Author: Author AIN

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಪಲಾಯನಗೊಂಡ ಬಳಿಕ ಸರ್ಕಾರದ ಉಸ್ತುವಾರಿ ನಾಯಕರಾಗಿ ಮೊಹಮ್ಮದ್ ಯೂನಸ್ ಅಧಿಕಾರಿ ಸ್ವೀಕರಿಸಿದ್ದಾರೆ. ಇದೀಗ ಚುನಾವಣೆಗೂ ಮುನ್ನ ಕೆಲವು ಸುಧಾರಣಾ ಕಾರ್ಯಗಳು ನಡೆಯಬೇಕಿರುವ ಕಾರಣಕ್ಕೆ ಸಾರ್ವತ್ರಿಕ ಚುನಾವಣೆಯ ಕಾಲಮಿತಿ ನಿಗದಿಪಡಿಸಲು ಯೂನಸ್ ನಿರಾಕರಿಸಿದ್ದಾರೆ. ವಿದ್ಯಾರ್ಥಿ ಸಮುದಾಯ ನೇತೃತ್ವದ ಪ್ರತಿಭಟನೆಯಿಂದಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಪದಚ್ಯುತಗೊಂಡಿತ್ತು. ಆ ನಂತರ ರಚನೆಯಾಗಿದ್ದ ಉಸ್ತುವಾರಿ ಸರ್ಕಾರದ ಮುಖ್ಯ ಸಲಹೆಗಾರರಾಗಿ ಮೊಹಮ್ಮದ್ ಯೂನಸ್‌ ನೇಮಕಗೊಂಡಿದ್ದರು. 84 ವರ್ಷ ವಯಸ್ಸಿನ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರೂ ಆದ ಯೂನಸ್‌ ಅವರು, ಸದ್ಯ ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯನ್ನು ಮರುಸ್ಥಾಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ‘ಈ ಕಾರ್ಯ ತುಂಬಾ ಕಠಿಣವಾದುದಾಗಿದೆ’ ಎಂದೂ ಹೇಳಿಕೊಂಡಿದ್ದಾರೆ. ‘ಉಸ್ತುವಾರಿ ಸರ್ಕಾರದಲ್ಲಿರುವ ಯಾರಿಗೂ ಸುದೀರ್ಘ ಕಾಲ ಈ ಕಾರ್ಯದಲ್ಲಿ ಉಳಿಯುವ ಗುರಿ ಇಲ್ಲ’ ಎಂದು ಯೂನಸ್‌ ತಮ್ಮ ನೇತೃತ್ವದ ಉಸ್ತುವಾರಿ ಸರ್ಕಾರ ಕುರಿತು ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ನನ್ನ ಪ್ರಥಮ ಆದ್ಯತೆ ಸುಧಾರಣಾ ಕಾರ್ಯಕ್ರಮಗಳಿಗೆ. ನೀವು ಚುನಾವಣೆ ನಡೆಸಿ ಎಂದು…

