Author: AIN Author

ಬೆಂಗಳೂರು: `ದಳಪತಿ’ಗಳಿಗೆ ಸಿ.ಎಂ ಇಬ್ರಾಹಿಂ (CM Ibrahim) ಬಣ ಸೆಡ್ಡು ಹೊಡೆದಿದೆ. ಜೆಡಿಎಸ್ (JDS) ರೆಬೆಲ್ ಟೀಮ್ ರಾಷ್ಟ್ರೀಯ ಅಧ್ಯಕ್ಷರನ್ನೇ ಬದಲಾವಣೆ ಮಾಡಿದೆ. ಜೆಡಿಎಸ್‍ನಿಂದ ಉಚ್ಛಾಟನೆಗೊಂಡ ಅಸಮಾಧಾನಿತರು ಬೆಂಗಳೂರಿನ ಕೆ.ಜೆ ಹಳ್ಳಿ ಬಳಿ ಖಾಸಗಿ ಹೊಟೇಲ್ ನಲ್ಲಿ ಸಭೆ ನಡೆಸಿದ್ದರು. ಈ ವೇಳೆ ದೇವೇಗೌಡರನ್ನು ಕೆಳಗಿಳಿಸಿ ಸಿ.ಕೆ.ನಾಣು (C.K Nanu) ಅವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಬಳಿಕ ಮಾತನಾಡಿದ ಸಿಎಂ ಇಬ್ರಾಹಿಂ, ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ನನ್ನ ನಿರ್ಣಯ ಅಲ್ಲ, ಇದು ರಾಷ್ಟ್ರೀಯ ಕೌನ್ಸಿಲ್ ನ ನಿರ್ಧಾರ. ಜಯಪ್ರಕಾಶ್ ನಾರಾಯಣರ ಸಿದ್ಧಾಂತದ ಮೇಲೆ ಜನತಾ ಪಕ್ಷ ಕಟ್ಟಲಾಯಿತು. ಎಲ್ಲಾ ರಾಜ್ಯಗಳ ಅಧ್ಯಕ್ಷರ ನೇಮಕವನ್ನ ನಾಣುರವರಿಗೆ ನೀಡಲಾಗಿದೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಮಾಡಲಾಗುತ್ತದೆ. ರಾಹುಲ್ ಗಾಂಧಿಯವರಿಗೂ ಆಹ್ವಾನ ನೀಡಲಾಗುತ್ತದೆ ಎಂದರು. https://ainlivenews.com/representative-traveled-330-km-on-a-rented-bike-and-went-to-the-assembly/ ಅಖಿಲೇಶ್ ಯಾದವ್ (Akhilesh Yadav), ನಿತೀಶ್ ಕುಮಾರ್ (Nitish KUmar) ಕೂಡ ಬರುತ್ತಾರೆ. ಹಲವು ಹಿರಿಯರ ಆದರ್ಶ ನಮ್ಮ ಆದರ್ಶ. ಅದರ್ಶವಾದಿಗಳು ಸತ್ರೂ ಅವರ ಅದರ್ಶ ಶಾಶ್ವತವಾಗಿ ಇರುತ್ತದೆ.…

Read More

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu And Kashmir) ಸಂವಿಧಾನದ 370ನೇ ವಿಧಿಯ (Article 370) ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಕೇಂದ್ರ ಸರ್ಕಾರ ನಿರ್ಧಾರ ಸರಿಯಾಗಿದೆ ಎಂದು ಸುಪ್ರೀಂಕೋರ್ಟ್ (Supreme Court) ಐತಿಹಾಸಿಕ ತೀರ್ಪು ನೀಡಿದೆ. ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಪೋಸ್ಟ್ ಮಾಡಿದ್ದು, ಇಂದಿನ ತೀರ್ಪು ಕೇವಲ ತೀರ್ಪಲ್ಲ, ಭರವಸೆಯ ದಾರಿದೀಪ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಕುರಿತು ಸುಪ್ರೀಂ ಕೋರ್ಟ್ ತೀರ್ಪು ಬಗ್ಗೆ ಪ್ರಧಾನಿ ಮೋದಿ ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡು ಸಂತಸ ಹಂಚಿಕೊಂಡಿದ್ದಾರೆ. https://ainlivenews.com/representative-traveled-330-km-on-a-rented-bike-and-went-to-the-assembly/ ಆರ್ಟಿಕಲ್ 370 ರದ್ದತಿಗೆ ಸಂಬಂಧಿಸಿದಂತೆ ಇಂದಿನ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕವಾಗಿದೆ ಮತ್ತು 5 ಆಗಸ್ಟ್ 2019 ರಂದು ಭಾರತದ ಸಂಸತ್ತು ತೆಗೆದುಕೊಂಡ ನಿರ್ಧಾರವನ್ನು ಸಾಂವಿಧಾನಿಕವಾಗಿ ಎತ್ತಿಹಿಡಿಯುತ್ತದೆ. ಇದು ಜಮ್ಮು ಕಾಶ್ಮೀರ ಮತ್ತು ಲಡಾಖ್‌ನಲ್ಲಿರುವ ನಮ್ಮ ಸಹೋದರಿಯರು ಮತ್ತು ಸಹೋದರರಿಗೆ ಭರವಸೆ, ಪ್ರಗತಿ ಮತ್ತು ಏಕತೆಯನ್ನು ಪ್ರತಿಧ್ವನಿಸುವ ಘೋಷಣೆಯಾಗಿದೆ.…

