಿಲ್ಲದ ನಾಲಿಗೆಗೆ ಸ್ವಲ್ಪ ನಿಯಂತ್ರಣ ಹಾಕಿ, ಇಲ್ಲವೇ ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಆರ್​. ಅಶೋಕ್ ಚಾಟಿ ಬೀಸಿದ್ದಾರೆ.

Read More

ಬೆಂಗಳೂರು: ಅದೊಂದು ಖತರ್ನಾಕ್ ಗ್ಯಾಂಗ್.ಮಾಡಿಕೊಂಡಿದ್ದ ಸಾಲ ತೀರಿಸಲು ಅಡ್ಡ ದಾರಿ ಹಿಡಿದಿದ್ರು.ಹಗಲು ಹೊತ್ತಲೆ ರಾಬರಿಗೆ ಇಳಿದಿದ್ರು.ಒಂಟಿ ಮಹಿಳೆ ಕೈ ಕಾಲು ಕಟ್ಟಿ ಅಟ್ಟಹಾಸ ಮೆರೆದಿದ್ರು.ಅದೇ ಖತರ್ನಾಕ್ ರಾಬರಿ ಗ್ಯಾಂಗ್ ಕೈಗೆ ಪೊಲೀಸರು ಕೋಳ ತೊಡಿಸಿದ್ದಾರೆ.. ಈ ಫೋಟೋ ರಲ್ಲಿ ಕಾಣ್ತಿರೊ ಆಸಾಮಿಗಳ ಹೆಸರು ಗುರು,ರುದ್ರೇಶ್,ಸಂದೀಪ್,ಪ್ರಭಾವತಿ ಮತ್ತು ರೇಣುಕ.ಮೈ ಬಗ್ಗಿಸಿ ದುಡಿದು ತಿಂದಿದ್ದಿದ್ರೆ ಇವತ್ತು ಪೊಲೀಸ್ ಠಾಣೆಯಲ್ಲಿ ಕೈಕಟ್ಟಿ ನಿಲ್ಲೊ ಪರಿಸ್ಥಿತಿ ಬರ್ತಾ ಇರ್ಲಿಲ್ಲ.ಆದ್ರೆ ಅಡ್ಡದಾರಿ ಹಿಡಿದು ಹೋದವರು ಒಂದೇ ದಿನಕ್ಕೆ ಪೊಲೀಸರ ಅತಿಥಿಗಳಾಗಿದ್ದಾರೆ.. ಹೌದು ಅದು ಜನವರಿ 14 ರ ಬೆಳಗ್ಗೆ 9.30 ರ ಸಮಯ..ಸ್ಥಳ ತಿಂಡ್ಲು ಸರ್ಕಲ್ ನಲ್ಲಿರುವ ಗಂಗಾ ಆಯುರ್ವೇದಿಕ್ ಮಸಾಜ್ ಸೆಂಟರ್.ಆಗಷ್ಟೇ ಕೆಲಸಕ್ಕೆ ಬಂದಿದ್ದ ಅನುಶ್ರೀ ಒಂದು ಗ್ರಾಹಕರ ಮಸಾಜ್ ಮುಗಿಸಿ ಕೂತಿದ್ರು ಈ ವೇಳೆ ಎಂಟ್ರಿಕೊಟ್ಟವಳೇ ಪ್ರಭಾವತಿ..ನನಗೂ ಮಸಾಜ್ ಮಾಡ್ಬೇಕು ಹಣವನ್ನ ನನ್ನ ಗಂಡ ಕೊಡ್ತಾನೆ ಅಂತಾ ಗುರು ಎಂಬಾತನನ್ನ ಒಳಗೆ ಕರೆಸಿಕೊಂಡಿದ್ಳು..ಏಕಾಏಕಿ ಬಂದ ಗುರು ಕರ್ಚೀಫ್ ನಲ್ಲಿ ಕೆಮಿಕಲ್ ಹಾಕಿ ಬಾಯಿ ಮತ್ತು…

