Author: AIN Author

ದೇವನಹಳ್ಳಿ:- ಕ್ಯಾಂಟರ್ ಮತ್ತು ಟ್ರಾಕ್ಟರ್ ನಡುವೆ ರಾತ್ರಿ ಸಂಭವಿಸಿದ ಬೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯಲ್ಲಿ ಬೀಕರ ಅಪಘಾತದ ದೃಶ್ಯ ಸೆರೆಯಾಗಿದೆ. ಟ್ರಾಕ್ಟರ್ ನಲ್ಲಿ ಜನರನ್ನ ಕೂರಿಸಿಕೊಂಡು ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಯೂಟರ್ನ್ ಪಡೆಯುವ ವೇಳೆ ದುರಂತ ಸಂಭವಿಸಿತ್ತು. ಈ ವೇಳೆ ಹಿಂದಿನಿಂದ ಬಂದು ಕ್ಯಾಂಟರ್ ಡಿಕ್ಕಿ ಹೊಡೆದಿದೆ. ದೇವನಹಳ್ಳಿ ತಾಲೂಕಿನ ಸಾವಕನಹಳ್ಳಿ ಬಳಿ ಕಳೆದ ರಾತ್ರಿ ನಡೆದ ಘಟನೆ ಇದಾಗಿದ್ದು, ಅಪಘಾತದಲ್ಲಿ ಒರ್ವ ಸಾವನ್ನಪಿ 8 ಜನ ಗಂಭೀರವಾಗಿ ಗಾಯಗೊಂಡಿದ್ರು. ಇದೀಗ ಅಪಘಾತದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಕ್ಯಾಂಟರ್ ಚಾಲಕನ ನಿರ್ಲಕ್ಷ್ಯದಿಂದ ನಡೆದ ಅಪಘಾತ ಎನ್ನಲಾಗಿದೆ.

Read More

ಬೆಂಗಳೂರು:- ನಗರದಲ್ಲಿ ಪರ್ಫ್ಯೂಮ್ ಗೋಡೌನ್‌ನಲ್ಲಿ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೇ ಇಬ್ಬರು ಗಾಯಾಳು ಬಾಲಕರು ಸಾವನ್ನಪ್ಪಿದ್ದಾರೆ. ರಿಯಾನ್ ಪಾಷಾ (10) ಮತ್ತು ಸಾಜಿದ್ (15) ಮೃತ ದುರ್ದೈವಿಗಳು ದಕ್ಷಿಣ ತಾಲೂಕಿನ ರಾಮಸಂದ್ರದಲ್ಲಿರುವ ಪರ್ಫ್ಯೂಮ್ ಕಾರ್ಖಾನೆಯಲ್ಲಿ ಈ ಘಟನೆ ಸಂಭವಿಸಿತ್ತು. ಗಾಯಗೊಂಡ ಐವರ ಪೈಕಿ 10 ಮತ್ತು 15 ವರ್ಷದ ಬಾಲಕರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಯಾನ್ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇದಕ್ಕೂ ಮುನ್ನ, ಸಾಜಿದ್ ಮೃತಟ್ಟಿದ್ದನು. ಆ ಮೂಲಕ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ರಿಯಾನ್​ ತಂದೆ ಅಫ್ರೋಜ್​ ಪರ್ಫ್ಯೂಮ್ ಗೋಡೌನ್​ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಊಟ ಕೊಡಲೆಂದು ರಿಯಾನ್​​ ಮತ್ತು ಸಂಬಂಧಿ ಸಾಜಿದ್​​ ಇಬ್ಬರೂ ಫ್ಯಾಕ್ಟರಿಗೆ ಬಂದಿದ್ದರು. ಈ ವೇಳೆ ನಡೆದ ಅಗ್ನಿ ಅವಘಡದಲ್ಲಿ ರಿಯಾನ್, ಸಾಜಿದ್ ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ, ಉಳಿದ ಮೂವರ ಸ್ಥಿತಿ ಕೂಡ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

