ಹುಬ್ಬಳ್ಳಿ: ತಾಲ್ಲೂಕಿನ ಹೆಬಸೂರಿನ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಯ ತಿಜೋರಿಯಲ್ಲಿ ಇಟ್ಟಿದ್ದ ₹20 ಸಾವಿರ ಕಳವು ಮಾಡಲಾಗಿದೆ.
ಪ್ರವಾಸಕ್ಕೆ ತೆರಳೆಂದು ಮಕ್ಕಳಿಂದ ಹಣ ಸಂಗ್ರಹಿಸಿದ್ದು, ಪ್ರವಾಸದಲ್ಲಿ ಖರ್ಚಾಗಿ ಉಳಿದ ಹಣವನ್ನು ತಿಜೋರಿಯಲ್ಲಿ ಇಡಲಾಗಿತ್ತು ಎಂದು ಶಿಕ್ಷಕಿ ಸರೋಜಾ ದೂರಿನಲ್ಲಿ ತಿಳಿಸಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.