ಚೆನ್ನೈ: ಸಿಎಸ್ಕೆ ತಂಡದ ಮಿಡಿತ ಲೆಜೆಂಡ್ ಎಂ.ಎಸ್ ಧೋನಿ (MS Dhoni) ಅವರ ನಿವೃತ್ತಿಯ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದಿದ್ದ ಮಹಿ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆದರು. ಮಹಿ ಅವರ ಔಟ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪರ – ವಿರೋಧ ಚರ್ಚೆ ನಡೆಯುತ್ತಿದ್ದಾಗಲೇ ಮತ್ತೊಂದು ಸೀಕ್ರೆಟ್ ಬಹಿರಂಗಗೊಂಡಿದೆ.
ಮಹಿಗೆ ಇರೋ ಆರೋಗ್ಯ ಸಮಸ್ಯೆ ಏನು?
42 ವರ್ಷದ ಲೆಜೆಂಡರಿ ಧೋನಿ ಅವರಿಗೆ ಇದು ಅಂತಿಮ ಆವೃತ್ತಿ ಎಂದೇ ಭಾವಿಸಲಾಗಿದೆ. ಏಕೆಂದರೆ 2023 ಆವೃತ್ತಿಯಲ್ಲಿ ಮೊಣಕಾಲು ಸಮಸ್ಯೆಯಿಂದ ಬಳಲುತ್ತಿದ್ದ ಮಹಿ, ಆ ನೋವಿನಲ್ಲೂ ಆಡಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿಗೆ ಟ್ರೋಫಿ ಗೆದ್ದ ಬಳಿಕವೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮೊಣಕಾಲು ಗಾಯ ವಾಸಿಯಾದ್ದರಿಂದ ತಮ್ಮ ಅಭಿಮಾನಿಗಳಿಗಾಗಿ 2024ರಲ್ಲೂ ಆಡುವ ಮಹಿ ಮತ್ತೊಂದು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
![Demo](https://ainlivenews.com/wp-content/uploads/2023/12/spoorthi-1.jpg)
Hair Care: ಕೂದಲು ದಟ್ಟವಾಗಿರಲು ವಾರಕ್ಕೆ ಎಷ್ಟು ಬಾರಿ ಎಣ್ಣೆ ಹಚ್ಚಬೇಕು ಗೊತ್ತಾ?
ಹೌದು. ಮಹಿ ಕೆಲ ದಿನಗಳಿಂದ ಸ್ನಾಯು ಸಮಸ್ಯೆಯಿಂದ (Muscle Tear) ಬಳಲುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅವರಿಗೆ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಾಗುತ್ತಿಲ್ಲ, ರನ್ ಓಡಲಾಗುತ್ತಿಲ್ಲ. ನೆಟ್ಸ್ನಲ್ಲಿ ಅಭ್ಯಾಸ ಮಾಡುವಾಗಲೂ ಸ್ಮ್ಯಾಶ್ ಮಾಡುವತ್ತ ಮಾತ್ರ ಗಮನಹರಿಸುತ್ತಿದ್ದಾರೆ. 20 ಓವರ್ ಮೈದಾನದಲ್ಲಿ ನಿಂತು ಫೀಲ್ಡಿಂಗ್ ಮಾಡುವ ಮಹಿ, ಬ್ಯಾಟಿಂಗ್ ವೇಳೆ ವಿರಾಮ ಪಡೆಯುತ್ತಿರುವುದು ಇದೇ ಕಾರಣಕ್ಕೆ ಎಂದು ಸಿಎಸ್ಕೆ ಫ್ರಾಂಚೈಸಿ ಮೂಲಗಳು ತಿಳಿಸಿವೆ.
![](https://ainlivenews.com/wp-content/uploads/2024/01/Ad-Banner-copy-scaled.jpg)