Read More

ಇಂದು ಸಂಜೆ 5 ಗಂಟೆಗೆ ಐಪಿಎಲ್ 2024 ವೇಳಾಪಟ್ಟಿ ಪ್ರಕಟಗೊಳ್ಳಲಿದೆ. ಈ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ, ಐಪಿಎಲ್ 2024 ಭಾರತದಲ್ಲಿ ನಡೆಯುತ್ತದೋ ಇಲ್ಲವೋ ಎಂಬ ಅನುಮಾನದ ಛಾಯೆ ಆವರಿಸಿತ್ತು. ಆದರೆ, ಟೂರ್ನಿ ಸಂಪೂರ್ಣವಾಗಿ ಭಾರತದಲ್ಲಿಯೇ ನಡೆಯಲಿದೆ ಎಂದು ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ ಹೇಳಿದ್ದಾರೆ. ಅವರು ಐಪಿಎಲ್‌ನ ತಾತ್ಕಾಲಿಕ ಆರಂಭದ ದಿನಾಂಕವನ್ನು ಸಹ ಬಹಿರಂಗಪಡಿಸಿದ್ದಾರೆ. ಎಎನ್‌ಐ ಜೊತೆಗಿನ ಸಂವಾದದಲ್ಲಿ, ಅರುಣ್ ಧುಮಾಲ್ ಅವರು ಮಾರ್ಚ್ 22 ರಂದು ಚೆನ್ನೈನಲ್ಲಿ ಐಪಿಎಲ್ 2024 ಪಂದ್ಯಾವಳಿಯನ್ನು ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು. ಪಂದ್ಯಾವಳಿಯ ಮೊದಲ 15 ದಿನಗಳ ವೇಳಾಪಟ್ಟಿಯನ್ನು ಆರಂಭದಲ್ಲಿ ಘೋಷಿಸಲಾಗುವುದು ಹೇಳಿದ್ದಾರೆ. ಏಕೆಂದರೆ ಇದು ಲೋಕಸಭೆ ಚುನಾವಣೆಯ ದಿನಾಂಕವನ್ನು ಅವಲಂಬಿಸಿರುತ್ತದೆ. ಐಪಿಎಲ್ 2024 ರ ಆರಂಭಿಕ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಆಯೋಜಿಸಲಾಗಿದೆ. ಉಭಯ ತಂಡಗಳು ಐಪಿಎಲ್ 2023 ಸೀಸನ್‌ನ ಫೈನಲ್‌ನಲ್ಲಿ ಮುಖಾಮುಖಿ ಆಗಿತ್ತು. ಹೀಗಾಗಿ ಎರಡು ಬಲಿಷ್ಠ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.…

Read More

ಬೆಂಗಳೂರು:- ಸರ್ಕಾರದ ವಿರುದ್ದ ಸಮರ ಸಾರಿರುವ ಸಾರಿಗೆ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಫ್ರೀಡಂಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಯಲಿದೆ. ಸರ್ಕಾರದ ವಿರುದ್ದ ಸಾರಿಗೆ ಮುಖಂಡ ಅನಂತ ಸುಬ್ಬರಾವ್ ನೇತೃತ್ವದಲ್ಲಿ ಬೆಳಗ್ಗೆ 10:30 ರಿಂದ 5 ಗಂಟೆಯವರೆಗೆ ನೌಕರರ ಉಪವಾಸ ಸತ್ಯಾಗ್ರಹ ನಡೆಯಲಿದೆ. ಸಾರಿಗೆ ನೌಕರರಿಗೆ ಜನವರಿ 1ರಿಂದ ಹೊಸ ಒಪ್ಪಂದದ ಪ್ರಕಾರ ವೇತನ ಪರಿಷ್ಕರಣೆ ಆಗಬೇಕು. ಆದರೆ ಇಲ್ಲಿಯವರೆಗೆ ವೇತನ ಪರಿಷ್ಕರಣೆ ವಿಚಾರವನ್ನು ಸಾರಿಗೆ ನಿಗಮಗಳು ಪ್ರಸ್ತಾಪಿಸಿಲ್ಲ. ಹೀಗಾಗಿ ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟು ನೌಕರರು ಪ್ರತಿಭಟನೆಗೆ ಸಜ್ಜಾಗಿದ್ದಾರೆ

