Author: AIN Author

ಕೃಷಿಯಲ್ಲಿ ಆಸಕ್ತಿ ಇದ್ದರೆ ಪೇರಳೆ ಬೆಳೆಯಬಹುದು. ಪೇರಳೆ ಕೃಷಿ ಮಾಡುವ ಮೂಲಕ ನೀವು ಹೆಚ್ಚಿನ ಲಾಭವನ್ನು ಗಳಿಸಬಹುದು. ನೀವು ಪೇರಳೆ ಕೃಷಿ ಮಾಡಿದರೆ, ನೀವು ಕೇವಲ ಒಂದು ಹೆಕ್ಟೇರ್‌ನಿಂದ ಒಂದು ವರ್ಷದಲ್ಲಿ 25 ಲಕ್ಷದವರೆಗೆ ಗಳಿಸಬಹುದು. ಇದರಲ್ಲಿ ನಿಮ್ಮ ಲಾಭ ಸುಮಾರು 15 ಲಕ್ಷ ರೂಪಾಯಿವರೆಗೂ ಸಿಗಲಿದೆ.  ನೀವು ಉತ್ತಮ ಇಳುವರಿಯನ್ನು ಪಡೆಯಲು ಸುಧಾರಿತ ಗುಣಮಟ್ಟದ ಬೀಜಗಳನ್ನು ಮಾತ್ರ ಆರಿಸಬೇಕು.  ಪೇರಳೆ ಕೃಷಿಯನ್ನು ಹೇಗೆ ಮಾಡುವುದು ಇಲ್ಲಿದೆ ಮಾಹಿತಿ. ಇದು ಉತ್ತಮ ಬೆಳೆಯಾಗಿದ್ದು, ಹಗುರವಾದ ಮಣ್ಣು ಸೇರಿದಂತೆ ಎಲ್ಲಾ ರೀತಿಯ ಮಣ್ಣುಗಳು ಇದರ ಕೃಷಿಗೆ ಸೂಕ್ತವಾಗಿದೆ. 6.5 ರಿಂದ 7.5 ಪಿಹೆಚ್ ಇರುವ ಮಣ್ಣಿನಲ್ಲಿಯೂ ಇದನ್ನು ಬೆಳೆಯಬಹುದು. ಅಲ್ಲದೆ ಹೊಲವನ್ನು ಎರಡು ಬಾರಿ ಓರೆಯಾಗಿ ಉಳುಮೆ ಮಾಡಿ ನಂತರ ಸಮತಟ್ಟು ಮಾಡಿ. ಅದರಲ್ಲಿ ನೀರು ನಿಲ್ಲದ ರೀತಿಯಲ್ಲಿ ಗದ್ದೆಯನ್ನು ಸಿದ್ಧಪಡಿಸಿ. ಫೆಬ್ರವರಿ-ಮಾರ್ಚ್ ಅಥವಾ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಪೇರಳೆ ಸಸಿಗಳನ್ನು ನೆಡಲು ಸೂಕ್ತವೆಂದು ಪರಿಗಣಿಸಲಾಗಿದೆ. ಸಸಿಗಳನ್ನು ನೆಡಲು 6×5 ಮೀಟರ್ ಅಂತರ ಕಾಯ್ದುಕೊಳ್ಳಿ.…