Read More

ಅತ್ಯಂತ ಪ್ರಬಲ ಚಂಡಮಾರುತ ಎಂದೇ ಬಣ್ಣಿಸಲಾಗಿರುವ ಮಿಲ್ಟನ್ ಚಂಡಮಾರುತ ಅಮೆರಿಕದ ಫ್ಲೋರಿಡಾ ರಾಜ್ಯದ ಕಡಲ ತೀರಕ್ಕೆ ಅಪ್ಪಳಿಸಿದೆ. ಅಮೆರಿಕದ ಸ್ಥಳೀಯ ಕಾಲ ಮಾನ ಬುಧವಾರ ತಡ ರಾತ್ರಿ ಅಥವಾ ಗುರುವಾರ ಬೆಳಗ್ಗೆ ಈ ಚಂಡಮಾರುತ ಫ್ಲೋರಿಡಾ ಕಡಲ ತೀರಕ್ಕೆ ಅಪ್ಪಳಿಸಿದ್ದು ಇದರಿಂದ ಜನ ಜೀವನ ಅಸ್ತವ್ಯಸ್ಥವಾಗಿದೆ. ಹೆಲೆನ್ ಚಂಡಮಾರುತದಿಂದ ಇನ್ನಷ್ಟು ಭೀಕರವಾದ ಚಂಡಮಾರುತ ಕರಾವಳಿ ಭಾಗಕ್ಕೆ ಭಾರೀ ಸಮಸ್ಯೆ ತಂದೊಡ್ಡಿದೆ. ಭೀಕರ ಗಾಳಿ ಗಂಟೆಗೆ 100 ಕಿಲೋ ಮೀಟರ್ ಹೆಚ್ಚಿನ ಗಾಳಿಯೊಂದಿಗೆ ನಗರಗಳನ್ನು ಅಲ್ಲೋಲ್ಲ ಕಲ್ಲೋಲ ಮಾಡುತ್ತಿದೆ. ಚಂಡಮಾರುತವು ಅಂತಿಮ ಗಂಟೆಗಳಲ್ಲಿ ದಕ್ಷಿಣಕ್ಕೆ ವಾಲಿದೆ. ಟ್ಯಾಂಪಾದಿಂದ ದಕ್ಷಿಣಕ್ಕೆ 70 ಮೈಲಿಗಳು (112 ಕಿಲೋಮೀಟರ್) ಸರಸೋಟಾ ಬಳಿಯ ಸಿಯೆಸ್ಟಾ ಕೀಯಲ್ಲಿ ಭೂಕುಸಿತವನ್ನು ಮಾಡಿತು. ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ 16 ಇಂಚುಗಳಷ್ಟು (41 ಸೆಂಟಿಮೀಟರ್‌ಗಳು) ಮಳೆ ದಾಖಲಾಗಿದ್ದರಿಂದ ಟ್ಯಾಂಪಾ ಪ್ರದೇಶದಲ್ಲಿನ ಪರಿಸ್ಥಿತಿಯು ಇನ್ನೂ ಪ್ರಮುಖ ತುರ್ತುಸ್ಥಿತಿಯಾಗಿತ್ತು, ರಾಷ್ಟ್ರೀಯ ಹವಾಮಾನ ಸೇವೆಯು ಹಠಾತ್ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಿದೆ. ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ಟ್ಯಾಂಪಾ ಬೇ ರೇಸ್‌ನ ಟ್ರೋಪಿಕಾನಾದಲ್ಲಿ…

Read More

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝಲೆನ್ಸ್ಕಿ ಬರ್ಲಿನ್‌ಗೆ ಪ್ರಯಾಣ ಬೆಳೆಸಲಿದ್ದು, ಜರ್ಮನಿ ಚಾನ್ಸಲರ್ ಒಲಾಫ್ ಸ್ಕಾಲ್ಝ್ ಹಾಗೂ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಝಲೆನ್ಸ್ಕಿ ಶುಕ್ರವಾರ ಬರ್ಲಿನ್‌ಗೆ ಭೇಟಿ ನೀಡಲಿದ್ದಾರೆ. ಮೊದಲು ಸ್ಕಾಲ್ಝ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿರುವ ಝಲೆನ್ಸ್ಕಿ , ಬಳಿಕ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್ ಅವರನ್ನು ಭೇಟಿಯಾಗಲಿದ್ದಾರೆ. ಇದು ಯೂರೋಪ್‌ ಪ್ರವಾಸದ ಭಾಗವಾಗಿದೆ’ ಎಂದು ತಿಳಿಸಿದೆ. ಝಲೆನ್ಸ್ಕಿ ಯೂರೋಪ್‌ನಲ್ಲಿ ತನ್ನ ಮಿತ್ರ ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡುವ ಯೋಜನೆಯಲ್ಲಿದ್ದರು. ಆದರೆ, ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಭೇಟಿ ರದ್ದಾದ ಕಾರಣ, ಜರ್ಮನಿಯ ರಾಮ್‌ಸ್ಟೇಯ್ನ್‌ನಲ್ಲಿ ನಡೆಯಬೇಕಿದ್ದ ಸಮಾವೇಶ ಮುಂದೂಡಿಕೆಯಾಗಿದೆ. ಇದರಿಂದ ಝೆಲೆನ್‌ಸ್ಕಿ ಉದ್ದೇಶಕ್ಕೆ ಹಿನ್ನಡೆಯಾಗಿದೆ.

