Author: AIN Author

ಬೆಂಗಳೂರು: ಫೆಬ್ರವರಿ 12 ಅಂದರೆ ಇಂದಿನಿಂದ 2023 -24 ನೇ ಸಾಲಿನ ನಾಲ್ಕನೇ ಸರಣಿಯ ಗೋಲ್ಡ್ ಬಾಂಡ್ ಸ್ಕೀಮ್ ಆರಂಭವಾಗಲಿದ್ದು, ಫೆಬ್ರವರಿ 16 ರವರೆಗೆ ಬಾಂಡ್ ಗಳನ್ನು ಖರೀದಿಸಬಹುದಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಗೋಲ್ಡ್ ಬಾಂಡ್ ಗಳನ್ನು ನಿರ್ದಿಷ್ಟ ಅಂಚೆ ಕಚೇರಿಗಳು, ವಾಣಿಜ್ಯ ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್, ಕ್ಲಿಯರಿಂಗ್ ಕಾರ್ಪೊರೇಷನ್ ಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಫೆಬ್ರವರಿ 8, 2016ರಲ್ಲಿ ಜಾರಿ ಮಾಡಿದ್ದ ಗೋಲ್ಡ್ ಬಾಂಡ್ ಬೆಲೆ ಪ್ರತಿ ಗ್ರಾಂಗೆ 2600 ರೂ. ನಿಗದಿಪಡಿಸಲಾಗಿತ್ತು. ಎಂಟು ವರ್ಷ ಮೆಚುರಿಟಿ ಅವಧಿ ನಿಗದಿಗೊಳಿಸಲಾಗಿದ್ದು, 2024ರ ಫೆಬ್ರವರಿ 8ರಂದು ಅವಧಿ ಮುಕ್ತಾಯವಾಗಲಿದೆ. ಮೆಚುರಿಟಿ ಮೊತ್ತವನ್ನು ಘೋಷಣೆ ಮಾಡಿದ್ದು, ಪ್ರತಿ ಯುನಿಟ್ 6271 ರೂ. ನಿಗದಿಪಡಿಸಿದೆ. ಗೋಲ್ಡ್ ಬಾಂಡ್ ದಾರರಿಗೆ ಶೇಕಡ 141 ರಷ್ಟು ರಿಟರ್ನ್ಸ್ ಸಿಗಲಿದೆ. ಹೂಡಿಕೆದಾರರಿಗೆ ಮೆಚುರಿಟಿ ಸಮಯದಲ್ಲಿನ ಚಿನ್ನದ ಮಾರುಕಟ್ಟೆ ಮೌಲ್ಯ ಮತ್ತು ಬಡ್ಡಿ ಸಹಿತ ರಿಟರ್ನ್ಸ್ ಸಿಗಲಿದೆ.

Read More

ಐಸಿಸಿ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯಗಳಲ್ಲಿ ದೈತ್ಯ ಆಸ್ಟ್ರೇಲಿಯಾ ತಂಡ ಪದೇ ಪದೇ ಭಾರತಕ್ಕೆ ಮುಳುವಾಗುತ್ತಿರೋದು ಸಾಬೀತಾಗುತ್ತಿದೆ. ಕಳೆದ 8 ತಿಂಗಳಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧವೇ ಮೂರು ವಿಶ್ವಕಪ್‌ ಟ್ರೋಫಿ ಕಳೆದುಕೊಂಡಿರುವುದೇ ಇದಕ್ಕೆ ಉದಾಹರಣೆಯಾಗಿದೆ. 2023ರಲ್ಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌, ಏಕದಿನ ವಿಶ್ವಕಪ್‌ ಟ್ರೋಫಿ ಕಳೆದುಕೊಂಡಿದ್ದ ಭಾರತ 2024ರ ವರ್ಷಾರಂಭದಲ್ಲೇ ಆಸೀಸ್‌ ವಿರುದ್ಧ ಅಂಡರ್‌ 19 ವಿಶ್ವಕಪ್‌ನಲ್ಲೂ ಸೋತು ನಿರಾಸೆ ಅನುಭವಿಸಿದೆ. ಅಲ್ಲದೇ ಆಸ್ಟ್ರೇಲಿಯಾ ತಂಡ ಸೀನಿಯರ್‌ ಮತ್ತು ಅಂಡರ್‌ 19 ವಿಭಾಗದಲ್ಲಿ ಅತಿಹೆಚ್ಚು ಟ್ರೋಫಿಗಳನ್ನು ಗೆದ್ದ ಮೊದಲ ತಂಡ ಎನಿಸಿಕೊಂಡಿದೆ. 2023ರ ಜೂನ್‌ 11ರಂದು ರೋಹಿತ್‌ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡದ ವಿರುದ್ಧ ವಿಶ್ವಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪಂದ್ಯದ 2ನೇ ಆವೃತ್ತಿಯಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಅಗ್ರ ಕ್ರಮಾಂಕ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಟೀಂ ಇಂಡಿಯಾ ಅಂದು 209 ರನ್‌ಗಳ ಅಂತರದಿಂದ ಸೋಲು ಕಂಡಿತ್ತು. ಭಾರತದ ಆತಿಥ್ಯದಲ್ಲಿ ಆಯೋಜನೆಗೊಂಡಿದ್ದ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲೂ…