Read More

ವಿಜಯನಗರ :-ರಾಜ್ಯ ಸರ್ಕಾರ ರೈತರ ಪಾಲಿಗೆ ಸತ್ತು ಹೋಗಿದೆ ಎಂದು ಹೇಳುವ ಮೂಲಕ ಎನ್.ರವಿಕುಮಾರ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಹೊಸಪೇಟೆಯಲ್ಲಿ ಮಾತನಾಡಿದ ಅವರು, ನಾವು ಶ್ರೀರಾಮನ ಪೂಜಾರಿಗಳು, ವ್ಯಾಪಾರಿಗಳಲ್ಲಾ. ಕಾಂಗ್ರೆಸ್ ನವರಿಗೆ ವ್ಯಾಪಾರ ಗೊತ್ತು ಎಂದು ಜೈರಾಮ್ ರಮೇಶ್ ಗೆ ಇದೇ ವೇಳೆ ಟಾಂಗ್ ಕೊಟ್ಟಿದ್ದಾರೆ. https://ainlivenews.com/kalaburgi-hand-candidate-nomination-tomorrow-congress-gearing-up-for-show-of-strength/#google_vignette ಬರ, ಮೇವಿಲ್ಲ, ರೈತರ ಪರಿಸ್ಥಿತಿ ಅರಣ್ಯ ರೋಧನವಾಗಿದೆ. ರಾಜ್ಯ ಸರಕಾರ ಕೇಂದ್ರ ಸರಕಾರದ ವಿರುದ್ಧ ದೂರುವುದನ್ನು ಬಿಟ್ಟರೆ ರೈತರ ಪಾಲಿಗೆ ಸತ್ತು ಹೋಗಿದೆ. ರಾಜ್ಯ ಸರಕಾರ ಕೂಡಲೇ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು. 2 ಸಾವಿರ ಮಾತ್ರ ಕೊಟ್ಟಿದ್ದಾರೆ, ಇದು ಯಾವುದಕ್ಕೂ ಸಾಲಲ್ಲ, ಎಕರೆಗೆ ಇಂತಿಷ್ಟು ಪರಿಹಾರ ಕೊಡಬೇಕು. ರಾಜ್ಯ ಸರಕಾರ ಕೋರ್ಟ್ ಗೆ ಹೋಗಿರುವುದು, ರೈತರಿಗೆ ಪರಿಹಾರ ಕೊಡಲಾಗಲ್ಲ ಅಂತಾನೊ ಅಥವಾ ಕೇಂದ್ರ ಸರಕಾರ ಕೊಡ್ತಿಲ್ಲ ಅಂತಾನೋ ಜನರಿಗೆ ಉತ್ತರಿಸಿ. ಶಾಸಕರೇ ಸರಕಾರ ಅನುದಾನ ಕೊಡ್ತಿಲ್ಲ ಅಂತ ದೂರುತ್ತಿದ್ದಾರೆ. ೇಂದ್ರವನ್ನು ದೂರುವುದರಿಂದ ಯಾವುದೇ ಲಾಭವಿಲ, ಜನರು ಶಾಪ ಹಾಕುತ್ತಿದ್ದಾರೆ.…

Read More

ಮುಂಬೈ: ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಕೃನಾಲ್‌ ಪಾಂಡ್ಯ ಅವರ ಮಲಸಹೋದರ ವೈಭವ್‌ ಪಾಂಡ್ಯ ಅವರನ್ನ ಮುಂಬೈ ಪೊಲೀಸರು (Mumbai Police) ಬಂಧಿಸಿರುವ ಘಟನೆ ನಡೆದಿದೆ. 4.3 ಕೋಟಿ ರೂ. ವಂಚಿಸಿರುವುದಾಗಿ (Cheating Case) ಹಾರ್ದಿಕ್‌ ಪಾಂಡ್ಯ ನೀಡಿದ ದೂರಿನ ಮೇರೆಗೆ ಅವರನ್ನ ಬಂಧಿಸಲಾಗಿದೆ. ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ ಹಾಗೂ ವೈಭವ್‌ ಪಾಂಡ್ಯ (Vaibhav Pandya) ಮೂವರು ಸೇರಿ ನಡೆಸುತ್ತಿದ್ದ ಪಾಲುದಾರಿಕೆ ಸಂಸ್ಥೆಯಿಂದ ಪಾಂಡ್ಯ ಬ್ರದರ್ಸ್‌ಗೆ ವೈಭವ್‌ ನಷ್ಟವುಂಟು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಾರ್ದಿಕ್‌, ಕೃನಾಲ್‌ (Krunal Pandya) ಮತ್ತು ವೈಭವ್‌ 2021ರಲ್ಲಿ ವ್ಯವಹಾರವೊಂದನ್ನ ಆರಂಭಿಸಿದ್ದರು. ಪಾಲುದಾರಿಕೆ ಸಂಸ್ಥೆ ಒಪ್ಪಂದದ ಪ್ರಕಾರ, https://ainlivenews.com/big-news-for-government-employees-important-order-for-old-pension/ ಬಂದ ಲಾಭದಿಂದ ಪಾಂಡ್ಯ ಬ್ರದರ್ಸ್‌ಗೆ ತಲಾ 40%, ವೈಭವ್‌ಗೆ 20% ಹಂಚಿಕೊಳ್ಳಬೇಕಿತ್ತು. ಆದ್ರೆ ವೈಭವ್‌ ಪ್ರತ್ಯೇಕ ಕಂಪನಿಯೊಂದನ್ನ ಸ್ಥಾಪಿಸಿ, ಪಾಂಡ್ಯ ಬ್ರದರ್ಸ್‌ ಸ್ಥಾಪಿಸಿದ್ದ ಸಂಸ್ಥೆ ಹಣವನ್ನ ಅದಕ್ಕೆ ಬಳಸಿಕೊಳ್ಳುತ್ತಿದ್ದರು. ಈ ಕುರಿತು ಹಾರ್ದಿಕ್‌ ಪಾಂಡ್ಯ ಅವರು ಮುಂಬೈ…

