ಬಿಗ್ ಬಾಸ್ ಸ್ಪರ್ಧಿ, ನಟಿ ಅಂಕಿತಾ ಲೋಖಂಡೆ ದುಡ್ಡು ತಗೆದುಕೊಳ್ಳದೇ ಯಾವುದೇ ಕೆಲಸ ಮಾಡುವುದಿಲ್ಲ ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ ಸಾವರ್ಕರ್ ಸಿನಿಮಾದಲ್ಲಿ ಆ ಸುದ್ದಿಯನ್ನು ನಟಿ ಸುಳ್ಳು ಮಾಡಿದ್ದಾರೆ. ವೀರ ಸಾವರ್ಕರ್ ಸಿನಿಮಾದಲ್ಲಿ ನಟಿಸಲು ಅಂಕಿತಾ ಯಾವುದೇ ಸಂಭಾವನೆ ಪಡೆದುಕೊಂಡಿಲ್ಲ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಸಾವರ್ಕರ್ ಪತ್ನಿಯ ಪಾತ್ರದಲ್ಲಿ ನಟಿಸುವಂತೆ ಕೇಳಿದಾಗ ಅಂಕಿತಾ ಕಂಡಷನ್ ಒಂದನ್ನ ಹಾಕಿದ್ದರಂತೆ. ಆ ಕಂಡೀಷನ್ ಗೆ ಒಪ್ಪಿದರೆ ಮಾತ್ರವೇ ಚಿತ್ರದಲ್ಲಿ ನಟಿಸೋದಾಗಿ ಹೇಳಿದ್ದರಂತೆ. ನಟಿ ಇಟ್ಟ ಬೇಡಿಕೆ ಏನಿರಬಹುದು ಎನ್ನುವ ಗೊಂದಲ ನಿರ್ಮಾಪಕರಿಗೆ ಆಗಿತ್ತಂತೆ. ಆದರೆ, ಈ ಸಿನಿಮಾಗಾಗಿ ನಾನು ಯಾವುದೇ ಸಂಭಾವನೆ ಪಡೆಯುವುದಿಲ್ಲ. ಉಚಿತವಾಗಿ ನಟಿಸುತ್ತೇನೆ. ಅದಕ್ಕೆ ಒಪ್ಪಿದರೆ ಮಾತ್ರ ಪಾತ್ರ ಮಾಡುತ್ತೇನೆ ಅಂದರಂತೆ ಅಂಕಿತಾ. ಇದು ನಟಿ ಬದ್ಧತೆ ಎಂದು ನಿರ್ಮಾಪಕರು ಹೇಳಿದ್ದಾರೆ.
ಸಾಕಷ್ಟು ಕಾರಣಗಳಿಂದ ನಿರೀಕ್ಷೆ ಮೂಡಿಸಿದ್ದ ‘ಸ್ವಾತಂತ್ರ ವೀರ್ ಸಾವರ್ಕರ್’ ಸಿನಿಮಾ ಇತ್ತೀಚೆಷ್ಟೇ ಬಿಡುಗಡೆ ಆಗಿದ್ದು ಅಂದುಕೊಂಡಷ್ಟು ಚಿತ್ರಕ್ಕೆ ಪ್ರತಿಕ್ರಿಯೆ ಸಿಕ್ಕಿಲ್ಲ. ಮೊದಲ ದಿನದ ಕಲೆಕ್ಷನ್ 1.15 ಲಕ್ಷ ರೂಪಾಯಿ ಆಗಿದ್ದು ನಂತರದ ದಿನಗಳಲ್ಲಿ ಹೆಚ್ಚಾಗಿ ಘಳಿಕೆ ಕಂಡು ಬಂದಿಲ್ಲ.