ಬೆಂಗಳೂರು:- ನಿನ್ನೆ ತಾನೇ ಶಕ್ತಿ ಯೋಜನೆ ಪರಿಷ್ಕರಣೆ ಮಾಡಲಾಗುತ್ತದೆ ಎಂದ ಡಿಕೆಶಿ ಇಂದು ಮತ್ತೆ ಉಲ್ಟಾ ಹೊಡೆದಿದ್ದಾರೆ. ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ಪರಿಷ್ಕರಣೆ ಇಲ್ಲ ಎಂದು ಡಿಕೆಶಿ ಸ್ಪಷ್ಟನೆ ಕೊಟ್ಟಿದ್ದಾರೆ.
IPL 2025: ನಾಯಕ ಶ್ರೇಯಸ್ ಸೇರಿ ಪ್ರಮುಖ ಆಟಗಾರರಿಗೆ ಕೊಕ್: ಬಿಗ್ ಶಾಕ್ ನಲ್ಲಿ KKR ಫ್ಯಾನ್ಸ್!
ಈ ಸಂಬಂಧ ಮಾತನಾಡಿದ ಅವರು,ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಪಂಚ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ಶಕ್ತಿ ಯೋಜನೆಯಲ್ಲೂ ಯಾವುದೇ ಪರಿಷ್ಕರಣೆ ಇಲ್ಲ. ನನ್ನ ಹೇಳಿಕೆ ತಿರುಚಲಾಗಿದೆ ಎಂದು ತಿಳಿಸಿದ್ದಾರೆ.
ಮುಂದುವರಿದು, ನಮ್ಮ ಸರ್ಕಾರವನ್ನ ಷಡ್ಯಂತ್ರದಿಂದ ಕೆಡವಲು ಯಾರ ಹಣೆಯಲ್ಲೂ ಬರೆದಿಲ್ಲ. ಇನ್ನೂ ಎಂಟೂವರೆ ವರ್ಷ ನಮ್ಮದೇ ಸರ್ಕಾರ ಎಂದು ಕೇಂದ್ರ ಸಚಿವ ಹೆಚ್ಡಿಕೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.