Read More

ಕಲಬುರಗಿ:- ಕೈ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ನಾಮಪತ್ರ ಸಲ್ಲಿಕೆ ಹಿನ್ನಲೆ ಕಲಬುರಗಿಯಲ್ಲಿ ನಾಳೆ ಕಾಂಗ್ರೆಸ್ ಪಕ್ಷ ಶಕ್ತಿ ಪ್ರದರ್ಶನ ಮಾಡಲು ಸಿದ್ದತೆ ಮಾಡಿಕೊಂಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಿಸಿಎಂ ಡಿಕೆ ಶಿವಕುಮಾರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಕೈ ಸಚಿವರು ಶಾಸಕರು ಸಾವಿರಾರು ಕಾರ್ಯಕರ್ತರು ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ.. https://ainlivenews.com/special-fair-devotees-who-jump-on-thorns/ ಸಮಾವೇಶಕ್ಕೆ ನಗರದ ಎನ್ ವಿ ಮೈದಾನದಲ್ಲಿ ಭರದ ಸಿದ್ಧತೆ ಮಾಡಲಾಗುತ್ತಿದೆ. ಅಳಿಯ ರಾಧಾಕೃಷ್ಣ ಗೆಲುವಿಗೆ ಸಂಕಲ್ಪ ಮಾಡಿರೋ ಮಾವ ಖರ್ಗೆ ಅಳಿಯನ ಮೂಲಕ ಕಳೆದ ಬಾರಿ ಮಿಸ್ ಆದ ಸೀಟು ಪಡೆಯಲು ಪಣ ತೊಟ್ಟಿದ್ದಾರೆ.

Read More

ವಿಜಯನಗರ:-ಇಲ್ಲೊಂದು ಆಚರಣೆಯಿದೆ, ಇಲ್ಲಿ ಮುಳ್ಳುಗಳ ಮೇಲೆ ಯುವಕರು ಜಿಗಿಯುತ್ತಾರೆ, ಮುಳ್ಳಿನ ಮೇಲೆ ಕುಣಿದಾಡುತ್ತಾರೆ, ಮುಳ್ಳನ್ನು ಹಾಸಿಗೆ ಮಾಡಿಕೊಂಡು ಮಲಗುತ್ತಾರೆ. ಮುಳ್ಳಿನ ಮೇಲೆ ಜಿಗಿದಾಡಿದರೂ ಯುವಕರಿಗೆ ನೋವು ಆಗುವುದಿಲ್ಲವಂತೆ. ಎಲ್ಲವೂ ಆಂಜನೇಯ ಮಹಿಮೆ ಎಂಬ ನಂಬಿಕೆ ಇದೆ. ಮುಳ್ಳಿನ ಮೇಲೆ ಜಿಗಿದಾಡಿ ದೇಹ ದಂಡಿಸಿ ಹರಕೆ ತೀರಿಸುವುದು ಒಂದು ಸಂಪ್ರಾದಾಯವಿದೆ. https://ainlivenews.com/celebration-of-ramadan-across-bellary-district/ ಹೌದು, ಆಧುನಿಕ ಯುಗ, ತಂತ್ರಜ್ಞಾನ ಯುಗದಲ್ಲಿಯೂ ಮುಳ್ಳಿನ ಜಾತ್ರೆ, ಮುಳ್ಳು ಗದ್ದೆ ಉತ್ಸವ ನಡೆದಿದ್ದು, ವಿಜಯನಗರ ಜಿಲ್ಲೆಯ ನಾನಾ ಕಡೆ ಮುಳ್ಳಿನ ಮೇಲೆ ನಡೆದು ಪವಾಡಕ್ಕೆ ಯುಗಾದಿ ಹಬ್ಬ ಸಾಕ್ಷಿ ಆಗಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತ್ತನೂರು, ವಲ್ಲಭಾಪುರ ಗ್ರಾಮಗಳಲ್ಲಿ ಮುಳ್ಳುಗದ್ದಿ ಉತ್ಸವ ನಡೆದಿದ್ದು, ಆಂಜನೇಯ ಸ್ವಾಮಿ ಜಾತ್ರೆ ಪ್ರಯುಕ್ತ ನಡೆದ ಬ್ಯಾಟಿಗಿಡ (ಮುಳ್ಳು ಪವಾಡ) ಉತ್ಸವ ಜೋರಾಗಿತ್ತು. ಮುಳ್ಳಿನ ಮೇಲೆ ನಡೆದು ಬಂದು ಭಕ್ತ ವೃಂದ ಭಕ್ತಿ ಸಮರ್ಪಿಸಿದ್ದಾರೆ. ತಲೆತಲಾಂತರಗಳಿಂದಲೂ ಬಂದ ಮುಳ್ಳು ಗದ್ದೆ ಉತ್ಸವ ಜೋರಾಗಿದೆ ನಡೆದು ಕೊಂಡು ಬಂದಿದ್ದು, ಎಲ್ಲರ ಗಮನ ಸೆಳೆದಿದೆ.