Read More

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಜೊತೆ ಅಮೆರಿಕದ ಅಧ್ಯಕ್ಷ ಜೋ  ಬೈಡನ್ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ವೇಳೆ ಬೈಡನ್ ಇಸ್ರೇಲ್ ಭದ್ರತೆಗೆ ಅಮೆರಿಕದ ನೀಡುವ ಅಚಲ ಬದ್ಧತೆಯನ್ನು ಪುನರುಚ್ಛರಿಸಿದ್ದಾರೆ. ಶ್ವೇತಭವನದ ಹೇಳಿಕೆಯ ಪ್ರಕಾರ, ಸಾವಿರಾರು ಕ್ಷಿಪಣಿಗಳು ಮತ್ತು ರಾಕೆಟ್‌ಗಳನ್ನು ಹಾರಿಸಿದ ಹಿಜ್ಬುಲ್ಲಾದಿಂದ ನಾಗರಿಕರನ್ನು ರಕ್ಷಿಸುವ ಇಸ್ರೇಲ್‌ನ ಹಕ್ಕನ್ನು ಬೈಡನ್ ಪ್ರತಿಪಾದಿಸಿದರು. ಜೊತೆಗೆ ಹೆಚ್ಚಿನ ಜನಸಂಖ್ಯೆ ಇರುವ ಬೈರೂತ್‌ನಂತಹ ಪ್ರದೇಶಗಳಲ್ಲಿ ನಾಗರಿಕರಿಗೆ ಆಗುತ್ತಿರುವ ಹಾನಿಗಳನ್ನು ಕಡಿಮೆ ಮಾಡುವ ಅಗತ್ಯವನ್ನು ಒತ್ತಿಹೇಳಿದ್ದಾರೆ. ಇದೇ ವೇಳೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಹ ಇಸ್ರೇಲಿ ಪ್ರಧಾನಿಯೊಂದಿಗಿನ ಮಾತನಾಡಿದ್ದಾರೆ. ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಇರಾನ್‌ನ ಖಂಡಾಂತರ ಕ್ಷಿಪಣಿ ದಾಳಿಯನ್ನು ಬೈಡನ್ ಖಂಡಿಸಿದ್ದಾರೆ. ಅಂತಹ ಆಕ್ರಮಣದ ವಿರುದ್ಧ ಸಾಮೂಹಿಕ ಕ್ರಮದ ಅಗತ್ಯವನ್ನು ಒತ್ತಿಹೇಳಿದ್ದಾರೆ. ಎರಡೂ ದೇಶಗಳಲ್ಲಿ ನಾಗರಿಕರು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಹಿಂದಿರುಗಲು ‘ಬ್ಲೂ ಲೈನ್’ಸೃಷ್ಟಿಯ ಕುರಿತಂತೆ ರಾಜತಾಂತ್ರಿಕ ವ್ಯವಸ್ಥೆಯನ್ನು ಪ್ರತಿಪಾದಿಸಿದ್ದಾರೆ. ಗಾಜಾ ಜೊತೆಗಿನ ರಾಜತಾಂತ್ರಿಕತೆ ನವೀಕರಿಸುವ ಮತ್ತು ಹಮಾಸ್ ಒತ್ತೆಯಾಳಾಗಿರಿಸಿಕೊಂಡಿರುವವರ ಶೀಘ್ರ ಬಿಡುಗಡೆ ಬಗ್ಗೆ ನಾಯಕರು…