Read More

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿಗಳ ವಿರುದ್ಧ ಮಾಜಿ ಸಿಎಂ HDK ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿಗಳಿಂದ ಜನ ನೆಮ್ಮದಿಯಿಂದ ಇದ್ದಾರೆಂದು ಸರ್ಕಾರ ಹೇಳುತ್ತೆ ಆದ್ರೆ ಜನ ಕೆಲಸವಿಲ್ಲದೇ ಒಂದು ಹೊತ್ತಿನ ಊಟಕ್ಕೆ ಪರದಾಡ್ತಿದ್ದಾರೆ ಗ್ಯಾರಂಟಿ ಯೋಜನೆಯಿಂದ ಕೆಲವು ಕುಟುಂಬಗಳು ಬೀದಿಪಾಲಾಗ್ತಿವೆ ಎಂದು ಕಿಡಿಕಾರಿದರು. https://ainlivenews.com/satellite-based-toll-collection-on-bangalore-mysore-expressway/ ಹಾಗೆ ಸಹೋದರ ಹೆಚ್.ಡಿ.ರೇವಣ್ಣ ಸ್ವಲ್ಪ ದುಡುಕಿನ ಸ್ವಭಾವದವರು ಹಾಗಾಗಿ ರೇವಣ್ಣ ಬೇಗ ಜನರ ವಿರೋಧ ಕಟ್ಟಿಕೊಳ್ತಾರೆ. ತಮ್ಮ ದುಡುಕಿನ ಸ್ವಭಾವದಿಂದ ಜನರ ವಿರೋಧ ಕಟ್ಟಿಕೊಳ್ತಾರೆ ದೇವೇಗೌರಿಗೆ ಬೆನ್ನೆಲುಬಾಗಿ ನಿಂತು ರೇವಣ್ಣ ಬೆಳೆದಿದ್ದಾರೆ. ಆದ್ರೆ ರೇವಣ್ಣ ಮಾಡಿರುವ ಅಭಿವೃದ್ಧಿ ಕೆಲಸ ಕಡಿಮೆಯೇನೂ ಇಲ್ಲ ನಮ್ಮಿಂದ ಯಾರಿಗಾದ್ರೂ ನೋವಾಗಿದ್ದರೆ ತಪ್ಪನ್ನು ತಿದ್ದಿಕೊಳ್ಳುತ್ತೇವೆ ಜಿಲ್ಲೆಯಲ್ಲಿ ಕಳೆದ 5 ವರ್ಷದಲ್ಲಿ ಕೆಲವು ಘಟನೆಗಳು ನಡೆದು ಹೋಗಿವೆ ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದಂತೆ ಹೆಚ್‌ ಡಿ ಕುಮಾರಸ್ವಾಮಿ ಮನವಿ ಮಾಡಿದರು. ರಾಜಕೀಯ ಜೀವನದಲ್ಲಿ ದೇವೇಗೌಡರಿಗೆ ಅಧಿಕಾರ ಸಿಕ್ಕಿದ್ದು ಕಡಿಮೆ ದೇವೇಗೌಡರು ಅಧಿಕಾರ ನೋಡಿದ್ದು ಕೇವಲ ಮೂರ್ನಾಲ್ಕು ವರ್ಷ ಕನಿಷ್ಠ 5 ವರ್ಷ ಅವಕಾಶ ಸಿಕ್ಕಿದ್ರೂ ಅಭಿವೃದ್ಧಿ…