Read More

ಚಿಕನ್ ಬಾರ್ಬೆಕ್ಯೂ ಎಂದರೆ ನಾನ್‌ವೆಜ್ ಪ್ರಿಯರ ಬಾಯಲ್ಲಿ ನೀರು ಬರದೇ ಇರಲಾರದು. ರೆಸ್ಟೊರೆಂಟ್ ಇಲ್ಲವೇ ಸ್ಟ್ರೀಟ್ ಫೂಡ್ ಆಗಿ ಇದು ಹೆಚ್ಚು ಫೇಮಸ್ ಇದ್ದರೂ ಕಡಿಮೆ ವೆಚ್ಚದಲ್ಲಿ ಮನೆಯಲ್ಲಿಯೂ ಮಾಡಬಹುದು. ಹಾಲಿಡೇ ಟೈಮ್‌ನಲ್ಲಿ ಟ್ರೈ ಮಾಡೋಕೆ ಪರ್ಫೆಕ್ಟ್ ರೆಸಿಪಿ ಕೂಡಾ ಹೌದು. ನಾವಿಂದು ಬಾರ್ಬೆಕ್ಯೂ ಚಿಕನ್ ಸಲಾಡ್ ಮಾಡೋದು ಹೇಗೆಂದು ಹೇಳಿಕೊಡಲಿದ್ದೇವೆ. ಇದನ್ನೂ ಒಮ್ಮೆ ಟ್ರೈ ಮಾಡಿ, ಬಾರ್ಬೆಕ್ಯೂ ವಿವಿಧ ರೀತಿಯಲ್ಲಿ ಸವಿದು ನೋಡಿ. ಬೇಕಾಗುವ ಪದಾರ್ಥಗಳು: ಆಲಿವ್ ಎಣ್ಣೆ – 1 ಟೀಸ್ಪೂನ್ ಮೂಳೆಗಳಿಲ್ಲದ, ಚರ್ಮರಹಿತ ತೆಳ್ಳಗೆ ಕತ್ತರಿಸಿದ ಚಿಕನ್ ಬ್ರೆಸ್ಟ್ – 2 ಕರಿಮೆಣಸಿನ ಪುಡಿ – ಸ್ವಾದಕ್ಕನುಸಾರ ಉಪ್ಪು – ರುಚಿಗೆ ತಕ್ಕಷ್ಟು ಬೇಯಿಸಿದ ಕಾರ್ನ್ ಕರ್ನಲ್ಸ್ – ಮುಕ್ಕಾಲು ಕಪ್ ಬೇಯಿಸಿದ ಕಪ್ಪು ಬೀನ್ಸ್ ಕಾಳು – ಮುಕ್ಕಾಲು ಕಪ್ ಹೆಚ್ಚಿದ ಈರುಳ್ಳಿ – ಕಾಲು ಕಪ್ ಹೆಚ್ಚಿದ ಟೊಮೆಟೋ – ಕಾಲು ಕಪ್ ತುರಿದ ಚೀಸ್ – ಅರ್ಧ ಕಪ್ ಮೆಯಾನೀಸ್ – ಕಾಲು…

