ಬೆಂಗಳೂರು;- ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ ಎಂದು ಹೆಚ್ ಡಿ ರೇವಣ್ಣ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ.
Kumaraswamy: ಡಿಕೆಶಿ ಹೋಟೆಲ್ ನಲ್ಲಿ ಆರೇಳು ಮಂದಿಯನ್ನು ಇಟ್ಟುಕೊಂಡಿದ್ದಾರೆ – HDK
ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಪ್ರತಿಕ್ರಿಯೆ ನೀಡಿರುವ ರೇವಣ್ಣ, ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಿದ್ದಾರೆ. ಈ ಕುರಿತು ಯಾವುದೇ ಪುರಾವೆ ಇಲ್ಲ, ದುರುದ್ದೇಶದಿಂದ ಅರೆಸ್ಟ್ ಮಾಡಿದ್ದಾರೆ ಎಂದು ಎಸ್ಐಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನನ್ನ 40 ವರ್ಷಗಳ ರಾಜಕೀಯದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲ. ಆಮೇಲೆ ಎರಡನೇ ತಾರೀಖಿನಲ್ಲಿ ಘಟನೆ ಕುರಿತು ಯಾವುದೇ ಪುರಾವೆ ಕೂಡ ಸಿಕ್ಕಿಲ್ಲ. ನಮ್ಮ ಕ್ಯಾಮರಾದಲ್ಲಿ ಆಡಿಯೋ ಕ್ಯಾಚ್ ಆಗಿದೆ. ಇದನ್ನು ಎದುರಿಸುವ ಶಕ್ತಿಯಿದೆ, ಎಲ್ಲವನ್ನೂ ಹೇಳುತ್ತೇನೆ ಎಂದಿದ್ದಾರೆ.
ಇನ್ನು ಘಟನೆ ಸಂಬಂಧ ಇಂದು(ಮೇ.05) ಸಂಜೆ ಬೆಂಗಳೂರಿನ ಶಿವಾಜಿನಗರದಲ್ಲಿರುವ ಲೇಡಿಕರ್ಜನ್ ಬೌರಿಂಗ್ ಆಸ್ಪತ್ರೆಗೆ ಸಿಗ್ನಲ್ಫ್ರೀ ರಸ್ತೆಯಲ್ಲಿ ಭದ್ರತೆ ನಡುವೆ SIT ಅಧಿಕಾರಿಗಳು ವೈದ್ಯಕೀಯ ತಪಾಸಣೆಗೆ ಕರೆತಂದಿದ್ದರು.