Read More

ಬೆಂಗಳೂರು: ಗೃಹಿಣಿಯೊಬ್ಬರಯ ಆತ್ಮಹತ್ಯೆಗೆ (Suicide) ಶರಣಾದ ಘಟನೆ ಬೆಂಗಳೂರಿನ (Bengaluru) ರಾಜಗೋಪಾಲನಗರದಲ್ಲಿ ನಡೆದಿದೆ. ಕಾವ್ಯ ಮೃತ ಗೃಹಿಣಿ. ಮಗಳು ನೇಣಿಗೆ ಶರಣಾಗಲು ಪತಿಯ ಅಕ್ರಮ ಸಂಬಂಧವೇ (Illicit Relationship) ಕಾರಣ ಎಂದು ಕಾವ್ಯ ಪೋಷಕರು ಆರೋಪಿಸಿದ್ದಾರೆ. ಪತಿ ಪ್ರವೀಣ್ ಸೇರಿ ನಾಲ್ವರ ವಿರುದ್ಧ ದೂರು ನೀಡಿರುವ ಪೋಷಕರು ಅಳಿಯನನ್ನ ನಮಗೆ ಒಪ್ಪಿಸುವಂತೆ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. https://ainlivenews.com/attention-parents-pulse-polio-in-the-month-of-march/ ಎರಡು ವರ್ಷದ ಹಿಂದೆ ಅರ್ಧಕೆಜಿ ಚಿನ್ನಕೊಟ್ಟು, 50 ಲಕ್ಷ ಖರ್ಚು ಮಾಡಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದೆವು. ಇತ್ತಿಚೇಗೆ ಮೊಮ್ಮಗನ ಹುಟ್ಟುಹಬ್ಬ ನಡೆದಿತ್ತು. ಮೃತ ಕಾವ್ಯಳ ಪತಿ ಪ್ರವೀಣ್, ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ. ಆದರೆ ಎಲ್ಲಿಯೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಆದರೆ ಅಳಿಯನ ಜೊತೆ ಹುಡುಗಿಯೊಬ್ಬಳ ಅಕ್ರಮ ಸಂಬಂಧವಿತ್ತು. ಹೆಂಡತಿ, ಮಗುವಿಗಿಂತ ಅವಳೇ ಅಳಿಯನಿಗೆ ಹೆಚ್ಚಾಗಿದ್ದಳು. ಈ ಬಗ್ಗೆ ಪ್ರಶ್ನೆ ಮಾಡಿದರೆ ತಂಗಿ ಎಂದು ಹೇಳಿದ್ದ. ಕುಟುಂಬಸ್ಥರೇ ಮೃತದೇಹವನ್ನು ಕೆಳಗಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Read More

ಇಂದು ವ್ಯಾಲೆಂಟೀನ್ ವಾರದ ಆರನೇ ದಿನ… ರೋಸ್ ಡೇ, ಪ್ರಪೋಸ್ ಡೇ, ಚಾಕಲೇಟ್ ಡೇ, ಟೆಡ್ಡಿ ಡೇ ಮತ್ತು ಪ್ರಾಮಿಸ್ ಡೇ ಹೀಗೆ ವ್ಯಾಲೆಂಟೀನ್ ವಾರದ ಐದು ದಿನಗಳ ಖುಷಿಯನ್ನು ಪ್ರೇಮಿಗಳು ಅನುಭವಿಸಿದ್ದಾರೆ. ಈ ಐದು ದಿನಗಳ ಬಳಿಕ ಬರುವುದು ಹಗ್ ಡೇ. ಪ್ರೀತಿಯ ಆಲಿಂಗನ ಬದುಕಿಗೊಂದು ಭರವಸೆ ತರುತ್ತದೆ, ನಮಗೊಬ್ಬರು ಸಂಗಾತಿ ಇದ್ದಾರೆ ಎಂಬ ಧೈರ್ಯ, ಸಮಾಧಾನ ಮೂಡಿಸುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಸಂಗಾತಿ ಬೇಕೇಬೇಕು. ನೋವು ನಲಿವು, ಸುಖ ದುಃಖಗಳನ್ನು ಸಮನಾಗಿ ಹಂಚಿಕೊಳ್ಳಲು ಒಂದು ಹೃದಯ ಬೇಕೇಬೇಕು. https://ainlivenews.com/are-you-keeping-peeled-garlic-in-the-fridge-stop-now-and-avoid-the-risk/ ಒಂಟಿ ಬಾಳು ಬರಡು ನೆಲಕ್ಕೆ ಸಮ. ಸಂಗಾತಿ ಇದ್ದರೆ ಬಾಂಧವ್ಯದ ನೆಲದಲ್ಲಿ ಪ್ರೀತಿಯ ಕೃಷಿಯು ಫಲವತ್ತಾಗಿ ಬೆಳೆಯಲು ಸಾಧ್ಯ. ಇದನ್ನು ಸಾಂಕೇತಿಕವಾಗಿ ತಿಳಿಸುವ ದಿನವೇ ಈ ಹಗ್ ಡೇ. ಮನಸ್ಸಿನ ಮಧುರ ಮಾತುಗಳನ್ನು ಪರಸ್ಪರ ಹಂಚಿಕೊಂಡು ಬದುಕಿನ ಮುಂದಿನ ದಿನಗಳಲ್ಲಿ ಖುಷಿಯಾಗಿ ಮತ್ತು ಒಮ್ಮತದಿಂದ ಸಾಗಲು ಈ ದಿನಗಳು ಒಂದೊಂದೇ ಮೆಟ್ಟಿಲಾಗಿವೆ. ಹಗ್ ಡೇ (Hugh Day) ಯನ್ನು ಏಕೆ…