Read More

ಬೆಂಗಳೂರು:- ಲಂಚ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದ್ದು, ಮರು ತನಿಖೆಗೆ ಲೋಕಾಯುಕ್ತಕ್ಕೆ ಕೋರ್ಟ್ ಸೂಚನೆ ನೀಡಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ (Congress Government) ಮುಖ್ಯಮಂತ್ರಿಯಾಗಿದ್ದಾಗ ಲಂಚ ಪಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ (Siddaramaiah) ಈಗ ಸಂಕಷ್ಟ ಎದುರಾಗಿದೆ. ಸಿದ್ದರಾಮಯ್ಯ ವಿರುದ್ಧದ ಆರೋಪ ಸಾಬೀತಾಗಿಲ್ಲವೆಂದು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯ ತಿರಸ್ಕರಿಸಿದೆ. ಅಲ್ಲದೆ, ಮರುತನಿಖೆ ನಡೆಸಿ ಆರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಲೋಕಾಯುಕ್ತಕ್ಕೆ ಸೂಚನೆ ನೀಡಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಈ ವಿದ್ಯಮಾನ ನಡೆದಿರುವುದು ರಾಜಕೀಯವಾಗಿ ಪ್ರತಿಪಕ್ಷ ಬಿಜೆಪಿಗೆ ಪ್ರಮುಖ ಅಸ್ತ್ರವಾಗುವ ಎಲ್ಲ ಸಾಧ್ಯತೆಗಳಿವೆ. ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡ ಎನ್​​​ಆರ್ ರಮೇಶ್‌ ಖಾಸಗಿ ದೂರು ಸಲ್ಲಿಸಿದ್ದರು. ಸಿಎಂ ಸಿದ್ದರಾಮಯ್ಯ ಹುದ್ದೆಯೊಂದಕ್ಕೆ ನೇಮಕ ಮಾಡಲು ವ್ಯಕ್ತಿಯೊಬ್ಬರಿಂದ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

Read More

ಬೆಂಗಳೂರು:- ಮದ್ಯಕ್ಕೆ ಮಿಕ್ಸ್ ಮಾಡಲು ನೀರು ಬೇಗ ಕೊಡದ ಯುವಕನಿಗೆ ಸ್ನೇಹಿತರೇ ಚಾಕು ಇರಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಬಳಿಯ ನಾರಾಯಣಪುರದಲ್ಲಿ ಜರುಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾರಾಯಣಪುರ ನಿವಾಸಿ ಮುರುಗೇಶ್ (42) ಇರಿತಕ್ಕೊಳಗಾದ ವ್ಯಕ್ತಿ. ಇದೇ ಊರಿನ ನಿವಾಸಿಗಳಾದ ಸತೀಶ್ ಮತ್ತು ನವೀನ್ ಎಂಬುವವರು ಚಾಕು ಇರಿದ ಆರೋಪಿಗಳಾಗಿದ್ದಾರೆ. ನಾರಾಯಣಪುರ ಸಮೀಪದ ಗುಲ್ಲಣ್ಣ ಲೇವೇಟ್ ಬಡಾವಣೆಯೊಂದರಲ್ಲಿ ಆರೋಪಿಗಳು ರಾತ್ರಿ ವೇಳೆ ಎಣ್ಣೆ ಪಾರ್ಟಿ ನಡೆಸುತ್ತಿದ್ದರು. ರಾತ್ರಿ 12:30ರ ಸುಮಾರಿಗೆ ನೀರಿಗಾಗಿ ಮುರುಗೇಶ್ ಮನೆ ಬಾಗಿಲು ತಟ್ಟಿದ್ದಾರೆ. ಆದರೆ ನೀರು ಬೇಗ ಕೊಡಲಿಲ್ಲ ಎಂಬ ಕಾರಣಕ್ಕೆ ಆರೋಪಿಗಳು ಚಾಕುವಿನಿಂದ ತಲೆ, ಮುಖದ ಭಾಗಕ್ಕೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳುವಿಗೆ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು:- ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಒಟ್ಟು 2 ಸಾವಿರ ಕೋಟಿ ರೂಪಾಯಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಪ್ರತೀ ತಿಂಗಳು ವರ್ಗಾವಣೆ ಆಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಿನಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ. ಈಗಾಗಲೇ 6 ಕಂತುಗಳ ಮೂಲಕ ಸುಮಾರು 12,000 ರೂಪಾಯಿ ಹಣವನ್ನ ಪ್ರತೀ ಕುಟುಂಬದ ಮಹಿಳೆಯರು ಪಡೆದುಕೊಂಡಿದ್ದಾರೆ. ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಯಶವಂತರಾಯ ಗೌಡ ಪಾಟೀಲ್‌ ಅವರು ಕೇಳಿದ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಉತ್ತರವನ್ನು ನೀಡಿದ್ದಾರೆ. ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರಿಗೂ ಕೂಡ ಗೃಹಲಕ್ಷ್ಮೀ ಯೋಜನೆಯ ಪ್ರಯೋಜನ ಸಿಕ್ಕಿಲ್ಲ. ಇದರಿಂದಾಗಿ ಮಹಿಳೆಯರು ಇಲಾಖೆಗಳಿಗೆ ಅಲೆದು ಅಲೆದು ಸುಸ್ತಾಗಿದ್ದರು. ಈ ಕುರಿತು ರಾಜ್ಯದಲ್ಲಿ 8.20 ಲಕ್ಷ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಯೋಜನೆ ನಗದು ಪಾವತಿ ಬಾಕಿ ಇದೆ ಎಂದಿದ್ದಾರೆ ಪ್ರತೀ ತಿಂಗಳ 15 ನೇ…