Read More

ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ಸಾಕಷ್ಟು ಗಮನ ಸೆಳೆದಿರುವ ಮಾಯಾನಗರಿ ಸಿನಿಮಾ ಈ ವಾರ (ಡಿ. 15 ರಂದು) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶಂಕರ್ ಆರಾಧ್ಯ ನಿರ್ದೇಶನದ, ಅನೀಶ್ ತೇಜೇಶ್ವರ್ ನಟನೆಯ ಈ ಸಿನಿಮಾ ಸುಮಾರು 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಅನೀಶ್ ಜೋಡಿಯಾಗಿ ಶ್ರಾವ್ಯ ರಾವ್ ಹಾಗೂ ತೇಜು ನಟಿಸಿದ್ದಾರೆ. ಶೂಟಿಂಗ್ ವೇಳೆ ಸಾಕಷ್ಟು ಪರಿಶ್ರಮ ಹಾಕಿರುವ ಚಿತ್ರತಂಡ, ಹಲವಾರು ರಿಸ್ಕಿ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದೆ. ಈ ಕುರಿತು ಮಾತನಾಡುವ ನಿರ್ದೇಶಕ ಶಂಕರ್ ಆರಾಧ್ಯ, “ಈ ಚಿತ್ರದಲ್ಲಿ ಅನೀಶ್ ಅವರನ್ನು ಬೇರೆ ಬೇರೆ ಶೇಡ್ ಗಳಲ್ಲಿ ತೋರಿಸಿದ್ದೇನೆ. ಕಥೆಗೆ ಅನುಗುಣವಾಗಿ ಸಾಕಷ್ಟು ಲೊಕೇಶನ್ ಗಳಲ್ಲಿ ಶೂಟ್ ಮಾಡಲಾಗಿದೆ. ಟೆಕ್ನಿಕಲ್ ಆಗಿಯೂ ಸಿನಿಮಾ ತುಂಬಾ ಅದ್ಧೂರಿಯಾಗಿದೆ. ಕ್ಲೈಮ್ಯಾಕ್ಸ್ ಸನ್ನಿವೇಶ ನಿಜಕ್ಕೂ ಸವಾಲಿನ ಕೆಲಸವಾಗಿತ್ತು” ಎನ್ನುತ್ತಾರೆ. ಮಾತು ಮುಂದುವರಿಸುವ ಶಂಕರ್, “ಜೋಗ್ ಫಾಲ್ಸ್ ನಲ್ಲಿ ಶೂಟಿಂಗ್ ನಡೆಸಲು ಸುಮಾರು ಎರಡು ವಾರಗಳ ಕಾಲ ತಯಾರಿ ನಡೆಸಿದ್ದೇವೆ. ಈವರೆಗೂ ಯಾರು ಆ ರೀತಿ…