Read More

ಬೆಂಗಳೂರು: ಅದು ಮಧ್ಯರಾತ್ರಿಯ ಸಮಯ.ಕೈಯಲ್ಲಿ ರಾಡ್ ಹಿಡಿದಿದ್ದ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ರು.ಕಂಡ ಕಂಡ ವಾಹನಗಳ ಮೇಲೆ ಬೀಸಿ ಕ್ರೌರ್ಯ ಮೆರೆದಿದ್ರು.ಎರಡು ಕೆಎಸ್ ಆರ್ ಟಿಸಿ ಬಸ್ ಗಳ ಗಾಜು ಪುಡಿ ಪುಡಿ ಮಾಡಿದ್ರು.‌ಮದ್ಯದ ಅಮಲಲ್ಲಿ ಕಿರಿಕ್ ಮಾಡಿಕೊಂಡವರು ಪೊಲೀಸರ ಅತಿಥಿ ಆಗಿದ್ದಾರೆ ಕೈಯಲ್ಲಿ ರಾಡ್ ಹಿಡಿದು ಓಡಾಡ್ತಿರೊ ಕ್ರಿಮಿಗಳು..ಪುಡಿ ಪುಡಿಯಾಗಿ ಬಿದ್ದಿರೊ‌ ಕೆಎಸ್ ಆರ್ ಟಿ ಸಿ ಬಸ್ ನ ಕಿಟಕಿ ಗಾಜುಗಳು..ದಿಕ್ಕೇ ತೋಚದಂತೆ ನಿಂತಿರೊ ಚಾಲಕ ಮತ್ತು ನಿರ್ವಾಹಕ..ಮದ್ಯ ರಾತ್ರಿ ನಡೆದ ಈ ಘಟನೆ ಬಸ್ ನಲ್ಲಿದ್ದ ಪ್ರಯಾಣಿಕರೇ ಬೆಚ್ಚಿಬೀಳುವಂತೆ ಮಾಡಿತ್ತು…ಸುಖಾ ಸುಮ್ಮನೆ ಬಂದ ಕಿಡಿಗೇಡಿಗಳು ರಾಡ್ ಬೀಸಿ ಎಸ್ಕೇಪ್ ಆಗಿದ್ರು ಹೌದು..ಅದು ಮಧ್ಯರಾತ್ರಿ 1.40 ರ ಸಮಯ.ಮೈಸೂರು ಡಿಪೋ ನ ಎರಡು ಕೆಎಸ್ ಆರ್ ಟಿಸಿ ಬಸ್ ಬೆಂಗಳೂರು ತಲುಪಿತ್ತು..ಎರಡು ಬಸ್ ನಲ್ಲಿ ಸುಮಾರು 25 ರಿಂದ 30 ಜನ ಪ್ರಯಾಣಿಕರು ಇದ್ರು..ಬಸ್ ಶಾಂತಲ ಸಿಗ್ನಲ್ ಬಳಿ ಬರ್ತಿದ್ದಂತೆ ಎರಡು ಆಟೋ ಹಾಗೂ ಒಂದು ಬೈಕ್ ನಲ್ಲಿ ಬಂದ…

Read More

ಬೆಂಗಳೂರು: ಕಾನೂನು ರದ್ದತಿಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ ಹಾಗಾಗಿ ಇಂದು ಮಧ್ಯರಾತ್ರಿಯಿಂದಲೇ ಲಾರಿ ಸಂಘಟನೆಗಳು ಮುಷ್ಕರ ಕೈಗೊಳ್ಳಲಿದ್ದಾರೆ. ಮುಷ್ಕರ ಹಿನ್ನೆಲೆ 2 ಲಕ್ಷ ಲಾರಿಗಳ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಹಾಗೆ ಕಾನೂನು ರದ್ದತಿಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘಗಳು ಮುಷ್ಕರಕ್ಕೆ ಕರೆಕೊಟ್ಟಿವೆ.ಕರ್ನಾಟಕ ಲಾರಿ ಮಾಲೀಕರ ಸಂಘದಿಂದಲೂ ಮಷ್ಕರಕ್ಕೆ ಬೆಂಬಲ ಸಿಕ್ಕಿದೆ. ಇತ್ತ ಫೆಡರೇಶನ್ ಆಫ್ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟ್ ಸಂಘ ಮುಷ್ಕರಕ್ಕೆ ಬೆಂಬಲ ನೀಡಿಲ್ಲ. ಇನ್ನು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಹಿಟ್ ಅಯಂಡ್ ರನ್ ಪ್ರಕರಣಗಳಿಗೆ ಕಠಿಣ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಮುಷ್ಕರಕ್ಕೆ ಕರೆ ನೀಡಲಾಗಿದೆ. ಹೊಸ ಕಾನೂನು ಪ್ರಕಾರ, ರಸ್ತೆಯಲ್ಲಿ ಚಲಿಸುವಾಗ ಲಾರಿಗಳಿಗೆ ಯಾರಾದರೂ ಬಂದು ಅಕಸ್ಮಾತಾಗಿ ಡಿಕ್ಕಿ ಹೊಡೆದರೆ, ಹಾಗೂ ನಮ್ಮ ಚಾಲಕರು ವಾಹನದಲ್ಲಿ ಏನಾದರೂ ತೊಂದರೆ ಉಂಟಾಗಿ ಎದುರಿನ ವಾಹನಕ್ಕೆ ಡಿಕ್ಕಿ ಹೊಡೆದು ಅದರಲ್ಲಿದ್ದ ಪ್ರಯಾಣಿಕರು ಮೃತಪಟ್ಟರೆ ಲಾರಿ ಚಾಲಕರಿಗೆ…