Read More

ಕ್ಯಾನ್ಬೆರಾ: 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಟೀಂ ಇಂಡಿಯಾ ವಿರುದ್ಧ 79 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ 14 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಜೊತೆಗೆ 4ನೇ ಬಾರಿಗೆ ಅಂಡರ್‌ 19 ವಿಶ್ವಕಪ್‌ ಕಿರೀಟ ತನ್ನದಾಗಿಸಿಕೊಂಡಿದೆ. 1988ರಲ್ಲಿ ನಡೆದ ಐಸಿಸಿ ಅಂಡರ್​ 19 ವಿಶ್ವಕಪ್ ಟೂರ್ನಿಯ ಮೊದಲ ಆವೃತ್ತಿಯಲ್ಲೇ ಚಾಂಪಿಯನ್‌ ಆಗಿದ್ದ ಆಸ್ಟ್ರೇಲಿಯಾ, 2002 & 2010ರಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಆ ನಂತರ 2012 ಮತ್ತು 2018ರಲ್ಲಿ ಫೈನಲ್‌ ತಲುಪಿದ್ದರೂ ಭಾರತದ ವಿರುದ್ಧವೇ ಸೋತು ರನ್ನರ್‌ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ತವರಿನಲ್ಲೇ ಟೀಂ ಇಂಡಿಯಾ ಸೋಲಿಸಿ ವಿಶ್ವಕಪ್ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಶತಕೋಟಿ ಭಾರತೀಯರ ಕನಸನ್ನು ಭಗ್ನಗೊಳಿಸುವ ಜೊತೆಗೆ ಮೂರನೇ ಬಾರಿ ವಿಶ್ವಕಪ್ ಗೆಲ್ಲಬೇಕೆಂಬ ಟೀಂ ಇಂಡಿಯಾದ ಕನಸನ್ನೂ ನುಚ್ಚುನೂರು ಮಾಡಿತ್ತು. 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ 6ನೇ…

