ದೇವನಹಳ್ಳಿ:- ಕ್ಯಾಂಟರ್ ಮತ್ತು ಟ್ರಾಕ್ಟರ್ ನಡುವೆ ರಾತ್ರಿ ಸಂಭವಿಸಿದ ಬೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯಲ್ಲಿ ಬೀಕರ ಅಪಘಾತದ ದೃಶ್ಯ ಸೆರೆಯಾಗಿದೆ.
ಟ್ರಾಕ್ಟರ್ ನಲ್ಲಿ ಜನರನ್ನ ಕೂರಿಸಿಕೊಂಡು ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಯೂಟರ್ನ್ ಪಡೆಯುವ ವೇಳೆ ದುರಂತ ಸಂಭವಿಸಿತ್ತು. ಈ ವೇಳೆ ಹಿಂದಿನಿಂದ ಬಂದು ಕ್ಯಾಂಟರ್ ಡಿಕ್ಕಿ ಹೊಡೆದಿದೆ. ದೇವನಹಳ್ಳಿ ತಾಲೂಕಿನ ಸಾವಕನಹಳ್ಳಿ ಬಳಿ ಕಳೆದ ರಾತ್ರಿ ನಡೆದ ಘಟನೆ ಇದಾಗಿದ್ದು, ಅಪಘಾತದಲ್ಲಿ ಒರ್ವ ಸಾವನ್ನಪಿ 8 ಜನ ಗಂಭೀರವಾಗಿ ಗಾಯಗೊಂಡಿದ್ರು. ಇದೀಗ ಅಪಘಾತದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.
ಕ್ಯಾಂಟರ್ ಚಾಲಕನ ನಿರ್ಲಕ್ಷ್ಯದಿಂದ ನಡೆದ ಅಪಘಾತ ಎನ್ನಲಾಗಿದೆ.