ಇಂದು ಸಂಜೆ 5 ಗಂಟೆಗೆ ಐಪಿಎಲ್ 2024 ವೇಳಾಪಟ್ಟಿ ಪ್ರಕಟಗೊಳ್ಳಲಿದೆ.
ಈ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ, ಐಪಿಎಲ್ 2024 ಭಾರತದಲ್ಲಿ ನಡೆಯುತ್ತದೋ ಇಲ್ಲವೋ ಎಂಬ ಅನುಮಾನದ ಛಾಯೆ ಆವರಿಸಿತ್ತು. ಆದರೆ, ಟೂರ್ನಿ ಸಂಪೂರ್ಣವಾಗಿ ಭಾರತದಲ್ಲಿಯೇ ನಡೆಯಲಿದೆ ಎಂದು ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ ಹೇಳಿದ್ದಾರೆ. ಅವರು ಐಪಿಎಲ್ನ ತಾತ್ಕಾಲಿಕ ಆರಂಭದ ದಿನಾಂಕವನ್ನು ಸಹ ಬಹಿರಂಗಪಡಿಸಿದ್ದಾರೆ.
ಎಎನ್ಐ ಜೊತೆಗಿನ ಸಂವಾದದಲ್ಲಿ, ಅರುಣ್ ಧುಮಾಲ್ ಅವರು ಮಾರ್ಚ್ 22 ರಂದು ಚೆನ್ನೈನಲ್ಲಿ ಐಪಿಎಲ್ 2024 ಪಂದ್ಯಾವಳಿಯನ್ನು ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು. ಪಂದ್ಯಾವಳಿಯ ಮೊದಲ 15 ದಿನಗಳ ವೇಳಾಪಟ್ಟಿಯನ್ನು ಆರಂಭದಲ್ಲಿ ಘೋಷಿಸಲಾಗುವುದು ಹೇಳಿದ್ದಾರೆ. ಏಕೆಂದರೆ ಇದು ಲೋಕಸಭೆ ಚುನಾವಣೆಯ ದಿನಾಂಕವನ್ನು ಅವಲಂಬಿಸಿರುತ್ತದೆ.
ಐಪಿಎಲ್ 2024 ರ ಆರಂಭಿಕ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಆಯೋಜಿಸಲಾಗಿದೆ. ಉಭಯ ತಂಡಗಳು ಐಪಿಎಲ್ 2023 ಸೀಸನ್ನ ಫೈನಲ್ನಲ್ಲಿ ಮುಖಾಮುಖಿ ಆಗಿತ್ತು. ಹೀಗಾಗಿ ಎರಡು ಬಲಿಷ್ಠ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.
ಈ ಬಾರಿಯ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ ಎಲ್ಲರೂ ಐಪಿಎಲ್ ಅನ್ನು ಸ್ಥಳಾಂತರಿಸಬಹುದೆಂದು ಹೇಳಿದ್ದರಯ. ಅಲ್ಲದೆ, ದಿನಾಂಕಗಳಲ್ಲಿ ಸ್ವಲ್ಪ ಬದಲಾವಣೆಯಾಗಬಹುದು ಎನ್ನಲಾಗಿತ್ತು. ಆರಂಭದಲ್ಲಿ ಐಪಿಎಲ್ ಮೊದಲ ಹಂತದ ವೇಳಾಪಟ್ಟಿ ಬಹಿರಂಗಗೊಳ್ಳಲಿದೆ. ನಂತರ ಚುನಾವಣಾ ದಿನಾಂಕಗಳ ಪ್ರಕಾರ ಕೊನೆಯ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ. ಆದಾಗ್ಯೂ, ಐಪಿಎಲ್ 2024 ರ ಫೈನಲ್ ಅನ್ನು ಮೇ 26 ರಂದು ನಡೆಸಲಿದ್ದಾರಂತೆ. ಇಂದು ಪ್ರಕಟವಾಗಲಿರುವ ಐಪಿಎಲ್ 2024 ವೇಳಾಪಟ್ಟಿಯಲ್ಲಿ ಲೈವ್ ಆಗಿ ಕೂಡ ವೀಕ್ಷಿಸಬಹುದಾಗಿದೆ.