Author: AIN Author

ಬೆಂಗಳೂರು:- ಕೇಸ್ ಕೊಟ್ಟಿದಕ್ಕೆ ಬಿಲ್ಡರ್ ಕಿಡ್ನಾಪ್ ಆರೋಪಕ್ಕೆ ಸಂಬಂಧಿಸಿದಂತೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜನವರಿ 12 ರಂದು ಜ್ಞಾನ ಭಾರತಿ ಸಮುದಾಯ ಭವನ‌ ಬಳಿಯಿಂದ ಅಪಹರಣ ನಡೆದಿತ್ತು. ವೀರೇಶ್,ರಶ್ಮಿ,ಕೃಷ್ಣಪ್ಪ,ರಾಜಶೇಖರ್,ಕಾರ್ತಿಕ್ ಮತ್ತು ರಘು ಸೇರಿದಂತೆ 8 ಜನರಿಂದ ಕೃತ್ಯ ನಡೆದಿದೆ. ಹಲವು ವರ್ಷಗಳಿಂದ ಬಿಲ್ಡರ್ ಆಗಿ ಕೆಲಸ ಅಶೋಕ್ ಶಿವರಾಜ್ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ. ಈ ವೇಳೆ ಪಾರ್ಟ್ನರ್ ಆಗಿ ವೀರೇಶ್,ರಶ್ಮಿ ಬಂದಿದ್ದಾರೆ. ಕಳೆದ ಒಂದು ವರ್ಷದಿಂದ ಅಶೋಕ್ ಬಂಧನದಲ್ಲಿರಿಸಿ ಆಸ್ತಿ ಕಬಳಿಸಿರುವ ಆರೋಪ ಕೇಳಿ ಬಂದಿದೆ. ಫ್ಲಾಟ್ ಸೇರಿದಂತೆ ಜಮೀನು ಅಕ್ರಮವಾಗಿ ನೋಂದಣಿ ಮಾಡಿಸಿಕೊಂಡ ಆರೋಪ ಕೇಳಿ ಬಂದಿದ್ದು, ಅವರಿಂದ ತಪ್ಪಿಸಿ ಬಂದು ವೃದ್ಧ ದೂರು ದಾಖಲಿಸಿದ್ದಾರೆ. ದೂರು ನೀಡಿದ್ದಕ್ಕಾಗಿ ಕಿಡ್ನಾಪ್ ಮಾಡಿ ಬೆದರಿಕೆ ಹಾಕಲಾಗಿದೆ. ಸಂಬಂಧಿ ಒಬ್ಬರು ನಿರಂತರ ಕರೆ ಮಾಡಿದಾಗ ವಿಚಾರ ಬಯಲಿಗೆ ಬಂದಿದೆ. ನಂತರ 112 ಗೆ ಕರೆ ಮಾಡಿ ಸಂಬಂಧಿ ಉಷಾ ವಿಷಯ ತಿಳಿಸಿದರು. ಪೊಲೀಸರು ಕರೆ ಮಾಡಿದ ಬಳಿಕ ವಾಪಸ್ಸು…

Read More

ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಬೆಳ್ಳಂಬೆಳಗ್ಗೆ ವಿದ್ಯುತ್ ಶಾಕ್‌ಗೆ ಬಾಲಕನೊಬ್ಬ ಬಲಿಯಾಗಿರುವ ಘಟನೆ ಜರುಗಿದೆ. ಮೀನಾಕ್ಷಿ-ಮೂರ್ತಿ ದಂಪತಿಗಳ ಪುತ್ರ 8 ವರ್ಷದ ನಾಗೇಂದ್ರ ಕರೆಂಟ್ ಶಾಕ್‌ನಿಂದ ಮೃತಪಟ್ಟಿದ್ದಾನೆ. ರಸ್ತೆ ದಾಟಲು ಹೋದ ಸಂದರ್ಭ ಟ್ರಾನ್ಸ್‌ಫಾರ್ಮರ್ ಗ್ರೌಂಡಿಂಗ್ ವೈರ್‌ನಿಂದ ವಿದ್ಯುತ್ ಶಾಕ್ ತಗುಲಿ ಬಾಲಕ ಕೊನೆಯುಸಿರೆಳೆದಿದ್ದಾನೆ. ರಸ್ತೆ ಅಗಲೀಕರಣಕ್ಕಾಗಿ ಟ್ರಾನ್ಸ್‌ಫಾರ್ಮರ್ ಬಳಿ ಮಣ್ಣು ತೆಗೆಯಲಾಗಿತ್ತು. ಮಣ್ಣು ತೆಗೆದ ಪರಿಣಾಮ ಹೊಂಡದಲ್ಲಿ ನೀರು ಶೇಖರಣೆಯಾಗಿದೆ. ರಸ್ತೆ ದಾಟಲು ಟ್ರಾನ್ಸ್‌ಫಾರ್ಮರ್ ಬದಿಯಲ್ಲಿ ಹೋಗುವಾಗ ಅವಘಡ ಸಂಭವಿಸಿದೆ.

