ಬಿಳಿ ಕೂದಲು ನಮ್ಮನ್ನು ಮುಜುಗರಕ್ಕೆ ಈಡು ಮಾಡಿ ಬಿಡುತ್ತದೆ. ಆದರೆ ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ ಬಿಳಿ ಕೂದಲಿನ ಸಮಸ್ಯ…
PBKS vs KKR: ಬೈರ್ಸ್ಟೋವ್-ಶಶಾಂಕ್ ಬ್ಯಾಟಿಂಗ್ ಅಬ್ಬರಕ್ಕೆ ಕೊಚ್ಚಿ ಹೋದ ಕೆಕೆಆರ್!
ಬಿಳಿ ಕೂದಲಿನ ಸಮಸ್ಯೆಯನ್ನು ನೈಸರ್ಗಿಕವಾಗಿಯೇ ದೂರ ಮಾಡಲು ಒಂದು ಕಪ್ ಮೊಸರು ಸಾಕು.ಹೌದು, ಒಂದು ಕಪ್ ಮೊಸರಿಗೆ ಟೊಮೇಟೊ ಹಣ್ಣನ್ನು ಬೆರೆಸಿ ಬಿಳಿ ಕೂದಲಿನ ಸಮಸ್ಯೆಯನ್ನು ಬುಡದಿಂದಲೇ ದೂರ ಮಾಡಬಹುದು.
ಕೂದಲಿಗೆ ಮೊಸರು ಹಚ್ಚುವುದರಿಂದ ಕೂದಲು ಬೇರಿನಿಂದಲೇ ಬಲಗೊಳ್ಳಲು ಆರಂಭಿಸುತ್ತದೆ.ಅಲ್ಲದೆ, ನೈಸರ್ಗಿಕವಾಗಿ ಕಪ್ಪು ಬಣ್ಣಕ್ಕೆ ತಿರುಗಲು ಮೊಸರು ಸಹಾಯ ಮಾಡುತ್ತದೆ. ಮಾತ್ರವಲ್ಲ ಇದು ಕೂದಲಿಗೆ ವಿಶೇಷ ರೀತಿಯ ಹೊಳಪನ್ನು ನೀಡುತ್ತದೆ.
ಇನ್ನು ಟೊಮೆಟೊ ಆಸಿಡ್ ಗುಣಗಳನ್ನು ಒಳಗೊಂಡಿದ್ದು, ಒಣ ಕೂದಲಿನ PH ಮಟ್ಟವನ್ನು ಸಮತೋಲನದಲ್ಲಿ ಇಡುತ್ತದೆ. ಇದು ನೆತ್ತಿಯ ಮೇಲೆ ಹೆಚ್ಚುವರಿ ಎಣ್ಣೆ ಉತ್ಪಾದನೆಯನ್ನು ತಡೆದು, ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.
ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು ಮೊಸರು ಮತ್ತು ಟೊಮೇಟೊ ಹಣ್ಣನ್ನು ಬಳಸಬಹುದು. ಮೊಸರು ಮತ್ತು ಟೊಮೇಟೊ ಹಣ್ಣನ್ನು ಒಂದು ಬೌಲ್ಗೆ ಹಾಕಿ ಮಿಶ್ರಣ ಮಾಡಿ.ಈಗ ಈ ಪೇಸ್ಟ್ಗೆ ನೀಲಗಿರಿ ಎಣ್ಣೆಯನ್ನು ಸೇರಿಸಿ ಕೂದಲಿಗೆ ಮಸಾಜ್ ಮಾಡಿ. ನೋಡ ನೋಡುತ್ತಿದ್ದಂತೆಯೇ ಬಿಳಿ ಕೂದಲು ಕಪ್ಪಾಗುತ್ತದೆ.