Read More

ಹೈದರಾಬಾದ್: ಲಂಚ ಸ್ವೀಕರಿಸುವ ವೇಳೆ ತೆಲಂಗಾಣದ ಬುಡಕಟ್ಟು ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ಎಸಿಬಿಗೆ  ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮಹಿಳೆ ಎಸಿಬಿಗೆ ಸಿಕ್ಕಿಬಿದ್ದ ಬಳಿಕ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬುಡಕಟ್ಟು ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಜಗಜ್ಯೋತಿ 84,000 ರೂ. ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ವ್ಯಕ್ತಿಯೊಬ್ಬರು ಲಂಚ ಅಧಿಕಾರಿ ಕೇಳುತ್ತಿದ್ದಾರೆ ಎಂದು ಎಸಿಬಿಗೆ ದೂರು ನೀಡಿದ್ದರು. ಇದರಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಬಂಧಿಸಿದ್ದಾರೆ.  https://twitter.com/umasudhir/status/1759776356865658977?ref_src=twsrc%5Etfw%7Ctwcamp%5Etweetembed%7Ctwterm%5E1759776356865658977%7Ctwgr%5Efdee7c7c09d6ddfd3d2b3fef1350f700b548ad54%7Ctwcon%5Es1_&ref_url=https%3A%2F%2Fwww.ndtv.com%2Findia-news%2Fcaught-taking-rs-84-000-bribe-telangana-official-weeps-on-camera-5091529 ಜಗಜ್ಯೋತಿ ಅವರನ್ನು ಫಿನಾಲ್ಫ್ಥಲೀನ್ ಪರೀಕ್ಷೆಗೆ ಎಸಿಬಿ ಅಧಿಕಾರಿಗಳು ಒಳಪಡಿಸಿದಾಗ ಅವರು ಲಂಚ ಪಡೆದಿರುವುದು ಸಾಬೀತಾಗಿದೆ. ಅವರು ಕರ್ತವ್ಯ ನಿರ್ವಹಣೆಯಲ್ಲಿ ಅನುಚಿತವಾಗಿ ಮತ್ತು ಅಪ್ರಾಮಾಣಿಕವಾಗಿ ವರ್ತಿಸಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ಆರೋಪಿಸಿದ್ದಾರೆ. ಅಧಿಕಾರಿಯ ಬಳಿ ಇದ್ದ 84,000 ರೂ. ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಅವರನ್ನು ಹೈದರಾಬಾದ್‍ನ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಎಸಿಬಿ ಸಿದ್ಧತೆ ನಡೆಸಿದೆ.

