ಬೆಂಗಳೂರು:- ಮಾತಿನ ಭರದಲ್ಲಿ ಇಂದಿರಾಗಾಂಧಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು ಎನ್ನುವ ಬದಲು ಬಾಯ್ತಪ್ಪಿನಿಂದ ಸೋನಿಯಾ ಗಾಂಧಿ ಎಂದು ಖರ್ಗೆ ಹೇಳಿದ್ದಾರೆ.
ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ: ಶಾಸಕ ಎ ಎಸ್ ಪೊನ್ನಣ್ಣ
ಇಂದಿರಾಗಾಂಧಿಯವರ ಪುಣ್ಯಸ್ಮರಣೆ ಹಾಗೂ ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಡವಟ್ಟು ಮಾಡಿಕೊಂಡಿದ್ದಾರೆ.
ಮಾತು ಮುಂದುವರಿಸಿದ ಖರ್ಗೆ, ಶ್ರೀಮತಿ ಇಂದಿರಾಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಈ ಇಬ್ಬರು ಮಹಾಪುರುಷರು ನಮಗೆ ಪ್ರೇರಣೆ. ಮಹಾಚೇತನಗಳಿಂದ ಪ್ರೇರಣೆ ಪಡೆಯಲು ನಾವಿಲ್ಲಿ ಸೇರಿದ್ದೇವೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಜವಾಹರಲಾಲ್ ಅವರ ಜೊತೆ ಗಟ್ಟಿಯಾಗಿ ನಿಂತ ನಾಯಕ. ಹೈದ್ರಾಬಾದ್ ಕರ್ನಾಟಕಕ್ಕೆ ಲೇಟ್ ಆಗಿ ನಮಗೆ ಸ್ವಾತಂತ್ರ್ಯ ಸಿಕ್ತು. ವಲ್ಲಭಭಾಯಿ ಪಟೇಲ್ ಅವರು ಒಗ್ಗೂಡಿಸುವುದಕ್ಕೆ ಪ್ರಯತ್ನ ಪಟ್ಟರು. ಆ ಒಗ್ಗಟ್ಟನ್ನ ಕಾಪಾಡುವುದಕ್ಕೆ ಇಂದಿರಾಗಾಂಧಿ, ಸೋನಿಯಾಗಾಂಧಿ , ರಾಹುಲ್ ಗಾಂಧಿ ಪ್ರಾಣ ಕೊಟ್ಟರು ಎನ್ನುವ ಮೂಲಕ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡರು. ಬಳಿಕ ಸಾವರಿಸಿಕೊಂಡ ಖರ್ಗೆ, ದಿನ ಹೇಳಿ ಹೇಳಿ ಈ ರೀತಿ ಆಗುತ್ತಿದೆ. ಮೀಡಿಯಾದವರು ಇದನ್ನ ನೀವು ಹೈಲೈಟ್ ಮಾಡಬೇಡಿ ಎಂದು ಮನವಿ ಮಾಡಿದರು
ನಾನು ಮಾತನಾಡಿದ ಮೇಲೆ ಯಾರೂ ಮಾತನಾಡುವಂತಿಲ್ಲ ಎಂದು ಸಭೆ ಆಯೋಜಕರಿಗೆ ಮಲ್ಲಿಕಾರ್ಜುನ ಖರ್ಗೆ ಸೂಚಿಸಿದರು. ಇದಕ್ಕೂ ಮೊದಲು ವೀರಪ್ಪ ಮೊಯ್ಲಿ ಮಾತನಾಡಿದ್ರು, ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ನಂತರ ಡಿಸಿಎಂ ಡಿಕೆ ಶಿವಕುಮಾರ ಮಾತನಾಡ್ತಾರೆ ಎಂದು ಸಂಸದ ಜಿಸಿ ಚಂದ್ರಶೇಖರ್ ಹೇಳಿದರು. ಈ ವೇಳೆ ಎಐಸಿಸಿ ಅಧ್ಯಕ್ಷರು ಮಾತನಾಡಲಿ ಬಳಿಕ ಮಾತನಾಡ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.