Read More

ಅಜಾತಶತ್ರು, ಕೈಗೋರಿಕೋದ್ಯಮಿ, ವಾಣಿಜ್ಯ ಸಾಮ್ರಾಜ್ಯವನ್ನು ಆಳಿದ ರತನ್ ಟಾಟಾ ಅನಾರೋಗ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ರತನ್ ಟಾಟಾ ಮದುವೆಯಾಗದೆ ಹಾಗೆಯೇ ಉಳಿದಿದ್ದರು. ರತನ್ ಜೀವನದಲ್ಲಿ ನಾಲ್ವರೊಂದಿಗೆ ಪ್ರೀತಿಯಲ್ಲಿದ್ದರು ಅದ್ಯಾವುದು ಮದುವೆ ವರೆಗೂ ಬಂದಿರಲಿಲ್ಲ. ಹೀಗಾಗಿ ರತನ್ ನಿಧನದ ಬಳಿಕ ಅವರು ಸಂಗ್ರಹಿಸಿದ 3800 ಕೋಟಿ ರೂ. ಸ್ವತ್ತನ್ನು ಯಾರು ಆಳುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ರತನ್ ಟಾಟಾ ಅವರ 3800 ಕೋಟಿ ರೂ. ಸ್ವತ್ತಿನ ಉತ್ತರಾಧಿಕಾರಿಯಾಗಲು ನೋಯಲ್ ಟಾಟಾ, ನೆವಿಲ್ ಟಾಟಾ, ಲಿಯಾ ಟಾಟಾ ಮತ್ತು ಮಾಯಾ ಟಾಟಾ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆದ್ರೆ ಇವರಲ್ಲಿ ರತನ್ ಆಸ್ತಿ ಯಾರಾ ಪಾಲಾಗಲಿದೆ ಎಂಬ ಕುತೂಹಲ ಇದೆ. 1937 ರಲ್ಲಿ ಮುಂಬೈನಲ್ಲಿ ಪ್ರಸಿದ್ಧ ಟಾಟಾ ಕುಟುಂಬದಲ್ಲಿ ಜನಿಸಿದ ರತನ್ ಟಾಟಾ ಅವರು ತಮ್ಮ 10 ನೇ ವಯಸ್ಸಿನಲ್ಲಿಯೇ ಪೋಷಕರನ್ನು ಕಳೆದುಕೊಂಡರು. ಬಳಿಕ ಅವರನ್ನು ಅಜ್ಜಿ ಬೆಳೆಸಿದರು. ಈ ಒಂಟಿತನವು ಅವರಿಗೆ ಜೀವನದ ಅರ್ಥವನ್ನು ಕಲಿಸಿತು ಮತ್ತು…