Read More

ಬಳ್ಳಾರಿ:- ಇಂದು ನಾಡಿನಾದ್ಯಂತ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಅದರಂತೆ ಬಳ್ಳಾರಿ ಜಿಲ್ಲೆಯಾದ್ಯಂತ ಇಂದು ಸಡಗರ, ಸಂಭ್ರಮದಿಂದ ಮುಸ್ಲಿಂ ಬಾಂದವರು ರಂಜಾನ್ ಆಚರಣೆಯನ್ನು ನೆರವೇರಿಸಿದ್ದಾರೆ. https://ainlivenews.com/by-vijayendra-launched-a-great-campaign-in-kollegala/ ಮುಸ್ಲಿಂ ಸಮುದಾಯದ ಜನರು ರಂಜಾನ್ ಆಚರಣೆ ಅಂಗವಾಗಿ ಹೊಸ ಹೊಸ ಉಡುಪುಗಳನ್ನು ಧರಿಸಿ ವಿವಿಧ ದರ್ಗಾಗಳಿಗೆ ತೆರಳಿ ಪವಿತ್ರ ಪ್ರಾರ್ಥನೆ ಕೈಗೊಂಡರು. ಧರ್ಮ ಬೋಧನೆ ನಂತರ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು. ಕಂಪ್ಲಿ ನಗರದ ವಿವಿಧ ದರ್ಗಾಗಳು ಸೇರಿದಂತೆ ಜಿಲ್ಲೆಯ ಹಲವೆಡೆ ಬೆಳಗ್ಗೆಯಿಂದಲೇ ಪ್ರಾರ್ಥನೆ ಆರಂಭವಾಯಿತು. ಅದರಂತೆ ಜಿಲ್ಲೆಯಲ್ಲಿ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿತ್ತು.

Read More

ಚಾಮರಾಜನಗರ:- ಜನಪದ ಕಲೆಗಳ ತವರೂರು ಗಡಿ ಜಿಲ್ಲೆ ಚಾಮರಾಜನಗರದ ಕೊಳ್ಳೇಗಾಲದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇಂದು ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಚಾಮರಾಜನಗರ ಲೋಕಸಭೆ ಕ್ಷೇತ್ರದ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರಿದ್ದು, ಹೀಗಾಗಿ ಬಿಜೆಪಿ ಭರ್ಜರಿ ಪ್ರಚಾರ ಕೈಗೊಂಡಿದೆ. ಇಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಹಾಗೂ ಹನೂರಲ್ಲಿ ಭರ್ಜರಿ ರೋಡ್ ಶೋ ಜರುಗಿದ್ದು, ಚಾಮರಾಜನಗರ ಲೋಕಸಭಾಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬೃಹತ್ ಶಕ್ತಿ ಪ್ರದರ್ಶನ ನಡೆದಿದೆ. https://ainlivenews.com/the-campaign-of-bloodshed-is-not-stopping-at-kunigal/ ರೋಡ್ ಶೋ ಮೂಲಕ ಎನ್.ಡಿ.ಎ.ಅಭ್ಯರ್ಥಿ ಎಸ್.ಬಾಲರಾಜು ಪರ ಬಿವೈ ವಿಜಯೇಂದ್ರ ಮತಯಾಚನೆ ಮಾಡಿದ್ದಾರೆ. ಕೊಳ್ಳೇಗಾಲ ನಗರದ ಪ್ರಮುಖ ರಸ್ತೆಯಲ್ಲಿ ಬೃಹತ್ ರೋಡ್ ಶೋ ಮೂಲಕ ಮತಬೇಟೆ ಮಾಡಿದ್ದು, ಭರ್ಜರಿ ರೋಡ್ ಶೋ ವೇಳೆ ಬಿ.ವೈ.ವಿಜಯೇಂದ್ರ ಜೊತೆ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಹಾಗೂ ಬಿಜೆಪಿ ಮುಖಂಡರು ಭಾಗಿಯಾಗಿದರು.

