ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿ ಜೀವನದ ಸೀಕ್ರೆಟ್ ಒಂದನ್ನು ಹಂಚಿಕೊಂಡಿದ್ದಾರೆ.
ಅಂದ ಹಾಗೆ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಪಟ್ಟ ಗಿಟ್ಟಿಸಿಕೊಂಡರು. ಆದರೆ ಅದಕ್ಕೂ ಮೊದಲು ನಡೆದ ಘಟನೆಯನ್ನು ನಟಿ ರಿವೀಲ್ ಮಾಡಿದ್ದಾರೆ.
ಇಂದು ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿರುವ ರಶ್ಮಿಕಾ ಅಂದು ಸಾಕಷ್ಟು ಬಾರಿ ರಿಜೆಕ್ಟ್ ಆಗಿದ್ದರು. ಹೌದು ಈ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ. ‘ನಾನು ನನ್ನ ಮೊದಲ ಸಿನಿಮಾದಲ್ಲಿ ಸಕ್ಸಸ್ ಪಡೆಯುವ ಮೊದಲು ಕನಿಷ್ಠ 25 ಬಾರಿ ರಿಜೆಕ್ಟ್ ಆಗಿದ್ದೇನೆ. ಒಂದು ಸಿನಿಮಾಗೆ ನಾನು ಸೆಲೆಕ್ಟ್ ಆಗಿ ಎರಡು ತಿಂಗಳು ಟ್ರೇನಿಂಗ್ ಪಡೆದಿದ್ದೆ.
ಆ ಸಿನಿಮಾಕ್ಕೆ ‘ಗೆಳಯರೇ ಗೇಳತಿಯರೇ’ ಎಂದು ಟೈಟಲ್ ಇಡಲಾಗಿತ್ತು. ಆದರೆ ಆ ಚಿತ್ರವು ಟೇಕ್ಅಪ್ ಆಗಲೇ ಇಲ್ಲ. ಅದಾದ ಬಳಿಕ ಕೂಡ ಹಲವು ಕಡೆ ರಿಜೆಕ್ಟ್ ಎಂದು ಬಾಯಿ ಬಿಟ್ಟು ಹೇಳದಿದ್ದರೂ ನಾನು ಸೆಲೆಕ್ಟ್ ಎಂದು ಹೇಳಲಿಲ್ಲ. ಹಲವರು ನನ್ನ ಫೇಸ್ ಆಕ್ಟಿಂಗ್ಗೆ ಸೂಟ್ ಆಗಲ್ಲ ಅಂದ್ರು. ಇನ್ನೂ ಕೆಲವರು ನನಗೆ ಆಕ್ಟಿಂಗ್ ಬರುವುದಿಲ್ಲ ಅಂದ್ರು. ಮತ್ತೂ ಹಲವರು ನಾನು ನಟಿಯಾಗಲು ಸೂಕ್ತವಾಗಿಲ್ಲ ಅಂದ್ರು.
ಎಲ್ಲವೂ ಓಕೆ. ಆದರೆ ನಾನು ರಿಜೆಕ್ಟ್ ಆದಾಗ ನನಗೆ ಅತೀವ ಸಂಕಟವಾಗುತ್ತಿತ್ತು. ಹೊಟ್ಟೆಯಲ್ಲಿ ಸುಟ್ಟಹಾಗಾಗುತ್ತಿತ್ತು. ನನ್ನನ್ನು ರಿಜೆಕ್ಟ್ ಮಾಡಿದವರ ಮೇಲೆ ನನಗೆ ಕೋಪ ಇರಲಿಲ್ಲ, ದ್ವೇಷ ಇರಲಿಲ್ಲ, ಆದರೆ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು’ ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಇಷ್ಟೆಲ್ಲಾ ಆದ ಬಳಿಕವೇ ಅವರಿಗೆ ಕನ್ನಡದ ‘ಕಿರಿಕ್ ಪಾರ್ಟಿ’ ಸಿಕ್ಕಿದ್ದು, ಆ ಮೂಲಕ ಅವರು ಯಶಸಸ್ಸಿನ ಮೆಟ್ಟಿಲೇರಿದ್ದು.
ಹೀಗಾಗಿ ರಶ್ಮಿಕಾ ಸಕ್ಸಸ್ ಹಿಂದೆ ಅಪಾರವಾದ ನೋವಿದೆ, ಶ್ರಮವಿದೆ. ಅದನ್ನು ಅವರು ಹೆಚ್ಚಾಗಿ ಎಲ್ಲೂ ಹೇಳಿಕೊಂಡಿಲ್ಲ. ಅಂದಹಾಗೆ, ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ‘ಪುಷ್ಪಾ 2’ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಅಲ್ಲು ಅರ್ಜುನ್ ನಟನೆಯ ಈ ಚಿತ್ರವು ಸದ್ಯ ಶೂಟಿಂಗ್ ಹಂತದಲ್ಲಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ.