ಬೆಂಗಳೂರು:- ರಾಜ್ಯದ ಪ್ರತಿಯೊಬ್ಬ ಕಾಂಗ್ರೆಸ್ ಮುಖಂಡನೂ ಒಗ್ಗಟ್ಟಾಗಿ ಇರಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕರೆ ಕೊಟ್ಟಿದ್ದಾರೆ.
Lakshmi Hebbalkar: ಯಾವುದೇ ಪರಿಸ್ಥಿತಿಯಲ್ಲಿ ಪಂಚ ಗ್ಯಾರಂಟಿಗಳನ್ನು ಸ್ಥಗಿತಗೊಳಿಸುವುದಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಕಾಂಗ್ರೆಸ್ ನಾಯಕರು, ಮುಖಂಡರಿಗೆ ಒಗ್ಗಟ್ಟಾಗಿರಲು ಹೇಳಿದ್ದಾರೆ.
ವಿಘ್ನ ಸಂತೋಷ ಶಾಶ್ವತವಲ್ಲ, ನಿಮ್ಮ ಒಗ್ಗಟ್ಟಿನಲ್ಲೇ ಬಲವಿದೆ, ಸಂತೋಷವಿದೆ; ಪಕ್ಷದ ಒಬ್ಬ ನಾಯಕನಿಗೆ ಸಮಸ್ಯೆಯಾದಾಗ ಬೇರೆ ನಾಯಕರು ಸಂತೋಷಟ್ಟರೆ ಸಂಘಟನೆಯನ್ನು ಮುರಿಯಲು ಹೊರಗಿನವರ ಆವಶ್ಯಕತೆಯೇ ಇರಲ್ಲ ಎಂದು ಖರ್ಗೆ ಹೇಳಿದರು.