Read More

ಬೆಂಗಳೂರು:- ಫೆ.27ರ ಬೆಳಗ್ಗೆ 6 ರಿಂದ ಫೆ.28ರ ಬೆಳಗ್ಗೆ 6ಗಂಟೆವರೆಗೆ ನಗರದ ಬಹುತೇಕ ಕಡೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಬಗ್ಗೆ ಬೆಂಗಳೂರು ಜಲಮಂಡಳಿ (BWSSB) ಮಾಹಿತಿ ನೀಡಿದ್ದು, ತುರ್ತು ನಿರ್ವಹಣಾ ಕಾಮಗಾರಿಗಳು ಮತ್ತು ಯು.ಎಫ್.ಡಬ್ಲ್ಯೂ ಬಲ್ಕ್ ಪ್ಲೋ ಮೀಟರ್‌ಗಳ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಳ್ಳುವ ಸಲುವಾಗಿ ಫೆ.27ರ ಬೆಳಗ್ಗೆ 6ರಿಂದ ಫೆ.28 ಬೆಳಗ್ಗೆ 6 ಗಂಟೆಯವರೆಗೂ ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತದ 2ನೇ ಘಟ್ಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ ನಗರದ ಹಲವು ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ತಿಳಿಸಿದೆ. ಬಿ.ಎಚ್.ಇ.ಎಲ್ ಲೇಔಟ್, ನಂದಿನಿ ಲೇಔಟ್, ಶ್ರೀನಿವಾಸ ನಗರ, ಜೈಮಾರುತಿ ನಗರ & ಬಡಾವಣೆ, ಸಾಕಮ್ಮ ಲೇಔಟ್, ನರಸಿಂಹಸ್ವಾಮಿ ಲೇಔಟ್, ಮುನೇಶ್ವರನಗರ, ಜ್ಞಾನಜ್ಯೋತಿನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಎನ್.ಜಿ.ಇ.ಎಫ್ ಲೇಔಟ್, ಪಾರ್ಟ್ ಆಫ್ ಐ.ಟಿ.ಐ ಲೇಔಟ್, 1ನೇ ಮತ್ತು 2ನೇ ಹಂತ ರೈಲ್ವೆ ಲೇಔಟ್, ಆರ್.ಹೆಚ್.ಬಿ.ಸಿ.ಎಸ್ ಲೇಔಟ್ 1ನೇ & 2ನೇ ಸ್ಟೇಜ್, ಭೈರವೇಶ್ವರನಗರ, ಸುಂಕದಕಟ್ಟೆ, ಜಯಲಕ್ಷ್ಮಮ್ಮ ಲೇಔಟ್, ಈರಣ್ಣ…

Read More

ಮಂಗಳೂರು:- ತಿರುವನಂತಪುರಂ-ಕಾಸರಗೋಡು’ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರಿಗೂ ವಿಸ್ತರಣೆ ಮಾಡಲಾಗಿದೆ. ರೈಲ್ವೆ ಮಂಡಳಿ ಹೊರಡಿಸಿರುವ ಆದೇಶದ ಪ್ರಕಾರ, ವಂದೇ ಭಾರತ್ ರೈಲು ಇನ್ನು ಮುಂದೆ ತಿರುವನಂತಪುರ-ಮಂಗಳೂರು ನಡುವೆ ಸಂಚರಿಸಲಿದೆ. ಹೊಸ ರೈಲ್ವೆ ವೇಳಾ ಪಟ್ಟಿಯಂತೆ ಈ ರೈಲು ಮಂಗಳೂರಿನಿಂದ ಬೆಳಗ್ಗೆ 06:15ಕ್ಕೆ ಹೊರಟು ಅಪರಾಹ್ನ 3:05ಕ್ಕೆ ತಿರುವನಂತಪುರಂ ಅನ್ನು ತಲುಪಲಿದೆ. ಹಾಗೆಯೇ ತಿರುವನಂತಪುರಂನಿಂದ ಸಂಜೆ 4:05ಕ್ಕೆ ಹೊರಟು ಮಂಗಳೂರನ್ನು ರಾತ್ರಿ 12:40ಕ್ಕೆ ತಲುಪಲಿದೆ. ಬುಧವಾರ ಹೊರತು ಪಡಿಸಿ ವಾರದ 6 ದಿನಗಳೂ ವಂದೇ ಭಾರತ್ ರೈಲು ಸಂಚರಿಸಲಿದೆ. ಸಂಸದರ ಮನವಿ ಪುರಸ್ಕರಿಸಿ ವಂದೇ ಭಾರತ್ ರೈಲನ್ನು ಮಂಗಳೂರುವರೆಗೆ ವಿಸ್ತರಿಸಿದ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ (Ashwini Vaishnav) ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

Read More