Read More

ಹುಬ್ಬಳ್ಳಿ: ತಾಲ್ಲೂಕಿನ ಹೆಬಸೂರಿನ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಯ ತಿಜೋರಿಯಲ್ಲಿ ಇಟ್ಟಿದ್ದ ₹20 ಸಾವಿರ ಕಳವು ಮಾಡಲಾಗಿದೆ. ಪ್ರವಾಸಕ್ಕೆ ತೆರಳೆಂದು ಮಕ್ಕಳಿಂದ ಹಣ ಸಂಗ್ರಹಿಸಿದ್ದು, ಪ್ರವಾಸದಲ್ಲಿ ಖರ್ಚಾಗಿ ಉಳಿದ ಹಣವನ್ನು ತಿಜೋರಿಯಲ್ಲಿ ಇಡಲಾಗಿತ್ತು ಎಂದು ಶಿಕ್ಷಕಿ ಸರೋಜಾ ದೂರಿನಲ್ಲಿ ತಿಳಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಚಂಡೀಗಢ: ಯುವಕನೊಬ್ಬ ತನ್ನ ಪ್ರೇಯಸಿಯ ಬದಲು ನೇಮಕಾತಿ ಪರೀಕ್ಷೆ ಬರೆಯಲು ಹೆಣ್ಣಿನ ವೇಷ ಧರಿಸಿ ಪೊಲೀಸರ (Police) ಅತಿಥಿಯಾದ ಘಟನೆ ಪಂಜಾಬ್‍ನ ಫರೀದ್‍ಕೋಟ್‍ನಲ್ಲಿ ನಡೆದಿದೆ. ಪಂಜಾಬ್‍ನ (Punjab) ವಿಶ್ವವಿದ್ಯಾಲಯವೊಂದು ನಡೆಸಿದ ನೇಮಕಾತಿ ಪರೀಕ್ಷೆಗೆ ಅಂಗ್ರೇಜ್ ಸಿಂಗ್ (26) ಎಂಬಾತ ತನ್ನ ಗೆಳತಿ ಪರಮ್‍ಜೀತ್ ಕೌರ್ ಎಂಬಾಕೆಯ ಬದಲು, ಹೆಣ್ಣಿನಂತೆ ಸಲ್ವಾರ್ ಹಾಗೂ ಟೋಪಿ ಧರಿಸಿ ಹೋಗಿದ್ದಾನೆ. ಈ ವೇಳೆ ಬಯೋಮೆಟ್ರಿಕ್ ವಿವರಗಳು ಮೂಲ ಅಭ್ಯರ್ಥಿಯ ವಿವರಗಳೊಂದಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಅಧಿಕಾರಿಗಳು ಸಂಶಯದಿಂದ ಪರಿಶೀಲನೆ ನಡೆಸಿದಾಗ ಆತ ಸಿಕ್ಕಿಬಿದ್ದಿದ್ದಾನೆ. ಯುವಕ ಮೀಸೆ ಹಾಗೂ ಗಡ್ಡವನ್ನೂ ಸ್ವಚ್ಛವಾಗಿ ತೆಗಿಸಿ, ಹೆಣ್ಣಿನಂತೆ ಮೇಕಪ್ ಮಾಡಿಕೊಂಡಿದ್ದ. ಅಲ್ಲದೇ ಯುವತಿಯ ಹಾಲ್ ಟಿಕೆಟ್ ಮೇಲೆ ತನ್ನ ಫೋಟೋವನ್ನು ಹೆಣ್ಣಿನಂತೆಯೇ ತೆಗೆಸಿ ಅಂಟಿಸಿದ್ದ. ಇಷ್ಟೇ ಅಲ್ಲದೇ ಯುವಕ ತನ್ನ ಸ್ನೇಹಿತೆಯ ನಕಲಿ ಗುರುತಿನ ಚೀಟಿ, ಆಧಾರ್ ಕಾರ್ಡ್‍ನ್ನು ಮಾಡಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪರೀಕ್ಷಾ ಕೇಂದ್ರದ ಒಳಗೆ ಹೋಗಿ ಕುಳಿತಿದ್ದ ಆತನ ಮುಖ ಹೊಂದಿಕೆಯಾಗದ ಕಾರಣ ಅಧಿಕಾರಿಗಳು ಎಲ್ಲಾ ದಾಖಲೆಗಳನ್ನು ಪರಿಶೀಲನೆ…

