ಬೆಂಗಳೂರು:- ಕೇಸ್ ಕೊಟ್ಟಿದಕ್ಕೆ ಬಿಲ್ಡರ್ ಕಿಡ್ನಾಪ್ ಆರೋಪಕ್ಕೆ ಸಂಬಂಧಿಸಿದಂತೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜನವರಿ 12 ರಂದು ಜ್ಞಾನ ಭಾರತಿ ಸಮುದಾಯ ಭವನ ಬಳಿಯಿಂದ ಅಪಹರಣ ನಡೆದಿತ್ತು. ವೀರೇಶ್,ರಶ್ಮಿ,ಕೃಷ್ಣಪ್ಪ,ರಾಜಶೇಖರ್,ಕಾರ್ತಿಕ್ ಮತ್ತು ರಘು ಸೇರಿದಂತೆ 8 ಜನರಿಂದ ಕೃತ್ಯ ನಡೆದಿದೆ. ಹಲವು ವರ್ಷಗಳಿಂದ ಬಿಲ್ಡರ್ ಆಗಿ ಕೆಲಸ ಅಶೋಕ್ ಶಿವರಾಜ್ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ. ಈ ವೇಳೆ ಪಾರ್ಟ್ನರ್ ಆಗಿ ವೀರೇಶ್,ರಶ್ಮಿ ಬಂದಿದ್ದಾರೆ. ಕಳೆದ ಒಂದು ವರ್ಷದಿಂದ ಅಶೋಕ್ ಬಂಧನದಲ್ಲಿರಿಸಿ ಆಸ್ತಿ ಕಬಳಿಸಿರುವ ಆರೋಪ ಕೇಳಿ ಬಂದಿದೆ. ಫ್ಲಾಟ್ ಸೇರಿದಂತೆ ಜಮೀನು ಅಕ್ರಮವಾಗಿ ನೋಂದಣಿ ಮಾಡಿಸಿಕೊಂಡ ಆರೋಪ ಕೇಳಿ ಬಂದಿದ್ದು, ಅವರಿಂದ ತಪ್ಪಿಸಿ ಬಂದು ವೃದ್ಧ ದೂರು ದಾಖಲಿಸಿದ್ದಾರೆ.
ದೂರು ನೀಡಿದ್ದಕ್ಕಾಗಿ ಕಿಡ್ನಾಪ್ ಮಾಡಿ ಬೆದರಿಕೆ ಹಾಕಲಾಗಿದೆ. ಸಂಬಂಧಿ ಒಬ್ಬರು ನಿರಂತರ ಕರೆ ಮಾಡಿದಾಗ ವಿಚಾರ ಬಯಲಿಗೆ ಬಂದಿದೆ. ನಂತರ 112 ಗೆ ಕರೆ ಮಾಡಿ ಸಂಬಂಧಿ ಉಷಾ ವಿಷಯ ತಿಳಿಸಿದರು. ಪೊಲೀಸರು ಕರೆ ಮಾಡಿದ ಬಳಿಕ ವಾಪಸ್ಸು ಬಿಟ್ಟು ಗ್ಯಾಂಗ್ ಹೋಗಿದೆ. ಅವರೇ ತಂದು ಠಾಣೆ ಬಿಟ್ಟು ಹೋಗಿದ್ದಾರೆ ಈ ಸಂಬಂಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕರಣ ದಾಖಲಿಸಿದ ಜ್ಞಾನ ಭಾರತಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಶೀಕ್ ವಿರುದ್ಧವು ಹಲವು ವಂಚನೆ ಪ್ರಕರಣಗಳಿವೆ. ಬೇರೆ ಬೇರೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.