ಹಾಸನ:– ನರೇಂದ್ರ ಮೋದಿ ಮತ್ತೊಮ್ಮೆ PM ಆಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ – ಜೆಡಿಎಸ್ ಮೈತ್ರಿ ಸೀಟು ಹಂಚಿಕೆಯ ಬಗ್ಗೆ ಸಮಸ್ಯೆ ಇಲ್ಲ. ಹಾಸನ ಜಿಲ್ಲೆಯಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು. ಸಣ್ಣಪುಟ್ಟ ಸಮಸ್ಯೆಗಳಿವೆ, ಅದೆಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ. ಮಂಡ್ಯ ಜಿಲ್ಲೆಯ ಪ್ರತಿದಿನ ಒಂದು ಧಾರವಾಹಿ ಇರಲೇಬೇಕು. ನಿಖಿಲ್ನನ್ನು ರಾಜಕೀಯವಾಗಿ ಮುಗಿಸಲು ಯಾವ ರೀತಿ ಮಾಡಿದ್ದರು? ಒಂದು ತಿಂಗಳಿನಿಂದ ಧಾರವಾಹಿ ನಡೆಯುತ್ತಿದೆ ಎಂದು ಹೇಳಿದರು.
ಹೆಚ್ಡಿ ರೇವಣ್ಣ ಅವರಿಗೆ ಸ್ವಲ್ಪ ದುಡುಕಿನ ಸ್ವಭಾವ. ಅವರು ದುಡುಕಿನ ಸ್ಚಭಾವದಿಂದ ಜನರ ವಿರೋದ ಕಟ್ಟಿಕೊಳ್ಳುತ್ತಾರೆ. ಹೆಚ್ಡಿ ದೇವೇಗೌಡರ ಬೆನ್ನೆಲುಭಾಗಿ ನಿಂತು ರೇವಣ್ಣ ಬೆಳೆದರು. ಅವರದ್ದು ದುಡುಕಿನ ಸ್ವಭಾವ ಆದರೂ ಮಾಡಿರುವ ಕೆಲಸ ಏನೂ ಕಡಿಮೆಯಿಲ್ಲ. ಯಾರದ್ದಾದರೂ ಮನಸ್ಸಿಗೆ ನಮ್ಮಿಂದ ನೋವಾಗಿದ್ದರೆ, ತಪ್ಪಾಗಿದ್ದರೆ ಖಂಡಿತಾ ತಿದ್ದಿಕೊಳ್ಳುತ್ತೇವೆ. ತಪ್ಪುಗಳನ್ನು ಕ್ಷಮಿಸಿ ಬೆಳೆಸುವವರು ನೀವೇ ಎಂದು ಹೇಳಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಕೆಲಘಟನಗಳು ಹಾಸನ ಜಿಲ್ಲೆಯಲ್ಲಿ ನಡೆದಿವೆ. ಯಾವುದೇ ಅಪ ಪ್ರಚಾರಗಳಿಗೆ ಕಿವಿಗೊಡಬೇಡಿ. ತಮ್ಮ ರಾಜಕೀಯ ಜೀವನದಲ್ಲಿ ದೇವೇಗೌಡರು ಅಧಿಕಾರ ನೋಡಿದ್ದು ಕೇವಲ ಮೂರ್ನಾಲ್ಕು ವರ್ಷ. ಬಹುಶಃ ಅವರಿಗೆ ಕನಿಷ್ಠ ಐದು ವರ್ಷ ಅವಕಾಶ ಸಿಕ್ಕಿದ್ದರೆ ಸಾಕಷ್ಟು ಅಭಿವೃದ್ಧಿ ಆಗುತ್ತಿತ್ತು ಎಂದು ಕುಮಾರಸ್ವಾಮಿ ಹೇಳಿದರು.