Read More

ಅಯೋಧ್ಯೆ:- ರಾಮಲಲ್ಲಾ ವಿಗ್ರಹ ಗರ್ಭಗುಡಿ ಪ್ರವೇಶಿಸಿದ್ದು, ಇಂದು ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ವಿಧಿವಿಧಾನಗಳು ನಡೆಯುತ್ತಿವೆ. ಇಂದು ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯೊಳಗೆ ರಾಮನ ವಿಗ್ರಹವನ್ನು ತರಲಾಗಿದೆ. 150-200 ಕೆಜಿ ತೂಕದ ವಿಗ್ರಹವನ್ನು ಕ್ರೇನ್ ಸಹಾಯದಿಂದ ಒಳಗೆ ತರುವ ಮುನ್ನ ಗರ್ಭಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಿನ್ನೆ ಸಂಜೆ ರಾಮಲಲ್ಲಾ ಅವರ ಬೆಳ್ಳಿಯ ವಿಗ್ರಹವನ್ನು ಗುಲಾಬಿ ಮತ್ತು ಚೆಂಡು ಹೂಗಳಿಂದ ಅಲಂಕರಿಸಲಾಗಿತ್ತು. ಸಂಜೆ ರಾಮಮಂದಿರದ ಆವರಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು. ಜನವರಿ 22 ರ ಕಾರ್ಯಕ್ರಮದ ಪೂರ್ವಭಾವಿಯಾಗಿ ಆಚರಣೆಯ ಅಂಗವಾಗಿ ‘ಕಲಶ ಪೂಜೆ’ ನಡೆಯಿತು.

Read More

ಬಿಗ್‌ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್‌ಗೆ ಈಗ ಸಂಕಷ್ಟ ಎದುರಾಗಿದ್ದು, ಬಿಬಿಎಂಪಿ ಅಧಿಕಾರಿ ಪ್ರಯಾಗ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಪ್ರಯಾಗ್ ರಾಜ್ 50 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮತ್ತೊಬ್ಬ ಅಧಿಕಾರಿ 2 ಕೋಟಿ ರೂ.ಗೆ ಮೊಕದ್ದಮೆ ಹೂಡಿದ್ದಾರೆ ಎಂದು ವಕೀಲರು ಸ್ಪಷ್ಟ ಪಡಿಸಿದ್ದಾರೆ. ಈ ವಿಚಾರಕ್ಕೆ ವಾದ – ಪ್ರತಿವಾದ ನಡೆದಿದ್ದು, ಇಂದು ಕೋರ್ಟ್‌ನಿಂದ ಆದೇಶ ಹೊರಬೀಳುವ ಸಾಧ್ಯತೆಗಳಿವೆ ಎಂದು ವಕೀಲರು ತಿಳಿಸಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಕೋವಿಡ್‌ ಸಂದರ್ಭದಲ್ಲಿ ತಾನು ಅನುಭವಿಸಿದ್ದ ಕ್ವಾರಂಟೈನ್‌ (Qurantine) ಕಹಾನಿ ಬಗ್ಗೆ ಹೇಳಿಕೊಂಡಿದ್ದರು. ಈ ವೇಳೆ ಬಿಬಿಎಂಪಿ ನೋಡಲ್ ಅಧಿಕಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಕ್ವಾರಂಟೈನ್ ಸಮಯದಲ್ಲಿ ಅಧಿಕಾರಿಯೊಬ್ಬರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು. ಮೆಂಟಲಿ ಅನ್‍ಸ್ಟೇಬಲ್ ಅಂತಾ ಸಹಿ ಮಾಡುವಂತೆ ತಲೆತಲೆಗೆ ಹೊಡೆದು ಕಿರುಕುಳ ಕೊಟ್ಟಿದ್ದರು. ಹೋಟೆಲ್‍ನಿಂದ ಕೆಳಗೆ ಬಂದ್ಮೇಲೆ ನನಗೆ ಏನೇನು ಮಾಡಿದ್ರೋ, ಅದನ್ನ ಸ್ವಲ್ಪ ಹೇಳಿದೆ. ಇವ್ನು ಹೇಗಿದ್ರೂ ಸುಳ್ಳು ಹೇಳ್ತಾನೆ. ಇವ್ನು ಹೇಳೋದೇ ಸುಳ್ಳು.. ನಂಬಬೇಡಿ ಎಂದು ಮಾಧ್ಯಮಗಳಿಗೆ…