Read More

ತುಮಕೂರು:- 2024 ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ದಿನೇ ದಿನೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕುಣಿಗಲ್ ನಲ್ಲಿ ರಕ್ತ ಪಾತದ ಚುನಾವಣಾ ಪ್ರಚಾರ ನಿಲ್ಲುತ್ತಿಲ್ಲ. ಬೆಂ.ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಪರ ಪ್ರಚಾರ ಮಾಡಿದ್ದಕ್ಕೆ ಜೆಡಿಎಸ್ ಗ್ರಾ.ಪಂ ಸದಸ್ಯನ ಮೇಲೆ ಕೊಲೆ ಯತ್ನ ಆರೋಪ ಕೇಳಿ ಬಂದಿದೆ. ಮನೆಯಲ್ಲಿದ್ದವನಿಗೆ ಪದೆ ಪದೆ ಕಾಲ್ ಮಾಡಿ‌ ಕರೆಸಿಕೊಂಡು ಚಾಕುವಿನಿಂದ ಇರಿಯಲು ಯತ್ನಿಸಿ ಮನ ಬಂದಂತೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. https://ainlivenews.com/actor-vinod-raj-wished-good-luck-to-muslim-relatives/ ಗ್ರಾ.ಪಂ ಸದಸ್ಯನ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಮೊನ್ನೆ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಚಾಕು ಇರಿತ, ಇವತ್ತು ಜೆಡಿಎಸ್ ಗ್ರಾ.ಪಂ ಸದಸ್ಯನ ಮೇಲೆ ಚಾಕು ಇರಿತಕ್ಕೆ ಯತ್ನಿಸಿದ ಆರೋಪ ಕೇಳಿ ಬಂದಿದೆ. ಅದೃಷ್ಟವಶಾತ್ ದಾಳಿಯಿಂದ ಗ್ರಾ.ಪಂ ಸದಸ್ಯ ಪಾರಾಗಿದ್ದಾರೆ. ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಅಂಚೆಪಾಳ್ಯದಲ್ಲಿ ಘಟನೆ ಜರುಗಿದೆ. ಕುಣಿಗಲ್ ತಾಲೂಕು, ಕೆಂಪನಹಳ್ಳಿ‌ ಗ್ರಾ.ಪಂ ಜೆಡಿಎಸ್ ಸದಸ್ಯ ಮಂಜುನಾಥ್ ಮೇಲೆ ಹಲ್ಲೆ‌ ನಡೆದಿದ್ದು, ಬೋರೆಗೌಡ…

Read More

ನಾಡಿನಾದ್ಯಂತ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಅದರಂತೆ ನೆಲಮಂಗಲದ ದರ್ಗಾಗಳಿಗೆ ತೆರಳಿ ಹಣ್ಣು ಹಂಪಲು ವಿತರಿಸುವ ಮೂಲಕ ರಂಜಾನ್ ಹಬ್ಬಕ್ಕೆ ನಟ ವಿನೋದ್ ರಾಜ್ ಶುಭ ಕೋರಿದ್ದಾರೆ. https://ainlivenews.com/bully-on-voters-by-dk-brothers-r-ashok-kidi/ ಈ ಹಿನ್ನೆಲೆ, ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹಿರಿಯ ನಟ ಸಾಕ್ಷಿಯಾಗಿದ್ದಾರೆ. ಪ್ರತಿ ವರ್ಷವು ರಂಜಾನ್ ತಿಂಗಳಲ್ಲಿ ದರ್ಗಾಗೆ ನಟ ವಿನೋದ್ ರಾಜ್ ತೆರಳುತ್ತಾರೆ. ಪ್ರತಿ ವರ್ಷ ರಂಜಾನ್ ವೇಳೆ ತಾಯಿಯೊಂದಿಗೆ ರಂಜಾನ್ ಆಚರಣೆ ಮಾಡಲಾಗುತ್ತದೆ. ತಾಯಿ ಲೀಲಾವತಿ ಇಲ್ಲದೆ ಈ ವರ್ಷ ಮುಸ್ಲಿಂ ಭಾಂಧವರಿಗೆ ವಿನೋದ್ ಶುಭಾಷಯ ತಿಳಿಸಿದ್ದಾರೆ. ಈ ಮೂಲಕ ಮಾನವೀಯತೆ ಸಂದೇಶ ಸೇರಿದ್ದಾರೆ.

Read More