Read More

ಖ್ಯಾತ ಕೈಗಾರಿಕೋದ್ಯಮಿ, ಅಜಾತಶತ್ರು ರತನ್ ಟಾಟಾ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರತನ್ ಟಾಟಾ 86ನೇ ವಯಸ್ಸಿನಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಟಾಟಾ ನಿಧನಕ್ಕೆ ಅವರ ಮಾಜಿ ಪ್ರೇಯಸಿ ಸಿಮಿ ಗರೆವಾಲ್​ ಭಾವುಕ ಪೋಸ್ಟ್​ ಮಾಡಿದ್ದಾರೆ. ರತನ್ ಟಾಟಾ ಅವರ ಹಠಾತ್ ನಿಧನದ ಪ್ರತಿಯೊಬ್ಬರು ಕಂಬನಿ ಮಿಡಿದಿದ್ದಾರೆ.ರತನ್ ಅವರಿಂದ ಇಂದು ಲಕ್ಷಾಂತರ ಕುಟುಂಬದಲ್ಲಿ ನೆಮ್ಮದಿಯಾಗಿ ಜೀವನ ನಡೆಸುತ್ತಿವೆ. ಜನ ಸಾಮಾನ್ಯರಿಂದ ಹಿಡಿದು ಅಗರ್ಭ ಶ್ರೀಮಂತರು ಕೂಡ ರತನ್ ಟಾಟಾರನ್ನು ಮೆಚ್ಚಿಕೊಂಡಿದ್ದಾರೆ. ಟಾಟಾ ನಿಧನಕ್ಕೆ ಪ್ರತಿಯೊಬ್ಬರು ಕಂಬನಿ ಮಿಡಿಯುತ್ತಿದ್ದಾರೆ. ರತನ್ ಟಾಟಾ ಅವರ ನಿಧನದಿಂದ ಬಾಲಿವುಡ್ ಹಿರಿಯ ನಟಿ ಸಿಮಿ ಗರೆ​ವಾಲ್ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಸಿಮಿ ಅವರು ರತನ್ ಟಾಟಾ ಅವರ ನಿಧನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಬರೆಯುವ ಮೂಲಕ ಭಾವಪೂರ್ಣ ವಿದಾಯ ಹೇಳಿದ್ದಾರೆ. ರತನ್ ಜೊತೆಗಿನ ಫೋಟೊವೊಂದನ್ನು ಹಂಚಿಕೊಂಡಿರುವ ಸಿಮಿ, ನೀವು ಹೋಗಿದ್ದೀರೆಂದು ಎಲ್ಲರೂ ಹೇಳುತ್ತಿದ್ದಾರೆ, ನೀವು ನಮ್ಮ ಜೊತೆ…

Read More

ಖ್ಯಾತ ಉದ್ಯಮಿ, ಕರುಣಾಮಯಿ, ಅಜಾತಶತ್ರು ಎನಿಸಿಕೊಂಡಿದ್ದ ರತನ್ ಟಾಟಾ ತಮ್ಮ 86ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಜೀವನದುದ್ದಕ್ಕೂ ಸಮಾಜದ ಒಳಿತಿಗಾಗಿಯೇ ಶ್ರಮಿಸಿದವರು ರತನ್ ಟಾಟಾ. ಟಾಟಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದ ರತನ್ ಟಾಟಾ ಇಂದು ನಮ್ಮ ಜೊತೆ ಇಲ್ಲ. ಇದೀಗ ರತನ್ ಟಾಟಾ ನಿಧನಕ್ಕೆ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರತನ್ ಟಾಟಾ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅನೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ. ‘ಭಾರತದ ಹೆಮ್ಮೆಯ ಪುತ್ರ ರತನ್ ನಾವಲ್ ಟಾಟಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಶಿವಣ್ಣ ಟ್ವೀಟ್ ಮಾಡಿದ್ದಾರೆ. ‘ರತನ್ ಟಾಟಾ ನಿಧನವಾರ್ತೆ ಕೇಳಿ ದುಃಖವಾಗಿದೆ’ ಎಂದು ಸಲ್ಮಾನ್ ಖಾನ್ ಬರೆದುಕೊಂಡಿದ್ದಾರೆ. ‘ನಿಮ್ಮ ದಯೆಯಿಂದ ನೀವು ಲಕ್ಷಾಂತರ ಜನರ ಜೀವಗಳನ್ನು ತಲುಪಿದ್ದೀರಿ. ನಿಮ್ಮ ನಾಯಕತ್ವ ಮತ್ತು ಉದಾರತೆಯ ಪರಂಪರೆಯು ಮುಂದಿನ ತಲೆಮಾರಿಗೆ ಸ್ಫೂರ್ತಿ ನೀಡುತ್ತದೆ. ನಮ್ಮ ದೇಶಕ್ಕಾಗಿ ನೀವು ನೀಡಿದ ಕೊಡುಗೆ, ನಿಮ್ಮ ಸಾಟಿಯಿಲ್ಲದ ಉತ್ಸಾಹ ಮತ್ತು ಸಮರ್ಪಣೆಗಾಗಿ…