Read More

ಅಯೋಧ್ಯೆ: ರಾಮ ಮಂದಿರ ಪ್ರಾಣ ಪ್ರತಿಷ್ಠೆ ಹಿನ್ನೆಲೆ, ಜನವರಿ 22 ರಂದು ದೇಶದ ಹಲವು ರಾಜ್ಯಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದಂತೆ ಜನವರಿ 22 ರಂದು ಉತ್ತರ ಪ್ರದೇಶದ ಶಿಕ್ಷಣ ಸಂಸ್ಥೆಗಳು ರಾಮಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭದ ದೃಷ್ಟಿಯಿಂದ ಮುಚ್ಚಿರುತ್ತವೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಹೆಚ್ಚುವರಿಯಾಗಿ, ಅಂದು ರಾಜ್ಯದಾದ್ಯಂತ ಮದ್ಯದಂಗಡಿಗಳನ್ನು ಕೂಡ ಮುಚ್ಚಲಾಗುವುದು. ಮಧ್ಯಪ್ರದೇಶ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಜನವರಿ 22 ರಂದು ಶಾಲಾ ರಜೆ ಎಂದು ಘೋಷಿಸಿದ್ದಾರೆ, ಜನರು ಈ ದಿನವನ್ನು ಹಬ್ಬದಂತೆ ಆಚರಿಸಲು ಪ್ರೋತ್ಸಾಹಿಸಿದ್ದಾರೆ. ಯಾದವ್ ಅವರು ಜನವರಿ 22 ರಂದು ರಾಜ್ಯದಲ್ಲಿ ಡ್ರೈ ಡೇ ಘೋಷಿಸಿದ್ದಾರೆ, ಮದ್ಯ ಮತ್ತು ಭಾಂಗ್ ಮಳಿಗೆಗಳು ಸೇರಿದಂತೆ ಎಲ್ಲಾ ರೀತಿಯ ಅಂಗಡಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ. ಗೋವಾ ಲೈವ್ ಮಿಂಟ್ ವರದಿಯ ಪ್ರಕಾರ ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭದ ಹಿನ್ನೆಲೆಯಲ್ಲಿ ಗೋವಾ…