Read More

ಕೋಲಾರ: ಕೆಜಿಎಫ್ ಬೆಸ್ಕಾಂ ವ್ಯಾಪ್ತಿಯಲ್ಲಿ 2015 ರಿಂದ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಸಿಬಿಐಗೆ ಒಪ್ಪಿಸಿ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ರೈತಸಂಘದಿಂದ ಕೋಳಿಗಳನ್ನು ಹರಾಜು ಹಾಕುವ ಮುಖಾಂತರ ಹೋರಾಟ ಮಾಡಿ ಕಾರ್ಯಪಾಲಕ ಅಭಿಯಂತರರ ಮೂಲಕ ಇಂಧನ ಸಚಿವರಿಗೆ ಮನವಿ ನೀಡ ಒತ್ತಾಯಿಸಲಾಯಿತು. ಇದೇ ಸಂದರ್ಭದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ತೇಲಿಗಿ ಛಾಪಾ ಕಾಗದ ಹಗರಣದಂತೆ ಬೆಸ್ಕಾಂ ಇಲಾಖೆಯಲ್ಲಿ ಟಿಸಿಯಿಂದ ಹಿಡಿದು ಕಂಬದವರೆಗೂ ಇಲಾಖೆಯಲ್ಲಿ ಭ್ರಷ್ಟಾಚಾರವಿಲ್ಲದೆ ಯಾವುದೇ ಕೆಲಸವಾಗುವುದಿಲ್ಲ. ಇಲಾಖೆ ಕೆಲವು ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟಿರುವುದು ದುರಾದೃಷ್ಟಕರ ಎಂದು ಅಸಮಧಾನ ವ್ಯಕ್ತಪಡಿಸಿದರು. ಕೂಲಿ ಹರಸಿಕೊಂಡು ಗುತ್ತಿಗೆ ಆಧಾರದ ಮೇಲೆ ಹಾಗೂ ಖಾಯಂ ಉದ್ಯೋಗದ ಮೇಲೆ ದುಡಿಯುವ ಅಮಾಯಕರನ್ನು ಬಂಡವಾಳವಾಗಿಸಿಕೊಂಡು ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳ ಮೇಲ ತಮ್ಮ ದರ್ಪವನ್ನು ತೋರಿಸುತ್ತಿರುವುದು ಸತ್ಯಕ್ಕೆ ದೂರವಾದ ವಿಚಾರವಲ್ಲ ಎಂದು ಆರೋಪ ಮಾಡಿದರು. ಎರಡು…

Read More

ಧಾರವಾಡ : ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಸಿಗದೇ ಹೋದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಯಲಿವೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಕಿಡಿಕಾರಿದ್ದಾರೆ. ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ನಾವು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಕಳೆದ ಸರ್ಕಾರ ಕೊನೆ ಘಳಿಗೆಯಲ್ಲಿ ನಮಗೆ 2ಡಿ ಮೀಸಲಾತಿ ನೀಡಿತು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದು ಆದೇಶ ಪತ್ರ ನಮ್ಮ ಕೈ ಸೇರಲೇ ಇಲ್ಲ. ಈಗ ಹೊಸ ಸರ್ಕಾರ ಬಂದಿದೆ. ನಮ್ಮ ಸಮಾಜದ ಶಾಸಕರು, ಸಚಿವರು ಮೀಸಲಾತಿಗಾಗಿ ಮತ್ತೆ ಸಿಎಂ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯನವರು ಬಜೆಟ್ ಅಧಿವೇಶನ ಮುಗಿದ ಮೇಲೆ ನಮ್ಮ ಸಮಾಜದ ಮುಖಂಡರ ಸಭೆ ಕರೆಯುವುದಾಗಿ ಹೇಳಿ ಇಂದಿಗೂ ಸಭೆ ಕರೆದಿಲ್ಲ. ಇದರಿಂದಾಗಿ ಮತ್ತೆ ನಾವು ಹೋರಾಟ ಆರಂಭಿಸಿದ್ದೇವೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಷ್ಟಲಿಂಗ ಪೂಜೆ…

Read More

ದಾವಣಗೆರೆ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದಾವಣಗೆರೆಯ ಜಯದೇವ ವೃತ್ತದಲ್ಲಿ ರೈತರ ಪ್ರತಿಭಟನೆ ನಡೆಸಿದರು.  ಬರಗಾಲ ಬೆಳೆ ನಷ್ಟ ಪರಿಹಾರ ನೀಡಬೇಕು, ಅಕ್ರಮ- ಸಕ್ರಮ ವಿದ್ಯುತ್ ಯೋಜನೆ ಮುಂದುವರಿಸಬೇಕು, ಬಗರ್ ಹುಕುಂ ಸಾಗುವಳಿ ಪತ್ರ ವಿತರಣೆ ಮಾಡಬೇಕು ಮತ್ತು ಬಲವಂತದ ಸಾಲ ವಸೂಲಾತಿ ನಿಲ್ಲಿಸುವಂತೆ ಒತ್ತಾಯ ಮಾಡಿದರು. ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಎಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಿದರು.