Read More

ದಕ್ಷಿಣ ಕೊರಿಯಾ ಜೊತೆಗಿನ ಗಡಿಯನ್ನು ಶಾಶ್ವತವಾಗಿ ಮುಚ್ಚಲು ನಿರ್ಧರಿಸಲಾಗಿದೆ. ಯಾವುದೇ ಆಕಸ್ಮಿಕ ಘರ್ಷಣೆ ತಡೆಯಲು ಅಮೆರಿಕದ ಮಿಲಿಟರಿಗೆ ಮಾಹಿತಿ ನೀಡಲಾಗಿದೆ ಎಂದು ಉತ್ತರ ಕೊರಿಯಾ ಸೇನೆ ತಿಳಿಸಿದೆ. ಮುಂದೊಂದು ದಿನ ಎರಡೂ ಕೊರಿಯಾಗಳ ನಡುವಿನ ಪ್ರಯಾಣವನ್ನು ಸುಗಮಗೊಳಿಸುವ ಸಾಧ್ಯತೆ ಇರುವುದರಿಂದ ರಸ್ತೆಗಳು ಮತ್ತು ರೈಲು ಮಾರ್ಗಗಳನ್ನೂ ಕಡಿತಗೊಳಿಸಲಾಗುವುದು. ದಕ್ಷಿಣದ ಗಡಿಪ್ರದೇಶದಲ್ಲಿ ಪ್ರಾರಂಭಿಸಲಿರುವ ರಕ್ಷಣಾ ಯೋಜನೆಯ ಬಗ್ಗೆ ಯಾವುದೇ ತಪ್ಪು ನಿರ್ಣಯ ಮತ್ತು ಆಕಸ್ಮಿಕ ಸಂಘರ್ಷವನ್ನು ಅಮೆರಿಕದ ಪಡೆಗಳಿಗೆ ದೂರವಾಣಿ ಸಂದೇಶ ರವಾನಿಸಲಾಗಿದೆ ಎಂದು ಉತ್ತರ ಕೊರಿಯಾ ಸೇನೆ ಹೇಳಿದೆ. ಉಭಯ ಕೊರಿಯಾಗಳ ನಡುವಿನ ಗಡಿಪ್ರದೇಶದಲ್ಲಿ ಉತ್ತರ ಕೊರಿಯಾ ನೆಲ ಬಾಂಬ್ ಗಳನ್ನು ಹುಗಿದಿರಿಸಿದೆ ಮತ್ತು ತಡೆಗೋಡೆ ನಿರ್ಮಿಸುತ್ತಿದೆ ಎಂದು ಜುಲೈಯಲ್ಲಿ ದಕ್ಷಿಣ ಕೊರಿಯಾ ಸೇನೆ ಹೇಳಿತ್ತು.