Read More

ಬೆಂಗಳೂರು:- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, KSRTC ತಾಂತ್ರಿಕ ಸಹಾಯಕ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಿ ಹಾರೈಸಿದ್ದಾರೆ ಇದೇ ವೇಳೆ ಮಾತಾನಾಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ನೇಮಕಾತಿಯನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಸಿ, ಅಭ್ಯರ್ಥಿಗಳಿಗೆ ಅವರಿಚ್ಚೆಯಂತೆಯೆ ಘಟಕಗಳನ್ನು ಸಹ ಆರಿಸಿಕೊಳ್ಳಲು ಗಣಕೀಕರಣದ ಮೂಲಕ ಅವಕಾಶ ಕಲ್ಪಿಸಲಾಗಿದೆ. ನೇಮಕಗೊಂಡಿರುವ ಸಿಬ್ಬಂದಿಗಳು ಶ್ರಮವಹಿಸಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ನಿಗಮಕ್ಕೆ ಕೀರ್ತಿ ತರುವಂತೆ ತಿಳಿಸಿದರು. ಕೋವಿಡ್‌ ನಿಂದಾಗಿ ಯಾವುದೇ ರೆಕ್ಯುಪ್ಮೆಂಟ್ ಆಗಿರಲಿಲ್ಲ. ಈ ವರ್ಷ ಹೊಸದಾಗಿ ರೆಕ್ಯುಪ್ಮೆಂಟ್ ಮಾಡಿಕೊಳ್ಳುತ್ತಿದ್ದೇವೆ. ಕೋವಿಡ್‌ ಕಾರಣದಿಂದಾಗಿ 726 ತಾಂತ್ರಿಕ ಸಹಾಯಕ ಹುದ್ದೆಗಳಿಗೆ, 8 ವರ್ಷಗಳ ನಂತರ ಅನುಮತಿ ಸಿಕ್ಕಿದೆ. ಈ ವರ್ಷ ರೆಕ್ಯುಪ್ಮೆಂಟ್ ಪಾರದರ್ಶಕವಾಗಿ ಮಾಡಲಾಗಿದೆ. 300 ಪೊಸ್ಟ್ ಗಳಿಗೆ ಅಭ್ಯರ್ಥಿಗಳನ್ನ ಭರ್ತಿ‌ಮಾಡಲು ಸರ್ಕಾರ ಸೂಚನೆ ನೀಡಿತ್ತು. ಅದ್ರಲ್ಲಿ ಸಧ್ಯ 262 ಅಭ್ಯರ್ಥಿಗಳನ್ನ ನೇಮಕ ಮಾಡಿಕೊಂಡಿದ್ದು,ಇವರಲ್ಲಿ 36 ಜನರನ್ನ ವೆಯಿಟಿಂಗ್ ಲೀಸ್ಟ್ ನಲ್ಲಿ ಇರಿಸಲಾಗಿದೆ. ಅಭ್ಯರ್ಥಿಗಳಿಗೆ ಅಧಿಸೂಚನೆಯ ಸಂಧರ್ಭದಲ್ಲಿ ನಿಗಧಿಪಡಿಸಲಾಗಿದ್ದ, ಎರಡು ವರ್ಷಗಳ ತರಭೇತಿ ಅವಧಿಯನ್ನ 1…

Read More

ಬೆಂಗಳೂರು:- ವಿಪಕ್ಷ ನಾಯಕ ಆರ್ ಅಶೋಕ್ ಅವರು ಸರ್ಕಾರಿ ನಿವಾಸಕ್ಕೆ ಮನವಿ ಮಾಡಿದ್ದು, ಡಿಕೆ ಶಿವಕುಮಾರ್​​ಗೆ ಹಂಚಿಕೆಯಾಗಿರುವ ನಿವಾಸಕ್ಕೇ ಬೇಡಿಕೆ ಇಟ್ಟಿದ್ದಾರೆ. ಅಶೋಕ ಅವರು ವಿಧಾನಸಭೆ ವಿಪಕ್ಷ ನಾಯಕರಾಗಿ ಎರಡು ತಿಂಗಳು ಪೂರ್ಣಗೊಳ್ಳುತ್ತಿದೆ. ನಿರ್ದಿಷ್ಟ ಮೂರು ಸರ್ಕಾರಿ ಬಂಗಲೆ ಕೇಳಿರುವ ಅಶೋಕ, ಡಿಸಿಎಂ ಮತ್ತು ಇಬ್ಬರು ಸಚಿವರಿಗೆ ಈಗಾಗಲೇ ಹಂಚಿಕೆಯಾಗಿರುವ ಮನೆಗಳಿಗೇ ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರಿನ ಕುಮಾರಕೃಪಾ ದಕ್ಷಿಣದಲ್ಲಿರುವ ನಂಬರ್ 1 ನಿವಾಸ ಒದಗಿಸುವಂತೆ ಅಶೋಕ ಮನವಿ ಮಾಡಿದ್ದಾರೆ. ಆದರೆ, ಸದ್ಯ ಈ ನಿವಾಸ ಡಿಸಿಎಂ ಡಿಕೆ‌ ಶಿವಕುಮಾರ್​​ಗೆ ಹಂಚಿಕೆಯಾಗಿದೆ. ಇದೇ ನಿವಾಸದಲ್ಲಿದ್ದು ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್​ನಲ್ಲಿ ನಂಬರ್ 1 ಮತ್ತು ನಂಬರ್ 3 ನಿವಾಸಕ್ಕೆ ಕೂಡಾ ಅಶೋಕ್ ಬೇಡಿಕೆ ಇಟ್ಟಿದ್ದಾರೆ. ಸದ್ಯ ರೇಸ್ ವ್ಯೂ ಕಾಟೇಜ್​​ನ ನಂಬರ್ 1 ನಿವಾಸ ಸಚಿವ ಎಂಬಿ ಪಾಟೀಲ್​​ಗೆ ಹಂಚಿಕೆಯಾಗಿದೆ. ನಂಬರ್ 3 ನಿವಾಸ ಸಚಿವ ಪ್ರಿಯಾಂಕ್ ಖರ್ಗೆಗೆ ಹಂಚಿಕೆಯಾಗಿದೆ. ಜಯಮಹಲ್ ರಸ್ತೆಯಲ್ಲಿರುವ…

Read More

ಅಯೋಧ್ಯೆ: ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣಪ್ರತಿಷ್ಠೆ ಸಮಾರಂಭಕ್ಕೆ ರಾಮ್ ಹಲ್ವಾ (Ram Halwa) ತಯಾರಿಸಲು ನಾಗ್ಪುರದ ಹೆಸರಾಂತ ಬಾಣಸಿಗರೊಬ್ಬರು ಬೃಹತ್ ಗಾತ್ರದ 1,800 ಕೆಜಿಯ ಕಡಾಯಿಯೊಂದನ್ನು ಸಿದ್ಧಪಡಿಸಿದ್ದಾರೆ. ಈ ಕಡಾಯಿಯನ್ನು ಹನುಮಾನ್ ಕಡಾಯಿ (Hanuman Kadhai) ಎಂದು ಅವರು ಕರೆದಿದ್ದಾರೆ. ಈ ಕಡಾಯಿ 6.5 ಅಡಿ ಎತ್ತರವಿದ್ದು, 15 ಅಡಿ ವ್ಯಾಸವಿದೆ. ಸುಮಾರು 15,000 ಲೀಟರ್ ಸಾಮಥ್ರ್ಯ ಹೊಂದಿರುವ ಕಡಾಯಿಯಲ್ಲಿ ಸುಮಾರು 7 ಟನ್ ರಾಮ್ ಹಲ್ವಾ ತಯಾರಿಸಲಾಗುತ್ತದೆ. ಇದಕ್ಕಾಗಿ 900 ಕೆಜಿ ರವೆ, 1000 ಕೆಜಿ ತುಪ್ಪ, 1000 ಕೆಜಿ ಸಕ್ಕರೆ, 2000 ಲೀಟರ್ ಹಾಲು, 2500 ಲೀಟರ್ ನೀರು, 300 ಕೆಜಿ ಡ್ರೈ ಫ್ರೂಟ್ಸ್, 75 ಕೆಜಿ ಏಲಕ್ಕಿ ಪುಡಿಯನ್ನು ಬಳಸಿಕೊಳ್ಳಲಾಗುತ್ತದೆ. ಬಾಲ ರಾಮನಿಗೆ ಹಲ್ವಾವನ್ನು ಅರ್ಪಿಸಿದ ನಂತರ, 1 ಲಕ್ಷದಿಂದ 1.5 ಲಕ್ಷ ಭಕ್ತರಿಗೆ ಪ್ರಸಾದವಾಗಿ ನೀಡಲು ನಿರ್ಧರಿಸಲಾಗಿದೆ.  ಈ ಕಡಾಯಿಯನ್ನು ಅಯೋಧ್ಯೆಗೆ ಸಾಗಿಸಿ ನಾಗ್ಪುರದ ಗುರುತಾಗಿ ಅಲ್ಲಿಯೇ ಇರಿಸಲಾಗುತ್ತದೆ. 500 ವರ್ಷಗಳ ಭಗವಾನ್ ರಾಮ ತನ್ನ…

Read More