Read More

ಬೆಳಗಾವಿ : ‘ರಾಜ್ಯದಲ್ಲಿ ಮುಸ್ಲಿಮ್ ಸಮುದಾಯಕ್ಕೆ ನೀಡಿದ್ದ 2ಬಿ ಮೀಸಲಾತಿಯನ್ನು ಮರುಸ್ಥಾಪಿಸಿ, ಮೀಸಲಾತಿ ಪ್ರಮಾಣವನ್ನು ಶೇ 8ರಷ್ಟು ಹೆಚ್ಚಿಬೇಕು‘ಕಾಂತರಾಜ ವರದಿ ಜಾರಿಗೆ ಜಾರಿಗೊಳಿಸಬೇಕೆಂದು ಎಂದು ಆಗ್ರಹಿಸಿ ಬೆಳಗಾವಿಯ ಗಾಂಧಿನಗರ ರಸ್ತೆ ಪಕ್ಕ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗಾಂಧಿ ನಗರದಲ್ಲಿ ಸೇರಿದ ಪ್ರತಿಭಟನ ಕಾರರು ‘ಸಿದ್ದರಾಮಯ್ಯನವರು ಬಳ್ಖಾರಿಯಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಚಣ 2ಬಿ ಮಿಸಲಾತಿ ಜಾರಿಗೋಳಿಸುತ್ತೆನೆಂದು ಹೇಳಿ ಈಗ ಸದನದಲ್ಲಿ ಚರ್ಚೆ ಮಾಡಿಲ್ಲ,ಅವರಿಗೆ ಬಿಜೆಪಿ ಭಯವಿದೆ ಎಂದು ಘೋಷಣೆ ಕೂಗಿದರು.ಅವರು ಅಹಿಂದ ವರ್ಗದ ಪರವೆಂದಾದರೆ ಕಾಂತರಾಜ್ ಆಯೋಗದ ವರದಿ ಜಾರಿಗೊಳಿಸಿ ‘ಮುಸ್ಲಿಮ್‌ ಸಮುದಾಯದವರಿಗೆ 2ಬಿ ಮೀಸಲಾತಿ ಮರು ಸ್ಥಾಪಿಸಿ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. https://ainlivenews.com/representative-traveled-330-km-on-a-rented-bike-and-went-to-the-assembly/ ‘ಹಿಂದಿನ ಬಿಜೆಪಿ ಸರ್ಕಾರ, ಮುಸ್ಲಿಮ್ ಸಮುದಾಯವನ್ನು ಹಿಂದುಳಿದ ವರ್ಗಗಳಿಂದ ಹೊರಗಿಡಲು 2ಬಿ ಮೀಸಲಾತಿಯನ್ನು ರದ್ದುಗೊಳಿಸಿತ್ತು. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ 2ಬಿ ಮೀಸಲಾತಿಯನ್ನು ಪುನರ್‌ ಸ್ಥಾಪಿಸುವುದಾಗಿ ಘೋಷಿಸಲಾಗಿತ್ತು. ಅಧಿಕಾರಕ್ಕೆ ಬಂದು ಆರು ತಿಂಗಳಾದರೂ…

