ಹೈ ಸ್ಕೋರಿಂಗ್ ಮತ್ತು ರೋಚಕ ರನ್ ಚೇಸ್ಗೆ ಸಾಕ್ಷಿಯಾದ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಾಜಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಕೇವಲ 4 ರನ್ ಅಂತರದ ವೀರೋಚಿತ ಸೋಲನುಭವಿಸಿತು. ಈ ಬಗ್ಗೆ ಮಾತನಾಡಿರುವ ಗುಜರಾತ್ ಟೈಟನ್ಸ್ ತಂಡದ ಯುವ ನಾಯಕ ಶುಭಮನ್ ಗಿಲ್, ಈ ಮೊದಲು ಪಂಜಾಬ್ ಕಿಂಗ್ಸ್ ವಿರುದ್ಧ ಸಿಕ್ಕಿದ್ದ ಗೆಲುವಿಗಿಂತಲೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೋಲು ಖುಷಿ ನೀಡಿದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
“ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸುತ್ತಿರುವುದು ಅದ್ಭುತ ಅನುಭವ ತಂದುಕೊಟ್ಟಿದೆ. ಆಟಗಾರರ ಬಗ್ಗೆ ಹಾಗೂ ನನ್ನ ಬಗ್ಗೆ ಸಾಕಷ್ಟು ವಿಷಯಗಳನ್ನು ಅರಿತುಕೊಳ್ಳಲು ನೆರವಾಗುತ್ತಿದೆ. ಒಬ್ಬ ಆಟಗಾರನಾಗಿ ಆಡುವಾಗ ಉತ್ತಮ ಪ್ರದರ್ಶನ ನೀಡಿ ವೈಯಕ್ತಿಕವಾಗಿ ತಂಡದ ಗೆಲುವಿನಲ್ಲಿ ಪಾತ್ರ ವಹಿಸುವುದು ಹೇಗೆ ಎಂಬುದರ ಕಡೆಗೆ ಮಾತ್ರವೇ ಆಲೋಚನೆ ಮಾಡಿರುತ್ತೇವೆ. ಈಗ ಒಬ್ಬ ಕ್ಯಾಪ್ಟನ್ ಆಗಿ ತಂಡದ ಉಳಿದ ಆಟಗಾರರಿಂದಲೂ ಶ್ರೇಷ್ಠ ಪ್ರದರ್ಶನ ತರುವುದು ಹೇಗೆ ಎಂಬುದರ ಕಡೆಗೆ ಆಲೋಚನೆ ಮಾಡುತ್ತಿರುತ್ತೇನೆ,” ಎಂದು ಸ್ಪೋರ್ಟ್ಸ್ ತಕ್ ಕಾರ್ಯಕ್ರಮದಲ್ಲಿ ಶುಭಮನ್ ಗಿಲ್ ಮಾತನಾಡಿದ್ದಾರೆ.
Post Office Jobs: ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ.! 10th ಪಾಸಾಗಿದ್ರೆ ಸಾಕು – ಇಂದೇ ಅರ್ಜಿ ಸಲ್ಲಿಸಿ
“ನಾನು ಎಲ್ಲಿಯೂ ಕೂಡ ಒತ್ತಡಕ್ಕೆ ಒಳಗಾಗಲಿಲ್ಲ. ಎರಡು ವರ್ಷಗಳಲ್ಲಿ ಗುಜರಾತ್ ಟೈಟನ್ಸ್ ತಂಡ ಎರಡು ಫೈನಲ್ಗಳನ್ನು ಆಡಿದೆ. ನಾನು ಒತ್ತಡ ಎದುರಿಸುವುದಾದರೂ ಎಲ್ಲಿ? ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವಿಗಿಂತಲೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೋಲು ನನಗೆ ಹೆಚ್ಚು ಖುಷಿ ಕೊಟ್ಟಿದೆ. ಏಕೆಂದರೆ ಈ ಪಂದ್ಯದಲ್ಲಿ ನಾವು ಹೋರಾಡಿದ ರೀತಿ ಅದ್ಭುತವಾಗಿತ್ತು.
ಡಿಸಿ ಎದುರು 225 ರನ್ಗಳ ಗುರಿ ಬೆನ್ನತ್ತಿ ಕೇವಲ 4 ರನ್ ಅಂತರದಲ್ಲಿ ಸೋತಿದ್ದೇವೆ. ಆರಂಭಿಕ ವಿಕೆಟ್ಗಳನ್ನು ಕಳೆದುಕೊಂಡರೂ ನಾವು ಹೋರಾಟ ಬಿಡಲಿಲ್ಲ. ಹೀಗಾಗಿ ಇಲ್ಲಿ ಕಳೆದುಕೊಂಡ 2 ಅಂಕಗಳು ಒಬ್ಬ ಕ್ಯಾಪ್ಟನ್ ಆಗಿ ನನಗೆ ಯಾವುದೇ ಬೇಸರ ತಂದಿಲ್ಲ. ಪಂದ್ಯದಲ್ಲಿ ಯಾವ ರೀತಿ ಆಡಿದ್ದೇವೆ ಎಂಬುದಷ್ಟೇ ನನಗೆ ಮುಖ್ಯ,” ಎಂದು ಶುಭಮನ್ ಗಿಲ್ ಹೇಳಿದ್ದಾರೆ.