Read More

ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ಮುಂಬರುವ ಅಮೆರಿಕ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಉತ್ತಮ ‘ಸ್ನೇಹಿತ’ ಮತ್ತು ‘ಒಳ್ಳೆಯ ಮನುಷ್ಯ’ ಎಂದಿದ್ದಾರೆ. ‘ಭಾರತದ ಮೋದಿ ನನ್ನ ಸ್ನೇಹಿತ ಮತ್ತು ಒಳ್ಳೆಯ ಮನುಷ್ಯ. ಅವರು ಪ್ರಧಾನಿಯಾಗಿ ನೇಮಕಗೊಳ್ಳುವ ಮೊದಲು ಭಾರತವು ತುಂಬಾ ಅಸ್ಥಿರತೆಯಿಂದ ಕೂಡಿತ್ತು. ಹೊರನೋಟಕ್ಕೆ ಅವರು ನಿಮ್ಮ ತಂದೆಯಂತೆ ಆಪ್ತರಾಗಿ ಕಾಣುತ್ತಾರೆ. ಅವರು ಉತ್ತಮ ಮನುಷ್ಯ’ ಎಂದು ಟ್ರಂಪ್ ಮೋದಿಯನ್ನು ಹೊಗಳಿದ್ದಾರೆ. 2019ರಲ್ಲಿ ಅಮೆರಿಕದ ಹೂಸ್ಟನ್‌ನಲ್ಲಿ ಸಾವಿರಾರು ಭಾರತೀಯ-ಅಮೆರಿಕನ್ನರು ಭಾಗವಹಿಸಿದ್ದ ಹೌಡಿ ಮೋದಿ ಮೆಗಾ ಕಾರ್ಯಕ್ರಮವನ್ನು ನೆನಪಿಸಿಕೊಂಡ ಟ್ರಂಪ್, ಮೋದಿ ಅವರು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಹೌಡಿ ಮೋದಿ ಎಂಬ ಕಾರ್ಯಕ್ರಮವನ್ನು ಮಾಡಿದರು. ಅಂದು ನಾನು ಮತ್ತು ಅವರು ಇಬ್ಬರೂ ವೇದಿಕೆಯ ಮೇಲೆ ಹೋದೆವು. ಅದು ಬಹಳ ಸುಂದರವಾದ ಕಾರ್ಯಕ್ರಮವಾಗಿತ್ತು. ಅಲ್ಲಿ 80,000 ಭಾರತೀಯರು ಸೇರಿದ್ದರು. ಇಂದು ನಾನು ಅಧ್ಯಕ್ಷನಲ್ಲದೆ ಇರಬಹುದು, ನಾನು ಆಗಿನಂತೆ ಜನರ ನಡುವೆ ಹೋಗಿ ಕೈ…

Read More

ಬಿಗ್ ಬಾಸ್ ಮನೆಯಲ್ಲಿ ಪ್ರೀತಿಸಿ ಬಳಿಕ ಮದುವೆಯಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯಾದ ಕೆಲವೇ ವರ್ಷಕ್ಕೆ ದೂರ ದೂರವಾಗಿದ್ದಾರೆ. ಇದೀಗ ಚಂದನ್ ನಟಿ ಸಂಜನಾ ಜೊತೆ ಎರಡನೇ ಮದುವೆಗೆ ಸಿದ್ದವಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಚಂದನ್ ಕೊನೆಗೂ ಮೌನ ಮುರಿದಿದ್ದಾರೆ. ನಿವೇದಿತಾ ಗೌಡ ಅವರಿಂದ ದೂರವಾದ ಚಂದನ್ ಶೆಟ್ಟಿ, ಸಲಗ ಸುಂದರಿ ಸಂಜನಾ ಆನಂದ್ ಅವರ ಜೊತೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದನ್ನೇ ಸತ್ಯ ಎಂದುಕೊಂಡವರು ಸಂಜನಾ ಆನಂದ್ ಮತ್ತು ಚಂದನ್ ಶೆಟ್ಟಿಗೆ ಶುಭಾಶಯಗಳನ್ನು ಹೇಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಂಜನಾ, ನನ್ನ ಮತ್ತು ಚಂದನ್ ಶೆಟ್ಟಿಯ ಮದುವೆ ಕುರಿತು ಹರಡಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದಿದ್ದರು. ಇದೀಗ ಈ ಬಗ್ಗೆ ಚಂದನ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಇದೆಲ್ಲವೂ ಶುದ್ಧ ಸುಳ್ಳು ದಯವಿಟ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಅಸಲಿಗೆ ಟ್ರೆಂಡಿಂಗ್ ಹೆಸರಿನ ಖಾತೆಯೊಂದರಲ್ಲಿ ಸಂಜನಾ ಆನಂದ್ ಮತ್ತು ಚಂದನ್…

Read More