Read More

ಧಾರವಾಡ: ತನ್ವೀರ್ ಹಾಸ್ಮಿ ಕುಟುಂಬದ ಜೊತೆಗೆ ಯತ್ನಾಳ ಅವರು ಬ್ಯುಸಿನೆಸ್ ಪಾಟ್ನರಾಗಿದ್ದಾರೆ ಎಂದು ದಾಖಲೆ ಸಮೇತವಾಗಿ ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡ ಇಸ್ಮಾಯಲ್ ತಮಾಟಗಾರವರು ಯತ್ನಾಳ ಅವರಿಗೆ ಟಾಂಗ್ ನೀಡಿದ್ದಾರೆ. ‌ನಗರದಲ್ಲಿ‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗ ಯತ್ನಾಳ ಅವರು ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಟ್ವಿಟ್ ಮಾಡಿ ಯಾವುದೇ ವ್ಯವಹಾರವಿಲ್ಲ ಎಂದಿದ್ದಾರೆ. ಅದಕ್ಕೆ ನಾವು ದಾಖಲೆ ಸಮೇತ ಉತ್ತರ ನೀಡುತ್ತಿದ್ದೇವೆ. ವಿಜಯಪುರದ ವಾರ್ಡ ನಂ 3 cts ನಂ 1644/3, 594 ಸ್ಕ್ವಯರ್ ಏರಿಯಾ ಇದೆ. ಎಮ್ ಎಮ್ ಫೀರಜಾದೆ ಹಾಗೂ ಬಸನಗೌಡ ರಾಮನಗೌಡ ಯತ್ನಾಳ ಅವರ ಹೆಸರಿನಲ್ಲಿದೆ. ಇದು ಇತ್ತೀಚಿನ ಉತ್ತಾರವಾಗಿದೆ. ಫೀರಜಾದೆ ಅವರು ತನ್ವೀರ್ ಹಾಸ್ಮಿಯವರ ತಾಯಿ ಅಣ್ಣರಾಗಿದ್ದಾರೆ. ಫೀರಜಾದೆ ಹಾಗೂ ಯತ್ನಾಳ ಅವರು ಆರೋಪ ಮಾಡಿರುವ ತನ್ವೀರ್ ಹಾಸ್ಮಿಯವರಿಗೆ ಮಾಮಾ ಆಗಬೇಕು. ಯತ್ನಾಳವರು ವ್ಯವಹಾರವಿಲ್ಲ ಅಂತಾ ಹೇಳುತ್ತಾರೆ ದಾಖಲೆಗಳು ಸುಳ್ಳು ಹೇಳುವುದಿಲ್ಲ. ಅದೇ ಜಾಗದಲ್ಲಿ ಈಗ ಟೂರಿಸ್ಟ್ ಹೋಟೆಲ್ ಪಾಟ್ನರಶೀಫ್‌ನಲ್ಲಿ ನಡೆಯುತ್ತಿದೆ. ರಾಜಕೀಯ ಬೇರೆ…

Read More

ತುಮಕೂರು: ಕಾಂಗ್ರೆಸ್ ರಾಜ್ಯ ಸಭಾ ಸದಸ್ಯನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಹಿನ್ನೆಲೆ ತುಮಕೂರು ನಗರದ ಹಾಲ್ ವೃತ್ತದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯಸಭಾ ಸದಸ್ಯನ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಧಿಕ್ಕಾರ ಎಂದು ಬರೆದಿರುವ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದು, ಜಾರ್ಖಂಡ್ ಸಂಸದ ಧೀರಜ್ ಸಾಹುಗೆ ಧಿಕ್ಕಾರ ಕೂಗಿದ ಕಾರ್ಯಕರ್ತರು.‌. ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಎಂದು ಕೂಗಿ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕರವಿ ಶಂಕರ್ ನೇತೃತ್ವದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More

ತುಮಕೂರು: ತುಮಕೂರಿನಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಬೆವಿಕಂ ಅಧೀಕ್ಷಕ ಇಂಜಿನಿಯರ್ ರವರ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ ಮಾಡಲಾಗಿದ್ದು, ರೈತರ ನೀರಾವರಿ ಪಂಪ್ ಸೆಟ್ ಗಳಿಗೆ ತತ್ಕಾಲ್ ಸ್ಕೀಂ ನಲ್ಲಿ ಅನುದಾನ ನೀಡಬೇಕು. ಅಕ್ರಮ ಸಕ್ರಮ ಯೋಜನೆಯಡಿ ಪಂಪ್ ಸೆಟ್ ಗಳಿಗೆ ಪುನಃ ಚಾಲನೆ ನೀಡಬೇಕು. ಸರ್ವೆ ನಂಬರ್ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಗೆ ಅವಕಾಶ. ಅಕ್ರಮ ಸಕ್ರಮ ಗಂಗಾಕಲ್ಯಾಣ ಹೊಸ ಸಂಪರ್ಕ ಕಾಮಗಾರಿಗಳ ಒಂದರಿಂದ ಐದು ಲಕ್ಷದವರೆಗೆ ಹೆಚ್ಚಿಸಬೇಕು. ಒಟ್ಟು 19 ಬೇಡಿಕೆಗಳನ್ನು ಈಡೆರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು. ಬೆಂಗಳೂರು ತುಮಕೂರು ಚಿತ್ರದುರ್ಗ ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಿಂದ ಗುತ್ತಿಗೆದಾರರು ಭಾಗಿ ಯಾಗಿದ್ದರು.

Read More