Read More

ಕ್ಯಾನ್ಬೆರಾ: ಇಲ್ಲಿನ ಅಡಿಲೇಡ್ ಓವೆಲ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಆಸೀಸ್ ಸ್ಟಾರ್ ಆಲ್‌ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್‌ (Glenn Maxwell) 120 ರನ್ ಸಿಡಿಸುವ ಮೂಲಕ 5 ಅಂತಾರಾಷ್ಟ್ರೀಯ ಟಿ20 (T20I Cricket) ಶತಕ ಸಿಡಿಸಿದ ವಿಶ್ವದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ 4 ಶತಕ ಸಿಡಿಸಿರುವ ಸೂರ್ಯಕುಮಾರ್ ಯಾದವ್‌ (Suryakumar Yadav) ಅವರ ದಾಖಲೆಯನ್ನ ಮುರಿದಿದ್ದಾರೆ. ಜೊತೆಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಶತಕ ದಾಖಲೆಯನ್ನು ಸರಿಗಟ್ಟಿದ್ದಾರೆ. ಇತ್ತೀಚೆಗೆ ಆಫ್ಘಾನಿಸ್ತಾನ ವಿರುದ್ಧ ನಡೆದ 3ನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ 121 ರನ್ ಸಿಡಿಸುವ ಮೂಲಕ ತಮ್ಮ 5ನೇ ಅಂತಾರಾಷ್ಟ್ರೀಯ ಶತಕ ಪೂರೈಸಿದ್ದರು ಅಡಿಲೇಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಆಸೀಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 241 ರನ್ ಬಾರಿಸಿತು. 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಗ್ಲೇನ್ ಮ್ಯಾಕ್ಸ್‌ವೆಲ್‌ 55…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಹೌದು ಈಗಾಗಲೇ  HSRP ಕುರಿತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಹಲವು ಗಡುವುಗಳನ್ನು ನೀಡಿ ವಿಸ್ತರಿಸಿದೆ. ಫೆಬ್ರವರಿ 17 ಕೊನಯ ದಿನವಾಗಿದೆ. ಆದರೂ, ಜನರು ಕೊನೇ ಅವಧಿಯಲ್ಲಿ ಹೆಚ್ಚೆಚ್ಚು ರಿಜಿಸ್ಟರ್ ಮಾಡಲು ಮುಂದಾಗುತ್ತಿದ್ದು, ಅಪ್ಲೋಡ್ ಸಮಸ್ಯೆಯಾಗಲಿದೆ. ಈಗ ಪುನಃ ದಿನಾಂಕ ವಿಸ್ತರಣೆಗೆ ಒತ್ತಡ ಕೇಳಿ ಬಂದಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಾರಿಗೆ ಇಲಾಖೆ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನೇಕ ಇಲಾಖೆಗಳನ್ನ ಸಿಎಂ ಸಭೆ ಕರೆದಿದ್ದರು. ಅದೇ ರೀತಿ ಸಾರಿಗೆ ಇಲಾಖೆಯವರು ಕೂಡ  ಭಾಗಿಯಾಗಿದ್ದರು. ಆಟೋ ಟ್ಯಾಕ್ಸಿ, ಲಾರಿ  ಅಸೋಷಿಯಷನ್ ಅವರು ಎಲ್ಲಾ ಬಂದಿದ್ದರು. https://ainlivenews.com/are-you-keeping-peeled-garlic-in-the-fridge-stop-now-and-avoid-the-risk/ ಅವರ ಬೇಡಿಕೆಗಳನ್ನ ಕೂಡ ಇಟ್ಟಿದ್ದಾರೆ. ಜೊತೆಗೆ, ನಮ್ಮ ಸರ್ಕಾರ ಬಂದಮೇಲೆ ಸಾಕಷ್ಟು ಬೇಡಿಕೆ ಈಡೇರಿಸಿದ್ದೇವೆ ಎಂದರು. ಇಂದು ಹೊಸ ಬೇಡಿಕೆಗಳನ್ನೂ ಸಹ ಇಟ್ಟಿದ್ದಾರೆ. ಮುಂದಿನದ್ದು ಬಜೆಟ್…

Read More

ಹಾಸನ:- ನರೇಂದ್ರ ಮೋದಿ ಮತ್ತೊಮ್ಮೆ PM ಆಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ – ಜೆಡಿಎಸ್​ ಮೈತ್ರಿ ಸೀಟು ಹಂಚಿಕೆಯ ಬಗ್ಗೆ ಸಮಸ್ಯೆ ಇಲ್ಲ. ಹಾಸನ ಜಿಲ್ಲೆಯಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು. ಸಣ್ಣಪುಟ್ಟ ಸಮಸ್ಯೆಗಳಿವೆ, ಅದೆಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ. ಮಂಡ್ಯ ಜಿಲ್ಲೆಯ ಪ್ರತಿದಿನ ಒಂದು ಧಾರವಾಹಿ ಇರಲೇಬೇಕು. ನಿಖಿಲ್​ನನ್ನು ರಾಜಕೀಯವಾಗಿ ಮುಗಿಸಲು ಯಾವ ರೀತಿ ಮಾಡಿದ್ದರು? ಒಂದು ತಿಂಗಳಿನಿಂದ ಧಾರವಾಹಿ ನಡೆಯುತ್ತಿದೆ ಎಂದು ಹೇಳಿದರು. ಹೆಚ್​ಡಿ ರೇವಣ್ಣ ಅವರಿಗೆ ಸ್ವಲ್ಪ ದುಡುಕಿನ ಸ್ವಭಾವ. ಅವರು ದುಡುಕಿನ ಸ್ಚಭಾವದಿಂದ ಜನರ ವಿರೋದ ಕಟ್ಟಿಕೊಳ್ಳುತ್ತಾರೆ. ಹೆಚ್​ಡಿ ದೇವೇಗೌಡರ ಬೆನ್ನೆಲುಭಾಗಿ ನಿಂತು ರೇವಣ್ಣ ಬೆಳೆದರು. ಅವರದ್ದು ದುಡುಕಿನ ಸ್ವಭಾವ ಆದರೂ ಮಾಡಿರುವ ಕೆಲಸ ಏನೂ ಕಡಿಮೆಯಿಲ್ಲ. ಯಾರದ್ದಾದರೂ ಮನಸ್ಸಿಗೆ ನಮ್ಮಿಂದ ನೋವಾಗಿದ್ದರೆ, ತಪ್ಪಾಗಿದ್ದರೆ ಖಂಡಿತಾ ತಿದ್ದಿಕೊಳ್ಳುತ್ತೇವೆ. ತಪ್ಪುಗಳನ್ನು ಕ್ಷಮಿಸಿ ಬೆಳೆಸುವವರು ನೀವೇ ಎಂದು ಹೇಳಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಕೆಲಘಟನಗಳು ಹಾಸನ ಜಿಲ್ಲೆಯಲ್ಲಿ ನಡೆದಿವೆ. ಯಾವುದೇ ಅಪ ಪ್ರಚಾರಗಳಿಗೆ ಕಿವಿಗೊಡಬೇಡಿ. ತಮ್ಮ…