Read More

ಬೆಂಗಳೂರು: ಇಂದು ದಿಢೀರ್‌  ಡಿಸಿಎಂ ಡಿ.ಕೆ,.ಶಿವಕುಮಾರ್ ನಿವಾಸಕ್ಕೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಭೇಟಿ ನೀಡಿದ್ದಾರೆ.‌ ಕುಮಾರಕೃಪಾ ಅತಿಥಿ ಗೃಹದಲ್ಲಿ  ಭೇಟಿ ಮಾಡಿ ಉಭಯ ನಾಯಕರು ಸಮಾಲೋಚನೆ ನಡೆಸಿದರು.

Read More

ದಾವಣಗೆರೆ: ಭತ್ತದ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ಗೆ ಓಮಿನಿ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ ತಾಲೂಕಿನ ಗುಳ್ಳೇನಹಳ್ಳಿ ಬಳಿಯ ಬೀರೂರು-ಸಮ್ಮಸ್ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ರುದ್ರೇಶಪ್ಪ (64), ಮಲ್ಲಿಕಾರ್ಜುನ್ (62) ಹಾಗೂ ಗಂಗಮ್ಮ (80 ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಹಾಗೂ ಗಾಯಾಳುಗಳು ಚನ್ನಗಿರಿ ತಾಲೂಕಿನ‌ ನಾರಶೆಟ್ಟಿಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ಸಂತೆಬೆನ್ನೂರು ಕಡೆಯಿಂದ ಚನ್ನಗಿರಿಗೆ ಒಮಿನಿಯಲ್ಲಿ ಒಂದೇ ಕುಟುಂಬಸ್ಥರು ಹೋಗುವಾಗ ಎದುರಿಗೆ ಭತ್ತದ ಹುಲ್ಲು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. https://ainlivenews.com/there-is-a-job-vacancy-in-nimhans-salary-%e2%82%b9-90000-per-month-last-date-today/ ಡಿಕ್ಕಿ ಹೊಡೆದ ರಭಸಕ್ಕೆ ವಾಹನದ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ಸ್ಥಳದಲ್ಲೇ ‌ಮೂವರು ಸಾವನ್ನಪ್ಪಿದ್ದು. ಗಾಯಾಳುಗಳಿಗೆ ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಚನ್ನಗಿರಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಚನ್ನಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಬೆಂಗಳೂರು: ಹೆಚ್ಚು ಲೋಕಸಭಾ ಸ್ಥಾನ ಗೆದ್ದರೆ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಡಾ.ಯತೀಂದ್ರ ಹೇಳಿಕೆಗೆ  ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,  ನಮ್ಮ ಸರ್ಕಾರ ಐದು ವರ್ಷ ಬಲಿಷ್ಠವಾಗಿ ಇರುತ್ತೆ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ, ನಾನು ಕೆಪಿಸಿಸಿ ಅಧ್ಯಕ್ಷ ಆಗಿದ್ದೇನೆ ಆಸೆ ಪಡುವುದು, ಜನರ ಬಳಿ ಮನವಿ ಮಾಡುವುದು ಇರುತ್ತೆ ಇದನ್ನು ಟ್ವಿಸ್ಟ್ ಮಾಡುವುದು ಬೇಡ ಎಂದರು. ಯತೀಂದ್ರ ಬಹಳ ಸೂಕ್ಷ್ಮವಾಗಿ ಬೆಳೆಯುತ್ತಿರುವ ನಾಯಕ ನಾನು ಕೂಡಾ ನಮ್ಮ ಭಾಗದಲ್ಲಿ ಹೋದಾಗ ಜನರ ಭಾವನೆಗಳಿಗೆ ತಕ್ಕ ಹಾಗೆ ಮಾತಾಡ್ತೀನಿ ಅದನ್ನು ಮಾಧ್ಯಮಗಳಲ್ಲಿ ಬೇರೆ ಅರ್ಥ ಬರುವ ರೀತಿ ಬಿಂಬಿಸುವುದು ಬೇಡ ಎಂದು ಹೇಳಿದರು.

Read More