Read More

ಶಂಖಪುಷ್ಪ ಹೂವಿನ ಚಹಾವನ್ನು ಸಾಮಾನ್ಯವಾಗಿ ಬ್ಲೂ ಟೀ ಎಂದು ಕರೆಯಲಾಗುತ್ತದೆ. ಇದರಲ್ಲಿ ಕೆಫೀನ್ ಅಂಶ ಇರುವುದಿಲ್ಲ. ಗಿಡಮೂಲಿಕೆಗಳ ಮಿಶ್ರಣವಾಗಿರುವ ಈ ಟೀ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಪಾನೀಯವಾಗಿದೆ. ಕನ್ನಡದಲ್ಲಿ ಶಂಖಪುಷ್ಪ ಎಂದು ಕರೆಯಲಾಗುವ ಕ್ಲೈಟೋರಿಯಾ ಟೆರ್ನೇಟಿಯಾ ಸಸ್ಯದ ಎಲೆ ಮತ್ತು ಹೂವಿನ ಎಸಳುಗಳನ್ನು ಬಿಸಿ ಅಥವಾ ತಣ್ಣನೆಯ ನೀರಿನಲ್ಲಿ ಹಾಕಿ ನೀಲಿ ಚಹಾವನ್ನು ತಯಾರಿಸಲಾಗುತ್ತದೆ. ಈ ಚಹಾವು ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಬಹಳ ಜನಪ್ರಿಯವಾಗಿದೆ. ಅಲ್ಲಿ ಇದನ್ನು ಸಾಮಾನ್ಯವಾಗಿ ಊಟದ ನಂತರ ಸೇವಿಸಲಾಗುತ್ತದೆ. ‘ಬ್ಲೂ ಟೀ‘ಪ್ರಯೋಜನಗಳು. ಬ್ಲೂ ಬಟರ್‌ಫ್ಲೈ ಹೂವಿನಿಂದ ತಯಾರಾಗುವ ಚಹಾ ಇದು. ಈ ಚಹಾವು ನೋಡಲು ಬಹಳ ಸುಂದರವಾಗಿರುತ್ತದೆ. ಇದರ ರುಚಿಯೂ ಅಷ್ಟೇ ಅದ್ಭುತ. ಈ ಚಹಾವು ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದನ್ನು ಪ್ರತಿದಿನ ಸೇವಿಸಿದರೆ ದೇಹದ ಕೊಬ್ಬು ವೇಗವಾಗಿ ಕಡಿಮೆಯಾಗುತ್ತದೆ. ಚಹಾದಲ್ಲಿರುವ ಆಯಂಟಿಒಕ್ಸಿಡೆಂಟ್‌ಗಳು ದೇಹವನ್ನು ರಿಫ್ರೆಶ್ ಮಾಡುತ್ತದೆ ಮತ್ತು ಸೋಮಾರಿತನವನ್ನು ದೂರ ಮಾಡುತ್ತವೆ. https://ainlivenews.com/are-you-keeping-peeled-garlic-in-the-fridge-stop-now-and-avoid-the-risk/ ತೂಕವನ್ನು ಕಡಿಮೆ ಮಾಡುವುದರ…

Read More